Ashok Rai V/s Mathandoor : ಪುತ್ತೂರು : ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ಮೂರು ವಾರದ ಬಳಿಕ ಪುತ್ತೂರಿನ ಹಾಲಿ ಶಾಸಕ ಹಾಗೂ ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿದ್ಯಮಾನ ಮೇ 31 ರಂದು ನಡೆಯಿತು. ಹಾರಾಡಿ ಸರಕಾರಿ ಶಾಲೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವದಲ್ಲಿ ಹಾಲಿ ಶಾಸಕ ಅಶೋಕ್ ರೈ (Ashok Rai_ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು (Sanjeeva Mathandooru) ಜತೆಯಾಗಿ ಕಾಣಿಸಿಕೊಂಡರು. ಅಲ್ಲದೇ ರಾಜಕೀಯ ಮರೆತು ಹಾಲಿ ಶಾಸಕರು ಮಾಜಿ ಶಾಸಕರನ್ನು ಅಭಿವೃದ್ದಿ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದು ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಯಿತು.
20018ರ ಚುನಾವಣೆಯ ಸಂದರ್ಭ ಅಶೋಕ್ ರೈ ಹಾಗೂ ಮಠಂದೂರು ಒಂದೇ ಪಕ್ಷದಲ್ಲಿದ್ದು, ಟಿಕೆಟ್ ಆಕಾಂಕ್ಷಿಗಳಾಗಿದ್ದರು . ಈ ವೇಳೆ ರೈಯವರಿಗೆ ಟಿಕೆಟ್ ತಪ್ಪಿದ್ದು, ಮಠಂದೂರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು . 2023ರ ಚುನಾವಣೆಯ ಸಂದರ್ಭವು ಅಶೋಕ್ ರೈ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೇ ಬಿಜೆಪಿ ಅವರಿಗೆ ಟಿಕೆಟ್ ನೀಡುವುದಿಲ್ಲ, ಪಕ್ಷದಲ್ಲೂ ಯಾವುದೇ ಜವಬ್ದಾರಿ ನೀಡುವುದಿಲ್ಲ ಎಂದು ಖಚಿತವಾಗುತ್ತಲೇ ಅಶೋಕ್ ರೈ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಅಲ್ಲಿ ಟಿಕೆಟ್ ಪಡೆದು ವಿಜಯಿಯಾದರು. ಆದರೇ ಇದೇ ವೇಳೆ ಮಠಂದೂರಿಗೆ ಟಿಕೆಟ್ ಕೈ ತಪ್ಪಿತ್ತು
ಸಂಜೀವ ಮಠಂದೂರುರವರು ಶಾಸಕರಾಗಿದ್ದ ಸಂದರ್ಭ ಹಾರಾಡಿ ಶಾಲೆಗೆ ನೂತನ ಕೊಠಡಿ 10. ಲ ರೂ ಅನುದಾನ ಮಂಜೂರು ಮಾಡಿದ್ದರು. ಇದನ್ನು ಬುಧವಾರ ಹಾಲಿ ಶಾಸಕ ಅಶೋಕ್ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಸಂಜೀವ ಮಠಂದೂರು ಅವರನ್ನು ಅಹ್ವೌನಿಸಲಾಗಿತ್ತು. ಅಶೋಕ್ ರೈಯವರು ಟೇಪ್ ಕತ್ತರಿಸಿ ಕಟ್ಟಡ ಉದ್ಘಾಟಿಸಿದರು. ಈ ಸಂದರ್ಭ ಸ್ಥಳೀಯ ಬಿಜೆಪಿ ನಗರಸಭೆ ಸದಸ್ಯೆ ಪ್ರೇಮಲತಾ ನಂದಿಲ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಜತೆಗಿದ್ದರು.
ಬಳಿಕ ನಡೆದ ಸಭಾ ಕಾಠ್ಯಕ್ರಮದಲ್ಲಿ ಮಠಂದೂರು ಹಾಗೂ ಅಶೋಕ್ ರೈ ಇತರ ಅತಿಥಿಗಳ ಜೊತೆ ಜತೆಯಾಗಿಯೇ ವೇದಿಕೆ ಹಂಚಿಕೊಂಡರು. ಕೊಠಡಿಗೆ ಅನುದಾನ ಮಂಜೂರು ಮಾಡಿದ ಮಠಂದೂರಿಗೆ ಅತಿಥಿಗಳು ಅಭಿನಂದಿಸಿದರು. ಅಭಿನಂದಿಸುವ ಸರದಿಯಲ್ಲಿ ಶಾಸಕ ಅಶೋಕ್ ರೈ ಕೂಡ ಸರಿದ್ದರು. ವೇದಿಕೆಯಲ್ಲಿ ಮಾತನಾಡಿದ ಅಶೋಕ್ ರೈ 10 ಲಕ್ಷ ರೂ. ಅನುದಾನವನ್ನು ಈ ಕಟ್ಟಡಕ್ಕೆ ಮಠಂದೂರು ನೀಡಿದ್ದಾರೆ. ಇದಲ್ಲದೆ ಇನ್ನೂ ಅನೇಕ ಶಾಲೆಗಳಿಗೆ ಅವರು ಅನುದಾನ ನೀಡಿದ್ದಾರೆ.ಮೆಚ್ಚಬೇಕಾದ ಸಂಗತಿ ಎಂದರು.

2018ರ ಚುನಾವಣೆಯಲ್ಲಿ ಮಠಂದೂರು ಗೆದ್ದಾಗ ಕೆಲವು ಕಾರ್ಯಕರ್ತರು ಅಶೋಕ್ ರೈ ಮನೆ ಮುಂದೆ ಪಟಾಕಿ ಸಿಡಿಸಿ ಸೇಡು ತೀರಿಸಿಕೊಂಡಿದ್ದರು ಎಂಬ ಮಾತೂ ಕೇಳಿ ಬಂದಿತ್ತು.5 ವರ್ಷಗಳ ಬಳಿಕ ಅಶೋಕ್ ರೈ ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸಿದರು. ಹಾಲಿ ಶಾಸಕರಾಗಿದ್ದರೂ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ, ಕಾರ್ಯಕರ್ತರು ಯಾರೂ ದ್ವೇಷ ರಾಜಕಾರಣ ಮಾಡಬಾರದು ಎಂದು ಅಶೋಕ್ ರೈ ಮನವಿ ಮಾಡಿದ್ದರು.