Connect with us

ಲೇಖನಗಳು

Mobile hanging?-ನಿಮ್ಮ ಮೊಬೈಲ್ ಹ್ಯಾಂಗ್ ಆಗುತ್ತಿದೆಯೇ? ಹಾಗಾದರೇ ಈ ಟ್ರಿಕ್ಸ್ ಬಳಸಿ

Ad Widget

Ad Widget

Ad Widget

Ad Widget

ಫೋನ್ ಹ್ಯಾಂಗ್ ಆಗುವುದು ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಫೋನ್ ಹ್ಯಾಂಗ್ ಆದರೆ ಆ ಕ್ಷಣ ನಮ್ಮ ಬಳಕೆಗೆ ಫೋನ್ ಲಭ್ಯವಾಗುವುದಿಲ್ಲ. ಮತ್ತೆ ರೀಸ್ಟಾರ್ಟ್ ಮಾಡಬೇಕು ಇಲ್ಲವೇ ಫೋನ್ ಸರಿಯಾಗುವವರೆಗೆ ಕಾಯಬೇಕು. ಫೋನ್ ಹ್ಯಾಂಗ್ ಆಗದಂತೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

Ad Widget

Ad Widget

Ad Widget

Ad Widget

ಫೋನ್ ಹ್ಯಾಂಗ್ ಆಗಲು ಮುಖ್ಯ ಕಾರಣ ಫೋನ್ ಸ್ಟೋರೇಜ್ ಫುಲ್ ಆಗುವುದು. ಫೋನ್ ಸ್ಟೋರೇಜ್ ಫುಲ್ ಆದರೆ ಕೆಲವು appಗಳನ್ನು ಡಿಲಿಟ್ ಮಾಡುವ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಕೆಲವು ಫೋನ್ಗಳಲ್ಲಿ ಮಕ್ಕಳಿಗೆ ಸಂಬಂಧಪಟ್ಟ ಅಥವಾ ಒಟಿಟಿ app ಇರುತ್ತದೆ. ಅಲ್ಲದೆ ಅನಗತ್ಯ ಸೋಷಿಯಲ್ ಮೀಡಿಯಾ app ಹಾಗೂ ಉಪಯೋಗಿಸದ ವಿಡಿಯೋ ಎಡಿಟಿಂಗ್ app ಹಾಗೂ ಗೇಮಿಂಗ್ app ಇರುತ್ತದೆ. ಸಾಮಾನ್ಯವಾಗಿ ಇವುಗಳೇ ಹೆಚ್ಚು ಸ್ಟೋರೇಜ್ನ್ನು ತಿನ್ನುತ್ತವೆ. ಇದನ್ನು ಅನ್ ಇನ್ಸ್ಟಾಲ್ ಮಾಡುವ ಮೂಲಕ ಅಪಾರ ಜಾಗವನ್ನು ಮೊಬೈಲ್ನಲ್ಲಿ ಉಳಿಸಿಕೊಳ್ಳಬಹುದು.

Ad Widget

Ad Widget

Ad Widget

Ad Widget

ನಿಮ್ಮ ಐಫೋನ್ನಲ್ಲಿ ಅತಿ ಹೆಚ್ಚು ಸ್ಟೋರೇಜ್ ಯಾವ app ಪಡೆದುಕೊಂಡಿದೆ ಎಂದು ತಿಳಿಯಲು ಈ ಸೂತ್ರ ಅನುಸರಿಸಿ. ಐಫೋನ್ ಬಳಕೆದಾರರು ನಿಮ್ಮ ಫೋನಿನ ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಜನರಲ್ ಆಯ್ಕೆ ಮೇಲ್ ಕ್ಲಿಕ್ ಮಾಡಿ. ಈಗ ಐಫೋನ್ ಜನರಲ್ ಆಯ್ಕೆ ಮಾಡಿದಾಗ ಯಾವ app ಹೆಚ್ಚು ಸ್ಟೋರೇಜ್ ಪಡೆದುಕೊಂಡಿದೆ ಎಂಬುದು ತಿಳಿಯುತ್ತದೆ.

Ad Widget

Ad Widget

Ad Widget

Ad Widget

ನಿಮ್ಮಲ್ಲಿ Android ಫೋನ್ ಇದ್ದರೆ ಈ ಸೂತ್ರ ಅನುಸರಿಸಿ. ಮೊದಲಿಗೆ Android ಸ್ಮಾರ್ಟ್ ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ app ತೆರೆಯಿರಿ. ಗೂಗಲ್ ಪ್ಲೇ ಸ್ಟೋರ್ appನಲ್ಲಿ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಮ್ಯಾನೇಜ್ app ಅಂಡ್ ಡಿವೈಸ್ ಮೇಲ್ ಕ್ಲಿಕ್ ಮಾಡಿ. ಇಲ್ಲಿ ಅತೀ ಹೆಚ್ಚು ಸ್ಟೋರೇಜ್ ಯಾವ ಆಪ್ ತೆಗೆದುಕೊಂಡಿದೆ ಎಂಬುದು ತಿಳಿಯುತ್ತದೆ.

Ad Widget

Ad Widget

Ad Widget

ಸ್ಮಾರ್ಟ್ ಫೋನ್ನಲ್ಲಿರುವ ಒಎಸ್ ಆಗಾಗ ಅಪ್ಡೇಟ್ ಕೇಳುತ್ತಿರುತ್ತದೆ. ಅಪಡೆಟ್ ಕೇಳಿದಾಗ ಮಾಡಿಕೊಳ್ಳಿ. ಇದು ನಿಮ್ಮ ಸ್ಮಾರ್ಟ್ ಫೋನ್ ವೇಗ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಅಲ್ಲದೆ ಹೊಸ್ ಫಿಚರ್ಸ್ ಇದ್ದರೆ ಅದು ಕೂಡ ಲಭ್ಯವಾಗುತ್ತದೆ. ಅಲ್ಲದೆ ಮೊಬೈಲ್ನಲ್ಲಿ ಜಂಕ್ ಫೈಲ್ಗಳು ಇದ್ದರೆ ಅದು ಸ್ಮಾರ್ಟ್ ಫೋನ್ನ ಜೀವಿತಾವಧಿಯನ್ನು ಕುಂಠಿತಗೊಳಿಸುತ್ತದೆ. ಆಗಾಗ ಆಂಟಿ ವೈರಸ್ ಆಪ್ ಮೂಲಕ ಅದನ್ನು ಸ್ವಚ್ಛಗೊಳಿಸಿ. ಸೆಟ್ಟಿಂಗ್ಸ್ನಲ್ಲಿರುವ ತ್ರ್ಯಾಸ್ ಫೈಲ್ಗಳನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಿ. ಇದರಿಂದ ಫೋನಿನ ವೇಗ ಹೆಚ್ಚುತ್ತದೆ.

Click to comment

Leave a Reply

ಲೇಖನಗಳು

Pendulum dousing-ಪೆಂಡ್ಯೂಲಮ್ ಡೌಸಿಂಗ್ ಹೀಗೆಂದರೇನು? ಈ ವಿದ್ಯೆಯನ್ನು ಕಲಿಯುವುದರಿಂದಾಗುವ ಪ್ರಯೋಜನಗಳು

Ad Widget

Ad Widget

Ad Widget

Ad Widget

ಒಂದೇ ವಿಚಾರಕ್ಕೆ ಸಂಬಂಧಿಸಿದ ಚಿಂತನೆಯನ್ನು ಪೆಂಡ್ಯೂಲಮ್ (ಲೋಲಕ) ಮೇಲೆ ಕೆಂದ್ರೀಕರಿಸಿದಾಗ ದೇಹದ ಪ್ರಭಾ ವಲಯದಲ್ಲಿ ಏರ್ಪಟ್ಟ ಕಂಪನಗಳ ಸಹಾಯದಿಂದ ಅದು ಚಲಿಸಲು ಪ್ರಾರಂಭಿಸುತ್ತದೆ.

Ad Widget

Ad Widget

Ad Widget

Ad Widget

ಆದರೆ ಈ ರೀತಿಯಾಗಿ ಪೆಂಡ್ಯೂಲಮ್ (ಲೋಲಕ) ಚಲಿಸುವುದನ್ನು ಸಾಮಾನ್ಯವಾಗಿ ನೋಡುಗನಿಗೆ ಕೈಯಿಂದ ಚಲಿಸುವಂತೆ ಮಾಡುವುದು ಎಂದು ಕಂಡುಬರುವುದು ಸಹಜ. ಆದರೆ ಈ ಪೆಂಡ್ಯೂಲಮ್ (ಲೋಲಕ)ಗೆ ಸಂಬಂಧಿಸಿದ ಎಲ್ಲಾ ರೀತಿಯ ವೈಜ್ಞಾನಿಕ ಮಾಹಿತಿ ಹಾಗೂ ಪ್ರಾಯೋಗಿಕವಾಗಿ ನೋಡಿದಾಗ ತರಬೇತಿ ಪಡೆದ ಪ್ರತಿಯೊಬ್ಬರಿಗೂ ಇದರ ಅನುಭವವಾಗುತ್ತದೆ ಮತ್ತು ಈ ಪೆಂಡ್ಯೂಲಮ್ (ಲೋಲಕ)ನ್ನು ತನ್ನ ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಾದ ಅನಾರೋಗ್ಯ, ಆರ್ಥಿಕ ಸಮಸ್ಯೆ, ಸಾಲ, ಆತಂಕ, ಭಯ, ಖಿನ್ನತೆ, ಮನೆಯಲ್ಲಿ ಅಶಾಂತಿ, ಕಛೇರಿ ವಾತಾವರಣದಲ್ಲಿ ತನ್ನ ಅಸ್ತಿತ್ವವನ್ನು ಇತರರು ಗುರುತಿಸುವಂತೆ ಮಾಡುವುದು. ಉದ್ಯೋಗದಲ್ಲಿ ಉನ್ನತ ಸ್ಥಾನ-ಮಾನ, ತಾನು ಇಚ್ಚಿಸಿದ್ದನ್ನು ಪಡೆದುಕೊಳ್ಳುವ ವಿಧಾನ ಇವೆಲ್ಲದರ ವಿಚಾರವಾಗಿ ಪೆಂಡ್ಯೂಲಮ್ (ಲೋಲಕ)ನ ಬಳಕೆಯನ್ನು ತರಬೇತಿಯ ಮೂಲಕ ಕಲಿಯಬಹುದಾಗಿದೆ.

Ad Widget

Ad Widget

Ad Widget

Ad Widget

ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಿ ವಿದ್ಯಾಭ್ಯಾಸದ ಪ್ರಗತಿಗೂ ಇದು ಪ್ರಯೋಜನ ಆದರೆ ಈ ತರಬೇತಿಯನ್ನು ಪೋಷಕರು ಪಡೆದುಕೊಳ್ಳುವುದು ಒಳಿತು. ವಿಶ್ವದ ಶಕ್ತಿಯನ್ನು ಬಳಸಿಕೊಂಡು ಜಾತಕದಲ್ಲಿರುವ ದೋಷಗಳನ್ನು ಸರಿಪಡಿಸಿಕೊಳ್ಳುವುದು. ಅಂಗಡಿ,ಕಛೇರಿ ಮನೆಯಲ್ಲಿರುವ ವಾಸ್ತುವಿನ ದೋಷಗಳನ್ನು ಗುರುತಿಸಿ ಸರಿಪಡಿಸುವಲ್ಲಿಯೂ ಈ ಪೆಂಡ್ಯೂಲಮ್ (ಲೋಲಕ) ಸಹಕರಿಸುತ್ತದೆ.

Ad Widget

Ad Widget

Ad Widget

Ad Widget

ಭೂಮಿಯಲ್ಲಿ ನೀರನ್ನು ಗುರುತಿಸಿ ಬಾವಿ, ಕೆರೆ, ಕೊಳವೆಬಾವಿ ತೋಡುವವರಿಗೂ ಪೆಂಡ್ಯೂಲಮ್ (ಲೋಲಕ) ಸಹಕಾರಿ. ಈ ವಿದ್ಯೆಯ ದೀಕ್ಷೆ ಪಡೆದು ಪೆಂಡ್ಯೂಲಮ್ (ಲೋಲಕ)ನ್ನು ಬಳಸುವ ತಂತ್ರಗಳನ್ನು ಕರಗತ ಮಾಡಿಕೊಂಡಲ್ಲಿ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿಕೊಳ್ಳಬಹುದಾಗಿದೆ.

Ad Widget

Ad Widget

Ad Widget

ತರಬೇತಿಗಾಗಿ ಸಂಪರ್ಕಿಸಿ : ಶಿವಪ್ರಸಾದ್ ಭಾರದ್ವಾಜ್ ಪುತ್ತೂರು. 9448410257

Continue Reading

ಲೇಖನಗಳು

Areca nut-ಅಡಿಕೆ ಕ್ಯಾನ್ಸರ್ʼ ಕಾರಕವಲ್ಲ – ನಿರೋಧಕ ; ಹೊರ ಬಿತ್ತು ಸಂಶೋಧನ ವರದಿ; ಹೋದ ಮಾನ ವಾಪಸ್ಸು ಬಂದೀತೆ ?

Ad Widget

Ad Widget

Ad Widget

Ad Widget

ಅಡಿಕೆ ಕ್ಯಾನ್ಸರ್ ಕಾರಕ, ನಿಷೇಧ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿರುವ ಹೊತ್ತಿನಲ್ಲಿ ಅಡಿಕೆ ಬೆಳೆಗಾರರು ಸಂತಸ ಪಡುವಂತ ಸಂಶೋಧನ ವರದಿಯೊಂದು ಹೊರ ಬಿದ್ದಿದೆ. ಅಡಿಕೆಯಲ್ಲಿ ಕ್ಯಾನ್ಸರ್ ನಿರೋಧಕ ಅಂಶ ಇದೆ ಎಂದು ಸಂತೇಬೆನ್ನೂರಿನ ನೆಕ್ಸ್ಜೆನ್ ಸಂಸ್ಥೆ ನಡೆಸಿದ ಸಂಶೋಧನೆ ಬಹಿರಂಗ ಪಡಿಸಿದೆ.

Ad Widget

Ad Widget

Ad Widget

Ad Widget

ಅಡಿಕೆಯಲ್ಲಿ ಆಂಟಿ ಬ್ಯಾಕ್ಟೀರಿಯ, ಆಂಟಿ ಫಂಗಸ್, ಆಂಟಿ ಆಕ್ಸಿಡಂಟ್, ಆಂಟಿ ಡಯಾಬಿಟಿಕ್, ಆಂಟಿ ಇಫ್ಲಾಮೆಟರಿ, ಗಾಯ ವಾಸಿಗೊಳಿಸುವ, ಸೈಟೋ ಟಾಕ್ಸಿಕ್ ಜೀವಶಾಸ್ತ್ರೀಯ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿವೆ ಎಂಬ ಅಂಶವೂ ಸಂಶೋಧನೆಯ ವರದಿಯಲ್ಲಿ ಬಹಿರಂಗವಾಗಿದೆ.

Ad Widget

Ad Widget

Ad Widget

Ad Widget

ನೆಕ್ಸ್ಜೆನ್ ಸಂಸ್ಥೆ ಸೈಟಾಕ್ಸನ್ ಬಯೋ ಸೊಲ್ಯುಷನ್ ಪ್ರೈ. ಲಿಮಿಟೆಡ್ನ ಪ್ರಯೋಗಾಲಯದಲ್ಲಿ ನಡೆಸಿದ ಸಂಶೋಧನಾ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ನೆಕ್ಸ್ಜೆನ್ ಸಂಸ್ಥಾಪಕ ರಘು ಮಾದ್ಯಮಗಳಿಗೆ ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ಪರಿಶುದ್ಧ ಅಡಿಕೆಯ ಹಾಲನ್ನು ಪ್ರಯೋಗ ಶಾಲೆಯಲ್ಲಿ ವಿವಿಧ ಹಂತದ ಪ್ರಯೋಗಗಳಿಗೆ ಒಳಪಡಿಸಿದಾಗ ಕ್ಯಾನ್ಸರ್ ನಿರೋಧಕ ಅಂಶ ಇರುವುದು ತಿಳಿದುಬಂದಿದೆ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ವೃದ್ಧಿಸಲಿದೆ. ಆಸಕ್ತ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು ಹೆಚ್ಚಿನ ಆಸಕ್ತಿ ತೋರಿದರೆ ನೆಕ್ಸ್ಜೆನ್ ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

Ad Widget

Ad Widget

Ad Widget

. 100 ಕೆ.ಜಿ. ಸುಲಿದ ಹಸಿ ಅಡಿಕೆಗಳನ್ನು ಅಡಿಕೆ ಡ್ರಯರ್ನಲ್ಲಿ ಸಂಸ್ಕರಿಸಿದರೆ ಕನಿಷ್ಠ 1 ಲೀ. ಪರಿಶುದ್ಧ ಹಾಲು ದೊರೆಯುತ್ತದೆ. ಈ ಹಾಲನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು ಎಂದು ಅವರು ಹೇಳಿದರು. ನೆಕ್ಸ್ಜೆನ್ ಸಂಸ್ಥೆಯಿಂದ ಹಿಂದೆ ಅಡಿಕೆ ಬಾಯ್ಲರ್ ಆವಿಷ್ಕರಿಸಲಾಗಿತ್ತು.

Continue Reading

ಲೇಖನಗಳು

Weight Loss : ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ ? ಹಾಗಾದ್ರೆ ಈ 5 ಡಿಟಾಕ್ಸ್ ಪಾನೀಯಗಳನ್ನು ಟ್ರೈ ಮಾಡಿ

Ad Widget

Ad Widget

Ad Widget

Ad Widget

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಆಹಾರ ತಜ್ಞರ ಪ್ರಕಾರ, ಕೆಲವು ಡಿಟಾಕ್ಸ್ ಪಾನೀಯಗಳ ಸಹಾಯದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಹೊಟ್ಟೆ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಆರೋಗ್ಯಕರ ಡಿಟಾಕ್ಸ್ ಪಾನೀಯಗಳು ಯಾವುವು ಎಂದು ಕೆಳಗಡೆ ನೀಡಲಾಗಿದೆ.

Ad Widget

Ad Widget

Ad Widget

Ad Widget

ಲೆಮನ್ ವಾಟರ್:
ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಇದು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುತ್ತದೆ. ಜೊತೆಗೆ ಇದು ಜೀರ್ಣಕ್ರಿಯೆಯನ್ನು, ಚಯಾಪಚಯವನ್ನು ಉತ್ತೇಜಿಸುವ ಮೂಲಕ ತೂಕ ಇಳಿಕೆಗೆ ಸಹಕಾರಿ ಆಗಲಿದೆ.

Ad Widget

Ad Widget

Ad Widget

Ad Widget

ಶುಂಠಿ ಮತ್ತು ಅರಿಶಿನ

Ad Widget

Ad Widget

Ad Widget

Ad Widget

ಎರಡೂ ಸಹ ರೋಗನಿರೋಧಕ-ಉತ್ತೇಜಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬಿಸಿ ನೀರಿನಲ್ಲಿ ಶುಂಠಿ ಹಾಗೂ ಅರಿಶಿನವನ್ನು ಬೆರೆಸಿ ಕಷಾಯ ತಯಾರಿಸಿ ಕುಡಿಯುವುದರಿಂದ ಇದು ಸೊಂಟದ ಸುತ್ತಲೂ ಶೇಖರವಾಗಿರುವ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ಕೊಡುಗೆ ನೀಡಬಲ್ಲದು ಎಂದು ಹೇಳಲಾಗುತ್ತದೆ.

Ad Widget

Ad Widget

Ad Widget

ಗ್ರೀನ್ ಟೀ:
ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು ಇದು ಸಹ ಚಯಾಪಚಯ ಕ್ರಿಯೆಯನ್ನು ಸುಧಾರಿಸುವ ಮೂಲಕ ಕೊಬ್ಬಿನ ಆಕ್ಸಿಡೀಕರಣವನ್ನು ಹೆಚ್ಚಿಸಲು ಸಹಕಾರಿ ಆಗಿದೆ. ನಿತ್ಯ ಒಂದೆರಡು ಕಪ್ ಗ್ರೀನ್ ಟೀ ಕುಡಿಯುವುದರಿಂದ ತೂಕ ಇಳಿಕೆ ಸುಲಭವಾಗುತ್ತದೆ ಎಂದು ನಂಬಲಾಗಿದೆ.

ಬೆರ್ರಿ ಮತ್ತು ಪಾಲಕ್ ಸ್ಮೂಥಿ:
ಬೆರ್ರಿ ಹಣ್ಣುಗಳು ಮತ್ತು ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ. ಪಾಲಕ್ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಬೆರ್ರಿಹಣ್ಣುಗಳಲ್ಲಿ ಒಂದು ಹಿಡಿ ಸ್ಮೂಥಿಯನ್ನು ಬೆರೆಸಿ ನೀರು ಬೆರೆಸಿ ಸ್ಮೂಥಿಯನ್ನು ತಯಾರಿಸಿ ಕುಡಿಯಿರಿ. ಇದರಿಂದ ಸುಲಭವಾಗಿ ತೂಕ ಇಳಿಸಬಹುದು ಎನ್ನಲಾಗುತ್ತದೆ.

ಸೌತೆಕಾಯಿ ಪುದೀನ ನೀರು:
ಅತ್ಯುತ್ತಮ ರಿಫ್ರೆಶರ್ ಆಗಿರುವ ಸೌತೆಕಾಯಿ ಮತ್ತು ಪುದೀನ ನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಇದು ದೇಹವನ್ನು ಹೈಡ್ರೇಟಿಂಗ್ ಮಾಡಲು ತುಂಬಾ ಪ್ರಯೋಜನಕಾರಿ ಆಗಿದೆ. ಜಲಸಂಚಯನ ಮತ್ತು ತೂಕ ನಷ್ಟವನ್ನು ಬೆಂಬಲಿಸಲು ಸೌತೆಕಾಯಿ ಪುದೀನ ಮಿಶ್ರಿತ ನೀರನ್ನು ದಿನವಿಡೀ ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading