Connect with us

ಸ್ಥಳೀಯ

Summons issued-ಮತ ಚಲಾವಣೆಗೆ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದ ತೀರ್ಥಹಳ್ಳಿಯ 7 ರೈತರಿಗೆ ಸಮನ್ಸ್‌ ನೋಟಿಸ್‌ ಜಾರಿ

Ad Widget

Ad Widget

Ad Widget

Ad Widget

ಶಿವಮೊಗ್ಗ : ಬಹುಗ್ರಾಮ ಕುಡಿಯುವ ನೀರು ಯೋಜನೆಯ ಶುದ್ಧ ಕುಡಿಯುವ ನೀರು ಘಟಕ ಕಾಮಗಾರಿ ವಿರೋಧಿಸಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದ ತಾಲೂಕಿನ ಕೋಡ್ಲು, ಆಲಗೇರಿ ಗ್ರಾಮದ 7 ರೈತರಿಗೆ ತಹಸೀಲ್ದಾರ್‌ ಸಮನ್ಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

Ad Widget

Ad Widget

Ad Widget

Ad Widget

ನೀತಿ ಸಂಹಿತೆಗೆ ವಿರುದ್ಧವಾಗಿ ಗ್ರಾಮಸ್ಥರಿಗೆ ಮತ ಚಲಾವಣೆ ಮಾಡದಂತೆ ಬೆದರಿಕೆ, ಭೀತಿ ಒಡ್ಡಿರುವ ಕುರಿತಂತೆ ಆಗುಂಬೆ ಠಾಣೆ ಪಿಎಸ್‌ಐ ನೀಡಿದ ದೂರಿನ ಹಿನ್ನೆಲೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಕೋಡ್ಲುವೆಂಕಟೇಶ್‌, ಪ್ರಮುಖರಾದ ಸುಧೀರ್‌, ಗಣೇಶ್‌, ಅಭಿಲಾಷ್‌, ಸುಂದರೇಶ್‌, ರಾಕೇಶ್‌, ಸಚಿನ್‌ ಅವರುಗಳಿಗೆ ಸಮನ್ಸ್‌ ನೋಟಿಸ್‌ ಜಾರಿಗೊಂಡಿದೆ.

Ad Widget

Ad Widget

Ad Widget

Ad Widget

ಕೋಡ್ಲು ಗ್ರಾಮದ ಸರಕಾರಿ ಪ್ರದೇಶದಲ್ಲಿ ಬಹುಗ್ರಾಮ ಕುಡಿಯುವ ನೀರು ಜಲ್‌ಜೀವನ್‌ ಯೋಜನೆ ಕಾಮಗಾರಿ ವಿರೋಧಿಸಿ ತುಂಗಾ, ಮಾಲತಿ ನದಿ ತೀರದ ಹಲವು ಗ್ರಾಮಸ್ಥರು ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ, ತಾಲೂಕು ರೈತಸಂಘ ನೇತೃತ್ವದಲ್ಲಿ ಏಳೆಂಟು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

ಮೇ 05 ರಂದು ವಿಚಾರಣೆಗೆ ಹಾಜರಾಗುವಂತೆ ತಹಸೀಲ್ದಾರ್‌ ರೈತರಿಗೆ ನೋಟಿಸ್‌ ನೀಡಿದ್ದರು. ಆದರೆ, ರೈತರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಕೇಂದ್ರೀಕೃತ ಕಾಮಗಾರಿ ಅನುಷ್ಠಾನದಿಂದ ಪರಿಸರ, ತುಂಗಾ, ಮಾಲತಿ ನದಿ ತೀರಕ್ಕೆ ಆಗುತ್ತಿರುವ ಹಾನಿ, ಯೋಜನೆ ಅವೈಜ್ಞಾನಿಕವಾಗಿದೆ ಎಂಬುದು ಗ್ರಾಮಸ್ಥರ ದೂರಾಗಿದೆ.

Ad Widget

Ad Widget

Ad Widget

ಯೋಜನೆ ಕಾಮಗಾರಿ ವಿರೋಧಿಸಿ ಆಲಗೇರಿ ಗ್ರಾಮ ಪ್ರವೇಶ ದ್ವಾರದ ಹೆಗ್ಗೋಡು ಬಳಿ ಗ್ರಾಮಸ್ಥರು 1 ತಿಂಗಳು ಹೋರಾಟ ನಡೆಸಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಕೇಳಿಲ್ಲಎಂದು ಆಕ್ರೋಶಗೊಂಡು ಮತ ಚಲಾವಣೆ ಬಹಿಷ್ಕಾರಕ್ಕೆ ತೀರ್ಮಾನಿಸಿದ್ದಾರೆ.

ಮತ ಚಲಾವಣೆ ಬಹಿಷ್ಕಾರ ಗ್ರಾಮಸ್ಥರ ವೈಯಕ್ತಿಕ ತೀರ್ಮಾನವಾಗಿದೆ. ಪ್ರತಿಭಟನೆಯನ್ನು ಗಮನಿಸದ ಸರಕಾರ ಮತ್ತು ಜನಪ್ರತಿನಿಧಿಗಳ ಧೋರಣೆ ಸರಿಯೇ? ಪ್ರತಿಭಟನೆ ನಡೆಸಿದವರ ಅಹವಾಲು ಆಲಿಸದಿರುವುದನ್ನು ನಾಗರಿಕ ಆಡಳಿತ ಎಂದು ಕರೆಯಲು ಸಾಧ್ಯವೇ? – ಕೋಡ್ಲು ವೆಂಕಟೇಶ್‌

ಮತದಾನ ಬಹಿಷ್ಕರಿಸಿದ ಗುದ್ನೆಪ್ಪನಮಠ ನಿವಾಸಿಗಳು
ಕುಕನೂರು( ಕೊಪ್ಪಳ): ಕೂಕನೂರು ಪಟ್ಟಣದ 19 ನೇ ವಾರ್ಡಿನಲ್ಲಿ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಬೆಳಗ್ಗೆಯಿಂದ ಈವರೆಗೂ ಒಬ್ಬರೂ ಮತದಾನ ಮಾಡಲು ಮುಂದೆ ಬಂದಿಲ್ಲ.

ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಲಾಗಿದೆ. ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ ಮಾಡಿದೆ. ಧಾರ್ಮಿಕ ದತ್ತಿ ಇಲಾಖೆ ಯಿಂದ ಬಾಡಿಗೆ ರೂಪದಲ್ಲಿ ಕಟ್ಟಡ ನಿರ್ಮಿಸುತ್ತಿರುವ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿ, ಮತದಾನ ಬಹಿಷ್ಕರಿಸಿದ್ದಾರೆ. ಸದರಿ ಜಾಗ ಗುದ್ನೇಪ್ಪನಮಠ ದೇವಸ್ಥಾನದ ಜಾಗಕ್ಕೆ ಬಿಡುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ. ಮತದಾನ ಮಾಡದೆ ನಿವಾಸಿಗಳು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1040 ಮತಗಳಿರುವ ಗುದ್ನೇಪ್ಪನಮಠದ ಬೂತ್ ನಲ್ಲಿ ಜನರು ಮತದಾನದಿಂದ ದೂರ ಉಳಿದಿದ್ದಾರೆ.

Click to comment

Leave a Reply

ಬಿಗ್ ನ್ಯೂಸ್

ಬಂಧಿತ ರೌಡಿ ಶೀಟರ್, ಅಕ್ರಮ ಕಲ್ಲುಗಾಣಿಗಾರಿಕೆಯ ಆರೋಪಿ ಬಿಜೆಪಿ ಮುಖಂಡನನ್ನು ಕಾನೂನು ಬಾಹಿರವಾಗಿ ರಿಲೀಸ್ ಮಾಡುವಂತೆ ಶಾಸಕ ಪಂಜಾರಿಂದ ಪೊಲೀಸರಿಗೆ ಒತ್ತಡ,ಬೆದರಿಕೆ ಅವ್ಯಾಚವಾಗಿ ನಿಂದನೆ : FIR ದಾಖಲು; ಆರೋಪಿ ಪರ ನಿಂತ ಶಾಸಕರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ

Ad Widget

Ad Widget

Ad Widget

Ad Widget

ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಿಯನ್ನು ಬಂಧಿಸಿದನ್ನು ಪ್ರಶ್ನಿಸಿ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿ ತನ್ನ ಪಕ್ಷದ ಕಾರ್ಯಕರ್ತನಾಗಿರುವ ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಕಲ್ಲಿನ ಕೋರೆಗೆ ದಾಳಿ ಮಾಡಿದ ಪೊಲೀಸರು ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಅಕ್ರಮವಾಗಿ ಸ್ಫೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದರು. ಇನ್ನೊರ್ವ ಆರೋಪಿ ಬಿಜೆಪಿ ಪ್ರಮೋದ್ ಉಜಿರೆ ವಿರುದ್ದವು ಇದೆ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

Ad Widget

Ad Widget

Ad Widget

Ad Widget

ಶಶಿರಾಜ್ ಶೆಟ್ಟಿಯ ಬಂಧಿಸಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ತನ್ನ ಪಟಲಾಂನೊಂದಿಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಕಾನೂನು ಬಾಹಿರವಾಗಿ ಹೊರತರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಠಾಣೆಯ ಮುಂದೆ ಧರಣಿ ನಡೆಸಿ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಈ ವೇಳೆ ಪೊಲೀಸರಲ್ಲಿ ಆರೋಪಿಯನ್ನು ತಕ್ಷಣ ಬಿಡುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Ad Widget

Ad Widget

Ad Widget

ಠಾಣೆ ನಿಮ್ಮ ಅಪ್ಪನದ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ಶಾಸಕ ಪೂಂಜಾ ಮುಂದೆ ನನ್ನ ಸರಕಾರ ಬರುತ್ತಾದೆ. ಆಗ ಇಲ್ಲಿನ ಸಿಬ್ಬಂದಿಯನ್ನು ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೂಂಜಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ರೌಡಿಶೀಟರ್ ಪರ , ಅದರಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದ ಪರವಾಗಿ ಒಬ್ಬ ಚುನಾಯಿತ ಶಾಸಕರು ಠಾಣೆಯಲ್ಲಿ ಬಂದು ಕೂಗಾಡಿದ್ದು ಅಕ್ಷಮ್ಯ ತಪ್ಪು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಲೇ, ಠಾಣೆಯ ಒಳಗಡೆ ನೆಲದ ಮೇಲೆ ಕೂತು ಆರೋಪಿಯನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಪೂಂಜಾ ತನ್ನ ಬೆಂಬಲಿಗರ ಜತೆ ಧರನಿ ನಡೆಸಿದ್ದರು. ಆದರೆ ಯಾವುದೇ ಒತ್ತಡಗಳಿಗೆ ಮಣಿಯದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಶಿರಾಜ್ ಶೆಟ್ಟಿಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

FIRನಲ್ಲಿ ಏನಿದೆ ?

ಇದೀಗ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು, ಇತರ ಕೆಲವು ಜನರೊಂದಿಗೆ, ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಶಾಸಕರು ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು FIRನಲ್ಲಿ ನಮೋದಿಸಲಾಗಿದೆ.
ಶಾಸಕರಾದ ಹರೀಶ್ ಪೂಂಜಾರವರ ವಿರುದ್ಧ IPC ಕಲಂ:353, 504 ರಂತೆ ಪ್ರಕರಣ ದಾಖಲಾಗಿದೆ.

Continue Reading

ಸ್ಥಳೀಯ

Dr Dhananjaya Sarji-ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡುವಂತೆ ಡಾ.ಧನಂಜಯ ಸರ್ಜಿ ಮನವಿ

Ad Widget

Ad Widget

Ad Widget

Ad Widget

ಶಿವಮೊಗ್ಗ : ಇದೇ ಜೂನ್ 3 ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ವಿದ್ಯಾವಂತ-ಪ್ರಜ್ಞಾವಂತ ಮತದಾರರು ಮತ ನೀಡಿ ಅಭೂತ ಪೂರ್ವ ಗೆಲುವಿಗೆ ಕಾರಣರಾಗಬೇಕು ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮನವಿ ಮಾಡಿದರು.

Ad Widget

Ad Widget

Ad Widget

Ad Widget

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ವೈದ್ಯ ಶಿಕ್ಷಣ ಮುಗಿದ ತಕ್ಷಣ ನಾನು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ ಚಿಕ್ಕದಾಗಿ ಒಂದು ಕ್ಲಿನಿಕ್ ಆರಂಭಿಸಿದ್ದು, ಇದೀಗ 1000 ಸಿಬ್ಬಂದಿ ಹಾಗೂ 100 ವೈದ್ಯರು ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ, ವಿವಿಧ ಹಂತಗಳಲ್ಲಿ ಪದವೀದರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿದ್ದೇನೆ, ನೈರುತ್ಯ ಪದವೀಧರ ಕ್ಷೇತ್ರವು 14 ಮೆಡಿಕಲ್ ಕಾಲೇಜು, 30 ಎಂಜಿನಿಯರಿಂಗ್ ಕಾಲೇಜು, 100 ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾಸ್ಥೆಗಳನ್ನು ಹೊಂದಿದ ಸುಶಿಕ್ಷಿತರ ಕ್ಷೇತ್ರ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಿದೆ, ಕ್ಷೇತ್ರದಲ್ಲಿ 85 ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಲ್ಲೆಯಲ್ಲಿ 27 ಸಾವಿರ ಮತದಾರರಿದ್ದಾರೆ, ನನ್ನ ಗೆಲುವಿಗಾಗಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು.

Ad Widget

Ad Widget

Ad Widget

Ad Widget

10 ನೇ ವಯಸ್ಸಿನಿಂದ ಆರ್ ಎಸ್ ಎಸ್ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸಿದ್ದೇನೆ, ಐಟಿಸಿ, ಒಟಿಸಿ ಮುಗಿಸಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, ವೈದ್ಯ ವೃತ್ತಿಯೊಂದಿಗೆ ಸಂಘದ ಅನೇಕ ಜವಾಬ್ದಾರಿಗಳನ್ನು ನಿರ್ವಹಸಿದ್ದೇನೆ, ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಮುನ್ನ ವಿಕಾಸ ಟ್ರಸ್ಟ್ ಗೆ ರಾಜೀನಾಮೆ ಸಲ್ಲಿಸಿ, ಕಳೆದ ಎರಡು ವರ್ಷಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಗೂಂಡು ಬಿಜೆಪಿಯಲ್ಲೀಗ ಜಿಲ್ಲಾ ಉಪ[ಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷದ ಹಿರಿಯರು ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಅವರೆಲ್ಲರಿಗೂ ಅನಂತ ಧನ್ಯವಾದಗಳು, ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರ, ಬೆಂಬಲದೊಂದಿಗೆ ಗೆಲುವು ಸಾಧಿಸಿ ಪದವೀದರರ ಸಮಸ್ಯೆಗಳಿಗೆ ಪ್ರಾಮಣಿಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು.

Ad Widget

Ad Widget

Ad Widget

Ad Widget

ಶಾಸಕ ಎಸ್.ಎನ್. ಚನ್ನ ಬಸಪ್ಪ,ಮಾತನಾಡಿ, ಪಕ್ಷದ ಹಿರಿಯರು ತೀರ್ಮಾನ ಕೈಗೊಂಡು ಡಾ.ಧನಂಜಯ ಸರ್ಜಿ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ,ಎಲ್ಲ ಕಾರ್ಯಕರ್ತರು ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

Ad Widget

Ad Widget

Ad Widget

ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರಾಜ್ಯ ಸಂಚಾಕರಾದ ಎಸ್.ದತ್ತಾತ್ರಿ, ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಮಾಜಿ ಸೂಡಾ ಅಧ್ಯಕ್ಷರಾದ ನಾಗರಾಜ್ ಮತ್ತಿತರರು ಹಾಜರಿದ್ದರು.

Continue Reading

ಉದ್ಯೋಗ

Bindu’s-ಬೆಂಗಳೂರಿನ ಬನಶಂಕರಿಯಲ್ಲಿ ಬಿಂದುವಿನ 7ನೇ ಫ್ಯಾಕ್ಟರಿ ಔಟ್ ಲೆಟ್ ಶುಭಾರಂಭ

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಷ್ಠಿತ ತಂಪು ಪಾನೀಯ ತಯಾರಿಕಾ ಸಂಸ್ಥೆಯಾಗಿರುವ ಬಿಂದು ಫ್ಯಾಕ್ಟರಿಯ ಎಲ್ಲಾಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ದೊರೆಯುವ ಬಿಂದುವಿನ 7ನೇ ಫ್ಯಾಕ್ಟರಿ ಔಟ್‌ಲೆಟ್ ಬೆಂಗಳೂರಿನ ಬನಶಂಕರಿಯಲ್ಲಿ ಮೇ 10ರಂದು ಶುಭಾರಂಭಗೊಂಡಿತು. ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್‌ನ ನಿರ್ದೇಶಕಿ ಮೇಘಾ ಶಂಕರ್‌ರವರು ಔಟ್‌ಲೆಟ್‌ನ್ನು ಉದ್ಘಾಟಿಸಿದರು.

Ad Widget

Ad Widget

Ad Widget

Ad Widget

ಸಂಸ್ಥೆಯ ಸಿಇಓ ಸುಶಿಲ್ ವೈದ್ಯ ಮಾತನಾಡಿ ಗ್ರಾಹಕರ ಮೆಚ್ಚಿನ ಭಾರತೀಯ ಶೈಲಿಯ ತಿನಿಸು ಮತ್ತು ಪಾನೀಯಗಳು ಒಂದೇ ಸೂರಿನಡಿ ಲಭ್ಯ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಏರೇಟೆಡ್ ಪಾನೀಯಗಳು, ಸಿಪ್ ಆನ್, ಫಿಝ್ ರಹಿತವಾದ ಹಣ್ಣಿನ ಮೂಲದ ಪಾನೀಯ, ಫ್ರೂಝಾನ್ ಬ್ರಾಂಡ್‌ನ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ನ್ಯಾಕ್ಸ್ ಅಪ್ ಬ್ರಾಂಡ್‌ನ ಸ್ನ್ಯಾಕ್ಸ್, ಕುರುಕಲು ಚಿಪ್ಸ್ ಇತ್ಯಾದಿ ಸುಮಾರು 50ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ದಕ್ಷಿಣ ಭಾರತದಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ಲಭ್ಯವಿದೆ. ನಮ್ಮ ಎಲ್ಲಾ ಉತ್ಪನ್ನಗಳು ಬಿಂದು ಫ್ಯಾಕ್ಟರಿ ಔಟ್‌ಲೆಟ್‌ನಲ್ಲಿ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಎಂದರು ಹಾಗೂ ಸಂಸ್ಥೆಯ ಸಿಇಓ ಸುಶಿಲ್ ವೈದ್ಯರವರು ಪ್ರಥಮ ಖರೀದಿ ಮಾಡಿದರು.

Ad Widget

Ad Widget

Ad Widget

Ad Widget

1 ಕರ್ನಾಟಕದಲ್ಲಿ 50 ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಈ ಒಂದು ವರ್ಷದಲ್ಲಿ ಆರಂಭಗೊಳಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

Ad Widget

Ad Widget

Ad Widget

Ad Widget

2 ಮುಂಬರುವ 5 ವರ್ಷದಲ್ಲಿ 500 ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಆರಂಭಿಸುವ ಯೋಜನೆಯನ್ನು ಹೊಂದಿದೆ. ಇದರಿಂದ ಸಮಾಜದಲ್ಲಿ ಉದ್ಯೋಗವಕಾಶ ದೊರೆಯಲಿದೆ ಎಂದು ಹೇಳಿದರು.

Ad Widget

Ad Widget

Ad Widget

3 ಮೇಘಾ ಫೂಟ್ ಪ್ರೊಸೆಸಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು ಎಲ್ಲಾ ರಾಜ್ಯಗಳಲ್ಲಿ ಫ್ಯಾಕ್ಟರಿ ಔಟ್‌ಲೆಟ್‌ಗಳನ್ನು ಆರಂಭಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು,

ಮೇಘಾ ಫ್ರೂಟ್ ಪ್ರೊಸೆಸಿಂಗ್ ಲಿಮಿಟೆಡ್‌ನ ನಿರ್ದೇಶಕರಾದ ಮನಸ್ವಿತ್ ಶಂಕರ್, ನ್ಯಾಷನಲ್ ಕಮರ್ಷಿಯಲ್ ಬ್ರಾಂಡಿಂಗ್ ಮ್ಯಾನೇಜರ್ ಹರಿಪ್ರಸಾದ್, ಬಿಸಿನೆಸ್ ಹೆಡ್ ದೇವರಾಜ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading