Connect with us

ಅಂತರ ರಾಜ್ಯ

Ajit Pawar’s wife-25 ಸಾವಿರ ಕೋಟಿ ಅವ್ಯವಹಾರ : ಅಜಿತ್ ಪವಾರ್ ಪತ್ನಿಗೆ ಕ್ಲೀನ್ ಚಿಟ್

Ad Widget

Ad Widget

Ad Widget

Ad Widget

ಮುಂಬಯಿ: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿ (ಎಂಎಸಿಬಿ) ನಡೆದಿರುವ 25 ಸಾವಿರ ಕೋಟಿ ರೂ. ಮೊತ್ತದ ಅವ್ಯವಹಾರ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರನ್ನು ಮುಂಬಯಿ ಪೊಲೀಸರು ದೋಷಮುಕ್ತಗೊಳಿಸಿದ್ದಾರೆ.

Ad Widget

Ad Widget

Ad Widget

ಬಾರಾಮತಿ ಲೋಕಸಭೆ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಸುನೇತ್ರಾ ಅವರಿಗೆ ಪೊಲೀಸರಿಂದ ಕ್ಲೀನ್‌ ಚಿಟ್ ಸಿಕ್ಕಿರುವುದು ಚುನಾವಣೆ ಹೊತ್ತಲ್ಲಿ ರಿಲೀಫ್ ತಂದಿದೆ.

Ad Widget

25 ಸಾವಿರ ಕೋಟಿ ರೂ. ಅವ್ಯವಹಾರದ ಪ್ರಕರಣದ ತನಿಖೆ ಕೈಗೊಂಡಿದ್ದ ಮುಂಬಯಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು ಪ್ರಕರಣವನ್ನು ಮುಕ್ತಾಯಗೊಳಿಸಿ ಕಳೆದ ಜನವರಿಯಲ್ಲಿ ವರದಿ ಸಲ್ಲಿಸಿತ್ತು.

Ad Widget

Ad Widget

‘ಅಜಿತ್ ಪವಾರ್ ಅವರ ನಂಟು ಹೊಂದಿರುವ ಜರಂಡೇಶ್ವರ ಸಕ್ಕರೆ ಕಾರ್ಖಾನೆಗೆ ಸಾಲ ಅಥವಾ ಮಾರಾಟಕ್ಕೆ ಅನುಮತಿ ನೀಡಿದ ಪ್ರಕ್ರಿಯೆಯಲ್ಲಿ ಎಂಎಸ್‌ಬಿ ಬ್ಯಾಂಕಿಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಹಣಕಾಸು ವ್ಯವಹಾರದಲ್ಲಿ ಯಾವುದೇ ಕ್ರಿಮಿನಲ್ ಅಪರಾಧ ನಡೆದಿಲ್ಲ, ” ಎಂದು ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗವು ತನ್ನ ವರದಿಯಲ್ಲಿ ತಿಳಿಸಿದೆ.

Ad Widget

Ad Widget

Ad Widget
Click to comment

Leave a Reply

ಅಂತರ ರಾಜ್ಯ

Sucharita Mohanty-ಕಾಂಗ್ರೆಸ್‌ ಪಕ್ಷ ಪ್ರಚಾರಕ್ಕೆ ಹಣ ನೀಡದ ಹಿನ್ನೆಲೆ; ಟಿಕೆಟ್ ಹಿಂಪಡೆದ ಸುಚರಿತಾ ಮೊಹಂತಿ

Ad Widget

Ad Widget

Ad Widget

Ad Widget

ಭುವನೇಶ್ವರ್: ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿಯವರು ಟಿಕೆಟ್ ಹಿಂದೆ ನೀಡಿದ್ದಾರೆ. ಪಕ್ಷವು ತನಗೆ ಚುನಾವಣಾ ನಿಧಿಯನ್ನು ನಿರಾಕರಿಸಿದೆ ಎಂದು ಮೊಹಂತಿ ಹೇಳಿಕೊಂಡಿದ್ದಾರೆ.

Ad Widget

Ad Widget

Ad Widget

ಕಾಂಗ್ರೆಸ್ ನಾಯಕಿ ಮೊಹಂತಿಯವರು ಉಮೇದುವಾರಿಕೆ ಹಿಂಪಡೆಯುವ ಪತ್ರದ ಕುರಿತು ಎಎನ್‌ಐ ಜೊತೆ ಮಾತನಾಡಿದ್ದು, “ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ನಾನು ಟಿಕೆಟ್ ಹಿಂತಿರುಗಿಸಿದ್ದೇನೆ. ಇನ್ನೊಂದು ಕಾರಣವೆಂದರೆ ಏಳು ವಿಧಾನಸಭಾ ಕ್ಷೇತ್ರಗಳ ಕೆಲವು ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲದಿರುವುದು. ಕೆಲವು ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ನನಗೆ ಈ ರೀತಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Ad Widget

ಸಾರ್ವಜನಿಕ ಕೊಡುಗೆ ಅಭಿಯಾನದ ಮೂಲಕ ಹಣವನ್ನು ಗಳಿಸುವ ತನ್ನ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಪುರಿ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಹಣಕಾಸಿನ ಕೊರತೆಯಿಂದ ತೀವ್ರ ಹೊಡೆತ ಬಿದ್ದಿದೆ ಎಂದು ಮೊಹಂತಿ ಈ ಹಿಂದೆ ಹೇಳಿದ್ದರು.

Ad Widget

Ad Widget

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿಗೆ ಪಕ್ಷದ ನಾಯಕತ್ವದಿಂದ ಸಹಾಯ ಪಡೆಯಲು ಮೊಹಂತಿ ಪತ್ರ ಬರೆದಿದ್ದಾರೆ. “ಪಕ್ಷವು ನನಗೆ ಹಣ ನೀಡದ ಕಾರಣ ಪುರಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಅಜೋಯ್ ಕುಮಾರ್ ಜಿ ಅವರು ನಾನೇ ಹಣ ಹೊಂದಿಸಬೇಕು ಎಂದು ಹೇಳಿದ್ದಾರೆ. ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತಳಾಗಿದ್ದೆ. ಪುರಿಯಲ್ಲಿ ನನ್ನ ಪ್ರಚಾರಕ್ಕಾಗಿ ನನ್ನ ಬಳಿ ಇರುವ ಎಲ್ಲವನ್ನೂ ನೀಡಿದ್ದೇನೆ” ಎಂದಿದ್ದಾರೆ.

Ad Widget

Ad Widget

Ad Widget

“ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಪ್ರಯತ್ನಿಸಿದೆ, ಇದುವರೆಗೆ ಹೆಚ್ಚು ಯಶಸ್ವಿಯಾಗಲಿಲ್ಲ. ನಾನು ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ಪ್ರಯತ್ನಿಸಿದೆ” ಎಂದು ಅವರು ಹೇಳಿದರು. ಪಕ್ಷದ ಕೇಂದ್ರ ನಾಯಕತ್ವವು ಹಣವನ್ನು ಒದಗಿಸುವಂತೆ ತನ್ನ ಹಲವಾರು ಮನವಿಗಳಿಗೆ ಒಲವು ತೋರಲಿಲ್ಲ ಎಂದು ಅವರು ಹೇಳಿದರು.

Continue Reading

ಅಂತರ ರಾಜ್ಯ

Indraneil Rajguru-ಗಾಂಧಿ ಕಪಟ ಸ್ವಭಾವದವರು, ರಾಹುಲ್‌ ಗಾಂಧಿ ಪ್ರಾಮಾಣಿಕ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಇಂದ್ರನೀಲ್‌ ರಾಜ್‌ಗುರು

Ad Widget

Ad Widget

Ad Widget

Ad Widget

ಗಾಂಧಿನಗರ: ಗುಜರಾತ್‌ನ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನೇ ಕಪಟಿ ಎಂದಿದ್ದು ‘ಗಾಂಧಿ ಅವರಿಗಿಂತಲೂ ರಾಹುಲ್ ಗಾಂಧಿಯೇ ಶ್ರೇಷ್ಠ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

Ad Widget

Ad Widget

Ad Widget

ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಇಂದ್ರನೀಲ್ ರಾಜ್ ಗುರು, ಮೇ 1ರಂದು ರಾಜ್‌ಕೋಟ್‌ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ‘ಬೇಕಿದ್ದರೆ ಬರೆದಿಟ್ಟುಕೊಳ್ಳಿ. ಭವಿಷ್ಯದಲ್ಲಿ ರಾಹುಲ್ ಗಾಂಧಿ ಅವರೇ ಮುಂದಿನ ಮಹಾತ್ಮಾ ಗಾಂಧಿ ಆಗಿ ಹೊರಹೊಮ್ಮಲಿದ್ದಾರೆ. ಗಾಂಧಿ ಅವರು ಸ್ವಲ್ಪ ಮಟ್ಟಿಗೆ ಕಪಟ ಸ್ವಭಾವದವರಾಗಿದ್ದರೂ, ರಾಹುಲ್ ಗಾಂಧಿ ಸಂಪೂರ್ಣವಾಗಿ ಪ್ರಾಮಾಣಿಕ ಮತ್ತು ಹೃದಯವಂತರಾಗಿದ್ದಾರೆ’ ಎಂದಿದ್ದಾರೆ. ಕೆಲವರು ಅವರನ್ನು ಪಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ದೇಶದ ಪ್ರಜೆಗಳು ರಾಹುಲ್ ಗಾಂಧಿಯವರನ್ನು ನಾಯಕರು ಎಂದು ಒಪ್ಪಿಕೊಂಡಿದ್ದಾರೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

Ad Widget

ಬಿಜೆಪಿ ನಾಯಕರು ಇಂದ್ರನೀಲ್‌ರ ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ‘ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಾ ರನ್ನೇ ಅವಹೇಳನ ಮಾಡಲಾಗಿದೆ. ಈ ರೀತಿಯ ಕೀಳು ಹೇಳಿಕೆಗಳನ್ನು ಜನ ಕ್ಷಮಿಸುವುದಿಲ್ಲ ಎಂದಿದ್ದಾರೆ. ಗಾಂಧಿ ಅವರು ‘ಬುದ್ಧಿವಂತರು’ ಎಂಬರ್ಥದಲ್ಲಿ ಕಪಟಿ ಪದ ಬಳಸಿದ್ದೇನೆ. ಗಾಂಧಿ ಅವರು ಕಪಟಿ ಎಂಬುದಾಗಿ ಹಲವು ಪುಸ್ತಕಗಳಲ್ಲಿ ಉಲ್ಲೇಖವಿದೆ ಎಂದು ಇಂದ್ರನೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

Ad Widget

Ad Widget
Continue Reading

ಅಂತರ ರಾಜ್ಯ

Rohit Sharma-ವಿರಾಟ್ ಸ್ಟ್ರೈಕ್ ರೇಟ್ ಬಗೆಗಿನ ಪ್ರಶ್ನೆಗೆ ರೋಹಿತ್ ಶರ್ಮಾ ಅಚ್ಚರಿ ರಿಯಾಕ್ಷನ್

Ad Widget

Ad Widget

Ad Widget

Ad Widget

ನವದೆಹಲಿ: ಕ್ರಿಕೆಟ್​ನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್​ನ ಆಟದ ಶೈಲಿ ವಿಭಿನ್ನವಾಗಿರುತ್ತದೆ. ಎಲ್ಲರೂ ಒಂದೇ ರೀತಿ ಆಡುವುದಿಲ್ಲ. ಕೆಲವರು ಮೊದಲ ಎಸೆತದಿಂದಲೇ ಸ್ಪೋಟಕ ಆಟವಾಡಲು ಆರಂಭಿಸುತ್ತಾರೆ. ಇನ್ನೂ ಕೆಲವರು ನಿಧಾನವಾಗಿ ಆಡುತ್ತಾರೆ. ಕೆಲವರು ಆರಂಭದಲ್ಲಿ ನಿಧಾನವಾಗಿ ಆಡಿದರೂ ಗೇರ್ ಬದಲಾಯಿಸಿ ಅಗತ್ಯಕ್ಕೆ ತಕ್ಕಂತೆ ವೇಗ ಹೆಚ್ಚಿಸುತ್ತಾರೆ. ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಕೂಡ ಹೀಗೆ ಆಡುತ್ತಾರೆ.

Ad Widget

Ad Widget

Ad Widget

ಅಂದ ಹಾಗೆ ರಕ್ಷಣಾತ್ಮಕ ಆಟವಾಡುವುದು ತಂಡ ದೊಡ್ಡ ಸ್ಕೋರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಿಗೆ ಮಾತ್ರ ಇದು ಸೂಕ್ತವಾಗಿದೆ. ಆದರೆ, ಟಿ20 ಪಂದ್ಯಗಳು ಕೊಂಚ ವಿಭಿನ್ನವಾಗಿದೆ. ಇಲ್ಲಿ ಬ್ಯಾಟ್ಸ್​ಮನ್​ ಸ್ಟ್ರೈಕ್​ ರೇಟ್​ ತುಂಬಾ ಪ್ರಮುಖವಾಗಿರುತ್ತದೆ. ಸ್ಟ್ರೈಕ್​ ರೇಟ್​ ಅಂದಕೊಡಲೇ ಇತ್ತೀಚೆಗೆ ವಿರಾಟ್​ ಕೊಹ್ಲಿ ನೆನಪಾಗುತ್ತಾರೆ. ಏಕೆಂದರೆ, ಐಪಿಎಲ್​-2024ರಲ್ಲಿ ಕೊಹ್ಲಿ ಸ್ಟ್ರೈಕ್ ರೇಟ್ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನೀಡಿರುವ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Ad Widget

ಪ್ರಸಕ್ತ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಆಡಿದ 10 ಪಂದ್ಯಗಳಲ್ಲಿ 509 ರನ್ ಗಳಿಸುವ ಮೂಲಕ ಟಾಪ್​ ಸ್ಕೋರರ್​ ಆಗಿದ್ದಾರೆ. ಆದರೆ, ಕೊಹ್ಲಿ ಸ್ಟ್ರೈಕ್ ರೇಟ್ ಮಾತ್ರ 146. ಹೀಗಾಗಿ ಎಲ್ಲರೂ ಕೊಹ್ಲಿಯನ್ನು ಟೀಕೆ ಮಾಡುತ್ತಿದ್ದಾರೆ. ಇಷ್ಟು ನಿಧಾನವಾಗಿ ಆಡಿದರೆ ವಿಶ್ವಕಪ್ ಗೆಲ್ಲಲು ಕಷ್ಟವಾಗಬಹುದು, ಬ್ಯಾಟಿಂಗ್ ಶೈಲಿ ಬದಲಿಸಿಕೊಳ್ಳುವಂತೆ ಕೊಹ್ಲಿಗೆ ಸೂಚಿಸುತ್ತಿದ್ದಾರೆ. ಇದು ಕೊಹ್ಲಿಗೂ ಸಹ ಅರಿವಾಗಿದ್ದು, ಕಳೆದ ಕೆಲವು ಪಂದ್ಯಗಳಲ್ಲಿ ವೇಗವಾಗಿ ಆಟವಾಡಲು ಆರಂಭಿಸಿದ್ದಾರೆ. ಇದೀಗ ಕೊಹ್ಲಿ ಸ್ಟ್ರೈಕ್​ ರೇಟ್​ ಈ ಬಗ್ಗೆ ರೋಹಿತ್ ಪ್ರತಿಕ್ರಿಯಿಸಿದ್ದಾರೆ. ಟಿ20 ವಿಶ್ವಕಪ್ ತಂಡದ ಆಯ್ಕೆ ಕುರಿತು ಬಿಸಿಸಿಐ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರೊಂದಿಗೆ ಹಿಟ್‌ಮ್ಯಾನ್ ರೋಹಿತ್​ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

Ad Widget

Ad Widget

ಎಲ್ಲ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸಿದ ರೋಹಿತ್, ಪತ್ರಕರ್ತರು ಕೊಹ್ಲಿ ಸ್ಟ್ರೈಕ್ ರೇಟ್ ಬಗ್ಗೆ ಕೇಳಿದಾಗ ಜೋರಾಗಿ ನಕ್ಕರು. ಹಿಟ್‌ಮ್ಯಾನ್‌ನ ಪಕ್ಕದಲ್ಲಿದ್ದ ಅಗರ್ಕರ್‌ಗೆ ನಗು ತಡೆಯಲಾಗಲಿಲ್ಲ. ವಿರಾಟ್ ಸ್ಟ್ರೈಕ್ ರೇಟ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ನಗುವನ್ನು ನಿಯಂತ್ರಿಸಿಕೊಂಡು ಅಗರ್ಕರ್ ಹೇಳಿದರು. ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಕೊಹ್ಲಿ ಉತ್ತಮವಾಗಿ ಆಡುತ್ತಾರೆ ಎಂದು ಸ್ಪಷ್ಟಪಡಿಸಿದರು.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading