Connect with us

ಅಪರಾಧ

Mangaluru-ಮಂಗಳೂರು : ಮೆಡಿಕಲ್ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ ಚಿತ್ರಿಕರಣ

Ad Widget

Ad Widget

Ad Widget

Ad Widget

ಮಂಗಳೂರು: ಇಲ್ಲಿನ ವೈದ್ಯಕೀಯ ಕಾಲೇಜೊಂದರಲ್ಲಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ ಚಿತ್ರೀಕರಿಸುತ್ತಿದ್ದುದು ಪತ್ತೆಯಾಗಿದೆ. ಈ ಕೃತ್ಯವನ್ನು 17 ವರ್ಷದ ಬಾಲಕನೊಬ್ಬ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ವಿಡಿಯೊ ಚಿತ್ರೀಕರಿಸಿರುವ, ಕಾನೂನು ಸಂಘರ್ಷಕ್ಕೆ ಸಿಲುಕಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲನ್ಯಾಯ ಮಂಡಳಿ ಮುಂದೆ ಆತನನ್ನು ಹಾಜರುಪಡಿಸಿ ಮುಂದಿನ‌ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಯಾರೂ ಇಲ್ಲದ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ರಿಂಗಾಗುತ್ತಿತ್ತು. ಶೌಚಾಲಯವನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಮೊಬೈಲ್ ಪತ್ತೆಯಾಗಿತ್ತು. ಬಾಲಕ ರೋಗಿಯ ಸೋಗಿನಲ್ಲಿ ವೈದ್ಯಕೀಯ ಕಾಲೇಜಿನ ಒಳಗೆ ಬಂದು ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ. ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ನಗರ ಉತ್ತರ ಠಾಣೆಯಲ್ಲಿ ಮಹಿಳೆಯ ನಗ್ನ ಚಿತ್ರ ಸೆರೆ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಪತ್ತೆಯಾದ ಮೊಬೈಲ್ ಬಳಸಿ ಶೌಚಾಲಯಕ್ಕೆ ಹೋಗಿದ್ದ ಮಹಿಳೆಯರ ವಿಡಿಯೋ ಚಿತ್ರೀಕರಿಸಲಾಗಿತ್ತೇ ಎಂಬ ವಿವರವನ್ನು ಬಹಿರಂಗಪಡಿಸಿಲ್ಲ

Ad Widget

Ad Widget

Ad Widget
Click to comment

Leave a Reply

ಅಪರಾಧ

Anjali Murder Case ಹುಬ್ಬಳಿ : ಅಕ್ಕ ಅಂಜಲಿ ಅಂಬಿಗೇರ ಹತ್ಯೆಯಿಂದ ಮನನೊಂದು ತಂಗಿ ಆತ್ಮಹತ್ಯೆಗೆ ಯತ್ನ

Ad Widget

Ad Widget

Ad Widget

Ad Widget

ಮೂರು ದಿನಗಳ ಹಿಂದೆ ನಡೆದ ಹುಬ್ಬಳಿಯ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ನೊಂದ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಅಂಜಲಿ ಸಹೋದರಿ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದವರು . ಇವರು ಮೇ 18 ರಂದು ಸಂಜೆ ಮನೆಯಲ್ಲಿ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Ad Widget

Ad Widget

Ad Widget

Ad Widget

ಶನಿವಾರ ಅಂಜಲಿ ಹತ್ಯೆ ಖಂಡಿಸಿ ಹುಬ್ಬಳಿಯಲ್ಲಿ ಪ್ರತಿಭಟನೆ ಸಭೆ ನಡೆದಿತ್ತು.ಇದರಲ್ಲಿ ಯಶೋಧಾ ಭಾಗವಹಿಸಿದ್ದರು. ಬಳಿಕ ಮನೆಗೆ ಮರಳಿದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಏನಿದು ಪ್ರಕರಣ:
ವಿಶ್ವನಾಥ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಯನ್ನು ಹುಬ್ಬಳಿಯ ವೀರಾಪುರ ಓಣಿಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ್ (21) ಎಂಬ ಯುವಕ ಒಪ್ಪಿಕೊಂಡಿಲ್ಲ ಎಂಬ ಸಿಟ್ಟಿನಿಂದ ಬೆಳ್ಳಂಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದನು..

Ad Widget

Ad Widget

Ad Widget

Ad Widget

ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ.ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.

Ad Widget

Ad Widget

Ad Widget
Continue Reading

ಅಂತರ ರಾಜ್ಯ

Priest-ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಖಾಸಗಿ ಟಿವಿ ನಿರೂಪಕಿಯ ಅತ್ಯಾಚಾರವೆಸಗಿದ ಅರ್ಚಕ

Ad Widget

Ad Widget

Ad Widget

Ad Widget

ಚೆನ್ನೈ: ಖಾಸಗಿ ಟಿವಿಯೊಂದರ ನಿರೂಪಕಿಯೊಬ್ಬರಿಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥ ಕುಡಿಸಿ, ನಗರದ ಪ್ರಸಿದ್ಧ ದೇವಾಲಯವೊಂದರ ಅರ್ಚಕರೊಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ನಿರೂಪಕಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

Ad Widget

Ad Widget

Ad Widget

ಪೊಲೀಸರ ಪ್ರಕಾರ, ಸಾಲಿಗ್ರಾಮಂನ 30 ವರ್ಷದ ದಿವ್ಯ (ಹೆಸರು ಬದಲಿಸಲಾಗಿದೆ) ಘಟನೆಯ ಸಂತ್ರಸ್ತೆಯಾಗಿದ್ದು, ಆಕೆ ತನ್ನ ದೂರಿನಲ್ಲಿ ನಾನು ಆಧ್ಯಾತ್ಮಿಕ ಶ್ರದ್ಧೆಯುಳ್ಳ ಮಹಿಳೆಯಾಗಿದ್ದು, ಚೆನ್ನೈನ ಪ್ಯಾರಿ ಕಾರ್ನರ್ ನಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ನಿತ್ಯ ಭೇಟಿ ನೀಡುತ್ತಿದ್ದೆ ಹಾಗೂ ಈ ಸಂದರ್ಭದಲ್ಲಿ ನನಗೆ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಮುನುಸ್ವಾಮಿಯ ಪರಿಚಯವಾಯಿತು ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಕಾರ್ತಿಕ್ ಮುನುಸ್ವಾಮಿ ದೇವಾಲಯದಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮಗಳ ಕುರಿತು ಆಕೆಗೆ ವಾಟ್ಸ್ ಆ್ಯಪ್ ನಲ್ಲಿ ಸಂದೇಶ ರವಾನಿಸುತ್ತಿದ್ದ ಎಂದು ಹೇಳಲಾಗಿದೆ. ಅವರಿಬ್ಬರ ನಡುವೆ ಗೆಳೆತನವೇರ್ಪಟ್ಟ ನಂತರ, ಆಕೆ ದೇವಾಲಯಕ್ಕೆ ಭೇಟಿ ನೀಡಿದಾಗಲೆಲ್ಲ ಆಕೆಯನ್ನು ಗರ್ಭಗುಡಿಗೆ ಕರೆದೊಯ್ಯುತ್ತಿದ್ದ ಕಾರ್ತಿಕ್ ಮುನುಸ್ವಾಮಿ, ಆಕೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡುತ್ತಿದ್ದ ಎಂದೂ ದೂರಿನಲ್ಲಿ ಹೇಳಲಾಗಿದೆ.

Ad Widget

Ad Widget

Ad Widget

Ad Widget

ದಿನ ಕಳೆದಂತೆ, ಒಂದು ದಿನ ದಾರಿ ಮಧ್ಯೆ ಮನೆಗೆ ಬಿಡುವುದಾಗಿ ಹೇಳಿ ನನ್ನನ್ನು ಕಾರ್ತಿಕ್ ಮುನುಸ್ವಾಮಿ ತನ್ನ ಕಾರ್ ನಲ್ಲಿ ಕರೆದೊಯ್ದ. ಆದರೆ, ಆತ ನನಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥವನ್ನು ನೀಡಿದ. ಅದನ್ನು ಕುಡಿದು ಪ್ರಜ್ಞಾಹೀನಳಾದ ನನ್ನ ಮೇಲೆ ಆತ ಅತ್ಯಾಚಾರ ನಡೆಸಿದ. ನಂತರ, ದೇವಾಲಯದಲ್ಲಿ ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

Ad Widget

Ad Widget

Ad Widget

ಅಂದಿನಿಂದ ಕಾರ್ತಿಕ್ ಮುನುಸ್ವಾಮಿ ಪದೇ ಪದೇ ನನ್ನ ಮನೆಗೆ ಭೇಟಿ ನೀಡಿದ್ದು, ನಾನು ಗರ್ಭಿಣಿಯಾದೆ. ಆದರೆ, ಸುಳ್ಳು ನೆಪ ಹೇಳಿ ನನ್ನನ್ನು ವಡಾಪಳನಿಯಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ನನಗೆ ಗರ್ಭಪಾತ ಮಾಡಿಸಲಾಯಿತು. ಇದಾದ ನಂತರ ನನ್ನನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಆತ ನನ್ನನ್ನು ಒತ್ತಾಯಿಸಿದ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ವಿರುಗಂಬಾಕ್ಕಂ ಮಹಿಳಾ ಪೊಲೀಸರು ಖಾಸಗಿ ಟಿವಿಯ ನಿರೂಪಕಿಯು ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರುದಾರ ಮಹಿಳೆಯೊಂದಿಗೆ ದೇವಾಲಯದ ಅರ್ಚಕ ಕಾರ್ತಿಕ್ ಮುನುಸ್ವಾಮಿ ಇರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೊಗಳು ಪತ್ತೆಯಾಗಿವೆ. ಕಾರ್ತಿಕ್ ಮುನುಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಆರು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಎಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರುವ ದೂರುದಾರ ಮಹಿಳೆ, ಚೆನ್ನೈನ ಖಾಸಗಿ ಟಿವಿಯೊಂದರಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಅಪರಾಧ

Mangaluru-ಮಂಗಳೂರು: ದಂಡ ಕಟ್ಟಲು ಹೇಳಿದ ಕೋಪದಲ್ಲಿ ಪೊಲೀಸ್ ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿ – ಪೊಲೀಸ್ ಕಮೀಷನರ್ ಮಾಡಿದ್ದೇನು ?

Ad Widget

Ad Widget

Ad Widget

Ad Widget

ಮಂಗಳೂರು: ಪೊಲೀಸ್ ಗಸ್ತು ವಾಹನದ ವಿಮೆ ಮುಕ್ತಾಯವಾಗಿದೆಯೆಂಬ ವೀಡಿಯೊವೊಂದು ಇಂದು ಬೆಳಗ್ಗಿನಿಂದ ಮಂಗಳೂರಿನ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ವಾಹನ ಸವಾರನೊಬ್ಬನಲ್ಲಿ ಟ್ರಾಫಿಕ್ ಪೊಲೀಸರು ವಾಹನದ ದಾಖಲಾತಿ ಕೇಳಿದ್ದು , ಆಗ ತನಗೆ ಅರ್ಜಂಟ್ ಹೋಗಲಿದೆ ಎಂದು ಹೇಳಿದ ವ್ಯಕ್ತಿ ಬಳಿಕ ಅಲ್ಲಿದ್ದ ಪೊಲೀಸ್ ಗಸ್ತು ವಾಹನಕ್ಕೆ ವಿಮೆ ಇಲ್ಲ ಎಂದು ತಿಳಿಸಿ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದ.

Ad Widget

Ad Widget

Ad Widget

Ad Widget

ಇದೀಗ ವಿಡಿಯೋ ಮಾಡಿದವನಿಗೆ ದಂಡ ವಿಧಿಸಿ ಪೊಲೀಸ್ ಕಮಿಷನರ್ ಇಲಾಖೆಯ ವಾಹನದ ವಿಮೆವಿಮೆ ಮುಕ್ತಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಏನಿದು ಪ್ರಕರಣ?

Ad Widget

Ad Widget

Ad Widget

Ad Widget

ಮೇ 16ರಂದು ಸಂಜೆ ನಗರದ ಕುಂಟಿಕಾನ ಬಳಿ ಕೆಎ-19-ಜಿ-1023 ನೋಂದಣಿಯ ಹೆದ್ದಾರಿ ಗಸ್ತು ವಾಹನ ಕರ್ತವ್ಯದಲ್ಲಿತ್ತು. ಈ ವೇಳೆ ವ್ಯಕ್ತಿಯೋರ್ವನಿಗೆ ಟ್ರಾಫಿಕ್ ಪೊಲೀಸ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರಿಸಿಲ್ಲ ಎಂದು ದಂಡ ವಿಧಿಸಿದ್ದರು.

Ad Widget

Ad Widget

Ad Widget

ಇದರಿಂದ ಕುಪಿತನಾದ ಆತ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಣ ಮಾಡಿ ಅದರ ವಿಮಾ ಅವಧಿಯು ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿದೆ ಎಂದು‌ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೊ ವೈರಲ್ ಮಾಡಿದ್ದಾನೆ.

ವಿಡಿಯೋ ರೆಕಾರ್ಡ್ ಮಾಡುವ ವೇಳೆ ಅಲ್ಲಿದ್ದ ಸಿಬ್ಬಂದಿ ಸರಕಾರಿ ವಾಹನದ ವಿಮೆ ಪಾವತಿಯ ಕುರಿತ ಮಾಹಿತಿ ನೀಡಿದರೂ ಆ ವ್ಯಕ್ತಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

ವೀಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇದು ತಪ್ಪು ಮಾಹಿತಿ. ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳು ಕಡ್ಡಾಯವಾಗಿ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆ ಹೊಂದಿರುತ್ತದೆ. ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಣವಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ ತೋರಿಸಲಾದ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿ 2025ರ ಅಕ್ಟೋಬರ್ 13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು 2025ರ ಜನವರಿ 8ರವರೆಗೆ ಚಾಲ್ತಿಯಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ವೀಡಿಯೊ ಮಾಡಿ ವೈರಲ್ ಮಾಡಿರುವ ವ್ಯಕ್ತಿಯ ಬೈಕ್‌ ವಾಯುಮಾಲಿನ್ಯ ತಪಾಸಣಾ ಪತ್ರ ತೋರ್ಪಡಿಸದೇ ಇರುವುದರಿಂದ ಆತನ ಮೇಲೆ ರೂ. 500 ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading