Ad Widget

ಪುತ್ತೂರು : ನಗರಸಭೆ ಹೊರ ಗುತ್ತಿಗೆ ನೌಕರ ಸಚಿನ್ ಅಕಾಲಿಕ ನಿಧನ – ಆಧಾರ ಸ್ತಂಭ ಕಳಕೊಂಡ ಬಡ ಕುಟುಂಬಕ್ಕೆ ನೆರವಾಗುವಂತೆ ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ್  ಮನವಿ

WhatsApp Image 2022-12-09 at 19.23.01
Ad Widget

Ad Widget

Ad Widget

ಪುತ್ತೂರು: ಡಿ 10:  ಪುತ್ತೂರು ನಗರಸಭೆಯ ಕಸ ಸಾಗಾಟ ವಾಹನದ ಚಾಲಕರಾಗಿದ್ದ  ಸಚಿನ್ (27ವ)ರವರು ಡಿ. 9ರಂದು ಮಂಗಳೂರಿನ ಆಸ್ಫತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರು ನಗರ ಸಭೆಯ ಹೊರಗುತ್ತಿಗೆ ನೌಕರನಾಗಿದ್ದರು. ಮೃತರು ತಾಯಿ ವಿಜಯ ಹಾಗೂ  ಸಹೋದರಿಯನ್ನು ಅಗಲಿದ್ದಾರೆ.

Ad Widget

Ad Widget

Ad Widget

Ad Widget

ಸಚಿನ್ ಅವರು ದಿನದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕುಡಲೇ ಅವರನ್ನು  ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.   .ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಡಿ.9ರಂದು ಮೃತಪಟ್ಟಿದ್ದಾರೆ

Ad Widget

Ad Widget

Ad Widget

Ad Widget

 ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇಗುಲದ ಹಿಂಬದಿಯ  ಬಿಜೆಪಿ  ಓಣಿಯಲ್ಲಿ ಸಚಿನ್‌ ತಾಯಿ ಮತ್ತು ಸಹೋದರಿ ಜತೆ  ವಾಸಿಸುತ್ತಿದ್ದರು. ಇವರು ಕಳೆದ  3 ವರ್ಷಗಳಿಂದ ನಗರಸಭೆಯ ವಾಹನ ಚಾಲಕರಾಗಿ ದುಡಿಯುತ್ತಿದ್ದರು. ಸಣ್ಣ ಪ್ರಾಯದಲ್ಲೆ ತಂದೆಯನ್ನು ಕಳಕೊಂಡ ಇವರು ಬಳಿಕ ಮನೆಯ ಆಧಾರ ಸ್ತಂಭವಾಗಿದ್ದರು. ಕುಟುಂಬದ ಜೀವನ ನೀರ್ವಹಣೆ ಇವರ ದುಡಿಮೆಯನ್ನೆ ಅವಲಂಬಿಸಿತ್ತು. ಜೀವನದ ಬಂಡಿ ಓಡಿಸಲು ಇವರು ಹಗಲಿರುಳು ದುಡಿಯುತ್ತಿದ್ದರು.

ತನ್ನ ನಗರಸಭಾ ಸದಸ್ಯತ್ವದ ತಿಂಗಳ ಗೌರವ ವೇತನ ರೂ.4 ಸಾವಿರವನ್ನು ಸಚಿನ್ ಅವರ ತಾಯಿಯ ಖಾತೆಗೆ ಜಮೆ ಮಾಡಿರುವ  ಪಿ.ಜಿ.ಜಗನ್ನಿವಾಸ್ ರಾವ್  ಅವರು ಈ ಕುಟುಂಬಕ್ಕೆ ಇತರರು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಸಚಿನ್ ಅವರ ತಾಯಿ ವಿಜಯ್ ಅವರ ಎಸ್ ಬಿಐ ಖಾತೆ ಸಂಖ್ಯೆ 65120888945 (ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐಎನ್ 0040152) ಕ್ಕೆ ಧನ ಸಹಾಯ ಮಾಡಬಹುದು ಎಂದು ನಗರಸಭೆಯ ಸ್ಥಳೀಯ ವಾರ್ಡ್ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮನವಿಯಲ್ಲಿ ತಿಳಿಸಿದ್ದಾರೆ

Ad Widget

Ad Widget
Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: