Connect with us

Uncategorized

ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ -ದೇಶ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿರಲಿ : ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು

Ad Widget

Ad Widget

Ad Widget

Ad Widget


ಪುತ್ತೂರು: ದೇಶ ಮತ್ತು ಧರ್ಮಕ್ಕಾಗಿ ನಾವು ನಮ್ಮ ಜೀವನ ನಡೆಸಬೇಕು. ದೇಶವನ್ನು ಬಿಟ್ಟು ಧರ್ಮವಾಗಲೀ, ಧರ್ಮವನ್ನು ಬಿಟ್ಟು ದೇಶವಾಗಲೀ ಇರುವುದಕ್ಕೆ ಸಾಧ್ಯವಿಲ್ಲ. ಅತ್ಯಂತ ಉತ್ಕೃಷ್ಟ ದೇಶ ಹಾಗೂ ಧರ್ಮದಲ್ಲಿ ನಾವು ಜನಿಸಿದ್ದೇವೆ ಎಂಬುದೇ ಹೆಮ್ಮೆ. ಹಾಗಾಗಿ ದೇಶ ಹಾಗೂ ಧರ್ಮ ಎರಡನ್ನೂ ಚೆನ್ನಾಗಿ ಇಟ್ಟುಕೊಂಡಾಗ ಮಾತ್ರ ನಮ್ಮ ಜನ್ಮ ಸಾರ್ಥಕಗೊಳ್ಳುತ್ತದೆ. ಮನುಷ್ಯ ಜನ್ಮ ಎನ್ನುವುದು ನಮಗೆ ದೊರಕುವ ಸುವರ್ಣಾವಕಾಶ. ಇದನ್ನು ವ್ಯರ್ಥ ಮಾಡಬಾರದು ಎಂದು ಶೃಂಗೇರಿಯ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಹೇಳಿದರು.

Ad Widget

Ad Widget

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಆಶಿರ್ವಚನ ನೀಡಿದರು.

Ad Widget

ನಮ್ಮಲ್ಲಿನ ನ್ಯೂನತೆಗಳನ್ನು ಯಾರಾದರೂ ಗುರುತಿಸಿದಲ್ಲಿ ಖೇದಪಡಬಾರದು. ಬದಲಾಗಿ ನಮ್ಮ ಮಿತಿಗಳನ್ನು ಮೀರಿ ನಿಲ್ಲುವ ಬಗೆಗೆ ಯೋಚಿಸಬೇಕು. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಒಪ್ಪಿಕೊಳ್ಳುವ, ಅದನ್ನು ತಿದ್ದಿಕೊಳ್ಳುವ ಮನಃಸ್ಥಿತಿ ನಮ್ಮದಾಗಬೇಕು. ಹಾಗಾಗಿ ಪ್ರತಿಯೊಬ್ಬನೂ, ಪ್ರತಿದಿನವೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾಗಿ ನಮ್ಮ ಕೊರತೆಗಳನ್ನು ಮತ್ತೊಬ್ಬರು ಹೇಳಿದಾಗ ಅವಮಾನವೆಂದೆಣಿಸಿ ಸಿಟ್ಟಿಗೊಳಗಾದರೆ ನಮ್ಮ ವ್ಯಕ್ತಿತ್ವ ಸೌಂದರ್ಯ ಪಡೆದುಕೊಳ್ಳುವುದಿಲ್ಲ ಎಂದರು.

Ad Widget

Ad Widget

ಮನುಷ್ಯ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಜ್ಞಾನ ಸಂಪಾದನೆ. ಜ್ಞಾನಪೂರ್ವಕವಾಗಿ ಮಾಡುವ ಕಾರ್ಯಗಳೆಲ್ಲವೂ ಸಫಲವಾಗುತ್ತವೆ. ಮನುಷ್ಯನಿಗೆ ಬುದ್ಧಿ ಇದೆ ಎಂಬುದು ಹೌದಾದರೂ ಆ ಬುದ್ಧಿಗಳಲ್ಲಿ ವೈವಿಧ್ಯ ಕಾಣಬಹುದು. ಬುದ್ಧಿ, ಮತಿ, ಸ್ಮೃತಿ, ಪ್ರಜ್ಞಾ ಎಂಬುದು ಬುದ್ಧಿಯ ನಾನಾಮುಖಗಳು. ಇವೆಲ್ಲದರ ಆರ್ಜನೆಗೆ ವಿದ್ಯೆ ಅಗತ್ಯ. ದೇಹ, ಮನಸ್ಸಿನ ಆರೋಗ್ಯವಷ್ಟೇ ಅಲ್ಲ, ಮಾತಿನ ಆರೋಗ್ಯವೂ ಮನುಷ್ಯನಿಗೆ ಅತ್ಯಂತ ಅನಿವಾರ್ಯ. ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು ದುರ್ಗುಣಗಳನ್ನು ದೂರೀಕರಿಸಬೇಕು ಎಂದರು.

Ad Widget

Ad Widget

Ad Widget

ಬುದ್ಧಿ ಹಾಗೂ ಮನಸ್ಸು ಸರಿಯಾಗಿದ್ದರೆ ವ್ಯಕ್ತಿಯೊಬ್ಬ ಒಳ್ಳೆಯದನ್ನೇ ಗುರುತಿಸುತ್ತಾನೆ. ಕೆಟ್ಟದ್ದರೆಡೆಗೆ ಗಮನ ಹರಿಸುವುದೇ ಇಲ್ಲ. ಆದರೆ ಎಲ್ಲೆಡೆಯಲ್ಲೂ ಒಳ್ಳೆಯದನ್ನು ಮಾತ್ರ ಗುರುತಿಸಿ ಕೆಟ್ಟದ್ದರೆಡೆಗೆ ಬುದ್ಧಿಪೂರ್ವಕವಾಗಿ ನಿರ್ಲಕ್ಷ್ಯವಹಿಸಬೇಕಾದರೆ ಅತ್ಯುತ್ತಮ ಮನಸ್ಸು ವ್ಯಕ್ತಿಯದ್ದಾಗಿರಬೇಕು. ಆದ್ದರಿಂದ ಎಲ್ಲದಕ್ಕೂ ಮೂಲ ನಮ್ಮ ಮನಸ್ಸೇ ಆಗಿದೆ. ಅಂತೆಯೇ ಶರೀರವೆಂಬ ರಥಕ್ಕೆ ಬುದ್ಧಿಯೇ ಸಾರಥಿ. ಹಾಗಾಗಿ ಬುದ್ಧಿ ನಮ್ಮ ಹತೋಟಿಯಲ್ಲಿರಬೇಕು, ಆ ಬುದ್ಧಿಗೆ ಸರಿಯಾದ ಸಂಸ್ಕಾರ ಬೇಕು. ಈ ವಿಚಾರಗಳನ್ನು ಉಪನಿಷತ್ ನಮಗೆ ಬೋಧಿಸುತ್ತದೆ ಎಂದರು

ಈ ಸಂದರ್ಭದಲ್ಲಿ ಗುರುವಂದನಾ ಸಮಿತಿ ಹಾಗೂ ದಶಾಂಬಿಕೋತ್ಸವ ಸಮಿತಿಯ ವತಿಯಿಂದ ಪ್ರತ್ಯೇಕವಾಗಿ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಫಲಸಮರ್ಪಣೆ, ಸ್ಮರಣಿಕೆ ಹಾಗು ಬಿನ್ನವತ್ತಳೆ ಸಮರ್ಪಿಸಿ, ಅಭಿವಂದಿಸಲಾಯಿತು. ದಶಾಂಬಿಕೋತ್ಸವ ಪ್ರಯುಕ್ತ ರೂಪುಗೊಳಿಸಲಾದ ಸ್ಮರಣ ಸಂಚಿಕೆ ‘ಭೂಮಿಕಾ’ವನ್ನು ಜಗದ್ಗುರುಗಳು ಅನಾವರಣಗೊಳಿಸಿ ಹರಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆರಂಭದಿಂದಲೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತಿ ಶೆಟ್ಟಿ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆರಂಭದಿಂದಲೂ ಉಪನ್ಯಾಸಕರಾಗಿರುವ ಪ್ರದೀಪ್ ಕೆ.ವೈ, ದಿನೇಶ್ ಕುಮಾರ್, ಶೈನಿ, ಪುಷ್ಪಲತಾ, ಜಯಂತಿ ಹಾಗೂ ಸಂಸ್ಥೆಯ ಉದ್ಯೋಗಿ ರವಿಚಂದ್ರ ಅವರನ್ನು ಆಡಳಿತ ಮಂಡಳಿ ವತಿಯಿಂದ ಗುರುಗಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಕಜೆ ಹತ್ತನೆಯ ವರ್ಷದ ನೆಲೆಯಲ್ಲಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ದಶಾಂಬಿಕೋತ್ಸವದ ನೆಲೆಯಲ್ಲಿ ಹೆತ್ತವರೆಲ್ಲರೂ ಸೇರಿ ಸಂಸ್ಥೆಗಾಗಿ ಒಟ್ಟು ಸೇರಿಸಿದ ದತ್ತಿನಿಧಿಯನ್ನು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ಹಸ್ತಾಂತರಿಸಲಾಯಿತು.

ಅಂಬಿಕಾ ವಿದ್ಯಾಲಯ ಬೆಳೆದು ಬಂದ ಹಾದಿ, ಶೃಂಗೇರಿ ಜಗದ್ಗುರುಗಳ ಕೃಪಾಶೀರ್ವಾದಗಳ ಬಗೆಗೆ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಿಸ್ತರಿಸಿ ಹೇಳಿದರು. ಅಂತೆಯೇ ಸಂಸ್ಥೆಯ ಕುರಿತಾಗಿ ಸಿದ್ಧಪಡಿಸಲಾದ ವೀಡಿಯೋ ಚಿತ್ರಿಕೆಯನ್ನು ಪ್ರದರ್ಶಿಸಲಾಯಿತು.

ಅಂಬಿಕಾ ಮಹಾವಿದ್ಯಾಲಯದ ತತ್ತ÷್ವಶಾಸ್ತç ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ನುಡಿಗಳನ್ನಾಡಿ, ಬಿನ್ನವತ್ತಳೆ ವಾಚಿಸಿದರು. ಗುರುವಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಶಂಕರಾಚಾರ್ಯ ವಿರಚಿತ ಪ್ರಾತಃಸ್ಮರಾಮಿ ಶ್ಲೋಕವನ್ನು ಪ್ರಸ್ತುತಪಡಿಸಿದರು.

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಭಾಕಾರ್ಯಕ್ರಮದ ಬಳಿಕ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಮಹಾವಿದ್ಯಾಲಯದ ವತಿಯಿಂದ ಜಗದ್ಗುರುಗಳಿಗೆ ಫಲಸಮರ್ಪಣೆ ನಡೆಯಿತು. ಬಳಿಕ ಸಮಾಜದ ವಿವಿಧ ಸಮುದಾಯಗಳ ವತಿಯಿಂದ ಫಲಸಮರ್ಪಣೆ ವಸ್ತç ಸಮರ್ಪಣೆ ನಡೆಯಿತು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.


ಸರಸ್ವತೀ ಹೋಮ: ಗುರುವಾರ ಬೆಳಗ್ಗೆ 6 ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸರಸ್ವತೀ ಹೋಮವನ್ನು ವೇ.ಮೂ.ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆಸಲಾಯಿತು. ಪೂರ್ಣಾಹುತಿಯ ಸಂದರ್ಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯಸಾನ್ನಿಧ್ಯವನ್ನೊದಗಿಸಿ ಹರಸಿದರು.

ಜಗದ್ಗುರುಗಳ ಆಗಮನ ಹಾಗೂ ಶ್ರೀ ಚಂದ್ರಮೌಳೀಶ್ವರ ಪೂಜೆ:

ಬುಧವಾರ ಇಳಿಸಂಜೆ ಸುಮಾರು 7.15ರ ಹೊತ್ತಿಗೆ ಪೋಳ್ಯದ ಬಳಿ ಜಗದ್ಗುರುಗಳಿಗೆ ಶ್ರೀಕೃಷ್ಣ ನಟ್ಟೋಜ ಅವರು ಫಲಸಮರ್ಪಿಸಿ ಬರಮಾಡಿಕೊಂಡರು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಬಳಿ ಪೂರ್ಣಕುಂಭ ಸ್ವಾಗತ ಹಾಗೂ ಫಲ ಸಮರ್ಪಣೆ ನಡೆಯಿತು. ತದನಂತರ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿತು. ಈ ಎಲ್ಲಾ ಸಂದರ್ಭಗಳಲ್ಲೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಬಿಕಾ ವಿದ್ಯಾಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು, ಗುರುವಂದನಾ ಸಮಿತಿ ಸಲಹೆಗಾರರಾದ ಎನ್.ಕೆ.ಜಗನ್ನಿವಾಸ ರಾವ್, ಮುಳಿಯ ಕೇಶವ ಪ್ರಸಾದ್, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಐತ್ತಪ್ಪ ನಾಯ್ಕ್, ಖಜಾಂಜಿ ಸತೀಶ್ ರಾವ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಮಿತಿ ಪದಾಧಿಕಾರಿಗಳು, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾನಾಗರಾಜ್, ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಮತ್ತಿತರರು ಹಾಜರಿದ್ದರು.

ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳ ಸೂಚನೆಯಂತೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿAದ ಸುಮಾರು 75 ಲಕ್ಷದಷ್ಟು ರಾಮ ತಾರಕ ಜಪ ಮಹಾಯಜ್ಞವನ್ನು ಕೈಗೊಳ್ಳಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳು ನೂರಾರು ದಿನಗಳ ಕಾಲ ಶ್ರೀ ರಾಮ ಜಯರಾಮ ಜಯಜಯರಾಮ ಮಂತ್ರವನ್ನು ಪಠಿಸಿದ್ದರು. ಈ ನೆಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಅಂಬಿಕಾ ವಿದ್ಯಾಲಯದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ಮಂದಿರದ ಸ್ವರ್ಣ ಮಾದರಿಯನ್ನು ಸಮರ್ಪಿಸಲಾಯಿತು.

Click to comment

Leave a Reply

Uncategorized

ಹುಬ್ಬಳ್ಳಿ : ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿ ಸದ್ದಾಂ ಹುಸೇನ್ ಗೆ ಪೊಲೀಸರಿಂದ ಗುಂಡೇಟು  – ಬಂಧನ

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನೇಹಾ ಮಾದರಿಯಲ್ಲಿಯೇ ಹುಬ್ಬಳ್ಳಿಯಲ್ಲಿ ಮತ್ತೊಂದು  ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ನೀಡಿದ್ದ ಪ್ರಕರಣ ನಡೆದಿದ್ದು, ಆರೋಪಿ ಸದ್ದಾಂ ಹುಸೇನ್ ನನ್ನು  ಪೊಲೀಸರು ಗುಂಡು ಹಾರಿಸಿ ಗಾಯಗೊಳಿಸಿ ಬಂಧಿಸಿದ್ದಾರೆ.

Ad Widget

ಆರೋಪಿ ಸದ್ದಾಂ ವಿರುದ್ದ  16 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ಎಸಗಿ  ಗರ್ಭಿಣಿ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಠಾಣೆಯಲ್ಲಿ FIR ದಾಖಲಾದ   ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಎಸ್ಕೇಪ್ ಆಗಿದ್ದು,  ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಸ್ಥಳಾಂತರಿಸುವ ವೇಳೆ ಆರೋಪಿ ಸುತ್ತಗಟ್ಟಿ ಗ್ರಾಮದ ಸಮೀಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿಗೆ ಗುಂಡೇಟು ಹೊಡೆದಿದ್ದಾರೆ.

Ad Widget

Ad Widget

  ಪೊಲೀಸರು ಆರೋಪಿ ಸದ್ದಾಂ ಹುಸೇನ್ ಎಡಗಾಲಿಗೆ ಗುಂಡು ಹಾರಿಸಿ (Firing) ಬಂಧಿಸಿದ್ದಾರೆ. ಆರೋಪಿ ಸದ್ದಾಂ ಹುಸೇನ್ ಹಲ್ಲೆ  ನಡೆಸಿದ್ದರಿಂದ  ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಗಮೇಶ ಹಾಗೂ ಕಾನ್ಸ್ಟೇಬಲ್ ಅರುಣ್ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಖಲಿಸಲಾಗಿದೆ. ಆರೋಪಿ ಸದ್ದಾಂ ಹುಸೇನ್ನನ್ನು ಧಾರವಾಡ (Dharwad) ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget

Ad Widget

ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಆಸ್ಪತ್ರೆಗೆ  ಭೇಟಿ ನೀಡಿದ್ದು  ಈ ವೇಳೆ ಮಾಧ್ಯಮಗಳಿಗೆ ಘಟನೆಯನ್ನು ವಿವರಿಸಿದ್ದಾರೆ.” ಎಪಿಎಂಸಿ ಕೇಸ್ ಪತ್ತೆ ಹಚ್ಚಲು ಟೀಮ್ ಕಳಿಹಿಸಿದ್ವಿ. ಅದರಲ್ಲಿ ಒಂದು ಟೀಮ್ಗೆ ಈತ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಐದಾರು ಕಿಮೀ ದೂರದಲ್ಲಿರೋದು ತಿಳಿಯುತ್ತೆ. ಆಗ ಆತನನ್ನು ಬಂಧಿಸಿ ಕರೆತರಲು ತೆರಳಿದ್ದರು. ಆ ವೇಳೆಯಲ್ಲಿ ವಿದ್ಯಾಗಿರಿ ಇನ್ಸ್ಪೆಕ್ಟರ್ ನೇತೃತ್ವದ ಟೀಮ್ ಹೋಗಿತ್ತು. ಮುಂದಿನ ತನಿಖೆಗೆ ಠಾಣೆಗೆ ಕರೆತರಲು ಮುಂದಾಗಿದ್ದರು ಎಂದು ಹೇಳಿದ್ದಾರೆ.

ಬಳಿಕ ಆರೋಪಿಯನ್ನು ಬಂಧಿಸಿ ಜೀಪ್ ಹತ್ತಿಸುವಾಗ ಪೆನ್ ನೈಪ್ ನಿಂದ ಎಡ ಭುಜಕ್ಕೆ ಚುಚ್ಚಿದ್ದಾನೆ. ಕಾನ್ಸ್ ಟಬಲ್ ಅರುಣ ಮೇಲೆ ಮೊದಲು ಹಲ್ಲೆ ಮಾಡುತ್ತಾನೆ. ಆಗ ಕಂಟ್ರೋಲ್ ಮಾಡಲು ಆತನನ್ನು ಕೆಳಗೆ ತಳ್ಳಿದ್ದರು. ಆಗ ಅದೇ ಚಾಕುವಿನಿಂದ ಇನ್ಸಪೆಕ್ಟರ್ ಮಂಡಿ ಮತ್ತು ಬೆನ್ನ ಮೇಲೆ ಹಲ್ಲೆ ಮಾಡುತ್ತಾನೆ. ಅವನನ್ನ ಕಂಟ್ರೋಲ್ ಮಾಡಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಆಗ ಎಡಗಾಲಿಗೆ ಫೈರ್ ಮಾಡಿದ್ದಾರೆ. ಆರೋಪಿ ಸೇರಿ ಮೂರು ಜನ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ರೇಣುಕಾ ಸುಕುಮಾರ ಎಂದಿದ್ದಾರೆ.

ಸಿಪಿಐ ಮತ್ತು ಕಾನ್ಸಟೇಬಲ್ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಅಡ್ಮಿಟ್ ಮಾಡಿಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದು ಒಂದು ಕೇಸ್ ದಾಖಲಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ಗರ್ಭಿಣಿಯಾದ ಬಾಲಕಿ

ಆರೋಪಿ ಸದ್ದಾಂ ಹುಸೇನ್ ಲಿಂಬುವಾಲೆ ಹುಬ್ಬಳ್ಳಿಯ ಈಶ್ವರನಗರದವನು ಎಂದು ಗುರುತಿಸಲಾಗಿದೆ. ಅಪ್ರಾಪ್ತ ಜತೆ ಸಲುಗೆ ಬೆಳೆಸಿ, ಪ್ರೀತಿಸುವಂತೆ ನಂಬಿಸಿ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಬಗ್ಗೆ ಮನೆಯಲ್ಲಿ ಹೇಳಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಕಳೆದ ಮೂರ್ನಾಲ್ಕು ದಿನದಿಂದ ಬಾಲಕಿ ವಾಂತಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು. ಆದರೂ ವಾಂತಿ ಕಡಿಮೆಯಾಗದಿ ದ್ದಾಗ ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಆ ವೇಳೆ ಬಾಲಕಿ ವಿಚಾರಿಸಿದಾಗ ಸದ್ದಾಂ ಹುಸೇನ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ.

Continue Reading

Uncategorized

Prajwal Revanna Sex Scandal: ಹಾಸ್ಟೆಲ್‌ ಕುರಿತು ವಿಚಾರಿಸಲು ಹೋಗಿದ್ದ ವೇಳೆ ಕೈ ಹಿಡಿದೆಳೆದು ರೂಮಿನ ಬಾಗಿಲು ಹಾಕಿದರು-  ಗನ್‌ ತೋರಿಸಿ ಬಟ್ಟೆ ಬಿಚ್ಚು ಎಂದರು; ರೇಪ್‌ ಮಾಡಿ ಮೊಬೈಲ್‌ ನಲ್ಲಿ ವಿಡಿಯೋ ಮಾಡಿಕೊಂಡ್ರು: ಮಾಜಿ ಜಿಪಂ ಸದಸ್ಯೆಯಿಂದ  ಪ್ರಜ್ವಲ್‌ ರೇವಣ್ಣ ಮೇಲೆ ಅತ್ಯಾಚಾರ ಪ್ರಕರಣ  

Ad Widget

Ad Widget

Ad Widget

Ad Widget

ಮಾಜಿ ಪ್ರಧಾನಿ ಎಚ್‌ ಡಿ ದೇವೆಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌ ಡಿ ರೇವಣ್ಣ  ಪುತ್ರ ಹಾಸನ  ಸಂಸದ ಪ್ರಜ್ವಲ್ ರೇವಣ್ಣ ಸಂಕಷ್ಟ ದಿನೇ ದಿನೆ ಹೆಚ್ಚಾಗುತ್ತಿದೆ. ರಾಸಲೀಲೆಯ ಪೆನ್‌ ಡ್ರೈವ್‌ ಬಹಿರಂಗವಾಗುತ್ತಲೇ, ಮನೆಯ ಮಹಿಳಾ ಕೆಲಸದಾಳು ನೀಡಿದ ದೂರಿನ ಮೇರೆಗೆ ಅಪ್ಪ ಮಗನ ಮೇಲೆ ಹೊಳೆನರಸಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಜ್ವಲ್‌ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

 ಹಾಸನದ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯೆಯೊಬ್ಬಳಿಗೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ ಬಗ್ಗೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಗಳ ವಿಡಿಯೋ ಚಿತ್ರಿಕರಣ ನಡೆಸಿರುವ ಬಗ್ಗೆ  ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Ad Widget

2ನೇ ದೂರುದಾರೆ ಹಾಸನ ಜಿಲ್ಲೆಯಯರಾಗಿದ್ದು, ಆಕೆಗೀಗ  44 ವರ್ಷ. ಗುರುವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಸಂತ್ರಸ್ತೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ಎಫ್ ಐಆ‌ರ್ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ

Ad Widget

Ad Widget

ದೂರಿನಲ್ಲಿ ಏನಿದೆ ?

Ad Widget

Ad Widget

Ad Widget

 ದೂರುದಾರೆಯೂ ಚುನಾಯಿತ ಪ್ರತಿನಿಧಿಯಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಸಿಕೊಡಲು ಶಾಸಕರು, ಸಂಸದರನ್ನು ಭೇಟಿಯಾಗುತ್ತಿದ್ದರು.  ಒಂದು ದಿನ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸುವ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣರ ಬಳಿ ಮನವಿ ಮಾಡಲು ತೆರಳಿದ್ದೆ. ಅಂದು ಸಂಸದರ ಕಚೇರಿ ಮತ್ತು ವಸತಿ ಗೃಹದಲ್ಲಿ ತುಂಬಾ ಜನರು ಇದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ನೀವು ವಸತಿ ಗೃಹದ ಮಹಡಿಯಲ್ಲಿ ಇರುವಂತೆ ನನಗೆ ಸೂಚಿಸಿದರು. ಅದರಂತೆ ನಾನು ಮಹಡಿಗೆ ತೆರಳಿದೆ. ಅಲ್ಲಿ ಕೆಲ ಮಹಿಳೆಯರು ಇದ್ದರು.’ ಕೈ ಹಿಡಿದು ಎಳೆದು ರೂಮ್ ಬಾಗಿಲು ಲಾಕ್:

“ಸ್ವಲ್ಪ ಸಮಯದ ಬಳಿಕ ಮಹಡಿಗೆ ಬಂದ ಪ್ರಜ್ವಲ್ ರೇವಣ್ಣ ಅಲ್ಲಿಂದ ಬೇರೆ ಮಹಿಳೆಯರ ಅಹವಾಲು ಆಲಿಸಿ ಕಳುಹಿಸಿದರು. ಬಳಿಕ ನಾನು ಒಬ್ಬನೇ ಇದ್ದಿದ್ದರಿಂದ ನನ್ನನ್ನು ರೂಮ್‌ಗೆ ಕರೆದರು. ನಾನು ಒಳಗೆ ಹೋಗುತ್ತಿದ್ದಂತೆ ಕೈ ಹಿಡಿದು ಎಳೆದುಕೊಂಡು ರೂಮ್‌ನ ಬಾಗಿಲು ಹಾಕಿದರು. ಆಗ ಏಕೆ ಬಾಗಿಲು ಹಾಕುತ್ತೀರಿ ಎಂದು ನಾನು ಕೇಳಿದೆ. ಆಗ ಅವರು ಏನೂ ಆಗುವುದಿಲ್ಲ ಎಂದು ನನ್ನನ್ನು ಬೆಡ್ ಮೇಲೆ ಕೂರಿಸಿಕೊಂಡರು.’

ಹೇಳಿದ ಹಾಗೆ ಕೇಳು:

 ‘ನಿನ್ನ ಗಂಡ ಜೋರು, ಕಡಿಮೆ ಮಾತನಾಡಲು ಹೇಳು. ಇಲ್ಲವಾದರೆ ಅವನನ್ನು ಬಿಡುವುದಿಲ್ಲ, ಅವನಿಂದ ನಮ್ಮ ಅಮ್ಮನ ಎಂಎಲ್‌ಎ ಟಿಕೆಟ್‌ ತಪ್ಪಿತು.ನಿನ್ನಗಂಡರಾಜಕೀಯವಾಗಿ ಬೆಳಯಬೇಕು ಎಂದರೆ ನಾನು ಹೇಳಿದ ಹಾಗೆ ಮಾಡು ಎನ್ನುತ್ತಾ ನನ್ನನ್ನು ಮಂಚದ ಮೇಲೆ ಮಲಗಿ ಬಟ್ಟೆ ಬಿಚ್ಚು ಎಂದರು. ನಾನು ಬಿಚ್ಚುವುದಿಲ್ಲ ಎಂದರೂ ಬಿಚ್ಚುವಂತೆ ಒತ್ತಾಯ ಮಾಡಿದರು’ ಎಂದು ದೂರಿನಲ್ಲಿಆರೋಪಿಸಿದ್ದಾರೆ.

ನನ್ನ ಬಳಿ ಗನ್ ಇದೆ:

 ‘ಈ ವೇಳೆ ನಾನು ಕೂಗುತ್ತೇನೆ ಎಂದು ಹೇಳಿದಾಗ, ನನ್ನ ಬಳಿ ಗನ್ ಇದೆ. ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ, ನಿನ್ನನ್ನು ಮತ್ತು ನಿನ್ನ ಗಂಡನನ್ನು ಬಿಡುವುದಿಲ್ಲ, ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದರು. ಬಳಿಕ ನನ್ನನ್ನು ಬಲಾತ್ಕಾರ ಮಾಡಲು ಪ್ರಯತ್ನಿಸಿದರು. ನಾನೇ ಎಷ್ಟೇ ಪ್ರತಿರೋಧ ಒಡ್ಡಿದರೂ ಬಿಗಿಯಾಗಿ ನನ್ನ ಕೈ ಹಿಡಿದು ಕೂಗಬೇಡ ಎಂದು ಬೆದರಿಸಿದರು. ಆಗ ನಾನು ಭಯಪಟ್ಟೆ. ಆಗ ಅವರು ಮೊಬೈಲ್ ತೆಗೆದರು. ಇದರಿಂದ ಹೆದರಿ ಅವರು ಹೇಳಿದಂತೆ ನಾನು ಕೇಳಿದೆ. ಅವರು ಹೇಳಿದಂತೆ ನಡೆದುಕೊಂಡೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಮೊಬೈಲ್‌ನಲ್ಲಿ ಚಿತ್ರೀಕರಣ:

‘ನನ್ನನ್ನು ಬಲಾತ್ಕಾರ,ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ  ಚಿತ್ರೀಕರಣ ಮಾಡಿಕೊಂಡರು. ನೀನೇನಾದರೂ ಈ ವಿಚಾರವನ್ನು ಬಾಯಿ ಬಿಟ್ಟರೆ, ನಿನ್ನ ವಿಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ. ಈ ವಿಡಿಯೊದಲ್ಲಿ ನನ್ನ ಮುಖ ಇಲ್ಲ. ನಿನ್ನದೇ ಮಾನ-ಮರ್ಯಾದೆ ಹೋಗುತ್ತದೆ ಎಂದು ಹೇಳಿ ಭಯಪಡಿಸಿದರು. ಈ ವಿಡಿಯೊವನ್ನು ಹೀಗೇ ಇರಿಸಿಕೊಂಡಿರುತ್ತೇನೆ. ನಾನು ಕರೆದಾಗಲೆಲ್ಲಾ ನೀನು ನನ್ನ ಜತೆ ಮಲಗಬೇಕು. ಇಲ್ಲವಾದರೆ, ವಿಡಿಯೋವನ್ನು ಬಹಿರಂಗಪಡಿಸುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಿದರು.’

ಮುಂದುವರೆದು, ‘ನಿನ್ನ ಗಂಡ ನನ್ನ ಜತೆ ಇರುತ್ತಾನೆ. ಅವನನ್ನೂ ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿದರು. ಪದೇ ಪದೇ ನನಗೆ ಕರೆ ಮಾಡಿ, ವಿಡಿಯೋ ಕರೆ ಮಾಡಿ, ನಿನ್ನ ದೇಹವನ್ನು ನಗ್ನವಾಗಿ ತೋರಿಸು, ಬಟ್ಟೆ ಬಿಚ್ಚು ಎಂದು ಪೀಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ದೈಹಿಕವಾಗಿ ಆನೇಕ ಬಾರಿ ನನ್ನನ್ನು ಬಲಾತ್ಕಾರ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜ್ವಲ್ ಮೇಲೆ ಕ್ರಮ ಆಗಬೇಕು:

‘ಪ್ರಜ್ವಲ್ ರೇವಣ್ಣ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ನನ್ನ ಮೇಲೆ ಬಲಾತ್ಕಾರ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳುಮಾಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಇಷ್ಟು ದಿನ ನಾನು ಪ್ರಜ್ವಲ್ ರೇವಣ್ಣ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡು ನನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯದ ಸಂಬಂಧ ದೂರು ನೀಡುತ್ತಿದ್ದೇನೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಪದೇ ಪದೇ ಕರೆ ಮಾಡಿ, ವಿಡಿಯೋ ಕರೆ ಮಾಡಿ, ನಿನ್ನ ದೇಹವನ್ನು ನಗ್ನವಾಗಿ ತೋರಿಸು, ಬಟ್ಟೆ ಬಿಚ್ಚು ಎಂದು ಪೀಡಿಸಿ ಮಾನಸಿಕ ಹಿಂಸೆ ನೀಡುತ್ತಿದ್ದರು. ದೈಹಿಕ ವಾಗಿ ಅನೇಕ ಬಾರಿ ನನ್ನನ್ನು ಬಲಾತ್ಕಾರ ಮಾಡಿ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ.

ದೂರಿನಲ್ಲಿ ಮಹಿಳೆ ಹೇಳಿದ್ದು

Continue Reading

Uncategorized

ವಿಟ್ಲದ ದಂಪತಿಗಳಿದ್ದ ಕಾರು ಸಂಪಾಜೆಯಲ್ಲಿ ಅಪಘಾತ – ಮಹಿಳೆ ಮೃತ್ಯು

Ad Widget

Ad Widget

Ad Widget

Ad Widget

ಪುತ್ತೂರು: ಮಡಿಕೇರಿಯ ಕಡೆಗೆ ಸಂಚರಿಸುತ್ತಿದ್ದ ಕಾರು ಸಂಪಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್ ಒಂದಕ್ಕೆ ಡಿಕ್ಕಿ ಹೊಡೆದು ಪತ್ನಿ ಮೃತಪಟ್ಟು ಪತಿ ಗಂಭೀರ ಗಾಯಗೊಂಡ ಘಟನೆ ಮೇ 3ರಂದು ನಡೆದಿದೆ.

Ad Widget

Ad Widget

Ad Widget

ಅಡ್ಯನಡ್ಕ ನಿವಾಸಿ ಅನುರಾಧ ಪೈ ಮೃತ ಪಟ್ಟಿದ್ದು, ಪತಿ ಅರವಿಂದ ಪೈ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Ad Widget

ಕಾರಿನ ಮುಂಭಾಗ ಕುಳಿತಿದ್ದ ಅನುರಾಧ ಪೈ ಅವರು ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading