Connect with us

ಅಂತರ ರಾಜ್ಯ

Rohit Sharma-ಐಪಿಎಲ್ ಪಂದ್ಯದ ವೇಳೆ ವಿಕೆಟ್ ಕೀಳಲು ಬೌಲರ್ ಗೆ ನೆರವಾದ ರೋಹಿತ್ ;ಇದು ಕ್ಯಾಪ್ಟನ್ಸಿ ನೋಡಿ ಕಲಿ – ಪಾಂಡ್ಯಗೆ ಮೊಟಕಿದ ಮುಂಬೈ ಇಂಡಿಯನ್ಸ್ ಫಾನ್ಸ್

Ad Widget

Ad Widget

Ad Widget

Ad Widget

ನವದೆಹಲಿ: ಗುಜಾರತ್ ಟೈಟಾನ್ಸ್ ನಾಯಕನಾಗಿ ಅತ್ಯಧ್ಬುತ ಪ್ರದರ್ಶನ ನೀಡಿದ ಬಾರತದ ಅಲ್ ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ತಂಡ ಬದಲಾಯಿಸಿ ಮುಂಬೈ ಇಂಡಿಯನ್ಸ್ ನ ಸಾರಥ್ಯ ವಹಿಸಿದ್ದಾರೆ. ಆ ಬಳಿಕ ಅವರ ಗ್ರಹಗತಿಯೆ ಬದಲಾದಂತಿದೆ. ಮೊದಲು ಮುಂಬೈ ಇಂಡಿಯನ್ಸ್ ಕೋಪಕ್ಕೆ ತುತ್ತಾದ ಅವರು ಇದೀಗ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದಾರೆ

Ad Widget

Ad Widget

Ad Widget

ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ನಾಯಕತ್ವದಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕಳಪೆ ನಾಯಕತ್ವದಿಂದಾಗಿ ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯ ಅಂತಿಮ ಹಂತದಲ್ಲಿ ಗುಜರಾತ್ ಪಾಲಾಯಿತು.

Ad Widget

ನಿನ್ನೆ (ಮಾ. 27) ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿಯೂ ಹಾರ್ದಿಕ್ ತಂತ್ರಗಳು ಕೈ ಕೊಟ್ಟವು. ಕೆಟ್ಟ ನಾಯಕತ್ವದ ನಿರ್ಧಾರಗಳಿಂದ ಮುಂಬೈ ತಂಡ ಮತ್ತೊಂದು ಸೋಲು ಕಾಣಬೇಕಾಯಿತು. ಮುಂಬೈ ತಂಡ ಬ್ಯಾಕ್ ಫುಟ್ ನಲ್ಲಿದ್ದಾಗ, ರೋಹಿತ್ ಶರ್ಮಾ ತೋರಿದ ಜಾಣ ನಡೆ ಮುಂಬೈಯನ್ನು ಮತ್ತೆ ಪಂದ್ಯಕ್ಕೆ ಮರಳಿಸಿತ್ತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಹೊಡಬಡಿಯ ಬ್ಯಾಟಿಂಗ್ ಪ್ರದರ್ಶಿಸಿದ್ದು, . ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಎದುರಿಸಿದ ಹೆಡ್ 62 ರನ್ ಗಳಿಸಿ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಔಟಾದರು. ಮುಂಬೈ ಬೌಲರ್ಗಳನ್ನು ಹೆಡ್ ಮನಸೋ ಇಚ್ಛೆ ದಂಡಿಸಿದರು. ಹೆಡ್ ಆಟದ ವೇಗವನ್ನು ನೋಡಿದಾಗ ಇನ್ನೂ ಎರಡು ಓವರ್ ಕ್ರೀಸ್ನಲ್ಲಿ ಇದ್ದಿದ್ದರೆ ಶತಕ ಸಿಡಿಸಿಬಿಡುತ್ತಿದ್ದರು.

Ad Widget

Ad Widget

ಆದರೆ, ಈ ವೇಳೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರೋಹಿತ್ ಶರ್ಮ ವಹಿಸಿಕೊಂಡರು. ಹೆಡ್ ವಿಕೆಟ್ ಉರುಳಿಸಲು ಬಿಗಿ ಫೀಲ್ಡಿಂಗ್ ಸೆಟ್ ಮಾಡಿದರು. ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುವಂತೆ ಹಾರ್ದಿಕ್ಗೆ ಸೂಚನೆ ನೀಡಿದರು. ಗೆರಾಲ್ಡ್ ಕೋಟ್ಜಿಗೆ ಬೌಲ್ ಮಾಡಲು ಕೆಲ ಸಲಹೆ ನೀಡಿದರು. ಅದರಂತೆ ಕೋಟ್ಜಿ ಎಸೆದ ಬಾಲ್ ಅನ್ನು ಬಲವಾಗಿ ಹೊಡೆಯಲು ಹೋಗಿ ನಮನ್ ಧಿರ್ಗೆ ಕ್ಯಾಚಿತ್ತು ನಿರ್ಗಮಿಸಿದರು.

Ad Widget

Ad Widget

Ad Widget

ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್, ರೋಹಿತ್ ರಣತಂತ್ರ ನೋಡಿ ಒಂದು ಕ್ಷಣ ಹುಬ್ಬೇರಿಸಿದರು. ರೋಹಿತ್ ಅವರ ಸರಿಯಾದ ಅಂದಾಜು, ಸರಿಯಾದ ಯೋಜನೆ, ಬ್ಯಾಟರ್ಗಳನ್ನು ಕೆರಳಿಸುವುದು ಮತ್ತು ಬೌಲರ್ಸ್ಗೆ ಆತ್ಮವಿಶ್ವಾಸ ತುಂಬಿದರೆ ವಿಕೆಟ್ಗಳನ್ನು ಪಡೆಯಬಹುದು ಎಂಬ ರೋಹಿತ್ ತಂತ್ರ ಒಂದು ಕ್ಷಣ ಹಾರ್ದಿಕ್ ಮೈಂಡ್ ಬ್ಲಾಕ್ ಮಾಡಿತು. ತಂಡ ಸಂಕಷ್ಟದಲ್ಲಿದ್ದ ವೇಳೆ ರೋಹಿತ್, ತನ್ನ ಜವಾಬ್ದಾರಿ ಮೆರೆದಿದ್ದನ್ನು ನೋಡಿ, ನೆಟ್ಟಿಗರು ರೋಹಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡುತ್ತಿದ್ದಾರೆ.

ಮುಂಬೈಗೆ 5 ಬಾರಿ ಐಪಿಎಲ್ ಕಪ್ ಸುಮ್ಮನೇ ಬಂದಿಲ್ಲ. ನಾಯಕತ್ವ ಎಂದರೆ ಇದೇ ಎನ್ನುತ್ತಾರೆ. ಹಾರ್ದಿಕ್, ರೋಹಿತ್ನಿಂದ ಕಲಿಯಲಿ, ನಾಯಕ ಯಾವತ್ತಿದ್ದರೂ ನಾಯಕನೇ ಎಂದು ರೋಹಿತ್ರನ್ನು ಹೊಗಳುತ್ತಿದ್ದು, ಹಾರ್ದಿಕ್ರನ್ನು ಜುಜುಬಿ ಹೊಸ ನಾಯಕ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  .

Click to comment

Leave a Reply

ಅಂತರ ರಾಜ್ಯ

Priyanka Gandhi-ಪ್ರಜ್ವಲ್ ರೇವಣ್ಣ ಪ್ರಕರಣ: ಇನ್ನೂ ಮೌನವಾಗಿರ್ತೀರಾ ಮೋದಿಜಿ?-ಪ್ರಿಯಾಂಕಾ ಗಾಂಧಿ

Ad Widget

Ad Widget

Ad Widget

Ad Widget

ನವದೆಹಲಿ: ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Ad Widget

Ad Widget

Ad Widget

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಧಾನಿಗಳು ಈ ನಾಯಕನ ಭುಜದ ಮೇಲೆ ಕೈ ಹಾಕಿ ಫೋಟೋಗೆ ಪೋಸ್ಟ್ ಕೊಟ್ಟಿದ್ದರು. ಚುನಾವಣೆಗೆ 10 ದಿನದ ಹಿಂದೆ ಈ ನಾಯಕನ ಪರವಾಗಿ ಪ್ರಧಾನಿ ಪ್ರಚಾರಕ್ಕೆ ಹೋಗುತ್ತಾರೆ. ವೇದಿಕೆಯಲ್ಲಿ ಹಾಡಿ ಹೊಗಳುತ್ತಾರೆ.

Ad Widget

ಇವತ್ತು ಕರ್ನಾಟಕದ ಆ ನಾಯಕ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಆ ವ್ಯಕ್ತಿಯ ಘೋರ ಅಪರಾಧಗಳ ಬಗ್ಗೆ ಕೇಳಿದರೇ ಸಾಕು ಹೃದಯ ನಡುಗುತ್ತದೆ. ಆ ವ್ಯಕ್ತಿ ನೂರಾರು ಮಹಿಳೆಯರ ಜೀವನ ಹಾಳು ಮಾಡಿದ್ದಾನೆ. ಆದರೂ ಮೋದಿ ಅವರೆ ನೀವಿನ್ನೂ ಮೌನವಾಗಿಯೇ ಇರುತ್ತೀರಾ?’ ಎಂದು ಹೇಳಿದ್ದಾರೆ

Ad Widget

Ad Widget
Continue Reading

ಅಂತರ ರಾಜ್ಯ

Baba Ramdev’s-ದಾರಿ ತಪ್ಪಿಸುವ ಜಾಹೀರಾತು – ಬಾಬ ರಾಮದೇವ್ ಕಂಪೆನಿ ಪತಂಜಲಿಯಯ ಪರವಾನಗಿ ಅಮಾನತು

Ad Widget

Ad Widget

Ad Widget

Ad Widget

ನವದೆಹಲಿ : ಯೋಗ ಗುರು ಬಾಬಾ ರಾಮದೇವ್ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪುದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ.

Ad Widget

Ad Widget

Ad Widget

ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ನ ಕೋಪಕ್ಕೂ ತುತ್ತಾಗಿದ್ದಾರೆ.

Ad Widget

ಉತ್ತರಾಖಂಡ ಸರ್ಕಾರವು ಏ. 15ರಂದು ಈ ಅಮಾನತು ಆದೇಶ ಹೊರಡಿಸಿದೆ. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ರಾಮದೇವ ಅವರ ವಕ್ತಾರರು ನಿರಾಕರಿಸಿದ್ದಾರೆ.

Ad Widget

Ad Widget

ಪರವಾನಗಿ ಅಮಾನತ್ತಾದ 14 ಔಷಧಗಳ ಪಟ್ಟಿ ಇಂತಿದೆ…

Ad Widget

Ad Widget

Ad Widget
  • ಸ್ವಸರಿ ಗೋಲ್ಡ್
  • ಸ್ವಸರಿ ವತಿ
  • ಬ್ರಾಂಕೋಮ್
  • ಸ್ವಸರಿ ಪ್ರವಾಹಿ
  • ಸ್ವಸರಿ ಅವಲೇಹ್
  • ಮುಕ್ತಾವತಿ ಎಕ್ಸ್ಟ್ರಾ ಪವರ್
  • ಲಿಪಿಡೋಮ್
  • ಬಿಪಿ ಗ್ರಿಟ್
  • ಮಧುಗ್ರಿಟ್
  • ಮಧುನಾಶಿನಿವತಿ ಎಕ್ಸ್ಟ್ರಾ ಪವರ್
  • ಲಿವಾಮೃತ್ ಅಡ್ವಾನ್ಸ್
  • ಲಿವೋಗ್ರಿಟ್
  • ಐಗ್ರಿಟ್ ಗೋಲ್ಡ್
  • ಪತಂಜಲಿ ದೃಷ್ಟಿ ಐ ಡ್ರಾಪ್
Continue Reading

ಅಂತರ ರಾಜ್ಯ

April temperature-ನೂರು ವರ್ಷದ ದಾಖಲೆ ಮುರಿದ ಏಪ್ರಿಲ್ ತಿಂಗಳ ಉಷ್ಣಾಂಶ; ಇನ್ನೂ 5 ದಿನ ಮುಂದುವರಿಯುವ ಸಾಧ್ಯತೆ

Ad Widget

Ad Widget

Ad Widget

Ad Widget

ನೂರು ವರ್ಷದ ದಾಖಲೆ ಮುರಿದ ಏಪ್ರಿಲ್ ತಿಂಗಳ ಉಷ್ಣಾಂಶ; ಇನ್ನೂ 5 ದಿನ ಮುಂದುವರಿಯುವ ಸಾಧ್ಯತೆ
ನವದೆಹಲಿ : ಈ ವರ್ಷ ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಈ ನಡುವೆ ಬಿಡುಗಡೆಯಾದ ವರದಿಯೊಂದರ ಪ್ರಕಾರ 2024ರ ಏಪ್ರಿಲ್ ತಿಂಗಳ ಉಷ್ಣಾಂಶವು , ದೇಶದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅದು ಮುರಿದಿದೆ. ದೇಶದ ಅನೇಕ ಸ್ಥಳಗಳಲ್ಲಿ ತಾಪಮಾನವು 43 ಡಿಗ್ರಿಗಳನ್ನು ತಲುಪಿದ್ದು , ಈ ಮೂಲಕ 103 ವರ್ಷಗಳ ದಾಖಲೆ ಧೂಳಿಪಟವಾಗಿದೆ.

Ad Widget

Ad Widget

Ad Widget

ಹವಾಮಾನ ಇಲಾಖೆಯು 1921-2024 ರ ನಡುವಿನ ಏಫ್ರಿಲ್ ತಿಂಗಳ ಬಿಸಿ ಬಿಸಿ ಡೇಟಾವನ್ನು ಹಂಚಿಕೊಂಡಿದೆ. ಈ ದತ್ತಾಂಶದ ಪ್ರಕಾರ ಈ ಸಾಲಿನ ಏಫ್ರಿಲ್ ತಿಂಗಳು ಅತ್ಯಂತ ಬಿಸಿಯಾದ ತಿಂಗಳು ಎಂದು ಸೂಚಿಸುತ್ತದೆ. ಮುಂದಿನ ಐದು ದಿನಗಳು ಇನಷ್ಟು ಬಿಸಿ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

Ad Widget

ಮುಂದಿನ 5 ದಿನಗಳ ಕಾಲ ಬಿಸಿಗಾಳಿ
ಈ ತೀವ್ರ ಸ್ವರೂಪದ ಶಾಖವು ಮುಂದಿನ ಐದು ದಿನಗಳವರೆಗೆ ಮುಂದುವರಿಯುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಮಧ್ಯೆ, ಮತದಾನ ನಡೆಯುವ ಸ್ಥಳಗಳಲ್ಲಿ, ಶಾಖವು ಹೆಚ್ಚಾಗಿರುತ್ತದೆ. ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಭಾರಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಇದಲ್ಲದೆ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ತೀವ್ರ ಶಾಖ ಸಂಭವಿಸಬಹುದು.

Ad Widget

Ad Widget

ಅಂಕಿಅಂಶಗಳ ಪ್ರಕಾರ, ಬಿಸಿಗಾಳಿ ಸೂಚ್ಯಂಕವು 40 ರಿಂದ 50 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡುಬರುತ್ತಿದೆ. ಕೇರಳ ಸೇರಿದಂತೆ ಪೂರ್ವ ಕರಾವಳಿಯ ಅನೇಕ ಭಾಗಗಳಲ್ಲಿ ಈ ಸೂಚ್ಯಂಕವು 50 ರಿಂದ 60 ಡಿಗ್ರಿ ಸೆಲ್ಸಿಯಸ್ಗೆ ಏರಿದೆ.
ಮುಂದಿನ ಎರಡು ದಿನಗಳವರೆಗೆ ಪೂರ್ವ ಭಾರತದಲ್ಲಿ ಗರಿಷ್ಠ ತಾಪಮಾನವು 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

Ad Widget

Ad Widget

Ad Widget

ಮುಂದಿನ 4-5 ದಿನಗಳಲ್ಲಿ, ಮಧ್ಯ ಭಾರತದಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಬಹುದು. ಮುಂದಿನ 3-4 ದಿನಗಳಲ್ಲಿ ತಮಿಳುನಾಡಿನಲ್ಲಿ ಗರಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading