Connect with us

ಕೊಡಗು

Madikeri | ಮಡಿಕೇರಿ : ರಸ್ತೆ ಅಪಘಾತಕ್ಕೆ ವಿದ್ಯಾರ್ಥಿ ಬಲಿ : ಅಪಘಾತವೆಸಗಿದಾತ ಆತ್ಮಹತ್ಯೆ ..! ಈ ಘಟನೆಗೆ ಕಾರಣವೇನೂ ಗೊತ್ತೇ…?

Ad Widget

Ad Widget

Ad Widget

Ad Widget

ಮಡಿಕೇರಿ : ಮಡಿಕೇರಿಯಲ್ಲಿ (Madikeri) ಒಂದು ರಸ್ತೆ ಅಪಘಾತ ಇಬ್ಬರ ಸಾವಿಗೆ ಕಾರಣವಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಮೃತಪಟ್ಟಿದ್ದು, ಇತ್ತ ಅಪಘಾತಕ್ಕೆ ತಾನೇ ಕಾರಣವೆಂದು ಮನನೊಂದ ಮತ್ತೊಂದು ಬೈಕ್​ ಸವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿನ ಮಡಿಕೇರಿಯಲ್ಲಿ ನಡೆದಿದೆ.

Ad Widget

Ad Widget

Ad Widget

ಕಳೆದ ಫೆಬ್ರವರಿ 9ರಂದು ಮಡಿಕೇರಿಯ ಚೈನ್ ಗೇಟ್ ಬಳಿ‌ ಅಪಘಾತ ಸಂಭವಿಸಿತ್ತು. 24 ವರ್ಷದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಹಾಗೂ ಹೆಚ್‌.ಡಿ ತಮ್ಮಯ್ಯ ಅವರ ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿಯಾಗಿದ್ದವು. ಅಪಘಾತದಲ್ಲಿ ಧನಲ್ ಸುಬ್ಬಯ್ಯ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಧನಲ್ ಸುಬ್ಬಯ್ಯ ಹಾಲೇರಿಯ ಕಾಂಡನಕೊಲ್ಲಿ ನಿವಾಸಿಯಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಮಾಸ್ಟರ್ ಡಿಗ್ರಿ ಓದುತ್ತಿದ್ದ.

Ad Widget

ಮತ್ತೊಂದು ದ್ವಿಚಕ್ರ ವಾಹನದಲ್ಲಿದ್ದ ಹೆಚ್.ಡಿ ತಮ್ಮಯ್ಯ ಅವರು ಮಡಿಕೇರಿ ಸಮೀಪದ ಹೆರವನಾಡಿನ ನಿವಾಸಿಯಾಗಿದ್ದು, ಇವರಿಬ್ಬರ ಅಪಘಾತ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿತ್ತು.

Ad Widget

Ad Widget

ದುರ್ಘಟನೆಯಲ್ಲಿ ಧನಲ್​ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. 57 ವರ್ಷದ ಹೆಚ್.ಡಿ ತಮ್ಮಯ್ಯ ಅವರು ವಿದ್ಯಾರ್ಥಿಯ ರಸ್ತೆ ಅಪಘಾತಕ್ಕೆ ನಾನೇ ಕಾರಣ ಎಂದು ಎರಡು ದಿನಗಳಿಂದ ಊಟವನ್ನೂ ಮಾಡದೇ ಕೊರಗುತ್ತಿದ್ದರು. ತೀವ್ರ ಪಶ್ಚಾತ್ತಾಪದಿಂದ ಬಳಲುತ್ತಿದ್ದ ತಮ್ಮಯ್ಯ ಕೂಡ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ

Ad Widget

Ad Widget

Ad Widget
Click to comment

Leave a Reply

ಅಪರಾಧ

Pushpagiri-ಪುಷ್ಪಗಿರಿ ತಪ್ಪಲಿನಲ್ಲಿ ನಕ್ಸಲರ ಚಲನವಲನ – ಸುಗಮ ಚುನಾವಣೆಗೆ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ

Ad Widget

Ad Widget

Ad Widget

Ad Widget

ಮಡಿಕೇರಿ ಠಾಣೆ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್ ಭಾಗದಲ್ಲಿ ವಾರದ ಹಿಂದೆ ಕಾಣಿಸಿಕೊಂಡ ನಕ್ಸಲರು ಬಳಿಕ ಸುಬ್ರಹ್ಮಣ್ಯ ಸಮೀಪದ ಐನೆಕಿದು ಕಾಡಂಚಿನ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಭಾಗದಲ್ಲಿ ಹರಡಿಕೊಂಡಿರುವ ಪುಷ್ಪಗಿರಿ ಅರಣ್ಯ ವ್ಯಾಪ್ತಿಯಲ್ಲಿ ತಮ್ಮ ಇರುವಿಕೆಯನ್ನು ಪ್ರಕಟಿಸಿದ್ದಾರೆ .

Ad Widget

Ad Widget

Ad Widget

ಲೋಕಸಭೆ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ 15 ಕಿ.ಮೀ. ಅಂತರದ ವ್ಯಾಪ್ತಿಯಲ್ಲಿ ಎರಡು ಬಾರಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಪ್ರಜಾಪ್ರಭುತ್ವದ ಮಹಾ ಪರ್ವಕ್ಕೆ ಸವಾಲೊಡ್ದುವ ಸಾದ್ಯತೆಯನ್ನು ಪರೋಕ್ಷವಾಗಿ ಗೋಚರಿಸಿದ್ದಾರೆ.

Ad Widget

ಹೀಗಾಗಿ ಅಸುಪಾಸಿನ 5-6 ತಿಂಗಳಿನಲ್ಲಿ ಚುನಾವಣೇ ನಡೆಸುವುದು ಜಿಲ್ಲಾಡಳಿತ ಹಾಗು ಚುನಾವಣೆ ಆಯೋಗಕ್ಕೆ ಸವಾಲು ಆಗಿ ಪರಿಣಮಿಸಿದೆ.

Ad Widget

Ad Widget

2012ರ ಆಗಸ್ಟ್ ತಿಂಗಳಲ್ಲಿ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದ ಪಳ್ಳಿಗದ್ದೆ ಎಂಬಲ್ಲಿನ ಐದು ಮನೆಗಳಿಗೆ ಭೇಟಿ ನೀಡಿದ್ದ ಶಂಕಿತ ನಕ್ಸಲರು ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದರು. ಅದೇ ವರ್ಷ ಸೆಪ್ಟೆಂಬರ್ 3ರಂದು ರಾತ್ರಿ ಬಿಸಿಲೆ ಪ್ರದೇಶದಲ್ಲಿ ಎಎನ್‌ಎಫ್ ನಡುವಿನ ಎನ್‌ಕೌಂಟರ್‌ನಲ್ಲಿ ನಕ್ಸಲ್ ಯಲ್ಲಪ್ಪ ಪ್ರಾಣ ಕಳೆದುಕೊಂಡಿದ್ದ. ಇದರ ಬೆನ್ನಲ್ಲೇ ಪುಷ್ಪಗಿರಿ ತಪ್ಪಲಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಚುನಾವಣಾ ಕಾಲಘಟ್ಟದಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಘೋಷಿಸಲಾಗಿತ್ತು.

Ad Widget

Ad Widget

Ad Widget

ಪ್ರತೀ ಚುನಾವಣೆಯಲ್ಲೂ..
2013ರಲ್ಲಿ ನಡೆದ ವಿಧಾನಸಭೆ ಚುನಾವಣೆ, 2014ರ ಲೋಕಸಭೆ ಚುನಾವಣೆ, 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆಯೂ ಸೇರಿದಂತೆ ಸ್ಥಳೀಯಾ ಡಳಿತ ಚುನಾವಣೆಗಳಲ್ಲಿ ಕುಲ್ಕುಂದ, ಹರಿಹರ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರ್ ಮತಗಟ್ಟೆಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿತ್ತು. ಹೀಗಾಗಿ ಇಲ್ಲಿಸುಗಮ ಮತ್ತು ಭಯಮುಕ್ತ ಮತದಾನ ನಡೆಸಲು ಭದ್ರತಾ ಕ್ರಮ ಅನುಸರಿಸಲಾಗಿತ್ತು.

ವರ್ಷಗಳು ಉರುಳಿದಂತೆ 2012ರ ನಕ್ಸಲ್ ಸಕ್ರಿಯತೆಯ ಭೀತಿ ಜನಮಾನಸದಿಂದ ದೂರವಾಗುತ್ತಾ ಬಂದಿದ್ದು, ಜನ ನಕ್ಸಲ್ ಚಟುವಟಿಕೆಯನ್ನೇ ಮರೆತಿದ್ದರು. ಆರೇಳು ವರ್ಷ ನಿರಂತರ ಕೂಂಬಿಂಗ್ ನಡೆಸುತ್ತಿದ್ದ ಎಎನ್ಎಎಫ್ ಪಡೆಗಳು ಇತ್ತೀಚಿನ ನಾಲೈದು ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸುವ ಅನಿವಾರ್ಯತೆ ಉಂಟಾಗಿರಲಿಲ್ಲ.

ಇದೀಗ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಎರಡೆರಡು ಬಾರಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಲ್ಲದೆ, ಈ ಭಾಗದ ಸುಮಾರು ಐದಾರು ಗ್ರಾಮ ವ್ಯಾಪ್ತಿಗಳು ಮತ್ತು ಅವುಗಳ ಮೇಲ್ತುದಿಯಲ್ಲಿರುವ ಅರಣ್ಯ ಭಾಗದಲ್ಲಿ ತಮ್ಮ ಪಾರಮ್ಯವಿದೆ ಎಂದು ತೋರಿಸಿಕೊಡುವ ಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏ.26ರಂದು ನಡೆಯುವ ಲೋಕಸಭೆ ಚುನಾವಣೆಯನ್ನು ಗರಿಷ್ಠ ಭದ್ರತೆಯಡಿ ನಡೆಸಲು ಚುನಾವಣಾ ಆಯೋಗ ನಿರ್ಧರಿಸುವ ಸಾಧ್ಯತೆ ಇದೆ.

ಮತಗಟ್ಟೆಗಳ ವಿವರ
ಸುಬ್ರಹ್ಮಣ್ಣ ಗಾಪಂ ವ್ಯಾಪ್ತಿಯ ಐನೆಕಿದು ಮತ್ತು ಕುಲ್ಕುಂದ ಗ್ರಾಮಗಳಲ್ಲಿ ಸುಮಾರು 1,300 ಮತಗಳಿವೆ. ಐನೆಕಿದು ಶಾಲೆಯಲ್ಲಿ ಮತಗಟ್ಟೆ ಇದ್ದು, ಇದುವರೆಗೆ ಇದು ಸಾಮಾನ್ಯ ಮತಗಟ್ಟೆಯಾಗಿದೆ. ಕುಲ್ಕುಂದ ಶಾಲೆ ಮತಗಟ್ಟೆ ಕಳೆದ 12 ವರ್ಷಗಳಿಂದ ಸೂಕ್ಷ್ಮ ಮತಗಟ್ಟೆಯಾಗಿದೆ. ಹರಿಹರ ಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,500 ಮತಗಳಿವೆ. ಬಾಳುಗೋಡು ಶಾಲೆ ಮತ್ತು ಹರಿಹರ ಶಾಲೆಯಲ್ಲಿ ಮತಗಟ್ಟೆಗಳಿದ್ದು, ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ. ಕೊಲ್ಲಮೊಗ್ರು ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,000 ಮತಗಳಿವೆ. ಕಲ್ಮಕಾರ್ ಶಾಲೆ ಮತ್ತು ಕೊಲ್ಲಮೊಗ್ರು ಶಾಲೆಯ ಮತಗಟ್ಟೆಗಳು ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿದೆ.

Continue Reading

ಕೊಡಗು

Gun Miss Fire | ಮಡಿಕೇರಿ : ಅನುಮಾನಾಸ್ಪದವಾಗಿ ಯುವಕ ಸಾವು – ಗನ್ ಮಿಸ್ ಫೈರ್ ಶಂಕೆ ..!

Ad Widget

Ad Widget

Ad Widget

Ad Widget

ಮಡಿಕೇರಿ: ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ (Gun Miss Fire) ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ.

Ad Widget

Ad Widget

Ad Widget

ಸುಂದರನಗರದ ನಾರಾಯಣ ಎಂಬುವವರ ಪುತ್ರ ಜನತಾ ಕಾಲೋನಿಯ ಸಂತೋಷ್ (34) ಮೃತಪಟ್ಟ ದುರ್ಧೈವಿ.

Ad Widget

ಸ್ನೇಹಿತರೊಂದಿಗೆ ತೆರಳಿದ್ದ ಸಂದರ್ಭ ಕೋವಿಯಿಂದ ಗುಂಡು ಮಿಸ್ ಫೈರ್ ಆಗಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Ad Widget

Ad Widget

ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Ad Widget

Ad Widget

Ad Widget
Continue Reading

ಕೊಡಗು

Google Map | ಕೊಡಗಿನಲ್ಲಿ ಗೂಗಲ್ ಮ್ಯಾಪ್ ಬಳಸಿ ದಾರಿ ತಪ್ಪುತ್ತಿರುವ ಪ್ರಯಾಣಿಕರು – ಸುಸ್ತಾಗಿ ನಾಮಫಲಕದ ಮೊರೆ ಹೋದ ಹಳ್ಳಿಗರು..!

Ad Widget

Ad Widget

Ad Widget

Ad Widget

ಈಗೀನ ಸೋಷಿಯಲ್ ಮೀಡಿಯಾ ಯುಗದಲ್ಲಿ ಗೂಗಲ್ ಮ್ಯಾಪ್ (Google Map) ಬಳಸಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ.

Ad Widget

Ad Widget

Ad Widget

ಕೊಡಗಿನಲ್ಲಿ ಕ್ಲಬ್ ಮಹಿಂದ್ರಾ ರೆಸಾರ್ಟಿಗೆ ಹೋಗುವವರು ಗೂಗಲ್ ಮ್ಯಾಪ್ ಬಳಸಿ, ದಾರಿ ತಪ್ಪಿ ಹೋಗುವವರು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

Ad Widget

ಅದೇ ಕಾರಣಕ್ಕಾಗಿ, ಕೊಡಗಿನ ಹಳ್ಳಿಯೊಂದರಲ್ಲಿ ಗೂಗಲ್ ಮ್ಯಾಪ್ ತಪ್ಪಾಗಿದೆ. ಇದು ಕ್ಲಬ್ ಮಹಿಂದ್ರಾಕ್ಕೆ ಹೋಗುವ ದಾರಿಯಲ್ಲ ಎಂಬ ಫಲಕವನ್ನು ಹಾಕಿದ್ದಾರೆ.

Ad Widget

Ad Widget

ಇದಕ್ಕೆ ಕಾರಣ, ಹಲವಾರು ಮಂದಿ ದಾರಿ ತಪ್ಪಿ ಅಲ್ಲಿಂದಲೇ ಹೋಗಿ ಹೋಗಿ ಅಲ್ಲಿನ ಸ್ಥಳೀಯರಿಂದ ಇದು ರೆಸಾರ್ಟಿಗೆ ಹೋಗುವ ದಾರಿಯಲ್ಲ ಎಂಬುದು ತಿಳಿದ ತಕ್ಷಣ ಪೇಚಾಗಿ ವಾಪಸ್ಸು ಹೋಗ್ತಾ ಇದ್ದಾರಂತೆ.

Ad Widget

Ad Widget

Ad Widget

ಹೀಗೆ ದಾರಿ ತಪ್ಪಿ ಬಂದವರಿಗೆ ಅಡ್ರೆಸ್ ಹೇಳಿ ಹೇಳಿ ಸುಸ್ತಾದ ಹಳ್ಳಿಗರು ಈ ಥರ ಬೋರ್ಡ್ ಹಾಕಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading