Connect with us

ಅಪರಾಧ

Everest fish curry-ಎವರೆಸ್ಟ್ ಫಿಶ್‌ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್  ಪತ್ತೆ

Ad Widget

Ad Widget

Ad Widget

Ad Widget

ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್‌ಕರಿ ಮಸಾಲಾ’ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೆಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.

Ad Widget

Ad Widget

Ad Widget

ಎಥಿಲೀನ್ ಆಕ್ಸೆಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟಿರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್‌ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್‌ಪಿ ಮುತ್ತಯ್ಯ ಆ್ಯಂಡ್ ಸನ್ಸ್‌ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.

Ad Widget

Click to comment

Leave a Reply

ಅಪರಾಧ

Suspension order-ಪುತ್ತೂರು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ದೊರೆತು ಕರ್ತವ್ಯಕ್ಕೆ ತೊಡಗಿದ ಬೆನ್ನಲ್ಲೇ ಅಮಾನತು ಆದೇಶ

Ad Widget

Ad Widget

Ad Widget

Ad Widget

ಪುತ್ತೂರು ಎಪಿಎಂಸಿಯ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು, ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಂ.ಗಂಗಾಧರ ಸ್ವಾಮಿ ಅವರು ಸೇವೆಯಿಂದ ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ. ಗುರುವಾರ ಬೆಳಿಗ್ಗೆ ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದು ಕರ್ತವ್ಯಕ್ಕೆ ಹಾಜರಾಗಿದ್ದ ರಾಮಚಂದ್ರ ಅವರಿಗೆ ಮಧ್ಯಾಹ್ನ ವೇಳೆ ಅಮಾನತು ಆದೇಶ ನೀಡಲಾಗಿದೆ.

Ad Widget

Ad Widget

Ad Widget

‘ರಾಮಚಂದ್ರ ಅವರು ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರವಾನಗಿ ನೀಡದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗಿದೆ’ ಎಂದು ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಜ. 4ರಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

Ad Widget

ಈ ದೂರಿನ ತನಿಖೆಗಾಗಿ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಈ ಮಧ್ಯೆ ರಾಮಚಂದ್ರ ಅವರನ್ನು ಜ.16ರಿಂದ 2 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಆದೇಶ ಮಾಡಿದ್ದರು. ಈ ನಡುವೆ ರಾಮಚಂದ್ರ ಅವರ ವಿರುದ್ಧದ ದೂರಿನ ಕುರಿತು ಇಲಾಖಾ ವಿಚಾರಣೆ ನಡೆಸಲು ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನು ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಖಾಲಿ ಇದ್ದ ಹಿರಿಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ವರ್ಗಾಯಿಸಿ ಕೃಷಿ ಮಾರಾಟ ಇಲಾಖೆ ಆದೇಶ ಮಾಡಿತ್ತು. ರಾಮಚಂದ್ರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಕೇಂದ್ರ ಕಚೇರಿಗೆ ವರದಿ ಸಲ್ಲಿಸಲು ಪುತ್ತೂರು ಎಪಿಎಂಸಿ ಸಮಿತಿ ಕಾರ್ಯದರ್ಶಿಗೆ ಸೂಚಿಸಲಾಗಿತ್ತು.

Ad Widget

Ad Widget

ರಾಮಚಂದ್ರ ಅವರು ರಾಯಚೂರಿನಲ್ಲಿ ಕರ್ತವ್ಯಗೆ ಹಾಜರಾಗದೆ ವರ್ಗಾವಣೆ ಆದೇಶದ ವಿರುದ್ಧ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಕ್ಕೆ (ಕೆಎಟಿಗೆ) ದೂರು ಸಲ್ಲಿಸಿದ್ದರು. ಕೆಎಟಿ ಅವರ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಗುರುವಾರ ಬೆಳಿಗ್ಗೆ ಅವರು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಕರ್ತವ್ಯಕ್ಕೆ ಹಾಜರಾಗಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಅಮಾನತು ಆದೇಶ ಬಂದಿದೆ.

Ad Widget

Ad Widget

Ad Widget
Continue Reading

ಅಪರಾಧ

Pagal lover-ಎರಡನೇ ಮದುವೆಯಾಗಲು ನಿರಾಕರಿಸದಳೆಂದು ಸಿಟ್ಟಿನಿಂದ ವಿವಾಹಿತೆಯ ಮನೆಗೆ ಬೆಂಕಿ ಕೊಟ್ಟ ಪಾಗಾಲ್ ಪ್ರೇಮಿ

Ad Widget

Ad Widget

Ad Widget

Ad Widget

ಬೆಂಗಳೂರು: ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ, ಇನ್ನೂ ಎಂದಿಗೂ ಪ್ರಿಯತಮೆ ಸಿಗುವುದಿಲ್ಲ ಎಂದು ಮನನೊಂದ ಪಾಗಲ್ ಪ್ರೇಮಿ, ವಿವಾಹಿತ ಮಹಿಳೆಯೊಬ್ಬರ ಮನೆಗೆ ಬೆಂಕಿ ಹಚ್ಚಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟುಹಾಕಿದ್ದ ಪ್ರಕರಣ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏಪ್ರಿಲ್ 11 ರಂದು ಘಟನೆ ನಡೆದಿದ್ದು, ಯುವತಿ ಅರ್ಬಿನಾ ತಾಜ್ ನೀಡಿದ ದೂರಿನನ್ವಯ ಅರ್ಬಾಜ್ (24) ಎಂಬುವವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

ಪೊಲೀಸ್ ಮೂಲಗಳ ಪ್ರಕಾರ‘ಆರೋಪಿ ಅರ್ಬಾಜ್, ದೂರುದಾರ ಮಹಿಳೆಯ ಸಂಬಂಧಿಕ. ಮಹಿಳೆಗೆ ಮದುವೆಯಾಗಿದ್ದು, ಅಷ್ಟಾದರೂ ಆರೋಪಿ ತನ್ನನ್ನು ಎರಡನೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಅರ್ಬಿನಾ ತಾಜ್ ಪತಿ ಸೈಯದ್ ಅಜಂ ಮತ್ತು ಅವರ ನಾಲ್ವರು ಮಕ್ಕಳೊಂದಿಗೆ ಸಾರಾಯಿಪಾಳ್ಯದ ಮಸೀದಿ ಫಾತಿಮಾ ಲೇಔಟ್ನಲ್ಲಿ ವಾಸಿಸುತ್ತಿದ್ದರು.

Ad Widget

ಆರೋಪಿ ತಾಜ್ ಅರ್ಬಿನಾ ಹಿಂದೆ ಬಿದ್ದು, ಪತಿಯನ್ನು ತೊರೆದ ತನನ್ನು ವಿವಾಹವಾಗುವಂತೆ ಪೀಡಿಸಲು ಆರಂಭಿಸಿದ್ದಾರೆ. ಇದೆ ವಿಚಾರವಾಗಿ ಅರ್ಬಿನಾ ಪತಿ ಹಾಗೂ ಅರ್ಬಾಜ್ ನಡುವೆ ಜಗಳವೂ ಆಗಿದೆ. ನಂತರ, ಹಿರಿಯರ ಸಮ್ಮುಖದಲ್ಲಿ ಆರೋಪಿಗೆ ಬುದ್ಧಿವಾದ ಹೇಳಲಾಗಿತ್ತು. ವಿವಾಹಿತೆ ಮಹಿಳೆ ತಂಟೆಗೆ ಹೋಗದಂತೆ ತಾಕೀತು ಮಾಡಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

Ad Widget

Ad Widget

ಏಪ್ರಿಲ್ 10 ರಂದು ಅರ್ಬಿನಾಗೆ ಬೇರೆ ನಂಬರ್ ನಿಂದ ಕರೆ ಮಾಡಿರುವ ಆರೋಪಿ ಜಗಳವಾಡಿದ್ದಾನೆ. ಅದೇ ರಾತ್ರಿ ಅರ್ಬಿನಾ ಪತಿಯೊದಿಗೆ ರಂಜಾನ್ ಶಾಂಪಿಂಗ್’ಗೆ ತರಳಿದ್ದಾರೆ. ಏಪ್ರಿಲ್ 11 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮತ್ತೆ ಕರೆ ಮಾಡಿರುವ ಆರೋಪಿ, ಮನೆಗೆ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾನೆ. ದಂಪತಿ ಮನೆ ಬಳಿ ಧಾವಿಸಿದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುತ್ತಿರುವುದು ಕಂಡು ಬಂದಿದೆ.

Ad Widget

Ad Widget

Ad Widget
Continue Reading

ಸ್ಥಳೀಯ

SIT investigation-SIT ತನಿಖೆಗೆ ಭಾರೀ ಅಡ್ಡಿ – ಪ್ರಜ್ವಲ್ ರೇವಣ್ಣ ವಿಡಿಯೋಗಳಲ್ಲಿರುವ ಸಂತ್ರಸ್ತೆಯರಿಂದ ಆತ್ಮಹತ್ಯೆ ಬೆದರಿಕೆ

Ad Widget

Ad Widget

Ad Widget

Ad Widget

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಹರಸಾಹಸ ಪಡುತ್ತಿದ್ದು, ಭೇಟಿ ಮಾಡಲು ಯತ್ನಿಸಿದ ವೇಳೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

ವಿಡಿಯೋದಲ್ಲಿರುವ ಬಹುತೇಕ ಮಹಿಳೆಯರು ‘ತಾವು ಎಲ್ಲಿಗೂ ಬರುವುದಿಲ್ಲ. ನೀವ್ಯಾರೂ ನಮ್ಮನ್ನು ಸಂಪರ್ಕಿಸಬೇಡಿ. ನಾವು ಯಾವ ಹೇಳಿಕೆಯನ್ನೂ ಕೊಡುವುದಿಲ್ಲ. ನಮ್ಮ ಮೇಲೆ ಒತ್ತಡ ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಎಸ್ಐಟಿ ತಂಡದ ಸಿಬ್ಬಂದಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

Ad Widget

ಈ ಮಹಿಳೆಯರ ಪೈಕಿ ಕೆಲವರು ಈವರೆಗೂ ಮನೆ ಬಿಟ್ಟು ಹೊರಗೆ ಬಂದಿಲ್ಲ. ಇನ್ನು ಕೆಲವರು ಊರು ತೊರೆದು ಅಜ್ಞಾತ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದಾರೆ. ಮಹಿಳೆಯರ ಈ ಅಸಹಕಾರ ಎಸ್ಐಟಿ ತಂಡದ ತನಿಖೆಗೆ ತೀವ್ರ ಅಡ್ಡಿಯಾಗುತ್ತಿದೆ

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading