Air Bag saved Life ವಿಟ್ಲ: ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಣ್ಣ ಪುಟ್ಟ ಗಾಯಕ್ಕಿಡಾದ ಘಟನೆ ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಜೂ 1 ರಂದು ಮಧ್ಯಾಹ್ನ ನಡೆದಿದೆ. ಕಾರಿನಲ್ಲಿದ್ದವರು ಸೀಟ್ ಬೆಲ್ಟ್ ಧರಿಸಿದ್ದ ಕಾರಣ. ಅಪಘಾತವಾಗುತ್ತಲೇ ಏರಬ್ಯಾಗ್ ತೆರೆದುಕೊಂಡು ಸಂಭಾವ್ಯ ಅಪಾಯವೊಂದು ತಪ್ಪಿದೆ
ಕೇರಳದ ಉಪ್ಪಳ ನಿವಾಸಿಗಳು ಹೊಚ್ಚ ಹೊಸ ಬೆಂಝ್ ಕಾರಿನಲ್ಲಿ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಕಾರು ಸಂಪೂರ್ಣವಾಗಿ ಹಾನಿಗೊಂಡಿದೆ. ಆದರೇ ಕಾರಿನ ಎರಡು ಏರ್ ಬ್ಯಾಗ್ ಗಳುತೆರೆದುಕೊಂಡ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಓರ್ವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ . ಅಪಘಾತವು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ


