Connect with us

ಉಡುಪಿ

ಕುಂದಾಪುರ: ಪ್ಲ್ಯಾಟ್ ನ 5ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತ್ಯು

Ad Widget

Ad Widget

Ad Widget

Ad Widget

ಕುಂದಾಪುರ : ಫ್ಲ್ಯಾಟೊಂದರ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದ ಮುಖ್ಯ ರಸ್ತೆಯ ಹಳೇ ಗೀತಾಂಜಲಿ ಟಾಕೀಸ್ ಸಮೀಪ ನಡೆದಿರುವುದು ವರದಿಯಾಗಿದೆ.

Ad Widget

Ad Widget

Ad Widget

ಮೃತರನ್ನು ಲಕ್ಷ್ಮೀ ಪ್ರತಾಪ್ ಅವರ ಪತ್ನಿ ಲಕ್ಷ್ಮೀ ನಾಯಕ್ (41) ಎಂದು ಗುರುತಿಸಲಾಗಿದೆ.

Ad Widget

ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನಕಾಯಿ ತರಲು ಹೋಗಿದ್ದ ಲಕ್ಷ್ಮೀ ಪ್ರತಾಪ್ ಆಕಸ್ಮಿಕವಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ಫ್ಲೋರಿಗೆ ಬಿದ್ದರೆನ್ನಲಾಗಿದೆ.

Ad Widget

Ad Widget

ಇದರಿಂದ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Ad Widget

Ad Widget

Ad Widget

ಘಟನೆಯ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

ಉಡುಪಿ

Sun Stroke: ಇನ್ನು ನಾಲ್ಕು ದಿನ ದ.ಕ, ಉಡುಪಿಯಲ್ಲಿ ಕಂಡಾಪಟ್ಟೆ ಬಿಸಿಲು – ʼಉರಿ ಗಾಳಿʼ ಅಲೆ ಬೀಸುವ ಸಾಧ್ಯತೆ – ಹವಮಾನ ಇಲಾಖೆ ಮುನ್ಸೂಚನೆ – ಈ ಅಲೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಮಾರ್ಗೋಪಾಯ

Ad Widget

Ad Widget

Ad Widget

Ad Widget

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಬಿಸಿಲ ಬೇಗೆ ಪರಾಕಾಷ್ಟೆಗೆ ತಲುಪಿದೆ . ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜನರು ಮನೆಯಿಂದ ಹೊರಗೆ ಬರಲು ಹೆದರಿಕೊಳ್ಳುವ ಪರಿಸ್ಥಿತಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಿದೆ. ಏತನ್ಮಧ್ಯೆ ಬಿಸಿಲಿನ ತಾಪ ಇನ್ನಷ್ಟು ಏರುವ ಸೂಚನೆಯೊಂದನ್ನು ಹವಮಾನ ಇಲಾಖೆ ರವಾನಿಸಿದೆ.

Ad Widget

Ad Widget

Ad Widget

ಮುಂದಿನ ನಾಲ್ಕು ದಿನಗಳ ಕಾಲ ಅಂದರೇ  ಎ.30ರವರೆಗೆ ಜಿಲ್ಲೆಯಲ್ಲಿ  ಬಿಸಿಗಾಳಿ ಅಲೆ ಬೀಸಲಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

Ad Widget

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ  ರವಾನಿಸಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ., ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.

Ad Widget

Ad Widget

 ಬಿಸಿಗಾಳಿಯಿಂದಾಗಿ ಉಂಟಾಗುವ ಸನ್ ಸ್ಟೋಕ್ ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಈ ಕೆಳಗಿನ ಸಲಹೆಗಳನ್ನು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ನೀಡಿದೆ.

Ad Widget

Ad Widget

Ad Widget
  • ಮಧ್ಯಾಹ್ನ 1 ರಿಂದ ಅಪರಾಹ್ನ 3 ರವರೆಗೆ ಹೊರಗೆ ಹೋಗಬಾರದು,
  • ತೆಳುವಾದ, ಹಗುರವಾದ ಬಟ್ಟೆಗಳನ್ನು ಧರಿಸಬೇಕು,
  • ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು  

ದ.ಕ ಜಿಲ್ಲೆಯ ಗರಿಷ್ಠ ತಾಪಮಾನ ಸದ್ಯಕ್ಕೆ ಸ್ಥಿರವಾಗಿದೆ. ಗುರುವಾರ ಈ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಶುಕ್ರವಾರ ಗರಿಷ್ಠ 34.1 ಡಿಗ್ರಿ ಸೆಲ್ಸಿಯಸ್, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜಿಲ್ಲೆಯ ಬಹುತೇಕ ಗಡಿ ಭಾಗಗಳಲ್ಲಿ ಸಂಜೆಯಿಂದ ಮೋಡದ ವಾತಾವರಣದ ಮುನ್ಸೂಚನೆ ಇದೆ ಎಂದು ಮಾಹಿತಿ ನೀಡಿದೆ.

Continue Reading

ನಿಧನ ವಾರ್ತೆ

Bhagavata Subramanya Dhareshwara-ಹಾಡು ನಿಲ್ಲಿಸಿದ ಬಡಗುತಿಟ್ಟಿನ ಗಾನ ಕೋಗಿಲೆ – ಯಕ್ಷಗಾನದ ಹಿರಿಯ ಭಾಗವತ ಸುಬ್ರಮಣ್ಯ ಧಾರೇಶ್ವರ ಇನ್ನಿಲ್ಲ

Ad Widget

Ad Widget

Ad Widget

Ad Widget

ಕುಂದಾಪುರ: ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಇವರು ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದರು.

Ad Widget

Ad Widget

Ad Widget

ಸುಬ್ರಹ್ಮಣ್ಯ ಧಾರೇಶ್ವರರವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು. ಯಕ್ಷರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.

Ad Widget

ದಿ. ಉಪ್ಪೂರು ನಾರಣಪ್ಪ ಭಾಗವತರ ಶಿಷ್ಯರಾಗಿ ದಿ. ಕಾಳಿಂಗ ನಾವಡ ಅವರ ಅಬ್ಬರದ ಕಾಲದಲ್ಲೂ ಸರಿಸಾಟಿಯಾಗಿ ಬೆಳೆದ ಧಾರೇಶ್ವರರ ತಾಳಕ್ಕೆ ಕುಣಿಯದ ಕಲಾವಿದರಿಲ್ಲ. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ, ಕೊಂಡದಕುಳಿ ರಾಮಚಂದ್ರ ಹೆಗಡೆ ಹೀಗೆ ಬಹುತೇಕ ಎಲ್ಲ ಕಲಾವಿದರಿಗೂ ಭಾಗವತಿಕೆ ಮಾಡಿದ್ದಾರೆ

Ad Widget

Ad Widget

1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಂಮಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು.

Ad Widget

Ad Widget

Ad Widget

ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.

ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಬದುಕಿನುದ್ದಕ್ಕೂ ತಮ್ಮ ಸ್ವರದ ಮೂಲಕವೇ ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದ್ದ ಭಾಗವತರ ಅಗಲುವಿಕೆ ನಿಜಕ್ಕೂ ಮಾತಾಡದ ಸ್ಥಿತಿ ತಂದಿದೆ.

ಯಕ್ಷಗಾನದಲ್ಲಿ ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು. ಸುಬ್ರಮಣ್ಯ ಧಾರೇಶ್ವರ ಎನ್ನುವ ಹೆಸರು ಜನಪ್ರಿಯತೆಯಲ್ಲಿರುವಾಗಲೇ ಏಕಾಏಕಿ ಮೇಳ ತಿರುಗಾಟ ನಿಲ್ಲಿಸಿದ್ದರು. 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು. ಸುಬ್ರಮಣ್ಯ ಧಾರೇಶ್ವರ ಪೆರ್ಡೂರು ಮೇಳವೊಂದರಲ್ಲೇ 28 ವರ್ಷಗಳ ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಭಾಗವತರಾಗಿ ಯಕ್ಷ ಸೇವೆ ಸಲ್ಲಿಸಿದ್ದರು.

Continue Reading

ಉಡುಪಿ

Udupi-Chikkamagaluru-ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ। ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಗಿಂತ ಅವರ ಪತ್ನಿ ಶ್ರೀಮಂತೆ

Ad Widget

Ad Widget

Ad Widget

Ad Widget

ಉಡುಪಿ, ಎ.3: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಒಟ್ಟು ಸುಮಾರು 1.11 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ಸ್ಥಿರ ಹಾಗೂ ಚರ ಆಸ್ತಿಗಳನ್ನು ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತಿಳಿಸಿದ್ದಾರೆ.

Ad Widget

Ad Widget

Ad Widget

ಆದರೆ ಕೋಟ ಅವರು ಬ್ಯಾಂಕಿನಲ್ಲಿ 40.64 ಲಕ್ಷ ರೂ.ಗಳ ಸಾಲವನ್ನು ತೋರಿಸಿದ್ದಾರೆ. ಕೋಟರ ಪತ್ನಿ ಶಾಂತ ಅವರ ಹೆಸರಿನಲ್ಲಿ ಒಟ್ಟು 1.73 ಕೋಟಿ ರೂ. ಸಂಪತ್ತಿದ್ದರೂ, ಅವರ ಹೆಸರಿನಲ್ಲೂ 35.43 ಲಕ್ಷ ರೂ. ಸಾಲವನ್ನೂ ತೋರಿಸಲಾಗಿದೆ. ಮಗ ಶಶಿಧರ ಬಳಿ 47.59 ಲಕ್ಷ ರೂ., ಮಗಳು ಸ್ವಾತಿ ಬಳಿ 3.70 ಲಕ್ಷ ರೂ. ಹಾಗೂ ಮಗಳು ಶೃತಿ ಬಳಿ 66,466ರೂ. ಸಂಪತ್ತಿದೆ.

Ad Widget

ಅಫಿದಾವತ್‌ನಲ್ಲಿ ಕೋಟ ತಿಳಿಸಿದಂತೆ ಅವರ ಬಳಿ 90,000 ರೂ., ಪತ್ನಿ ಶಾಂತ ಬಳಿ 20,000ರೂ., ಮಗಳು ಸ್ವಾತಿ ಬಳಿ 10ಸಾವಿರ ರೂ., ಮಗ ಶಶಿಧರ ಬಳಿ 25 ಸಾವಿರ ರೂ. ನಗದು ಹಣ ಬ್ಯಾಂಕಿನಲ್ಲಿದೆ. ಮಗಳು ಶೃತಿ ಅವರಲ್ಲಿ ಯಾವುದೇ ಹಣವಿಲ್ಲ. ಕೋಟ ಅವರಲ್ಲಿ ಮಾರುತಿ ಅಲ್ಲೋ ಹಾಗೂ 22 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರಿದೆ. ಮಗ ಶಶಿಧರನ ಹೆಸರಿನಲ್ಲಿ 16.5 ಲಕ್ಷ ರೂ. ಮೌಲ್ಯದ ಹೊಂಡಾ ಸಿಟಿ ಕಾರಿದೆ.

Ad Widget

Ad Widget

ಕೋಟ ಅವರ ಹೆಸರಿನಲ್ಲಿ ಕೋಟತಟ್ಟು ಗ್ರಾಮದಲ್ಲಿ 13 ಸೆನ್ಸ್ ಹಾಗೂ ಪತ್ನಿಯ ಹೆಸರಿನಲ್ಲಿ 56 ಸೆನ್ಸ್ ಜಾಗವಿದೆ. ಇದನ್ನವರು 20110 ನವೆಂಬರ್ ತಿಂಗಳಲ್ಲಿ ಖರೀದಿಸಿದ್ದರು. ಅದರ ಮೌಲ್ಯ ಈಗ ಕ್ರಮವಾಗಿ 8 ಲಕ್ಷ ರೂ. ಹಾಗೂ 55ಲಕ್ಷ ರೂ.ಗಳಾಗಿದೆ.

Ad Widget

Ad Widget

Ad Widget

ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ 63,850 ರೂ.ಮೌಲ್ಯದ 10 ಗ್ರಾಂ ತೂಕದ ಚಿನ್ನದ ಉಂಗುರವಿದೆ. ಪತ್ನಿ ಬಳಿ 9.57ಲಕ್ಷ ರೂ.ಮೌಲ್ಯದ 150 ಚಿನ್ನಾಭರಣವಿದ್ದರೆ, ಮಗಳು ಸ್ವಾತಿ ಬಳಿ 3.19ಲಕ್ಷ ರೂ.ಮೌಲ್ಯದ ಚಿನ್ನಾಭರಣ, ಮಗ ಶಶಿಧರ ಹಾಗೂ ಪುತ್ರಿ ಶೃತಿ ಬಳಿ ತಲಾ 10ಗ್ರಾಂ (63,850ರೂ.) ತೂಕದ ಚಿನ್ನಾಭರಣಗಳಿವೆ.

ಕೋಟ ಅವರಿಗೆ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿ ಸರಕಾರ ನೀಡಿದ 50+8 ಅಡಿ ವಿಸ್ತೀರ್ಣದ ಜಾಗವಿದ್ದು, ಈಗ ಅದರ ಮೌಲ್ಯ 40 ಲಕ್ಷ ರೂ. ಪತ್ನಿ ಶಾಂತ ಅವರ ಹೆಸರಿನಲ್ಲಿ ಗಿಳಿಯಾರುಗ್ರಾಮದಲ್ಲಿ 2019ರಲ್ಲಿ ಖರೀದಿಸಿದ 13.5 ಸೆನ್ಸ್ ಜಾಗವೂ ಇದೆ. ಈಗ ಅದರ ಮೌಲ್ಯ ಐದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಿಳಿಯಾರು ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು ಅದರ ಅಂದಾಜು ಮೌಲ್ಯ 97.50 ಲಕ್ಷ ರೂ. ಎಂದು ಅಫಿದಾತ್‌ನಲ್ಲಿ ತಿಳಿಸಲಾಗಿದೆ. ಕೋಟ ಅವರಿಗೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕಿನಲ್ಲಿ 40.64 ಲಕ್ಷ ರೂ. ಹಾಗೂ ಪತ್ನಿ ಶಾಂತರಿಗೆ ಬ್ರಹ್ಮಾವರದ ಸ್ಟೇಟ್‌ಬ್ಯಾಂಕಿನಲ್ಲಿ 35.43 ಲಕ್ಷ ಸಾಲವಿದೆ. ಮಗ ಶಶಿಧರರ ಹೆಸರಿನಲ್ಲೂ ವಿವಿಧ ಬ್ಯಾಂಕುಗಳಲ್ಲಿ 28.35 ಲಕ್ಷ ರೂ. ಸಾಲವಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading