Connect with us

ಮನರಂಜನೆ

Saudi Arabia-ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆ : ದೇಶದ ಮೊದಲ ಮಿಸ್ ಯೂನಿವರ್ಸ್ ಸ್ಪರ್ಧಿಯಾಗಲಿರುವ ರೂಮಿ ಅಲ್ಖಾಹ್ತಾನಿ

Ad Widget

Ad Widget

Ad Widget

Ad Widget

ರಿಯಾದ್: ಸೌದಿ ಅರೇಬಿಯಾ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಹಲವಾರು ಬದಲಾವಣೆಗಳಾಗುತ್ತಿದೆ. ಸಾಂಪ್ರದಾಯಿಕ ಇಸ್ಲಾಮಿಕ್ ಸ್ಟೇಟ್ ‘ಸೌದಿ ಅರೇಬಿಯಾ’ ತನ್ನ ಮೂಲಭೂತವಾದವನ್ನು ನಿಧಾನವಾಗಿ ಸರಳೀಕರಿಸಿ ಅಧುನಿಕತೆಯತ್ತ ಮುಖ ಮಾಡುತ್ತಿದೆ. ಸೌದಿ ಅರೇಬಿಯಾ ಸಂಪ್ರಾದಾಯಿಕ ಇಸ್ಲಾಮಿಕ್‌ ದೇಶವಾಗಿದ್ದು ಇಲ್ಲಿ ಮಹಿಳೆಯರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ ಉದಾಹರಣೆಗಳು ಇಲ್ಲ. ಈ ದೇಶದಲ್ಲಿ ಮಹಿಳೆಯರ ಮೇಲೆ ನಿರ್ಬಂಧಗಳು ಹೆಚ್ಚಿದ್ದು ಮಿಸ್‌ ಯೂನಿವರ್ಸ್‌ ಅಂತ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ.

Ad Widget

Ad Widget

Ad Widget

ಸದ್ಯ ದೇಶದಲ್ಲಿ ಮಹಿಳೆಯರ ಮೇಲಿನ ಕೆಲ ನಿರ್ಬಂಧಗಳನ್ನು ರಾಜಾಡಳಿತ ಸಡಿಲಗೊಳಿಸಿ, ತೆಗೆದು ಹಾಕಲು ಆರಂಭಿಸಿದೆ. ಇದರಂಗವಾಗಿ ಮಹಿಳೆಯರಿಗೆ ಮಹಿಳಾ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಇದೇ ಪ್ರಪ್ರಥಮ ಭಾರಿಗೆ ಭಾಗವಹಿಸುತ್ತಿದೆ. ಸೌದಿ ಅರೇಬಿಯಾದ ಪರವಾಗಿ ರೂಮಿ ಅಲ್ಖಾಹ್ತಾನಿ ಎಂಬವರು “ಮಿಸ್ ಯೂನಿವರ್ಸ್” ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

Ad Widget

ಸೌದಿ ಅರೇಬಿಯಾದ ಇತಿಹಾಸದಲ್ಲೇ ಮೊದಲ ಮಿಸ್ ಯೂನಿವರ್ಸ್ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ರೂಮಿ ಅಲ್ಖಾಹ್ತಾನಿ ಪಾತ್ರವಾಗಲಿದ್ದಾರೆ. 27 ವರ್ಷದ ರೂಪದರ್ಶಿ ರೂಮಿ ಸೋಮವಾರ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸೌದಿಯ ರಾಜಧಾನಿ ರಿಯಾದ್ ನವರಾದ ಅಲ್ಖಾಹ್ತಾನಿ, ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್‍ನಲ್ಲಿ ಭಾಗವಹಿಸಿದ ಇತಿಹಾಸ ಸೃಷ್ಟಿಸಿದ್ದರು.

Ad Widget

Ad Widget

ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಪ್ರಥಮ ಮಹಿಳೆಯಾಗಿದ್ದರು. ಈ ಮೂಲಕ ಸೌದಿ ಅರೇಬಿಯಾ ಕೂಡ ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದೆ. ಈಗಾಗಲೇ ಕಟ್ಟುನಿಟ್ಟಾದ ಮದ್ಯಪಾನ ನಿಷೇಧಕ್ಕೆ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾ, ಮುಸ್ಲಿಮೇತರ ರಾಜತಾಂತ್ರಿಕರಿಗೆ ಮದ್ಯವನ್ನು ಖರೀದಿಸಲು ಅನುಮತಿ ನೀಡಿದೆ. ಇದರ ಜೊತೆಗೆ ಮಹಿಳೆಯರಿಗೆ ವಾಹನ ಚಲಾಯಿಸಲು, ಗಂಡು-ಹೆಣ್ಣು ಒಟ್ಟಾಗಿ ಕಾರ್ಯಕ್ರಮಗಳಿಗೆ ಹಾಜರಾಗಲು ಮತ್ತು ಪುರುಷ ಪಾಲಕತ್ವವಿಲ್ಲದೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತಿದೆ.

Ad Widget

Ad Widget

Ad Widget
Click to comment

Leave a Reply

ಮನರಂಜನೆ

Google-ಗೂಗಲ್ ಗ್ರಾಹಕರ ಫೋನ್ ಸಂಭಾಷಣೆ ಆನಂದದಾಯಕವಾಗಿಸಲು ಪರಿಚಯಿಸುತ್ತಿದೆ “ಆಡಿಯೋ ಎಮೋಜಿ”

Ad Widget

Ad Widget

Ad Widget

Ad Widget

ಎಷ್ಟೇ ದೂರದಲ್ಲಿದ್ದರೂ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧನವಾಗಿ ಫೋನ್ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಫೋನ್ ಸಂಭಾಷಣೆಯನ್ನು ಮತ್ತಷ್ಟು ಆನಂದದಾಯಕವಾಗಿಸಲು ಗೂಗಲ್ ತನ್ನ ಫೋನ್ ಅಪ್ಲಿಕೇಶನ್‌ನಲ್ಲಿ “ಆಡಿಯೋ ಎಮೋಜಿ” ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈ ಕುರಿತಂತೆ 9to5Google ವರದಿ ಮಾಡಿದ್ದು, ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರು ಫೋನ್ ಕರೆ ಸಮಯದಲ್ಲಿ ಆರು ರೀತಿಯ ಧ್ವನಿಗಳನ್ನು ಪ್ಲೇ ಮಾಡಬಹುದು. ಈ ಶಬ್ದಗಳು ದುಃಖ, ಚಪ್ಪಾಳೆ, ಸಂಭ್ರಮಾಚರಣೆ, ನಗು, ಡ್ರಮ್ ರೋಲ್ ಮತ್ತು ಪೂಪ್ ರೀತಿ ಇರುತ್ತದೆ ಎಂದು ತಿಳಿಸಿದೆ.

Ad Widget

Ad Widget

Ad Widget

ಗಮನಾರ್ಹವಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ “ಆಡಿಯೋ ಎಮೋಜಿ” ವೈಶಿಷ್ಟ್ಯವನ್ನು ಮೊದಮೊದಲು “ಸೌಂಡ್ ರಿಯಾಕ್ಷನ್” ಎಂದು ಕರೆಯಲಾಗುತ್ತಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ, ಇದೀಗ ಗೂಗಲ್ ಹೊಸ ವೈಶಿಷ್ಟ್ಯವು ಗೂಗಲ್ ಫೋನ್ ಅಪ್ಲಿಕೇಶನ್‌ನ ಪರೀಕ್ಷಾ ಆವೃತ್ತಿಯಲ್ಲಿ ಚಾಲನೆಯಲ್ಲಿದೆ. ಶೀಘ್ರದಲ್ಲೇ, ಬಳಕೆದಾರರಿಗೆ ಈ ವೈಶಿಷ್ಟ್ಯ ಲಾಭವಾಗುವ ಸಾಧ್ಯತೆ ಇದೆ. ಇದರಲ್ಲಿ ಬಳಕೆದಾರರು ಯಾವುದೇ ಧ್ವನಿ ಎಮೋಜಿಯನ್ನು ಪ್ಲೇ ಮಾಡಿದಾಗ, ಪರದೆಯ ಮೇಲೆ ಸಣ್ಣ ಅನಿಮೇಷನ್ ಕಾಣಿಸಿಕೊಳ್ಳುತ್ತದೆ. ಈ ಅನಿಮೇಷನ್ ಅನ್ನು ಕರೆ ಮಾಡುವವರು ಮತ್ತು ಕೇಳುವವರು ಇಬ್ಬರೂ ನೋಡಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದಾಗ್ಯೂ, ಧ್ವನಿ ಕರೆಯನ್ನು ಕರೆ ಮಾಡುವವರು ಮತ್ತು ಕರೆ ಸ್ವೀಕರಿಸುವವರಿಬ್ಬರೂ ಆನಂದಿಸಬಹುದು ಎಂದು ತಿಳಿದುಬಂದಿದೆ.

Ad Widget

ಆಡಿಯೊ ಎಮೋಜಿಯನ್ನು ಹೇಗೆ ಬಳಸುವುದು?
ಈ ವೈಶಿಷ್ಟ್ಯವು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು ಪ್ರಾಯೋಗಿಕ ಬಳಕೆದಾರರಿಗಷ್ಟೇ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಬೇಕು.

Ad Widget

Ad Widget
  • ಮೊದಲಿಗೆ ಫೋನ್ ಸೆಟ್ಟಿಂಗ್‌ಗಳನ್ನು ತೆರೆಯಿರಿ.
  • ಸ್ಕ್ರಾಲ್ ಡೌನ್ ಮಾಡಿ ಇದರಲ್ಲಿಸಾಮಾನ್ಯ ವಿಭಾಗಕ್ಕೆ ಹೋಗಿ.
  • ಇದರಲ್ಲಿ ಕಾಣುವ “ಆಡಿಯೋ ಎಮೋಜಿಗಳು” ಮೇಲೆ ಟ್ಯಾಪ್ ಮಾಡಿ.
  • “ಆಡಿಯೋ ಎಮೋಜಿಗಳ” ವೈಶಿಷ್ಟ್ಯವನ್ನು ಬಳಸಲು ಸ್ವಿಚ್ ಆನ್ ಆಯ್ಕೆಯನ್ನು ಆರಿಸಿ.

ಒಮ್ಮೆ “ಆಡಿಯೋ ಎಮೋಜಿಗಳ” ವೈಶಿಷ್ಟ್ಯವನ್ನು ಆನ್ ಮಾಡಿದ ಬಳಿಕ ನೀವು ಕರೆ ಮಾಡುವಾಗ ಪರದೆಯ ಮೇಲೆ ತೇಲುವ ಬಟನ್ ಕಾಣಿಸಿಕೊಳ್ಳುತ್ತದೆ. ಅದು ನಿಮಗೆ ಧ್ವನಿ ಎಮೋಜಿಯನ್ನು ಕಳುಹಿಸಲು ಅನುಮತಿಸುತ್ತದೆ.

Ad Widget

Ad Widget

Ad Widget

ಇದರಲ್ಲಿ ‘ಆಡಿಯೋ ಎಮೋಜಿಯನ್ನು ಪ್ರಯತ್ನಿಸಿ’ ಎಂಬ ಆಯ್ಕೆಯನ್ನು ಆರಿಸಿ ಅದರಲ್ಲಿ ಗೋಚರಿಸುವ ಯಾವುದೇ ಎಮೋಜಿಗಳನ್ನು ಆಯ್ಕೆ ಮಾಡಿ. ಈ ವೈಶಿಷ್ಟ್ಯವು ಸ್ಪೀಕರ್ ಮೋಡ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.

Continue Reading

ಮನರಂಜನೆ

‘Manjummel Boys’-‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮೇ 3ರಂದು ಒಟಿಟಿಯಲ್ಲಿ ರಿಲೀಸ್

Ad Widget

Ad Widget

Ad Widget

Ad Widget

ಮಲಯಾಳಂ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ಸೂಪರ್ ಹಿಟ್ ಎನಿಸಿಕೊಂಡಿದೆ. 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರೋ ಈ ಚಿತ್ರವನ್ನು ಒಟಿಟಿಯಲ್ಲಿ ವೀಕ್ಷಿಸಲು ಫ್ಯಾನ್ಸ್ ಕಾದಿದ್ದಾರೆ. ಕೊನೆಗೂ ಇದಕ್ಕೆ ಮುಹೂರ್ತ ಕೂಡ ಬಂದಿದೆ. ಈ ಬಗ್ಗೆ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಕಡೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ. ಈ ಸಿನಿಮಾ ಶೀಘ್ರವೇ ಒಟಿಟಿಗೆ ಬರಲಿದೆ ಎಂದು ತಿಳಿಸಲಾಗಿದೆ. ಈ ವಿಚಾರ ಸಿನಿಪ್ರಿಯರ ಖುಷಿ ಹೆಚ್ಚಿಸಿದೆ.

Ad Widget

Ad Widget

Ad Widget

‘ಮಂಜುಮ್ಮೇಲ್ ಬಾಯ್ಸ್’ ಮಲಯಾಳಂ ಸಿನಿಮಾ. ಕರ್ನಾಟಕದ ಪ್ರಮುಖ ನಗರಗಳಲ್ಲಿ ಮಾತ್ರ ಸಿನಿಮಾ ವೀಕ್ಷಣೆಗೆ ಅವಕಾಶ ಇತ್ತು. ಹೀಗಾಗಿ ಎಲ್ಲರಿಗೂ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಈಗ ಥಿಯೇಟರ್​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮಲಯಾಳಂ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲೂ ಪ್ರಸಾರ ಆಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಮೂಲಕ ಎಲ್ಲಾ ಭಾರತದ ಎಲ್ಲಾ ಪ್ರಮುಖ ಭಾಷಿಗರಿಗೆ ಸಿನಿಮಾ ತಲುಪಲಿದೆ.

Ad Widget

ಮೇ 3ರಂದು ಒಟಿಟಿಯಲ್ಲಿ ರಿಲೀಸ್‌
ಕೆಲವು ವರದಿಗಳ ಪ್ರಕಾರ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಮೇ 3ರಂದು ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ. ಈ ಚಿತ್ರವನ್ನು ಚಿದಂಬರಂ ಅವರು ನಿರ್ದೇಶನ ಮಾಡಿದ್ದಾರೆ. ಸೌಬಿನ್ ಶಬೀರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಪೊಡುವಲ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಸೌಬಿನ್ ಶಬೀರ್ ಅವರು ನಿರ್ಮಾಣ ಮಾಡಿದ್ದಾರೆ.

Ad Widget

Ad Widget

ಏನು ಕಥೆ?
ಮಂಜುಮ್ಮೇಲ್ ಊರಿನ ಕೆಲವರು ಕೊಡೆಕೆನಲ್​ನಲ್ಲಿರುವ ‘ಗುಣ ಕೇವ್​’ಗೆ ಟ್ರಿಪ್ ತೆರಳಿದ್ದರು. ಇದರಲ್ಲಿ ಓರ್ವ ವ್ಯಕ್ತಿ ಗುಹೆ ಒಳಗೆ ಬಿದ್ದು ಹೋಗುತ್ತಾನೆ. ಆತನ ರಕ್ಷಿಸೋ ಕಥೆಯನ್ನು ಈ ಸಿನಿಮಾ ಹೊಂದಿದೆ. 2006ರಲ್ಲಿ ನಡೆದ ಈ ಘಟನೆ ಸಿನಿಮಾ ಆಗಿದೆ.

Ad Widget

Ad Widget

Ad Widget
Continue Reading

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading