Connect with us

ವಿದೇಶ

Helped microchip-ನೆರವಾದ ಮೈಕ್ರೋಚಿಪ್ – ನಾಪತ್ತೆಯಾಗಿದ್ದ ನಾಯಿ 2 ಸಾವಿರ ಮೈಲು ದೂರದಲ್ಲಿ ಪತ್ತೆ! ಸಿನಿಮಾ ಕಥೆಯಂತಿದೆ ಪುನರ್ಮಿಲನದ ಸ್ಟೋರಿ

Ad Widget

Ad Widget

Ad Widget

Ad Widget

ವಾಷಿಂಗ್ಟನ್: ಶ್ವಾನಗಳನ್ನು ಸಾಕಿದವರು, ಅವು ದಿಢೀರ್ ಕಳೆದು ಹೋದರೆ ಮಕ್ಕಳನ್ನೇ ಕಳೆದುಕೊಂಡಷ್ಟು ದುಃಖಕ್ಕೆ ಒಳಗಾಗುತ್ತಾರೆ. ಸಾಕಿದ ನಾಯಿ ನಾಪತ್ತೆಯಾದಾಗ, ಅವುಗಳನ್ನು ಹುಡುಕಿ ಕೊಟ್ಟವರಿಗೆ ಲಕ್ಷಗಟ್ಟಲೆ ಹಣ ನೀಡುವುದಾಗಿ ಮಾಲೀಕರು ಜಾಹೀರಾತು ನೀಡಿದ ಹಲವಾರು ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಹೀಗೆ ಕಾಣೆಯಾದ ಶ್ವಾನಗಳು ತಮ್ಮ ಮಾಲೀಕರನ್ನು ಸೇರಿದ ‘ಶುಭಂ’ ಸುದ್ದಿಗಳೂ ಇವೆ.

Ad Widget

Ad Widget

Ad Widget

ಆದರೆ ಮಾಲೀಕನಿಂದ ಮಾತ್ರವಲ್ಲದೆ, ತನ್ನ ಊರಿನಿಂದಲೇ ನಾಪತ್ತೆಯಾದ ಶ್ವಾನ ಮರಳಿ ಮಾಲೀಕನನ್ನು ಸೇರುವುದು ಸಾಧ್ಯವೇ? ಅದೂ ಸಾವಿರಾರು ಕಿಮೀ ದೂರ ಹೋಗಿರುವಾಗ? ಇಂತದ್ದೊಂದು ಅಚ್ಚರಿಯ ಘಟನೆ ಅಮೆರಿಕದಲ್ಲಿ ನಡೆದಿದೆ.

Ad Widget

ಕ್ಯಾಲಿಫೋರ್ನಿಯಾದ ಮನೆಯಿಂದ ಕಾಣೆಯಾಗಿದ್ದ ಮುದ್ದಿನ ನಾಯಿಯೊಂದು ಅಲ್ಲಿಂದ 2 ಸಾವಿರಕ್ಕೂ ಹೆಚ್ಚು ಮೈಲು ದೂರದಲ್ಲಿರುವ ಉಪನಗರ ಡೆಟ್ರಾಯಿಟ್ನಲ್ಲಿ ಪತ್ತೆಯಾಗಿದೆ. ನಾಟಕೀಯ ರೀತಿಯಲ್ಲಿ ಶ್ವಾನ ಮತ್ತು ಅದರ ಮಾಲೀಕರ ಪುನರ್ಮಿಲನ ನಡೆದಿದೆ. ಅದೂ ಸುಮಾರು ಎಂಟು ತಿಂಗಳ ಬಳಿಕ.

Ad Widget

Ad Widget

ಮಿಷ್ಕಾ ಎಂಬ ಹೆಸರಿನ ಟೆರೀಯರ್ ತಳಿಯ ನಾಯಿ ಕಳೆದ ವರ್ಷದ ಜುಲೈ ತಿಂಗಳಲ್ಲಿ ಕಣ್ಮರೆಯಾಗಿತ್ತು. ಮಧ್ಯ ಪಶ್ಚಿಮ ರಾಜ್ಯವಾದ ಮಿಚಿಗನ್ನ ಹಾರ್ಪರ್ ವುಡ್ಸ್ ಸಮೀಪ ಕಾಣಿಸಿತ್ತು. ನಿವಾಸಿಯೊಬ್ಬರು ಇದು ಬೀದಿ ನಾಯಿ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಅದನ್ನು ಕಾಪಾಡಿದ್ದ ಅಧಿಕಾರಿಗಳು, ಆಕೆಯನ್ನು ಪ್ರಾಣಿ ಆಶ್ರಯ ಕೇಂದ್ರಕ್ಕೆ ಕರೆದೊಯ್ದಿದ್ದರು.

Ad Widget

Ad Widget

Ad Widget

ಮಿಷ್ಕಾಳನ್ನು ತಪಾಸಣೆ ನಡೆಸಿದ ಗ್ರಾಸ್ ಪಾಯಿಂಟ್ ಪ್ರಾಣಿ ದತ್ತು ಸಮಾಜದ (ಜಿಪಿಎಎಎಸ್) ಸಿಬ್ಬಂದಿ, ಆಕೆಯ ದೇಹದಲ್ಲಿ ಮೈಕ್ರೋಚಿಪ್ ಅಳವಡಿಸಿರುವುದನ್ನು ಗಮನಿಸಿದ್ದರು. ಇದರಿಂದ, ಆಕೆ 2,343 ಮೈಲು ದೂರದಲ್ಲಿರುವ ಸ್ಯಾನ್ ಡಿಯಾಗೋದಲ್ಲಿ ವಾಸವಿರುವ ವ್ಯಕ್ತಿಗಳಿಗೆ ಸೇರಿದವಳು ಎಂಬುದು ಪತ್ತೆಯಾಗಿತ್ತು. ಮೈಕ್ರೋಚಿಪ್ ಮಾಹಿತಿ ಆಧಾರದಲ್ಲಿ ಅವರು ಶ್ವಾನ ಮಾಲೀಕರನ್ನು ಸಂಪರ್ಕಿಸಿದ್ದರು. ಆದರೆ ಆಕೆ ಅಷ್ಟು ದೂರ ಪ್ರಯಾಣಿಸಿದ್ದು ಹೇಗೆ ಎನ್ನುವುದು ನಿಗೂಢವಾಗಿದೆ.

ಮಿಷ್ಕಾ ಕಾಣೆಯಾಗಿ ತಿಂಗಳುಗಳೇ ಕಳೆದಿದ್ದರಿಂದ ಅದರ ಮಾಲೀಕ ಮೆಹ್ರಾಡ್ ಹೌಮನ್ ಮತ್ತು ಅವರ ಕುಟುಂಬದವರು, ಆಕೆ ಮತ್ತೆ ಜೀವಂತವಾಗಿ ಸಿಗುತ್ತಾಳೆ ಎಂಬ ಆಸೆ ಬಿಟ್ಟಿದ್ದರು. ಮಿಷ್ಕಾ ಪತ್ತೆಯಾದಾಗ ಅವರು ಮಿನ್ನೆ ಪೊಲಿಸ್ ನಗರದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು ಎಂದು ಜಿಪಿಎಎಎಸ್ ತಿಳಿಸಿದೆ.

ಕ್ಯಾಲಿಫೋರ್ನಿಯಾದಿಂದ ಪ್ರಾಣಿ ಕೇಂದ್ರಕ್ಕಿಂತಲೂ ಮಿನ್ನೆಪೊಲಿಸ್ನಿಂದ ಅಂತರ ಕಡಿಮೆ. ಹಾಗಿದ್ದರೂ ಮಿಷ್ಕಾಳಿಗಾಗಿ ಹೌಮನ್ ಅವರ ಕುಟುಂಬ ಸುಮಾರು 10 ಗಂಟೆ ಕಾರು ಚಾಲನೆ ಮಾಡಿಕೊಂಡು ಬರಬೇಕಾಗಿತ್ತು.

ಸಿನಿಮಾ ಕಥೆಯಂತಿದೆ ಎಂದ ಕೇಂದ್ರ
“ಹಾಲಿವುಡ್ ಹೇಳಲು ಇಷ್ಟಡುವಂತಹ ಕಥೆ ಇದು” ಎಂದು ಯಾವ ಸಿನಿಮಾ ಕಥೆಗೂ ಮಿಷ್ಕಾಳ ಕಥೆ ಕಮ್ಮಿ ಇಲ್ಲ ಎಂಬಂತೆ ಜಿಪಿಎಎಎಸ್ ತನ್ನ ಫೇಸ್ಬುಕ್ ಖಾತೆಯಲ್ಲಿ ಬುಧವಾರ ತಿಳಿಸಿದೆ.

ಬಿಳಿ ಬಣ್ಣದ, ಮೈ ತುಂಬಾ ಹರಡಿರುವ ಕೂದಲಿನ ಮಿಷ್ಕಾಳ ಫೋಟೋ ಹಾಗೂ ವಿಡಿಯೋಗಳನ್ನು ಕೇಂದ್ರವು ಹಂಚಿಕೊಂಡಿದೆ. ತನ್ನ ಮಾಲೀಕರನ್ನು ಮತ್ತೆ ನೋಡಿದ ಖುಷಿಯಲ್ಲಿ ಆಕೆ ತನ್ನ ಬಾಲವನ್ನು ಆಡಿಸುತ್ತಾ ಸಂಭ್ರಮಿಸುವುದು ಕಾಣಿಸಿದೆ. “ನಾವೆಲ್ಲರೂ ಬಯಸಿದ್ದ, ಶುಭ ಅಂತ್ಯವಿದು” ಎಂದು ಜಿಎಎಎಸ್ ಬರೆದಿದೆ. ಪಶುವೈದ್ಯರೊಬ್ಬರು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಿಷ್ಕಾಳನ್ನು ಕ್ಯಾಲಿಫೋರ್ನಿಯಾಕ್ಕೆ ವಾಪಸ್ ಕಳುಹಿಸಲಾಗಿದೆ ಎಂದು ಅದು ಹೇಳಿದೆ.

Click to comment

Leave a Reply

ಅಪರಾಧ

Covishield-ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಪೆಕ್ಟ್ – ಮೊದಲ ಬಾರಿ ಒಪ್ಪಿಕೊಂಡ ಉತ್ಪಾದಕ ಕಂಪೆನಿ; ‘ಥೋಂಬೋಸಿಸ್” ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ

Ad Widget

Ad Widget

Ad Widget

Ad Widget

ಲಂಡನ್: ಕೋವಿಡ್ ಮಹಾಮಾರಿಯು 2019-21ರ ಅವಧಿಯಲ್ಲಿ ಇಡೀ ಜಗತ್ತನ್ನು ಕಾಡಿದ್ದು ಇದರ ತಡೆಗೆ ತಾನು ಅಭಿವೃದ್ಧಿಪಡಿಸಿದ್ದ ಕೋವಿಡ್ ಲಸಿಕೆಯು ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಕೋವಿಡ್ ಲಸಿಕೆಗಳ ಅಡ್ಡಪರಿಣಾಮದ ಕುರಿತು ಕಂಪನಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ನಾನಾ ವದಂತಿಗಳು ಇದ್ದವಾದರೂ ಕಂಪೆನಿ ಬಹಿರಂಗವಾಗಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ.

Ad Widget

Ad Widget

Ad Widget

ಇದೇ ಆಸ್ಟ್ರಾಜೆನಿಕಾ ಲಸಿಕೆಯನ್ನೇ ಭಾರತದ ಪುಣೆ ಮೂಲ ಸೀರಂ ಇನ್‌ಸ್ಟಿಟ್ಯೂಟ್ ಕೋವಿಶೀಲ್ಡ್ ಹೆಸರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ನೀಡಿದ್ದ ಲಸಿಕೆ ಕೂಡಾ ಇದೇ ಆಗಿದೆ.

Ad Widget

ಆಸ್ಟ್ರಾಜೆನಿಕಾ ಹೇಳಿದ್ದು
ನಾವು ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆಕಾರಣವಾಗುವುದು ನಿಜ. ಲಸಿಕೆ ಪಡೆದವರು ಥೋಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. ಆ ಕಾರಣ, ಲಂಡನ್ ನ್ಯಾಯಾಲಯದಲ್ಲಿ ಆಸ್ಟ್ರಾಜೆನಿಕಾ ನೀಡಿದ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

Ad Widget

Ad Widget

ಆಕ್ಸ್‌ಫರ್ಡ್ ವಿವಿ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಕಂಪನಿಯು ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಆದರೆ ಈ ಲಸಿಕೆ ಪಡೆದ ಪರಿಣಾಮ ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳು ಸಂಭವಿಸಿವೆ ಮತ್ತು ಹಲವು ಸಾವು ಸಂಭವಿಸಿದೆ ಎಂದು ಆರೋಪಿಸಿ ಬ್ರಿಟನ್‌ನ ವಿವಿಧ ನ್ಯಾಯಾಲಯಗಳಲ್ಲಿ ಹಲವು ದೂರು ಸಲ್ಲಿಕೆಯಾಗಿದ್ದವು. ಈ ಪೈಕಿ ಜೇಮಿ ಸ್ಕಾಟ್ ಎಂಬುವವರು 2021ರ ಏಪ್ರಿಲ್‌ನಲ್ಲಿ ನಾನು ಲಸಿಕೆ ಪಡೆದ ಬಳಿಕ ಮೆದುಳಿನಲ್ಲಿ ಶಾಶ್ವತ ಗಾಯ ಸಂಭವಿಸಿದೆ ಎಂದು ಆರೋಪಿಸಿದ್ದರು.

Ad Widget

Ad Widget

Ad Widget

ಈ ಬಗ್ಗೆ ಕಂಪನಿ ಹೇಳಿದ್ದೇನು?: ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಿಕಾದ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿದ್ದು ಅದರಲ್ಲಿ ‘ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯು ಅಪರೂಪದ ಪ್ರಕರಣಗಳಲ್ಲಿ ಅಡ್ಡಪರಿಣಾಮಗಳಿಗೆ ಕಾರಣವಾಗುವುದು ನಿಜ. ಲಸಿಕೆ ಪಡೆದವರು ಹೊಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಈ ಸಮಸ್ಯೆಗೆ ತುತ್ತಾ ದವರು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಗಳ ಸಂಖ್ಯೆಯಲ್ಲಿ ಕಡಿಮೆಯ ತೊಂದರೆಗೆ ಒಳಗಾಗುತ್ತಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ’ ಎಂಬುದಾಗಿ ಸಂಸ್ಥೆ ತಪ್ಪೊಪ್ಪಿಕೊಂಡಿದೆ. ಆಸ್ಟ್ರಾಜೆನಿಕಾ ಸಂಸ್ಥೆ ತಯಾರಿಸಿರುವ ಕೋವಿಡ್ ಲಸಿಕೆಯು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದನೆಯಾಗಿ 174 ಕೋಟಿ ಡೋಸ್‌ನಷ್ಟು ಲಸಿಕೆ ನೀಡಲಾಗಿತ್ತು.

ವಿಶ್ವದಾದ್ಯಂತ 70 ಲಕ್ಷ ಸಾವು: ಕೋವಿಡ್‌ ಸೋಂಕು ವಿಶ್ವದಾದ್ಯಂತ 78 ಕೋಟಿ ಜನರಿಗೆ ತಗುಲಿದ್ದು, 70 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಭಾರತದಲ್ಲಿ 45 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ವ್ಯಾಪಿಸಿ 5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Continue Reading

ಅಪರಾಧ

Everest fish curry-ಎವರೆಸ್ಟ್ ಫಿಶ್‌ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್  ಪತ್ತೆ

Ad Widget

Ad Widget

Ad Widget

Ad Widget

ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್‌ಕರಿ ಮಸಾಲಾ’ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೆಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.

Ad Widget

Ad Widget

Ad Widget

ಎಥಿಲೀನ್ ಆಕ್ಸೆಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟಿರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್‌ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್‌ಪಿ ಮುತ್ತಯ್ಯ ಆ್ಯಂಡ್ ಸನ್ಸ್‌ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.

Ad Widget

Continue Reading

ಬಿಗ್ ನ್ಯೂಸ್

Strong earthquake-ತೈವಾನ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

Ad Widget

Ad Widget

Ad Widget

Ad Widget

ತೈಪೆ: ತೈವಾನ್‌ನ ಪೂರ್ವದಲ್ಲಿ ಬುಧವಾರ ಬೆಳಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಇದು ದ್ವೀಪ ರಾಷ್ಟ್ರ, ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್‌ನ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆಗಳನ್ನು ನೀಡಲು ಪ್ರೇರೇಪಿಸಿತು.

Ad Widget

Ad Widget

Ad Widget

ಭೂಕಂಪವು ಅಲ್ಲಿನ ಸ್ಥಳೀಯ ಸಮಯ 8 ಕ್ಕೆ ಸ್ವಲ್ಪ ಮೊದಲು ಸಂಭವಿಸಿದೆ, ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತೈವಾನ್‌ನ ಹುವಾಲಿಯನ್ ಸಿಟಿಯಿಂದ ದಕ್ಷಿಣಕ್ಕೆ 18 ಕಿಲೋಮೀಟರ್, 34.8 ಕಿಮೀ ಆಳದಲ್ಲಿ ಕೇಂದ್ರಬಿಂದು ಇದೆ ಎಂದು ತಿಳಿಸಿದೆ.

Ad Widget

ಜಪಾನ್‌ನ ಹವಾಮಾನ ಸಂಸ್ಥೆಯು ಮಿಯಾಕೊಜಿಮಾ ದ್ವೀಪ ಸೇರಿದಂತೆ ಈ ಪ್ರದೇಶದಲ್ಲಿನ ದೂರದ ಜಪಾನಿನ ದ್ವೀಪಗಳಿಗೆ ಮೂರು ಮೀಟರ್‌ಗಳಷ್ಟು (10 ಅಡಿ) ಎತ್ತರದ ಸುನಾಮಿ ಅಲೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

Ad Widget

Ad Widget

ಕಟ್ಟಡಗಳು ಕುಸಿದಿರುವ ವಿಡಿಯೋ ಗಳು ಸಾಮಾಜಿಕ ತಾಣದಲ್ಲಿ ಕಂಡು ಬಂದಿದ್ದು ಸಾವು ನೋವಿನ ಬಗ್ಗೆ ಇನ್ನಷ್ಟೇ ವಿವರಗಳು ಲಭ್ಯವಾಗಬೇಕಿದೆ.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading