Connect with us

ಉದ್ಯೋಗ

Pawan Davuluri-ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ನ ಹೊಸ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್ ದಾವುಲೂರಿ – ಸತ್ಯ ನಾದೆಳ್ಲಾ ಬಳಿಕ ಮತ್ತೊಬ್ಬ ಭಾರತೀಯ ಅಗ್ರಸ್ಥಾನಕ್ಕೆ

Ad Widget

Ad Widget

Ad Widget

Ad Widget

ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲೂರಿ ಅವರು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್ನ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಹಿಂದೆ ಈ ವಿಭಾಗದ ನೇತೃತ್ವ ವಹಿಸಿದ್ದ ವಿಂಡೋಸ್ ಮುಖ್ಯಸ್ಥ ಪನೋಸ್ ಪಣಯ್ ರಾಜೀನಾಮೆ ನೀಡಿ ಅಮೆಜಾನ್ ಸಂಸ್ಥೆಗೆ ತೆರಳಿದ ಹಿನ್ನೆಲೆಯಲ್ಲಿ ಭಾರತೀಯನನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. ಇದರೊಂದಿಗೆ ಮೈಕ್ರೋ ಸಾಫ್ಟ್ನಲ್ಲಿ ಸಿಇಒ ಆಗಿರುವ ಭಾರತೀಯ ಸತ್ಯ ನಾದೆಳ್ಲಾ ಜೊತೆಗೆ ಮತ್ತೊಬ್ಬರು ಅಗ್ರ ಸ್ಥಾನಕ್ಕೇರಿದಂತಾಗಿದೆ.

Ad Widget

Ad Widget

Ad Widget

ದಾವುಲೂರಿ ಅವರು ಭಾರತೀಯ ಮೂಲದವರಾಗಿದ್ದು, ಅವರು ಪ್ರತಿಷ್ಠಿತ ಐಐಟಿ ಮದ್ರಾಸ್ನಿಂದ ಪದವಿ ಪಡೆದಿದ್ದಾರೆ. ದಾವುಲುರಿ ಅವರು ಮೈಕ್ರೋಸಾಫ್ಟ್ನೊಂದಿಗೆ 23 ವರ್ಷಗಳಿಂದ ಸಂಬಂಧ ಹೊಂದಿದ್ದಾರೆ.

Ad Widget

ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಅವರ ಸ್ನಾತಕೋತ್ತರ ಪದವಿ ಪಡೆದಿದ್ದು ಬಳಿಕ ಅವರು ತಮ್ಮ ಎಂಎಸ್ ಅನ್ನು ಪೂರ್ಣಗೊಳಿಸಿದರು, ದಾವುಲುರಿ ಮೈಕ್ರೋಸಾಫ್ಟ್ಗೆ ವಿಶ್ವಾಸಾರ್ಹ ಘಟಕ ವ್ಯವಸ್ಥಾಪಕರಾಗಿ ಸೇರಿದರು. ಪವನ್ ಇದಕ್ಕೂ ಮೊದಲು ಮೈಕ್ರೋ ಸಾಫ್ಟ್ ಸರ್ಫೇಸ್ ಸಿಲಿಕಾನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು

Ad Widget

Ad Widget
Click to comment

Leave a Reply

ಉದ್ಯೋಗ

Online applications-ಮೇ 2ರಿಂದ ಆನ್‌ಲೈನ್‌ ಮೂಲಕ ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ

Ad Widget

Ad Widget

Ad Widget

Ad Widget

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

Ad Widget

Ad Widget

Ad Widget

ಈ ಹಿಂದೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಸಕ್ತರು ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 1.

Ad Widget

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

Ad Widget

Ad Widget

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 33,450 ರೂ. – 62,600 ರೂ. ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Ad Widget

Ad Widget

Ad Widget

ವಯೋಮಿತಿ ಮತ್ತು ಅರ್ಜಿ ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1ರ ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪಿಡಬ್ಲ್ಯುಡಿ / ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಮಾಜಿ ಯೋಧರು ಅರ್ಜಿ ಶುಲ್ಕವಾಗಿ 50 ರೂ., ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 300 ರೂ., ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌: 080-30574957 / 30574901ಕ್ಕೆ ಕರೆ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ :
ನಿಮ್ಮ ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ಹೆಸರು ನೋಂದಾಯಿಸಿ.
ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ / ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.
ಗಮನಿಸಿ ಮೇ 2ರ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

Continue Reading

ಉದ್ಯೋಗ

Job In Mobile Factory | ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯಲ್ಲಿ ಉದ್ಯೋಗವಕಾಶ : ಪುತ್ತೂರಿನಲ್ಲಿ ನೇರ ಸಂದರ್ಶನ

Ad Widget

Ad Widget

Ad Widget

Ad Widget

ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯ ಉದ್ಯೋಗ ಅವಕಾಶಗಳಿಗೆ ಪುತ್ತೂರಿನಲ್ಲಿ ನೇರ ಸಂದರ್ಶನ.

Ad Widget

Ad Widget

Ad Widget


ಪ್ರಾರಂಭಿಕ 19ಸಾವಿರ ವೇತನದೊಂದಿಗೆ ಉಚಿತ ವಸತಿ ಊಟ, PF, ESI ಇತ್ಯಾದಿ ಸೌಲಭ್ಯಗಳು
ಪುತ್ತೂರಿನ ಪ್ರತಿಷ್ಠಿತ ತರಬೇತಿ ಮತ್ತು ಉದ್ಯೋಗದಾತ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯ ವತಿಯಿಂದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಪ್ರಾರಂಭವಾಗಲಿರುವ ಅಂತರಾಷ್ಟ್ರೀಯ ಮೊಬೈಲ್ ತಯಾರಿಕಾ ಕಂಪನಿಯ ಉತ್ಪಾದನಾ ಘಟಕಕ್ಕೆ ಅವಶ್ಯವಿರುವ 300 ಹುದ್ದೆಗಳಿಗೆ ನೇರ ಸಂದರ್ಶನವನ್ನು ದಿನಾಂಕ 11- 4 – 2024 ರಂದು ಬೆಳಿಗ್ಗೆ 10 ರಿಂದ ವಿದ್ಯಾಮಾತಾ ಅಕಾಡೆಮಿ ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಕಛೇರಿಯಲ್ಲಿ ನಡೆಸಲಾಗುತ್ತದೆ.

Ad Widget

ನೇರ ಸಂದರ್ಶನವನ್ನು ಕಂಪನಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಸಂಪನ್ಮೂಲ ಅಧಿಕಾರಿಗಳೇ ನೇರವಾಗಿ ನಡೆಸಲಿದ್ದು SSLC/PUC/ ITI /Diploma/ BE / Any degree ಓದಿರುವ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

Ad Widget

Ad Widget


ವಯಸ್ಸಿನ ಮಿತಿ :- 18 ರಿಂದ 26 ಒಳಗಿನ ಅಭ್ಯರ್ಥಿಗಳಿಗೆ
ಪ್ರಾರಂಭಿಕ ವೇತನ ಶ್ರೇಣಿ :- 19,048 ರೂ
ಹುದ್ದೆಯ ವಿವರ :- ಟೀಮ್ ಲೀಡರ್, ಮೊಬೈಲ್ ಅಸ್ಸೆಂಬಲ್ ಸ್ಟಾಫ್

Ad Widget

Ad Widget

Ad Widget

ಸಂದರ್ಶನಕ್ಕೆ ತರಬೇಕಾದ ದಾಖಲೆಗಳು :- ಬಯೋಡೇಟಾ, ಆಧಾರ್ , 2 ಪಾಸ್ಪೋರ್ಟ್ ಸೈಜ್ ಫೋಟೋ
ಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯಗಳು:- ಉಚಿತ ಹಾಸ್ಟೆಲ್, ಉಚಿತ ಊಟ ,ಉಚಿತ ಸಾರಿಗೆ ,ESI, PF, ವಾರ್ಷಿಕ ಬೋನಸ್ ,ಅಟೆಂಡೆನ್ಸ್ ಬೋನಸ್ ,ವೈದ್ಯಕೀಯ ಸೌಲಭ್ಯಗಳು, ವಾರ್ಷಿಕ ರಜೆ ಸಹಿತ ಇನ್ನಿತರ ಸೌಲಭ್ಯಗಳು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಳಾಸ ಅಥವಾ ಮೊಬೈಲ್ ನಂಬರ್ ಸಂಪರ್ಕಿಸಬಹುದು.

ವಿದ್ಯಾಮಾತಾ ಅಕಾಡೆಮಿ
ಕೇಂದ್ರ ಕಛೇರಿ : ಹಿಂದೂಸ್ತಾನ್ ಕಾಂಪ್ಲೆಕ್ಸ್ 1ನೇ ಮಹಡಿ ,ಎ.ಪಿ.ಎಂ.ಸಿ ರಸ್ತೆ ಪುತ್ತೂರು, ದ. ಕ
9620468869/8590773486/9448527606/9148935808

Continue Reading

ಉದ್ಯೋಗ

Village Administration Officer-ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆ: ಅರ್ಜಿ ಸಲ್ಲಿಸಲು ಮೇ 4 ಕಡೇ ದಿನ

Ad Widget

Ad Widget

Ad Widget

Ad Widget

ಬೆಂಗಳೂರು: ಕಂದಾಯ ಇಲಾಖೆಯ ಒಂದು ಸಾವಿರ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಏ.5ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಮೇ 4 ಕೊನೆಯ ದಿನ.

Ad Widget

Ad Widget

Ad Widget

ಹುದ್ದೆಗಳ ನೇಮಕಾತಿಗೆ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿದಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಸಲ್ಲಿಸಲು ಏ.3ರವರೆಗೆ ಅವಕಾಶ ನೀಡಿತ್ತು. ಆದರೆ, ಆನ್ಲೈನ್ ಅರ್ಜಿ ಸಲ್ಲಿಕೆಯಲ್ಲಿನ ತಾಂತ್ರಿಕ ದೋಷಗಳ ಕಾರಣ ಈಗ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಜಿ ಶುಲ್ಕ ಪಾವತಿಗೆ ಮೇ 7ರವರೆಗೆ ಅವಕಾಶ ನೀಡಲಾಗಿದೆ.

Ad Widget

ಕೆ-ಸೆಟ್ ಕೀ ಉತ್ತರ ಪ್ರಕಟ:
ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ಕೀ ಉತ್ತರಗಳನ್ನು ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಜ. 13ರಂದು 42 ವಿವಿಧ ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading