Connect with us

ನಿಧನ ವಾರ್ತೆ

Accident-ಕೊಲ್ಲೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದಾಗ ಭಾರೀ ದುರಂತ – ಮಂಜೇಶ್ವರದಲ್ಲಿ ಆ್ಯಂಬುಲೆನ್ಸ್- ಕಾರು ನಡುವೆ ಭೀಕರ ಅಪಘಾತ; ಬಾಲಕ ಸಹಿತ ಮೂವರು ಮೃತ್ಯು

Ad Widget

Ad Widget

Ad Widget

Ad Widget

ಕಾಸರಗೋಡು, ಮೇ 7: ಇಲ್ಲಿನ ಮಂಜೇಶ್ವರ ಸಮೀಪದ ಕುಂಜತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಆ್ಯಂಬುಲೆನ್ಸ್ ಮತ್ತು ಕಾರೊಂದರ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬಾಲಕ ಸಹಿತ ಮೂವರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡ ಘಟನೆ ನಡೆದಿದೆ.

Ad Widget

Ad Widget

Ad Widget

Ad Widget

ಗಾಯಾಳುಗಳನ್ನು ಹರಸಾಹಸಪಟ್ಟು ಅಪಘಾತದಿಂದ ನಜ್ಜುಗುಜ್ಜಾದ ಕಾರಿನಿಂದ ಹೊರತೆಗೆಯಲಾಯಿತು. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರನ್ನು ಕಾರಿನಲ್ಲಿದ್ದ ತ್ರಿಶೂರು ಇರಿಂಗಾಲಕುಡ ನಿವಾಸಿಗಳಾದ ಶಿವಕುಮಾರ್ (54), ಶರತ್ ಮೆನೋನ್(23) ಮತ್ತು ಸೌರವ್(15) ಎಂದು ಗುರುತಿಸಲಾಗಿದೆ. ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಉಷಾ, ಜೊತೆಗಿದ್ದ ಶಿವದಾಸ್ ಮತ್ತು ಆ್ಯಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ.

Ad Widget

Ad Widget

Ad Widget

Ad Widget

ಚಟ್ಟಂಚಾಲ್ ನಲ್ಲಿ ಸಂಭವಿಸಿದ ವಾಹನ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಉಷಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಕಾಸರಗೋಡು ಆಸ್ಪತ್ರೆಯಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಕಾರಿನಲ್ಲಿದ್ದವರು ಕೊಲ್ಲೂರು ಕ್ಷೇತ್ರ ದರ್ಶನ ಮುಗಿಸಿ ಮರಳಿ ತ್ರಿಶೂರಿಗೆ ತೆರಳುತ್ತಿದ್ದರು.

Ad Widget

Ad Widget

Ad Widget

Ad Widget

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಬಳಿಕ ಸಂಚಾರ ಅಸ್ತವ್ಯಸ್ಥಗೊಂಡಿತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಆ್ಯಂಬುಲೆನ್ಸ್ ರಸ್ತೆಯಲ್ಲಿ ಮಗುಚಿ ಬಿದ್ದಿತ್ತು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Ad Widget

Ad Widget
Click to comment

Leave a Reply

ನಿಧನ ವಾರ್ತೆ

Pavithra Jayaram-ಪವಿತ್ರಾ ಜಯರಾಂಗೆ ನನ್ನ ಪತಿ ಚಂದು ಆರನೇಯವನು : ನಟ ಚಂದ್ರಕಾಂತ್ ಪತ್ನಿ ಶಿಲ್ಪಾ ಗಂಭೀರ ಆರೋಪ

Ad Widget

Ad Widget

Ad Widget

Ad Widget

ಹೈದ್ರಾಬಾದ್: ಕಿರುತೆರೆ ನಟಿ ಪವಿತ್ರಾ ಜಯರಾಂ ರಸ್ತೆ ಅಪಘಾತದಲ್ಲಿ ನಿಧನರಾದ ಐದು ದಿನಗಳ ಬಳಿಕ ಅವರ ಸಹನಟ ಚಂದ್ರಕಾಂತ್ ಶುಕ್ರವಾರ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಂದ್ರಕಾಂತ್ ಆತ್ಮಹತ್ಯೆಯಿಂದ ತೆಲುಗು ಕಿರುತೆರೆ ಇಂಡಸ್ಟ್ರಿ ಬೆಚ್ಚಿಬಿದ್ದಿದೆ.

Ad Widget

Ad Widget

Ad Widget

Ad Widget

ಕಾರು ಅಪಘಾತದಲ್ಲಿ ಪವಿತ್ರಾ ಜಯರಾಮ್ ಸ್ಥಳದಲ್ಲೇ ಮೃತಪಟ್ಟಿದ್ದು ಅಂದಿನಿಂದ ಚಂದ್ರಕಾಂತ್ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದು, ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು. ತುಂಬಾ ಪ್ರೀತಿಸುತ್ತಿದ್ದ ಪವಿತ್ರಾ ಅವರಿಂದ ದೂರವಾಗಿರುವುದು ದುರದೃಷ್ಟಕರ ಎಂದು ಮಾಧ್ಯಮಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡರು. ಅಂದಿನಿಂದ ಚಂದು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎನ್ನುತ್ತಾರೆ ನಟನ ಆಪ್ತರು.

Ad Widget

Ad Widget

Ad Widget

Ad Widget

ನಟ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಅವರು ಮಾಡಿದ್ದ ಪೋಸ್ಟ್ಗಳು ವೈರಲ್ ಆಗುತ್ತಿವೆ. ಅಲ್ಲದೆ ಚಂದ್ರಕಾಂತ್ ಆತ್ಮಹತ್ಯೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ತ್ರಿನಯನಿ ಧಾರಾವಾಹಿಯಲ್ಲಿ ನಟಿ ಪವಿತ್ರಾ ಅವರೊಂದಿಗೆ ಚಂದ್ರಕಾಂತ್ ಆರು ವರ್ಷಗಳಿಂದ ಒಟ್ಟಿಗೆ ನಟಿಸುತ್ತಿದ್ದರು. ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಇತ್ತು ಎಂಬ ವರದಿಗಳಿವೆ. ಎರಡು ದಿನಗಳ ಹಿಂದೆ ಪವಿತ್ರ ಅವರ ಹುಟ್ಟುಹಬ್ಬವಿತ್ತು. ಆ ದಿನದ ಬಳಿಕ ಇನ್ನಷ್ಟು ಖಿನ್ನತೆಗೆ ಜಾರಿದ್ದರು.

Ad Widget

Ad Widget

Ad Widget

Ad Widget

ಚಂದ್ರಕಾಂತ್ ಗೆಳತಿ ಪವಿತ್ರಾ ಸಾವಿನಿಂದ ಮನನೊಂದಿದ್ದ ‘ಎರಡು ದಿನ ಕಾಯಿರಿ..’ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದನು. ಪ್ರತಿದಿನ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ನೆನಪುಗಳನ್ನು ಪೋಸ್ಟ್ಗಳ ರೂಪದಲ್ಲಿ ಪೋಸ್ಟ್ ಮಾಡಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಸಾಯುವ ದಿನವೂ ‘ಗುಡ್ ಮಾರ್ನಿಂಗ್ ಪಾಪ.. ಇದು ಜಿಮ್ಗೆ ಸಮಯ.. ನಮ್ಮ ಜಿಮ್ ಕೋಚ್ ಇಪ್ಪದೇ.. ಲವ್ ಯೂ ಪಾಪ..’ ಎಂದು ಪೋಸ್ಟ್ ಮಾಡಿದ್ದಾರೆ. ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget

“ಚಂದ್ರಕಾಂತ್ ಹಾಗೂ ನಾನು ಪ್ರೀತಿ ಮಾಡುತ್ತಿದ್ದೆವು. ನಮ್ಮ ಮದುವೆಗೆ ಮನೆಯವರು ಒಪ್ಪಿಗೆ ಇರಲಿಲ್ಲ. ಆದರೂ, ಅವರ ವಿರೋಧದ ನಡುವೆ ನಾನು ಮದುವೆಯಾದೆ. ಮದುವೆ ಬಳಿಕೆ ನನಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ನಾನು ಮನೆಯವರಿಗೆ ತಿಳಿಸಲಿಲ್ಲ. ನನ್ನ ಗಂಡ ಮನೆ ಬಾರದೆ ಇದ್ದರೂ ನಾನು ಮಕ್ಕಳನ್ನು ಸಾಕಿದ್ದೇನೆ.” ಎಂದು ಮೃತ ಚಂದ್ರಕಾಂತ್ ಪತ್ನಿ ಶಿಲ್ಪಾ ಹೇಳಿಕೊಂಡಿದ್ದಾರೆ.

“ಪವಿತ್ರಾ ಹಾಗೂ ನನ್ನ ಪತಿ ರಿಲೇಶನ್ಶಿಪ್ನಲ್ಲಿ ಇರುವ ವಿಷಯ ನನಗೆ ಗೊತ್ತಿತ್ತು. ಲಾಕ್ಡೌನ್ನಿಂದ ಇಬ್ಬರೂ ಒಟ್ಟಿಗೆ ಇರಲು ಶುರು ಮಾಡಿದ್ದರು. ಆ ಬಳಿಕ ಚಂದ್ರಕಾಂತ್ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು. ಹೀಗಾಗಿ ಚಂದ್ರಕಾಂತ್ ನನಗೆ ಹಿಂಸೆ ನೀಡುತ್ತಿದ್ದರು. ಕುಡಿದು ಬಂದು ಗಲಾಟೆ ಮಾಡುತ್ತಿದ್ದರು.” ಎಂದು ಶಿಲ್ಪಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ಸಂದರ್ಶನದಲ್ಲಿ “ನಮ್ಮ ಸಂಸಾರ ತುಂಬಾನೇ ಚೆನ್ನಾಗಿತ್ತು. ಚಂದ್ರಕಾಂತ್ ಬಾಳಲ್ಲಿ ಪವಿತ್ರಾ ಬಂದ್ಮೇಲೆ ಸಮಸ್ಯೆ ಶುರುವಾಗಿತ್ತು. ಮನೆಗೆ ಬರೋದು ಅಪರೂಪ ಆಗಿತ್ತು. ಪವಿತ್ರಾ ಜಯರಾಂ ಸಾಯುವುದಕ್ಕೆ ನಾಲ್ಕು ದಿನ ಮುನ್ನವಷ್ಟೇ ಅವರು ಊಟಿ ಹೋಗಿದ್ದರು. ಅಲ್ಲಿಂದಲೇ ರೀಲ್ಸ್ ಮಾಡಿದ್ದರು. ಪವಿತ್ರಾ ಸಾವಿನ ಬಳಿಕ ನನ್ನ ಮಕ್ಕಳಿಗಾಗಿ ಚಂದ್ರಕಾಂತ್ ಅನ್ನು ಕ್ಷಮಿಸಿದ್ದೆ.” ಎಂದು ಶಿಲ್ಪಾ ಹೇಳಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ನಟಿ ಪವಿತ್ರಾ ಜಯರಾಂ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಪವಿತ್ರಾ ಜಯರಾಂಗೆ ನನ್ನ ಪತಿ ಚಂದು ಆರನೇಯವನು. ನನ್ನ ಪತಿ ಇಂತಹವರಿಗಾಗಿ ಜೀವ ಕಳೆದುಕೊಂಡಿದ್ದಾನೆ. ನನಗೆ ಅನ್ಯಾಯ ಮಾಡಿ ಚಂದ್ರಕಾಂತ್ ಹೊರಟು ಹೋಗಿದ್ದಾರೆ” ಎಂದು ಪತ್ನಿ ಶಿಲ್ಪಾ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

Continue Reading

ನಿಧನ ವಾರ್ತೆ

Baby dies-ಡಾಕ್ಟ್ರು ಹೇಳಿದರೆಂದು ನವಜಾತ ಶಿಶುವನ್ನು ನೇರ ಬಿಸಿಲಿನಲ್ಲಿಟ್ಟ ಹೆತ್ತವರು – 5 ದಿನದ ಹಸುಗೂಸು ಮೃತ್ಯು

Ad Widget

Ad Widget

Ad Widget

Ad Widget

ಸೂರ್ಯನ ಬೆಳಕಿನಲ್ಲಿ ದೀರ್ಘಕಾಲ ಇರಿಸಿದ್ದರಿಂದ 5 ದಿನದ ಹೆಣ್ಣು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

ವೈದ್ಯರ ಸಲಹೆಯ ಮೇರೆಗೆ ಮಗುವಿನ ಸಂಬಂಧಿಕರು ಆಸ್ಪತ್ರೆಯ ಟೆರೇಸಿನ ಬಿಸಿಲಿನಲ್ಲಿ ಮಗುವನ್ನು ಇರಿಸಿದ ನಂತರ ನವಜಾತ ಶಿಶು ಸಾವನ್ನಪ್ಪಿದೆ. ನಿರ್ಲಕ್ಷ್ಯದಿಂದಾಗಿ ಹೆಣ್ಣು ಮಗು ಪ್ರಾಣ ಕಳೆದುಕೊಂಡ ನಂತರ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಿಂದ ಪಾರಾಗಿದ್ದಾರೆ.

Ad Widget

Ad Widget

Ad Widget

Ad Widget

ಉತ್ತರ ಪ್ರದೇಶದ ಮೈನ್ಪುರಿಯ ಘಿರೋರ್ ಥಾನಾ ಪ್ರದೇಶದಲ್ಲಿ ಭುಗೈ ಗ್ರಾಮದ ರೀಟಾ ಎಂಬ ಮಹಿಳೆ ಮೈನ್ಪುರಿಯ ರಾಧಾರಾಮನ್ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಆಸ್ಪತ್ರೆಯಲ್ಲಿ ಸುಮಾರು ಐದು ದಿನಗಳ ಹಿಂದೆ ಸಿಸೇರಿಯನ್ ಮೂಲಕ ಮಗು ಜನಿಸಿದೆ ಎಂಬ ವರದಿಗಳಿವೆ. ಮಗು ಹುಟ್ಟಿದ ದಿನದಿಂದ ಕೆಲವು ತೊಡಕುಗಳನ್ನು ಹೊಂದಿತ್ತು; ಆದ್ದರಿಂದ, ವೈದ್ಯರು ಮಗುವಿನ ಸಂಬಂಧಿಕರಿಗೆ ಪ್ರತಿದಿನ ಸುಮಾರು ಅರ್ಧ ಗಂಟೆ ಬಿಸಿಲಿನಲ್ಲಿ ಇರಿಸಲು ಸಲಹೆ ನೀಡಿದರು.

Ad Widget

Ad Widget

Ad Widget

Ad Widget

ಸುಡುವ ಬಿಸಿಲಿನಲ್ಲಿ ನವಜಾತ ಶಿಶುವನ್ನು ಬಿಟ್ಟ ಕುಟುಂಬ ಸದಸ್ಯರು:
ಮಗುವಿನ ಕುಟುಂಬ ಸದಸ್ಯರು ಬೆಳಿಗ್ಗೆ 11: 30 ರ ಸುಮಾರಿಗೆ ಮಗುವನ್ನು ಆಸ್ಪತ್ರೆಯ ಟೆರೇಸ್ಗೆ ಕರೆದೊಯ್ದು ಸುಮಾರು 30 ನಿಮಿಷಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಬಿಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನಂತರ ಕುಟುಂಬ ಸದಸ್ಯರು ಮಗುವನ್ನು ಕೆಳಕ್ಕೆ ಕರೆದೊಯ್ದರು. ಆದರೆ, ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು.

Ad Widget

Ad Widget

Ad Widget

ಬೇಸಿಗೆಯ ಋತುವಿನ ಕಾರಣದಿಂದಾಗಿ ಶಾಖವು ತುಂಬಾ ತೀವ್ರವಾಗಿತ್ತು ಮತ್ತು ತಾಪಮಾನವು ಸುಮಾರು 42 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ವರದಿಯಾಗಿದೆ. ವಯಸ್ಕರು ಸಹ ಮಧ್ಯಾಹ್ನ ನೇರ ಸೂರ್ಯನ ಶಾಖವನ್ನು ಸಹಿಸಲು ಸಾಧ್ಯವಿಲ್ಲ ಸಮಯದಲ್ಲಿ ಸೂರ್ಯನ ಸುಡುವ ಶಾಖದಿಂದ 5 ದಿನಗಳ ಮಗು ಬದುಕುಳಿಯುವುದು ಅಸಾಧ್ಯ.

Continue Reading

ನಿಧನ ವಾರ್ತೆ

Man shot dead-ಜತೆಗಾರನಿಗೆ ತಗುಲಿದ ಕಾಡುಹಂದಿಗೆ ಫೈರ್‌ ಮಾಡಿದ ಗುಂಡು – ಚಿಕ್ಕಮಗಳೂರಿನಲ್ಲಿ ಶಿಕಾರಿಗೆ ತೆರಳಿದ ಯುವಕ ಗುಂಡೇಟಿಗೆ ಬಲಿ

Ad Widget

Ad Widget

Ad Widget

Ad Widget

ಚಿಕ್ಕಮಗಳೂರು: ಗೆಳೆಯರ ಜತೆ ಕಾಡು ಹಂದಿ ಬೇಟೆಗೆ ತೆರಳಿದ ಯುವಕನೊಬ್ಬ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಉಲುವಾಗಿಲು ಬಳಿ ನಡೆದಿದೆ. ಹಂದಿ ಬೇಟೆಗೆ ತೆರಳಿದ್ದ ಯುವಕರ ಗುಂಪಿನ ಓರ್ವ ಪ್ರಾಣಿಗೆಂದು ಹಾರಿಸಿದ ಗುಂಡು ಯುವಕನಿಗೆ ತಗುಲಿ ಮೃತಪಟ್ಟಿದ್ದಾನೆ.

Ad Widget

Ad Widget

Ad Widget

Ad Widget

ಕೆರೆಮಕ್ಕಿ ಗ್ರಾಮದ ಸಂಜು(33) ಮೃತ ಯುವಕ. ಸಂಜುರವರ ಎದೆಯ ಭಾಗಕ್ಕೆ ಗುಂಡು ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂದಿ ಬೇಟೆಗೆ ತೆರಳಿದ ಯುವಕರ ನಡುವೆ ಮಿಸ್ ಕಮ್ಯುನಿಕೇಷನ್ ಉಂಟಾಗಿ ಗುಂಡು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಮೃತ ಸಂಜಯ್ ಸ್ಥಳೀಯ ನಿವಾಸಿಗಳು ಸ್ನೇಹಿತರೂ ಆದ ನಿಸರ್ಗ , ಸುಮನ್ ಎಂಬುವರ ಜತೆ ಕಾಡಿಗೆ ತೆರಳಿದ್ದರು. ಸಂಜಯ್ ಗೆ ಗುಂಡು ತಗಲುತ್ತಲೇ ನಿಸರ್ಗ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಆದರೇ ಓಡುವ ರಭಸದಲ್ಲಿದಾರಿ ಮಧ್ಯೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾನೆ. ನಿಸರ್ಗನ ಕೈನ ಮೂಳೆ ಮುರಿತವಾಗಿದ್ದು ವಶಕ್ಕೆ ಪಡೆದ ಪೊಲೀಸರು ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Ad Widget

Ad Widget

Ad Widget

Ad Widget

ಘಟನಾ ಸ್ಥಳದಲ್ಲಿದ್ದ ಮತ್ತೊರ್ವ ಯುವಕ ಸುಮನ್ ಅನ್ನೋ ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ . ಮೃತ ಸಂಜಯ್ ಕೆರೆಮಕ್ಕಿ ಗ್ರಾಮದ ದಿವಂಗತ ಜೂಲೇಗೌಡರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಈ ಸಂಬಂಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading