Connect with us

ಉದ್ಯೋಗ

Online applications-ಮೇ 2ರಿಂದ ಆನ್‌ಲೈನ್‌ ಮೂಲಕ ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ

Ad Widget

Ad Widget

Ad Widget

Ad Widget

ಬೆಂಗಳೂರು: ಸರ್ಕಾರಿ ಉದ್ಯೋಗ ಹುಡುಕುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕರ್ನಾಟಕ ಲೋಕಸೇವಾ ಆಯೋಗ ಖಾಲಿ ಇರುವ ಒಟ್ಟು 76 ಮೋಟಾರ್ ವೆಹಿಕಲ್ ಇನ್ಸ್​ಪೆಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

Ad Widget

Ad Widget

Ad Widget

Ad Widget

ಈ ಹಿಂದೆ ಅರ್ಜಿ ಸಲ್ಲಿಕೆಗೆ ಮೇ 21 ಕೊನೆಯ ದಿನಾಂಕ ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಸಕ್ತರು ಮೇ 2ರಿಂದ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜೂನ್‌ 1.

Ad Widget

Ad Widget

Ad Widget

Ad Widget

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಉಳಿಕೆ ಮೂಲ ವೃಂದದಲ್ಲಿ 70 ಮತ್ತು ಹೈದರಾಬಾದ್‌ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿವೆ. ಕೆಪಿಎಸ್‌ಸಿಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಅಂಗೀಕೃತ ಮಂಡಳಿ, ವಿಶ್ವವಿದ್ಯಾನಿಲಯದಿಂದ ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಆಟೋ ಮೊಬೈಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪಡೆದುಕೊಂಡಿರಬೇಕು. ಜತೆಗೆ ಲೈಸನ್ಸ್‌ ಹೊಂದಿರಬೇಕು.

Ad Widget

Ad Widget

Ad Widget

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 33,450 ರೂ. – 62,600 ರೂ. ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Ad Widget

Ad Widget

Ad Widget

ವಯೋಮಿತಿ ಮತ್ತು ಅರ್ಜಿ ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1ರ ಅಭ್ಯರ್ಥಿಗಳಿಗೆ 5 ವರ್ಷ, ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 3 ವರ್ಷ ಮತ್ತು ಪಿಡಬ್ಲ್ಯುಡಿ / ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ. ಎಸ್‌ಸಿ / ಎಸ್‌ಟಿ / ಕ್ಯಾಟಗರಿ-1/ ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಮಾಜಿ ಯೋಧರು ಅರ್ಜಿ ಶುಲ್ಕವಾಗಿ 50 ರೂ., ಕ್ಯಾಟಗರಿ 2ಎ / 2ಬಿ / 3ಎ / 3ಬಿ ಅಭ್ಯರ್ಥಿಗಳು 300 ರೂ., ಸಾಮಾನ್ಯ ವಿಭಾಗದ ಅಭ್ಯರ್ಥಿಗಳು 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ.

ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌: 080-30574957 / 30574901ಕ್ಕೆ ಕರೆ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ :
ನಿಮ್ಮ ಮೊಬೈಲ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ ಹೆಸರು ನೋಂದಾಯಿಸಿ.
ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
ಅಗತ್ಯ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ನಂಬರ್‌ / ರಿಕ್ವೆಸ್ಟ್‌ ನಂಬರ್‌ ತೆಗೆದಿಡಿ.
ಗಮನಿಸಿ ಮೇ 2ರ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

Click to comment

Leave a Reply

ಉದ್ಯೋಗ

Vidyamata Academy-ಜೂನ್ 9 ರಿಂದ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರತಿ ಭಾನುವಾರ ಉಚಿತ ಸೇನಾ ನೇಮಕಾತಿಯ ತರಬೇತಿ ಪ್ರಾರಂಭ

Ad Widget

Ad Widget

Ad Widget

Ad Widget

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದ್ವಾರಕಾ ಕನ್ಸ್ಟ್ರಕ್ಷನ್ಸ್ ರವರ ಸಹಭಾಗಿತ್ವದಲ್ಲಿ ಜೂನ್ 9 ರಿಂದ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಸೇನಾ ನೇಮಕಾತಿಗಳಿಗೆ ಅನ್ವಯವಾಗುವಂತೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಸದೃಢತೆಯ ತರಬೇತಿಗಳು ಪ್ರಾರಂಭವಾಗಲಿದೆ.

Ad Widget

Ad Widget

Ad Widget

Ad Widget

ಭಾರತೀಯ ಸೇನಾ ನೇಮಕಾತಿಗಳು / ರೈಲ್ವೆ ಪೊಲೀಸ್ / ಅರೆ ಸಶಸ್ತ್ರ ಮೀಸಲು ಪಡೆಗಳು ಸೇರಿದಂತೆ ಎಲ್ಲಾ ರೀತಿಯ ಸಶಸ್ತ್ರ ಪಡೆಗಳ (Armed Forces) ನೇಮಕಾತಿಗಳ ಲಿಖಿತ ಪರೀಕ್ಷೆಗಳು, ದೈಹಿಕ ಸದೃಢತೆಯ ಪರೀಕ್ಷೆಗಳಿಗೆ ಒಂದೇ ಸೂರಿನಡಿಯಲ್ಲಿ ವಿದ್ಯಾಮಾತಾ ಅಕಾಡೆಮಿಯು ‘ದ್ವಾರಕಾ ಕನ್ಸ್ಟ್ರಕ್ಷನ್ಸ್’ ರವರ ಪ್ರಾಯೋಜಕತ್ವದಲ್ಲಿ ತರಬೇತಿಯನ್ನು ನೀಡಲಿದೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ.

Ad Widget

Ad Widget

Ad Widget

Ad Widget

ಕಳೆದ 2 ವರ್ಷಗಳಿಂದ 18 ಅಭ್ಯರ್ಥಿಗಳನ್ನು ತರಬೇತಿಗೊಳಿಸಿ ಆಯ್ಕೆಯಾಗಲು ಕಾರಣವಾದ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ಸೇನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದಿಂದ ಆಯ್ಕೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನವನ್ನು ಮುಂದುವರಿಸಲಾಗುತ್ತಿದೆ. ಉಚಿತ ತರಬೇತಿಗೆ ಅರ್ಜಿ ಸಲ್ಲಿಸುವವರಿಗೆ 17 ವರ್ಷದಿಂದ 23 ವರ್ಷದವರೆಗಿನವರೆಗೆ ಅವಕಾಶ ಇರುತ್ತದೆ. ಸದ್ಯ ಓದುತ್ತಿರುವವರು / ಓದು ಮುಗಿಸಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಯು ಪುತ್ತೂರು ಮತ್ತು ಸುಳ್ಯದಲ್ಲಿ ಲಭ್ಯವಿರುತ್ತದೆ.ಉಚಿತ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31/05/2024ವಾಗಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಆಧಾರ್ ಮತ್ತು 2ಪಾಸ್ಪೋರ್ಟ್ ಸೈಜ್ ಫೋಟೋ ನೀಡಿ ನೋಂದಾಯಿಸಿಕೊಳ್ಳಬೇಕು.

Ad Widget

Ad Widget

Ad Widget

ಹೆಚ್ಚಿನ ಮಾಹಿತಿಗಾಗಿ
ಪುತ್ತೂರು ಕಛೇರಿ : ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಫೋನ್ ನಂ. : 9620468869 / 9148935808

Ad Widget

Ad Widget

Ad Widget

ಸುಳ್ಯ ಶಾಖೆ : ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
ಫೋನ್ ನಂ. : 9448527606

Continue Reading

ಉದ್ಯೋಗ

M. Sanjeeva Shetty-ಎಂ.ಸಂಜೀವ ಶೆಟ್ಟಿ ’ಸಾರೀಸ್ ಹಾಗೂ ರೆಡಿಮೇಡ್ಸ್’ ನ ನೂತನ ಮಳಿಗೆ ದರ್ಬೆಯಲ್ಲಿ ಶುಭಾರಂಭ : 80 ವರ್ಷಗಳ ಗುಣಮಟ್ಟದ ವಸ್ತ್ರವ್ಯಾಪಾರದ ಅನುಭವದ ಸಂಸ್ಥೆಗೆ 5ನೇ ಮಳಿಗೆಯ ಗರಿಮೆ

Ad Widget

Ad Widget

Ad Widget

Ad Widget

ಪುತ್ತೂರು: ವ್ಯಾಪಾರ ಎಂಬುದು ಒಂದು ತಪಸ್ಸಾಗಿದ್ದು, ಕಮಿಟ್ಮೆಂಟ್ ಹಾಗೂ ಡೆಡಿಕೇಶನ್ ಎರಡೂ ಬೇಕು. ಎಂ.ಸಂಜೀವ ಶೆಟ್ಟಿ ಅವರ ಪ್ರಯತ್ನದ ಫಲವಾಗಿ 5ನೇ ಶಾಖೆ ದರ್ಬೆ ವೃತ್ತದ ಬಳಿ ಶುಭಾರಂಭಗೊಂಡಿದೆ. ಮಂಗಳೂರು ಅಲ್ಲದೆ ಬೆಂಗಳೂರಿನಲ್ಲಿ ಸಂಜೀವ ಶೆಟ್ಟಿ ಮಳಿಗೆ ಮನೆಮಾತಾಗಿದ್ದು, ಮಕ್ಕಳು ಇದರಲ್ಲಿ ತೊಡಗಿಸಿಕೊಂಡಾಗ ಉನ್ನತಿಯಾಗುತ್ತದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವಂತಾಗಲಿ ಎಂದು ಉದ್ಯಮಿ ವಾಮನ್ ಪೈ ಹೇಳಿದರು.

Ad Widget

Ad Widget

Ad Widget

Ad Widget

80 ವರ್ಷಗಳ ವಸ್ತ್ರ ಪರಂಪರೆಯಲ್ಲಿ ಪ್ರಸಿದ್ಧಿ ಪಡೆದ ‘ಎಂ.ಸಂಜೀವ ಶೆಟ್ಟಿ’ ಸಾರೀಸ್ ಹಾಗೂ ರೆಡಿಮೇಡ್ಸ್ ನ ದರ್ಬೆ ವೃತ್ತದ ಬಳಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

Ad Widget

Ad Widget

Ad Widget

Ad Widget

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಆಧುನಿಕತೆಗೆ ತಕ್ಕಂತೆ ಯುವ ಪೀಳಿಗೆಗೆ ಬೇಕಾದ ವಸ್ತ್ರಗಳು, ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ವಸ್ತ್ರಗಳನ್ನು ಒಂದೇ ಮಳಿಗೆಯಲ್ಲಿ ಒದಗಿಸುವ ಮೂಲಕ ಪುತ್ತೂರು ಹಾಗೂ ಜಿಲ್ಲೆಯ ಎಲ್ಲಾ ಜನರ ಅನುಕೂಲ ಮಾಡಿಕೊಟ್ಟಿದ್ದಾರೆ. ವಸ್ತ್ರ ಉದ್ಯಮವನ್ನು ಹತ್ತೂರಿಗೆ ಪರಿಚಯಿಸಿದ ಕೀರ್ತಿ ದಿ. ಸಂಜೀವ ಶೆಟ್ಟರಿಗೆ ಸಲ್ಲುತ್ತದೆ. ವಸ್ತ್ರ ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದ.ಕ. ಜಿಲ್ಲೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆಯ ವ್ಯಾಪಾರ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಜತೆಗೆ ಕುಟುಂಬದವರು ಅದೇ ದಾರಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದ ತಿಳಿಸಿದರು.

Ad Widget

Ad Widget

Ad Widget

ಉದ್ಯಮಿ ವಿಶ್ವಾಸ್ ಶೆಣೈ ಮಾತನಾಡಿ, ಸಂಸ್ಥೆ ದ.ಕ.ದಲ್ಲಿ ಹೆಸರುವಾಸಿಯಾಗಿದೆ. ದರ್ಬೆ ಪರಿಸರದಲ್ಲಿ ಇಂತಹಾ ಮಳಿಗೆ ಅಗತ್ಯವಿದ್ದು, ಇದೀಗ ಶುಭಾರಂಭಗೊಂಡಿದೆ. ಈ ನಿಟ್ಟಿನಲ್ಲಿ ದರ್ಬೆ ಪರಿಸರದ ಸಹಕಾರ ಯಾವತ್ತೂ ಸಂಸ್ಥೆಗೆ ಇದೆ ಎಂದು ತಿಳಿಸಿದರು.

Ad Widget

Ad Widget

Ad Widget

ಸಂಸ್ಥೆಯ ಮುರಳೀಧರ ಮಾತನಾಡಿ, ಫ್ಯಾಶನ್ ಗಳು ಆಗಾಗ ಬದಲಾವಣೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ವಸ್ತ್ರ ಉದ್ಯಮದಲ್ಲಿ ತೊಡಗಿಕೊಂಡವರು ಅಪ್ ಡೇಟ್ ಆಗುತ್ತಿರಬೇಕು. ಕಳೆದ 80 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ನಾವು ಒದಗಿಸುತ್ತಾ ಬಂದಿದ್ದೇವೆ ಎಂದರು.

ಪೊಪ್ಯುಲರ್ ಸ್ವೀಟ್ಸ್ ಮಾಲಕ ನರಸಿಂಹ ಕಾಮತ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಾರಾಮ್, ಕೆ.ಎಂ.ಇಸ್ಮಾಯಿಲ್, ನರೇಂದ್ರ ಚೋಪ್ರಾ, ಕಟ್ಟಡ ಮಾಲಕ ಕವನ್ ನಾಯ್ಕ್, ಸುಮತಿ ಡಿ. ನಾಯ್ಕ್, ಶ್ವೇತ ಶುಭ ಹಾರೈಸಿದರು. ಕುಟುಂಬದ ಹಿರಿಯ ಸದಸ್ಯ ಸತೀಶ್, ಸಂಸ್ಥೆಯ ಶಿವಶಂಕರ್, ಗಿರಿಧರ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು.

Continue Reading

ಉದ್ಯೋಗ

M. Sanjeev Shetty-ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್‌ನ ನೂತನ ಮಳಿಗೆ ಮೇ. 10ರಂದು ಶುಭಾರಂಭ

Ad Widget

Ad Widget

Ad Widget

Ad Widget

ಪುತ್ತೂರು: ಪ್ರಖ್ಯಾತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಮೇ.10 ಶುಕ್ರವಾರ ಅಕ್ಷಯ ತೃತೀಯದಂದು ಶುಭಾರಂಭಗೊಳ್ಳಲಿದೆ.

Ad Widget

Ad Widget

Ad Widget

Ad Widget

ವಸ್ತ್ರ ವ್ಯಾಪಾರದಲ್ಲಿ 80 ವರ್ಷಗಳ ಅನುಭವ ಹೊಂದಿರುವ ಎಂ.ಸಂಜೀವ ಶೆಟ್ಟಿ ಪುತ್ತೂರಲ್ಲದೆ ಹತ್ತೂರಿನಲ್ಲಿ ಪ್ರಸಿದ್ದಿಯೊಂದಿಗೆ ಜನಮಾನಸದಲ್ಲಿ ತನ್ನ ಛಾಪನ್ನು ಮೂಡಿಸಿರುವ ಸಂಸ್ಥೆಯಾಗಿದೆ.

Ad Widget

Ad Widget

Ad Widget

Ad Widget

ದರ್ಬೆ ವೃತ್ತದ ಬಳಿ ಶುಭಾರಂಭಗೊಳ್ಳಲಿರುವ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಈ ಮಳಿಗೆ ಶುಭಾರಂಭಗೊಳ್ಳುತ್ತಿದೆ.

Ad Widget

Ad Widget

Ad Widget

ಪುತ್ತೂರಿನ ಮುಖ್ಯರಸ್ತೆಯಲ್ಲಿ ಎರಡು ಬೃಹತ್ ಮಳಿಗೆ ಹಾಗೂ ವೆಂಕಟರಮಣ ದೇವಸ್ಥಾನದ ಸಮೀಪ ಬೃಹತ್ ಶೋರೂಮ್ ಹಾಗೂ ಎಂಎಸ್ಎಸ್ ಹೊಂದಿರುವ ಎಂ.ಸಂಜೀವ ಶೆಟ್ಟಿ ಸಂಸ್ಥೆಯ ಕಿರಿಟಕ್ಕೆ ಮತ್ತೊಂದು ಮಳಿಗೆ ಸೇರ್ಪಡೆಯಾಗಿದೆ. ದರ್ಬೆ ಮಳಿಗೆಯ ಕೆಳಗಡೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯಿದೆ.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading