Connect with us

ಬಿಗ್ ನ್ಯೂಸ್

ಮಧ್ಯಾಹ್ನ 1 ಗಂಟೆಯವರೆಗೆ ದಕ್ಷಿಣ ಕನ್ನಡದಲ್ಲಾದ ಮತದಾನವೆಷ್ಟು ಗೊತ್ತೇ..?

Ad Widget

Ad Widget

Ad Widget

Ad Widget

ಮಂಗಳೂರು : ಲೋಕಸಭಾ ಚುನಾವಣೆಗೆ ಬಿಸಿಲಿನ ಧಗೆಯ ನಡುವೆಯೂ ಬಿರುಸಿನ ಮತದಾನ ನಡೆಯುತ್ತಿದೆ.

Ad Widget

Ad Widget

Ad Widget

ಮಧ್ಯಾಹ್ನ 1 ಗಂಟೆಯವರೆಗೆ 48.1% ಮತ ಪೋಲಿಂಗ್ ಆಗಿದೆ.

Ad Widget

ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತ
ಬೆಳ್ತಂಗಡಿ 50.01
ಮೂಡುಬಿದರೆ 45.1
ಮಂಗಳೂರು ಉತ್ತರ 46.88
ಮಂಗಳೂರು ದಕ್ಷಿಣ 41.62
ಮಂಗಳೂರು ಉಳ್ಳಾಲ 47.83
ಬಂಟ್ವಾಳ 50.13
ಪುತ್ತೂರು 51.01
ಸುಳ್ಯ 53.31ನಲ್ಲಿ ಇಷ್ಟು ಶೇಕಡಾ ಮತದಾನವಾಗಿದೆ.

Ad Widget

Ad Widget

ಜಿದ್ದಾಜಿದ್ದಿನ ಕಣವಾಗಿ ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರವಿದೆ. ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೇಸ್‍ನಿಂದ ಪದ್ಮರಾಜ್ ಪೂಜಾರಿ ಹಾಗೂ ಸೌಜನ್ಯ ಪರ ನೋಟಾ ಅಭಿಯಾನ ಸದ್ದು ಮಾಡುತ್ತಿದ್ದೆ.

Ad Widget

Ad Widget

Ad Widget
Click to comment

Leave a Reply

ಬಿಗ್ ನ್ಯೂಸ್

Anantkumar Hegde | ಚುನಾವಣೆಗೆ ಕೆಲವೇ ಗಂಟೆಗಳಿರುವಾಗ ಮಹತ್ವದ ಬೆಳವಣಿಗೆ : ಬಿಜೆಪಿಗೆ ಓಟ್ ಹಾಕಿ ಎಂದು ತನ್ನ ಫೋಟೋ ಬಳಸಿ ಫೋಸ್ಟ್ ಮಾಡಿದ್ದರ ವಿರುದ್ದ ಫೈರ್ ಬ್ರ್ಯಾಂಡ್ ನಾಯಕ , ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆಯಿಂದ ದೂರು ದಾಖಲು

Ad Widget

Ad Widget

Ad Widget

Ad Widget

ಕಾರವಾರ, ಮೇ 06: ತಮ್ಮ ಫೋಟೋ ಬಳಸಿ ಬಿಜೆಪಿಗೆ ವೋಟ್​ ಹಾಕುವಂತೆ ಪೋಸ್ಟ್​​ ಮಾಡಿದವರ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಅವರು ತಮ್ಮ ಆಪ್ತನ ಮೂಲಕ ದೂರು ದಾಖಲಿಸಿದ್ದಾರೆ. ಅನಂತಕುಮಾರ್ (Anantkumar Hegde) ಆಪ್ತ ಸಹಾಯಕ ಸುರೇಶ್ ಶೆಟ್ಟಿಯಿಂದ ಸಿದ್ದಾಪುರದ ಬಿಜೆಪಿ ಕಾರ್ಯಕರ್ತ ಎ.ಜಿ.ನಾಯ್ಕ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಲಾಗಿದೆ.

Ad Widget

Ad Widget

Ad Widget

ಸಂಸದರ ಭಾವಚಿತ್ರ ಬಳಸಿ ಸಂಸದರೇ ಹೇಳಿದ್ದಾರೆ ಎನ್ನುವ ರೀತಿಯಲ್ಲಿ ಪೋಸ್ಟ್ ಹಾಕಿದ ಹಿನ್ನಲೆ ದೂರು ನೀಡಲಾಗಿದೆ.

Ad Widget

ದೂರಿನಲ್ಲೇನಿದೆ?
ಎ.ಜಿ ನಾಯ್ಕ, ಸಿದ್ದಾಪುರ ಇವರು ಮೇ 6ರಂದು ಮಧ್ಯಾಹ್ನ 2-20 ಗಂಟೆಗೆ ಬಿಜೆಪಿ ಉತ್ತರ ಕನ್ನಡ ಲೋಕಸಭಾ 2024 ಎಂಬ ವಾಟ್ಸ್ ಆಫ್ ಗ್ರೂಪ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ನನ್ನ ಬಂದು ಬಾಂಧವರೇ, ಮುನ್ನುಗ್ಗಿ ಮುನ್ನುಗ್ಗಿ, ಯಾವುದಕ್ಕೂ ಹೆದರಬೇಡಿ, ಎಲ್ಲಿಯೂ ನಿಲ್ಲಬೇಡಿ. ದೇಶವನ್ನು ಉಳಿಸುವ ಹಾಗೂ ದೇಶದೊಂದಿಗೆ ನಿಲ್ಲುವ ಸದಾವಕಾಶ ನಮ್ಮೆಲ್ಲರಿಗೂ ಮತ್ತೊಮ್ಮೆ ಒದಗಿ ಬಂದಿದೆ.

Ad Widget

Ad Widget

2014 ಹಾಗೂ 2019 ರಲ್ಲಿ, ಹೇಗೆ ನಾವುಗಳೆಲ್ಲ ದೇಶ ವಿರೋಧಿ ಶಕ್ತಿಯ ವಿರುದ್ಧ ಸೆಟೆದು ನಿಂತೆವೋ ಅದೇ ರೀತಿಯಾಗಿ ಮತ್ತೊಮ್ಮೆ ದೇಶ ವಿರೋಧಿ ಶಕ್ತಿಗಳ ವಿರುದ್ಧ ನಿಲ್ಲುವ ಕಾಲ ಬಂದಿದೆ.

Ad Widget

Ad Widget

Ad Widget

ನಾವೆಲ್ಲರೂ ಪ್ರಧಾನ ಸೇವಕ ನರೇಂದ್ರ ಮೋದಿಯವರ ಬೆನ್ನಿಗೆ ನಿಂತು ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಇದು ನಮಗೋಸ್ಕರ ಅಲ್ಪವಾದರೂ ನಮ್ಮ ಭವಿಷ್ಯದ ನಾಳೆಗಾಗಿ ಭವಿಷ್ಯದ ಭಾರತಕ್ಕಾಗಿ ಇದೇ ಮೇ 07ರಂದು ನಡೆಯುವ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಧ್ವಜವನ್ನು ಹಾರಿಸಬೇಕಿದೆ

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಾಹುಗಳಿಗೆ ಶಕ್ತಿ ನೀಡುವ ಕೆಲಸವಾಗಬೇಕಿದೆ ಎಂದು ಬರೆದು ಅದಕ್ಕೆ ಸಂಸದ ಅನಂತಕುಮಾರ ಹೆಗಡೆಯವರ ಭಾವಚಿತ್ರವನ್ನು ಅಳವಡಿಸಿ ಅನಂತಕುಮಾರ ಹೆಗಡೆಯವರೇ ಹೇಳಿಕೆ ನೀಡಿದ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಾಕಿ, ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ದುರುಪಯೋಗ ಪಡಿಸಿಕೊಂಡು ಗೌರವ ಘನತೆಗೆ ಚ್ಯುತಿ ಬರುವ ಹಾಗೇ ಮಾಡಿದ್ದಾರೆ. ಹೀಗಾಗಿ ಅನಂತಕುಮಾರ್ ಹೆಗಡೆ ಸೂಚನೆ ಮೇರೆಗೆ ಅವರ ಬೆಂಬಲಿಗರು ದೂರು ನೀಡಿದ್ದಾರೆ.

Continue Reading

ಅಂತರ ರಾಜ್ಯ

India ranked poorer-ಪತ್ರಿಕಾ ಸ್ವಾತಂತ್ರ್ಯ ಸಮೀಕ್ಷೆ : ಪಾಕ್ ಗಿಂತಲೂ ಕಳಪೆಯಾಗಿ ಸ್ಥಾನದಲ್ಲಿ ಭಾರತ

Ad Widget

Ad Widget

Ad Widget

Ad Widget

ಹೊಸದಿಲ್ಲಿ: ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ವಿಶ್ವದ 180 ದೇಶಗಳ ಪೈಕಿ 159ನೇ ಸ್ಥಾನ ಪಡೆದಿದ್ದು, ಪಾಕಿಸ್ತಾನಕ್ಕಿಂತಲೂ ಕಳಪೆಯಾಗಿ ಹೊರಹೊಮ್ಮಿದೆ.

Ad Widget

Ad Widget

Ad Widget

ಪ್ಯಾರಿಸ್ ಮೂಲದ ‘ರಿಪೋರ್ಟರ್ಸ್ ವಿಥವ್ಟ್ ಬಾರ್ಡರ್ಸ್‌ (ಆರ್‌ಎಸ್ ಎಫ್) ಸಂಸ್ಥೆ ಬಿಡುಗಡೆ ಮಾಡಿರುವ 2024ನೇ ಸಾಲಿನ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ದಲ್ಲಿಪಾಕಿಸ್ತಾನವು 152ನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕಿಂತಲೂ ಉತ್ತಮ ಸ್ಥಾನ ಗಳಿಸಿದೆ.

Ad Widget

ಇದೇ ವರದಿಯಲ್ಲಿ ಭಾರತಕ್ಕೆ ಕಳೆದ ವರ್ಷ 161ನೇ ಸ್ಥಾನ ಸಿಕ್ಕಿತ್ತು. ಉತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ದೇಶವಾಗಿ ನಾರ್ವೆ ಮೊದಲ ಸ್ಥಾನ ಪಡೆದಿದೆ. ಡೆನ್ಮಾರ್ಕ್ ಹಾಗೂ ಸ್ವಿಡನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ.

Ad Widget

Ad Widget

ಪೂರ್ವ ಆಫ್ರಿಕಾದ ಎರಿಟ್ರಿಯಾ ದೇಶ 180ನೇ ಸ್ಥಾನ ಪಡೆಯುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅತ್ಯಂತ ಕೆಟ್ಟ ವಾತಾವರಣ ಇರುವ ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ.

Ad Widget

Ad Widget

Ad Widget

145ರಿಂದ 180ರವರೆಗಿನ ಸ್ಥಾನಗಳನ್ನು ಪಡೆದ ದೇಶಗಳನ್ನು ಪತ್ರಿಕಾ ಸ್ವಾತಂತ್ಯಕ್ಕೆ ‘ರೆಡ್ ಜೋನ್’ (ಅಪಾಯದ ವಲಯ) ಎಂದು ಸಂಸ್ಥೆಯು ಗುರುತಿಸಿದೆ. 1ರಿಂದ 8 ಸ್ಥಾನಗಳನ್ನು ಪಡೆದ ದೇಶಗಳನ್ನು ‘ಗ್ರೀನ್ ಜೋನ್’ (ಮುಕ್ತ/ಉತ್ತಮ ವಲಯ) ಎಂದು ವಿಂಗಡಿಸಲಾಗಿದೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮಾಧ್ಯಮಗಳು ರಾಜಕೀಯ ನಾಯಕರ, ರಾಜಕೀಯ ಪಕ್ಷಗಳ ನಿಯಂತ್ರಣದಲ್ಲಿವೆ. ಪತ್ರಿಕಾ ಸ್ವಾತಂತ್ರ್ಯ ತೀವ್ರ ಬಿಕ್ಕಟ್ಟಿನಲ್ಲಿದೆ ಎಂದು ವರದಿ ಹೇಳಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಅತಿಹೆಚ್ಚು ಗೌರವ ನೀಡುತ್ತಿರುವ ರಾಷ್ಟ್ರಗಳು(ಟಾಪ್ 5)
Ranking ದೇಶ
1 ನಾರ್ವೆ
2 ಡೆನ್ಮಾರ್ಕ್
3 ಸ್ವಿಡನ್
4 ನೆದ‌ರ್ ಲೆಂಡ್
5 ಫಿನ್‌ಲೆಂಡ್

ಪತ್ರಿಕಾ ಸ್ವಾತಂತ್ರ್ಯ ಅಪಾಯದಲ್ಲಿರುವ ರಾಷ್ಟ್ರಗಳು ( 10)

Ranking ದೇಶ
171 ಮ್ಯಾನಾರ್
172 ಚೀನಾ
173 ಬಹರೇನ್
174 ವಿಯೆಟ್ನಾಂ
175 ತುರ್ಕ್‌ ಮೆನಿಸ್ತಾನ
176 ಇರಾನ್
177 ಉತ್ತರಕೊರಿಯಾ
178 ಅಫಘಾನಿಸ್ತಾನ
179 ಸಿರಿಯಾ
180 ಎರಿಟ್ರಿಯಾ(ಪೂರ್ವ ಆಫ್ರಿಕಾ)

Continue Reading

ಉಡುಪಿ

Kapu: Pili Kola-ಕಾಪು : ಪಿಲಿ ಕೋಲ – ನಗರ ಪ್ರದಕ್ಷಿಣೆ ವೇಳೆ ಓರ್ವನ ಸ್ಪರ್ಶಿಸಿ ದೈವಸ್ಥಾನಕ್ಕೆ ಓಡಿ ಬಂದ ದೈವ..!

Ad Widget

Ad Widget

Ad Widget

Ad Widget

ಕಾಪು, ಮೇ 14: ತುಳುನಾಡಿನ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮಮುಗ್ಗೆರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಮೇ 4ರಂದು ಸಂಪನ್ನಗೊಂಡಿತು.

Ad Widget

Ad Widget

Ad Widget

2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಹುಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.

Ad Widget

ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಪಿಲಿ ಭೂತವು ಓರ್ವನನ್ನು ಸ್ಪರ್ಶಿಸಿದ್ದು ಸ್ಪರ್ಶದ ಬಳಿಕ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯದ ಪದ್ಧತಿಗಳನ್ನು ನೆರವೇರಿಸಲಾಯಿತು. ”

Ad Widget

Ad Widget

ಸಹಸ್ರಾರು ಮಂದಿ ಭಾಗಿ
ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಮುಂಬಯಿ ಸೇರಿದಂತೆ ದೇಶ-ವಿದೇಶಗಳಿಂದ ಬಂದಿರುವ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಜಾನಪದಾಸಕ್ತರು ಪಿಲಿ ಕೋಲಕ್ಕೆ ಸಾಕ್ಷಿಯಾದರು.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading