Connect with us

ಸುಳ್ಯ

ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊ ತೆಗೆದ ಅನ್ಯ ಕೋಮಿನ ಯುವಕ – ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Ad Widget

Ad Widget

Ad Widget

Ad Widget

ಸುಳ್ಯ:   ಮೊಬೈಲ್‌ ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊವನ್ನು ಅನ್ಯಕೋಮಿನ ಯುವಕನೊಬ್ಬ  ತೆಗೆದ  ಆರೋಪ ಕೇಳಿ ಬಂದಿದ್ದು ಪ್ರಕರಣ ಸುಳ್ಯ ಠಾಣೆ ಮೆಟ್ಟೀಲೆರಿದೆ.  ಯುವತಿ ಸುಳ್ಯದ  ಗಾಂಧಿನಗರದಲ್ಲಿರುವ  ಏರ್ಟೆಲ್ ಮಳಿಗೆಗೆ ಹೋಗಿದ್ದ  ವೇಳೆ ಪ್ರಕರಣ ನಡೆದಿದೆ.

Ad Widget

Ad Widget

Ad Widget

Ad Widget

ಗಾಂಧಿನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ತೊಂದರೆಗೆ ಒಳಗಾದವಳು. ಆಕೆ ಮೊಬೈಲ್‌ ರಿಚಾರ್ಜ್‌ ಮಾಡಿಸಲೆಂದು ಹತ್ತಿರದ ಏರ್ಟೆಲ್ ಮಳಿಗೆಗೆ ಹೋಗಿದ್ದಾಳೆ. ಮಳಿಗೆಯಲ್ಲಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಕುಳಿತುಕೊಳ್ಳುವಂತೆ ತಿಳಿಸಿ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget

ಅವನ ನಡವಳಿಕೆಯಿಂದ ಅನುಮಾನಗೊಂಡ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ಅದರಲ್ಲಿ ತನ್ನ ಫೋಟೋ ಇರುವುದನ್ನು ನೋಡಿದ್ದಾಳೆ. ಹಾಗೂ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾಳೆ.

Ad Widget

Ad Widget

Ad Widget

Ad Widget

 ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.

Ad Widget

Ad Widget

Ad Widget
Click to comment

Leave a Reply

ಸುಳ್ಯ

ಸುಬ್ರಹ್ಮಣ್ಯ : ಗಾಳಿ – ಮಳೆಯಿಂದ ಕರುವನ್ನು ರಕ್ಷಿಸಲು ತೋಟಕ್ಕೆ ಹೋದ ಮಹಿಳೆಯ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಮೃತ್ಯು

Ad Widget

Ad Widget

Ad Widget

Ad Widget

ಕಡಬ :ಮೇ 15.  ಗಾಳಿ ಮಳೆಯಿಂದ  ಕರುವನ್ನು ರಕ್ಷಿಸಲು ಹೋದ  ಮಹಿಳೆಯ ಮೇಲೆ ಮರ ಉರುಳಿ ಬಿದ್ದು ವೃದ್ದೆ ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ  ಸುಬ್ರಹ್ಮಣ್ಯ ಗ್ರಾಮದ  ಕುಲ್ಕುಂದ ಎಂಬಲ್ಲಿ ಬುಧವಾರ ನಡೆದಿದೆ.

Ad Widget

Ad Widget

Ad Widget

Ad Widget

ಕುಲ್ಕುಂದ ನಿವಾಸಿ ದಿ. ಶೇಷಾಪ್ಪ ಗೌಡ ಅವರ ಪತ್ನಿ ಮಿನಾಕ್ಷಿ (67) ಮೃತ ಮಹಿಳೆ. ಇಂದು ಸುಬ್ರಹ್ಮಣ್ಯ ಪರಿಸರದಲ್ಲಿ ವಿಪರೀತ ಗಾಳಿ – ಮಳೆ ಸುರಿದಿದ್ದು ಈ ವೇಳೆ ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಮೀನಾಕ್ಷಿಯವರು ತೋಟಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget

ಈ ವೇಳೆ ಬೀಸಿದ ಗಾಳಿಗೆ ತೋಟದಲ್ಲಿದ ಮರ ಮೀನಾಕ್ಷಿಯವರ ಮೇಲೆ ಬಿದ್ದಿದೆ. ಮರ ಉರುಳಿ ಬಿದ್ದ ರಭಸಕ್ಕೆ  ಮಹಿಳೆಯ ದೇಹ ಛಿದ್ರವಾಗಿದೆ.

Ad Widget

Ad Widget

Ad Widget

Ad Widget

ಘಟನಾ ಸ್ಥಳಕ್ಕೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ,ಕಂದಾಯ ಅಧಿಕಾರಿ, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

Ad Widget

Ad Widget

Ad Widget
Continue Reading

ನಿಧನ ವಾರ್ತೆ

Suicide-ಬೆಳ್ಳಾರೆ : ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Ad Widget

Ad Widget

Ad Widget

Ad Widget

ಸುಳ್ಯ: ಇಲ್ಲಿನ ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

Ad Widget

Ad Widget

Ad Widget

Ad Widget

ಮೃತನನ್ನು ನೆಟ್ಟಾರು ನಿವಾಸಿ ಕಿನ್ನಿಮಜಲು ಹುಕ್ರಪ್ಪ ಎಂಬವರ ಪುತ್ರ ಚರಣ್ ಎಂದು ಗುರುತಿಸಲಾಗಿದೆ. ಈತ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

Ad Widget

ಮೃತ ಚರಣ್ ಮನೆಯ ಹಿತ್ತಲಿನಲ್ಲಿರುವ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಅನಾರೋಗ್ಯ ಮತ್ತು ಖಿನ್ನತೆಯಿಂದ ಬಳಲುತ್ತಿದ್ದು ಆತ್ಮಹತ್ಯೆ ಮಾಡಲು ಕಾರಣ ಎಂದು ತಿಳಿದು ಬಂದಿದೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget
Continue Reading

ಸುಳ್ಯ

Missing-ನಾಪತ್ತೆಯಾಗಿದ್ದ ಎಂಎಸ್ಸಿ ವಿದ್ಯಾರ್ಥಿನಿ ಸುಳ್ಯದಲ್ಲಿ ಪತ್ತೆ

Ad Widget

Ad Widget

Ad Widget

Ad Widget

ಸುಳ್ಯ : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ವಿದ್ಯಾರ್ಥಿ ದೀಪಿಕಾ ಮೇ 7 ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಳು. ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ದೀಪಿಕಾ ನಾಪತ್ತೆಯಾದ ಬಗ್ಗೆ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೀಪಿಕಾ ಪುಸ್ತಕ ಮತ್ತು ಮೊಬೈಲ್ ಅನ್ನು ಕಾಲೇಜಿನಲ್ಲಿ ಬಿಟ್ಟು ನಾಪತ್ತೆಯಾಗಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರಕಿರಲಿಲ್ಲ.

Ad Widget

Ad Widget

Ad Widget

Ad Widget

ಪಾಂಡೇಶ್ವರ ಠಾಣೆಗೆ ಮೇ 9ರಂದು ವಿದ್ಯಾರ್ಥಿನಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿದ್ದು, ಆಕೆಯನ್ನು ಮಂಗಳೂರಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಎಂಎಸ್ಸಿ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿತ್ತು. ಅತಿಯಾದ ಒತ್ತಡದಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿ ತೆರಳಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.

Ad Widget

Ad Widget

Ad Widget

Ad Widget

ಪರೀಕ್ಷೆ ಮುಗಿಸಿದ ದೀಪಿಕಾ ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ತೆರಳುವ ಬಸ್ಸನ್ನು ಹತ್ತಿದ್ದಾಳೆ. ಕೆಎಸ್‌ಆರ್ ಟಿಸಿ ಬಸ್ಸಿನಲ್ಲಿ ಉಚಿತ ಇರುವುದರಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದು, ಅಲ್ಲಿಂದ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ. ಮತ್ತೆ ಅಲ್ಲಿಂದ ಮಡಿಕೇರಿಗೆ ಬಸ್ಸಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ತಮಿಳು ಮಾತನಾಡುವ ಹುಡುಗಿ ಒಬ್ಬಳು ಪರಿಚಯ ಆಗಿದ್ದು ಆಕೆಯೊಂದಿಗೆ ಬುಧವಾರ ಸುಳ್ಯಕ್ಕೆ ಬಂದಿದ್ದಾಳೆ. ಸುಳ್ಯದ ಅರಂತೋಡಿನಲ್ಲಿ ಆಕೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದಾಳೆ.

Ad Widget

Ad Widget

Ad Widget

ಮೂಲತ: ತಮಿಳುನಾಡಿನವಳಾಗಿದ್ದರಿಂದ ದೀಪಿಕಾಗೆ ತಮಿಳು ಬಿಟ್ಟರೆ ಕನ್ನಡ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ದೀಪಿಕಾ ತಂದೆ ತಾಯಿ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಸುಳ್ಯದಲ್ಲಿ ಹುಡುಗಿ ಇರುವ ಬಗ್ಗೆ ಅವರ ಮನೆಯವರು ಪರಿಚಯದ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಅರಂತೋಡು ತೆರಳಿ ಆಕೆಯನ್ನು ಮಂಗಳೂರಿಗೆ ಕರೆತಂದಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading