Connect with us

ದಕ್ಷಿಣ ಕನ್ನಡ

ಬೆಲೆಯೆರಿಕೆ  ಗಗನಕ್ಕೆರಿದ  ಸಂದರ್ಭ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಮೂಲಕ ಮಹಿಳೆಯರ ನೆರವಿಗೆ ನಿಂತಿದೆ : ಅನಿತಾ ಹೇಮನಾಥ ಶೆಟ್ಟಿ

Ad Widget

Ad Widget

Ad Widget

Ad Widget

ಪುತ್ತೂರು : ದಿನಪಯೋಗಿ ವಸ್ತುಗಳು ಗಗನಕ್ಕೆರಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರಕಾರ ಗ್ಯಾರಂಟಿ ಮೂಲಕ ಮಹಿಳೆಯರ ನೆರವಿಗೆ ನಿಂತಿದೆ.ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಮಹಿಳೆಯರಲ್ಲಿ  ಖುಷಿ ಎದ್ದು ಕಾಣಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ತಿಳಿಸಿದರು.

Ad Widget

Ad Widget

Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಮಹಿಳೆಯರ ಪರ ಕೆಲಸ ಮಾಡುವ ಸರಕಾರ. ಇಂದಿರಾಗಾಂಧಿ ಸರಕಾರದಿಂದ ಆರಂಭಗೊಂಡು ರಾಜೀವಗಾಂಧಿ ಆಡಳಿತದಲ್ಲಿ ಸ್ಥಳೀಯಡಳಿತಗಳಲ್ಲಿ ಮಹಿಳಾ ಮೀಸಲಾತಿ ನೀಡಲಾಗಿತ್ತು ಎಂದು ಅವರು ನೆನಪಿಸಿದರು

Ad Widget

ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಜತೆಗೆ ಕಾಂಗ್ರೆಸ್ ಪಕ್ಷ ಈಗ ಘೋಷಿಸಿರುವ ನಾರಿ ನ್ಯಾಯ, ಮಹಾಲಕ್ಷ್ಮಿ ಯೋಜನೆ ಗಳ ಮೂಲಕ 1 ಲಕ್ಷ ನೀಡುವುದು ಮಹಿಳೆಯರಲ್ಲಿ ಸ್ವಾವಲಂಭನೆಗೆ ಕಾರಣವಾಗಲಿದೆ.

Ad Widget

Ad Widget

 ಕರ್ನಾಟಕದ ಕಾಂಗ್ರೆಸ್ ಸರಕಾರ ಮುಖ್ಯವಾಗಿ ಮಹಿಳೆಯರ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೊಳಿಸಿದ 5 ಗ್ಯಾರಂಟಿಗಳು ಮಹಿಳೆಯರಿಗೆ ಶಕ್ತಿ ತುಂಬಿದೆ ಎಂದರು.

Ad Widget

Ad Widget

Ad Widget

ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಪ್ರತಿಯೊಬ್ಬರ ಪ್ರಗತಿಗೆ ಪೂರಕವಾಗಲಿದೆ. ಹೆಚ್ಚು ಮತದಾರರಾಗಿರುವ ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದರು.

 ದ. ಕ. ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಪರ ಉತ್ತಮ ಸ್ಪಂದನೆ ಇದೆ. ಜಿಲ್ಲೆಯಲ್ಲಿ ಈ  ಬಾರಿ ಜನ ಬದಲಾವಣೆ ಬಯಸಿ ಪದ್ಮರಾಜ್ ಅವರನ್ನು ಗೆಲ್ಲಿಸಲಿದ್ದಾರೆ  ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್  ಮಹಿಳಾ  ಮುಖಂಡರಾದ ರೂಪರೇಖಾ ಆಳ್ವ, ವೇದಾವತಿ, ಅರುಣಾ ಡಿ. ರೈ, ಜಯಂತಿ ಪಟ್ಟುಮೂಲೆ ಉಪಸ್ಥಿತರಿದ್ದರು.

.

Click to comment

Leave a Reply

ಮಂಗಳೂರು

ವಿಟ್ಲ: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮಗು ಸಹಿತ ಮೂವರಿಗೆ ಗಾಯ

Ad Widget

Ad Widget

Ad Widget

Ad Widget


ವಿಟ್ಲ: ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ.
ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡುಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.

Ad Widget

Ad Widget

Ad Widget

ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟ ಗಾಯವಾಗಿದೆ.

Ad Widget

ಗಂಭೀರ ಗಾಯಗೊಂಡ ಮಗುವನ್ನು ಪುತ್ತೂರು ಆಸ್ಪತ್ರೆ ಕೊಂಡೊಯ್ಯಲಾಗಿತ್ತು. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ತಿಳಿದು ಬಂದಿದೆ. ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
,

Ad Widget

Ad Widget
Continue Reading

ದಕ್ಷಿಣ ಕನ್ನಡ

woman bathing Video graphed: ಮದುವೆ ಮನೆಯಲ್ಲಿ  ಬಾತ್‌ ರೂಂನಲ್ಲಿ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ಆರೋಪ – ವಿಚಾರಿಸಲು ಮನೆಗೆ ಹೋದಗ ಚೂರಿ ಪ್ರದರ್ಶಿಸಿ ಹಲ್ಲೆ – ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

Ad Widget

Ad Widget

Ad Widget

Ad Widget

ಯುವತಿಯೊಬ್ಬಳು ಬಾತ್‌ ರೂಂ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕನೋರ್ವ  ಕಿಟಕಿ ಮೂಲಕ ಅದನ್ನು  ವೀಡಿಯೋ ಮಾಡಿರುವ ಆರೋಪ ಕಡಬ ತಾಲೂಕಿನ  ರೆಂಜಿಲಾಡಿ ಗ್ರಾಮದ ಉಳಿಪ್ಪುವಿನ(ವಧುವಿನ ಮನೆ) ಮದುವೆ ಮನೆಯಿಂದ ಕೇಳಿ ಬಂದಿದೆ. ಮುಂದಿನ ಬೆಳವಣಿಗೆಯಲ್ಲಿ ಯುವತಿಯ ಕಡೆಯವರು ವೀಡಿಯೋ ಮಾಡಿದ್ದ ಯುವಕನ ಮನೆಗೆ ತೆರಳಿ ವೀಡಿಯೋ ಡಿಲಿಟ್  ಮಾಡುವಂತೆ ಹೇಳಿದ್ದು, ಈ ವೇಳೆ  ಆರೋಪಿ ಯುವಕ ಹಾಗೂ ಅವರ ಸಂಗಡಿಗರು ತಮ್ಮ ಮೇಲೆ  ಹಲ್ಲೆ ಮಾಡಿದ್ದಾರೆ ಎಂದು ಕಡಬ ಠಾಣೆಗೆ  ಯುವತಿಯ ಕಡೆಯವರು ದೂರು ನೀಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget

Ad Widget

Ad Widget

20ರ ಹರೆಯದ ರೆಂಜಾಲಾಡಿಯ ಯುವತಿ ರೇಷ್ಮಾ  ದೂರು ನೀಡಿದವರು. ಏ.28 ರಂದು ದೂರುದಾರೆಯ ದೊಡ್ಡಮನ ಮಗನ ವಿವಾಹ ನಡೆದಿತ್ತು. ಅದೇ ದಿನ ರಾತ್ರಿ ವಧುವಿನ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ದೂರುದಾರೆಯ ಸ್ನೇಹಿತೆ ವಧುವಿನ ಮನೆಯ ಬಾತ್‌ ರೂಂ ನಲ್ಲಿ ಸ್ನಾನ ಮಾಡುತ್ತಿದ್ದಾಗ ಆರೋಪಿ ದಿವಾಕರ ಎಂಬಾತ ಕಿಟಕಿಯಿಂದ ಆ ದೃಶ್ಯವನ್ನು ಮೊಬೈಲ್‌ ನಲ್ಲಿ ಚಿತ್ರಿಕರಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

Ad Widget

 ಈ ವಿಚಾರವನ್ನು ಸ್ನಾನ ಮಾಡುತ್ತಿದ್ದ ಯುವತಿ  ಗಮನಿಸಿದರೂ  ಆಗ ಹೇಳಿದರೇ  ಹೇಳಿದರೆ ಮದುವೆ ಕಾರ್ಯಕ್ರಮ ಹಾಳಾಗುತ್ತದೆ ಎಂದು ಆ ಸಮಯದಲ್ಲಿ ಹೇಳಿರುವುದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

Ad Widget

Ad Widget

ಏ. 29ರಂದು ರಾತ್ರಿ 11-30 ಗಂಟೆಗೆ ದೂರುದಾರೆ ರೇಷ್ಮಾ  ಹಾಗೂ  ತನ್ನ ಸಂಬಂಧಿಕರಾದ ಭುವನ, ಸ್ವಾತಿ, ಧನಂಜಯ, ಉದಯ, ನಿಶ್ಮಿತ್, ಲೋಕೇಶ್, ಆಸ್ಮಿತ್, ಜನಾರ್ದನ, ರಮೇಶ್ ಎಂಬವರೊಂದಿಗೆ ಸಂತ್ರಸ್ತೆ ಯುವತಿಯನ್ನು ಜತೆಗೆ ಕರೆದುಕೊಂಡು  2 ಕಾರುಗಳಲ್ಲಿ, ಆರೋಪಿ ದಿವಾಕರನ ಮನೆಗೆ ಹೋಗಿದ್ದಾರೆ. ಅಲ್ಲಿ   ಮನೆಯಲ್ಲಿದವರನ್ನು ಹೊರಗೆ ಕರೆದು, ಯುವತಿ  ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ಡಿಲೀಟ್ ಮಾಡುವಂತೆ ದಿವಾಕರ್‌ ಗೆ  ಸೂಚಿಸಿದ್ದಾರೆ.

Ad Widget

Ad Widget

Ad Widget

ಆಗ ಆರೋಪಿ ದಿವಾಕರ ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಮೊಬೈಲ್ ಕೊಡುವುದಿಲ್ಲ, ನೀನು ಇಲ್ಲಿಂದ ಹೋಗು ಎಂದು ಬೆದರಿಸಿದ್ದಾರೆ.  ಆ ಸಮಯ ಮನೆಯಲ್ಲಿದ್ದ ಆರೋಪಿ ಭವ್ಯಶ್ರೀ ಎಂಬವರು ನೀವು ಯಾಕೆ ಇಲ್ಲಿಗೆ ಬಂದಿದ್ದು ಎಂದು ಹೇಳಿ ಸಂತ್ರಸ್ತ ಯುವತಿಯನ್ನು  ದೂರುದಾರೆ ರೇಷ್ಮಾರವರನ್ನು  ಮತ್ತು ಭುವನ, ಸ್ವಾತಿ,   ಎಂಬವರನ್ನು ಕೈಯಿಂದ ದೂಡಿ ಹಾಕಿ ಹೊಡೆದಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ

 ಆರೋಪಿಗಳ ವಿರುದ್ದ ಐಪಿಸಿ ಕಲಂ 1860, 354ಸಿ,354, 323, 324, 427, 504,506 ಸಹವಾಚ್ಯ 34 ರಂತೆ ಪ್ರಕರಣ ದಾಖಲಾಗಿದೆ.

Continue Reading

ಮಂಗಳೂರು

Woman-ತಾಯಿಯೊಂದಿಗೆ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಮಹಿಳೆ ನಾಪತ್ತೆ..!!

Ad Widget

Ad Widget

Ad Widget

Ad Widget

ಮಂಗಳೂರು, ಮೇ 4: ತಾಯಿಯೊಂದಿಗೆ ಸಿಟಿ ಸೆಂಟರ್ ಮಾಲ್ ಗೆ ಬಂದಿದ್ದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಕುರಿತಂತೆ ಏ. 28 ರಂದು ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವತಿಯನ್ನು ತೊಕ್ಕೊಟ್ಟು ಸಮೀಪದ ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆಯ ನಿವಾಸಿ ಸಫನಾ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

ಸಫನಾ ತನ್ನ ತಾಯಿಯೊಂದಿಗೆ ನಗರದ ಸಿಟಿ ಸೆಂಟರ್ ಮಾಲ್‌ಗೆ ಏ. 28ರಂದು ಬಂದಿದ್ದು ಆ ಬಳಿಕ ಕಾಣೆಯಾಗಿದ್ದಾರೆ. 27ರ ಹರೆಯದ ಸಫನಾರಿಗೆ ಇಬ್ಬರು ಮಕ್ಕಳಿದ್ದಾರೆ. 4.5 ಅಡಿ ಎತ್ತರದ, ಬಿಳಿ ಮೈಬಣ್ಣದ, ಕಪ್ಪುಬಣ್ಣದ ಬುರ್ಖಾ ಧರಿಸಿರುವ ಈಕೆ ಬ್ಯಾರಿ, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಾರೆ.

Ad Widget

ಈಕೆಯನ್ನು ಕಂಡವರು ಬಂದರು ಠಾಣೆಗೆ (ಮೊ.ಸಂ: 9480805338,9480802321/0824-2220516) ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading