Connect with us

ಬಿಗ್ ನ್ಯೂಸ್

Birth and death certificates-ಇನ್ನು ಮುಂದೆ ಗ್ರಾಮ ಪಂಚಾಯತ್ ನಲ್ಲೇ ಸಿಗಲಿದೆ ಜನನ -ಮರಣ ಪ್ರಮಾಣ ಪತ್ರ

Ad Widget

Ad Widget

Ad Widget

Ad Widget

ಬೆಂಗಳೂರು: ಇನ್ಮುಂದೆ ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯಿತಿಯಲ್ಲೇ ನೀಡಲಾಗುತ್ತದೆ. ಜನನ, ಮರಣ ಸಂಭವಿಸಿದ 30 ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು. ಇದರಿಂದ ಅಧಿಕಾರಿಗಳು ಕಾರ್ಯದ ಒತ್ತಡದಲ್ಲಿದ್ದಾರೆ, ಇನ್ನೂ ಸಹಿ ಹಾಕಿಲ್ಲ ಎಂದು ಸಬೂಬು ಹೇಳುವಂತಿಲ್ಲ. ಜನರು ಪದೇಪದೆ ಕಚೇರಿಗಳಿಗೂ ಅಲೆಯಬೇಕಾಗಿಲ್ಲ. ನೋಂದಣಿಯೂ ಬೇಗ ನಡೆಯಲಿದೆ. ನಂತರ ಪ್ರಮಾಣ ಪತ್ರವೂ ಸಿಗಲಿದೆ.

Ad Widget

Ad Widget

Ad Widget

Ad Widget

ಗ್ರಾಮ ಪಂಚಾಯಿತಿ ಕಾರ್ಯದರ್ಶಿಯವರೇ ಉಪನೋಂದಣಾಧಿಕಾರಿ ಆಗಿರುತ್ತಾರೆ. ಜನನ, ಮರಣ ಸಂಭವಿಸಿದ 30 ದಿನದ ಒಳಗೆ ಪ್ರಮಾಣಪತ್ರ ಬೇಕಾದಲ್ಲಿ ಇವರೇ ವಿತರಿಸುವರು. 30 ದಿನಗಳ ನಂತರವಾದರೆ ಗ್ರಾಮ ಲೆಕ್ಕಾಧಿಕಾರಿಗಳು ನೋಂದಣಾಧಿಕಾರಿ ಆಗಿರುತ್ತಾರೆ. ಇವರ ಬಳಿ ನೋಂದಣಿ ಮಾಡಿಸಿ, ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಈ ಸಂಬಂಧ ಚುನಾವಣೆ ಬಳಿಕ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Ad Widget

Ad Widget

Ad Widget

Ad Widget

ರಾಜ್ಯಾದ್ಯಂತ 5,950 ಗ್ರಾಮ ಪಂಚಾಯಿತಿಗಳಿವೆ. ಎಲ್ಲಾಪಂಚಾಯಿತಿಗಳಲ್ಲೂ ಈ ಸೇವೆ ಕಲ್ಪಿಸಲಾಗುವುದು. ಜತೆಗೆ, ವಿವಾಹ ನೋಂದಣಿಯೂ ಗ್ರಾಪಂಗಳಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಪಿಡಿಒಗಳನ್ನು ಜನನ ಮರಣ ಪ್ರಮಾಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಕಾರ್ಯದರ್ಶಿಯವರನ್ನು ಗ್ರಾಪಂ ಉಪನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.

Ad Widget

Ad Widget

Ad Widget

Ad Widget

ಈ ಸಂಬಂಧ ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ನೋಂದಾಯಿಸಿ, ಪ್ರಮಾಣ ಪತ್ರಗಳನ್ನು ಡಿಜಿಟಲ್ ಸಹಿ ಮೂಲಕ ವಿತರಿಸಲು ಗ್ರಾಪಂ ಕಾರ್ಯದರ್ಶಿಗಳು ಡಿಜಿಟಲ್ ಕೀಗಳನ್ನು ಹೊಂದಿರಬೇಕು. ಈ ಬಗ್ಗೆ ಹಂತಹಂತವಾಗಿ ಮಾಹಿತಿ ನೀಡುವುದರ ಜತೆಗೆ, ಸಿಬ್ಬಂದಿಗೆ ತರಬೇತಿಯನ್ನೂ ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ.

Ad Widget

Ad Widget

Ad Widget
Click to comment

Leave a Reply

ಬಿಗ್ ನ್ಯೂಸ್

ಬೆಳ್ತಂಗಡಿ : ಅಕ್ರಮ ಕಲ್ಲುಗಣಿಗಾರಿಕೆಗೆ ದಿಡೀರ್ ಪೊಲೀಸ್ ದಾಳಿ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ – ಬಂಧಿತನ ಬಿಡಿಸಲು ಬೆಳಿಗ್ಗೆವರೆಗೆ ಠಾಣೆಯಲ್ಲಿ ನೆಲದಲ್ಲಿ ಕುಳಿತ ಶಾಸಕ ಪೂಂಜಾ : ಕ್ಯಾರೇ ಮಾಡದ ಪೊಲೀಸರು – ಪೊಲೀಸರಿಗೆ ಠಾಣೆಯೊಳಗೆ ಬೆದರಿಕೆ ಹಾಕಿದ ಶಾಸಕ..!

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ (Harish Poonja) ಪೊಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದು ಸ್ಪೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡದ್ದಲ್ಲದೆ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಈ ಕಲ್ಲಿನಕೋರೆ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೆ ನಡೆಯುತ್ತಿತ್ತು. ಈ ಕಲ್ಲಿನ ಕೋರೆಯನ್ನು ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬವರು ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರನ್ನು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಕೆಲವು ಸಮಯಗಳಿಂದ ಇಲ್ಲಿ ಕಲ್ಲಿನ ಕೋರೆ ಅಕ್ರಮವಾಗಿ ನಡೆಯುತ್ತಿದ್ದು ಈಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ತಹಶೀಲ್ದಾರರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಲಾಗಿದೆ.

Ad Widget

Ad Widget

Ad Widget

Ad Widget

ಕಲ್ಲಿನ ಕೋರೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿರುವ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತ್ರಿಯ ವೇಳೆ ಪೊಲೀಸರು ಬಂಧಿಸಿದ್ದಾರೆ. ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕರ ಆಪ್ತನ ಬಂಧನದ ಬಗ್ಗೆ ಮಾಹಿತಿ ತಿಳಿದು ತಡ ರಾತ್ರಿಯ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜಾರು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Ad Widget

Ad Widget

Ad Widget

ಪೊಲೀಸರು ಬಿಡುಗಡೆ ಮಾಡದಿದ್ದಾಗ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನನ್ನದು ಸರಕಾರ ಬರುತ್ತದೆ ನೋಡ್ಕೋತ್ತಿನಿ ಎಂದು ಪೊಲೀಸ್‌ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಠಾಣೆಯ ಒಳಗೆ ನೆಲದಲ್ಲಿ ಕುಳಿತ ಶಾಸಕರು ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಎದ್ದೇಳುವುದಿಲ್ಲ ಎಂದು ಪ್ರತಿಭಟಿಸಿದರು. ಹರೀಶ್ ಪೂಂಜಾ ಮಾತನಾಡಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತ್ರಿ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ ಶಾಸಕರು ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.

ಸರಕಾರದ ಪೊಲೀಸರ ಈ ನೀತಿಯ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಬೆಳಗ್ಗೆ ಜಾವ 4 ಗಂಟೆಯವರೆಗೆ ಕೆಲ ಕಾರ್ಯಕರ್ತರ ಜೊತೆ ಠಾಣೆಯ ಹೊರಗೆ ಕುಳಿತ ಹರೀಶ್ ಪೂಂಜಾರು ಬಂಧಿತರು ಬಿಡುಗಡೆ ಆಗದಿದ್ದಾಗ ಪ್ರತಿಭಟನೆ ನಿಲ್ಲಿಸಿ ಎದ್ದು ಹೋದರು. ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಇತರರು ಇದ್ದರು.

Continue Reading

ಅಪರಾಧ

Anjali Murder Case ಹುಬ್ಬಳಿ : ಅಕ್ಕ ಅಂಜಲಿ ಅಂಬಿಗೇರ ಹತ್ಯೆಯಿಂದ ಮನನೊಂದು ತಂಗಿ ಆತ್ಮಹತ್ಯೆಗೆ ಯತ್ನ

Ad Widget

Ad Widget

Ad Widget

Ad Widget

ಮೂರು ದಿನಗಳ ಹಿಂದೆ ನಡೆದ ಹುಬ್ಬಳಿಯ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ನೊಂದ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಅಂಜಲಿ ಸಹೋದರಿ ಯಶೋಧಾ ಆತ್ಮಹತ್ಯೆಗೆ ಯತ್ನಿಸಿದವರು . ಇವರು ಮೇ 18 ರಂದು ಸಂಜೆ ಮನೆಯಲ್ಲಿ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Ad Widget

Ad Widget

Ad Widget

Ad Widget

ಶನಿವಾರ ಅಂಜಲಿ ಹತ್ಯೆ ಖಂಡಿಸಿ ಹುಬ್ಬಳಿಯಲ್ಲಿ ಪ್ರತಿಭಟನೆ ಸಭೆ ನಡೆದಿತ್ತು.ಇದರಲ್ಲಿ ಯಶೋಧಾ ಭಾಗವಹಿಸಿದ್ದರು. ಬಳಿಕ ಮನೆಗೆ ಮರಳಿದ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಏನಿದು ಪ್ರಕರಣ:
ವಿಶ್ವನಾಥ್ ಸಾವಂತ್ ಎಂಬ ಯುವಕ ತನ್ನ ಪ್ರೇಮ ನಿವೇದನೆಯನ್ನು ಹುಬ್ಬಳಿಯ ವೀರಾಪುರ ಓಣಿಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ್ (21) ಎಂಬ ಯುವಕ ಒಪ್ಪಿಕೊಂಡಿಲ್ಲ ಎಂಬ ಸಿಟ್ಟಿನಿಂದ ಬೆಳ್ಳಂಬೆಳಗ್ಗೆ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದನು..

Ad Widget

Ad Widget

Ad Widget

Ad Widget

ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ.ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.

Ad Widget

Ad Widget

Ad Widget
Continue Reading

ಬಿಗ್ ನ್ಯೂಸ್

Naturals Ice-Cream | ನ್ಯಾಚುರಲ್ಸ್‌ ಐಸ್ ಕ್ರೀಂ ಸ್ಥಾಪಕ, ಮಂಗಳೂರಿನ ಪ್ರಖ್ಯಾತ ‘ಬೊಂಡ ಪ್ಯಾಕ್ಟರಿ’ ಯ ಮಾಲಕ ರಘುನಂದನ್ ಕಾಮತ್ ಇನ್ನಿಲ್ಲ – ಮಂಗಳೂರಿನ ಹಣ್ಣು ವ್ಯಾಪಾರಿಯ ಮಗ 300ಕೋಟಿಯ ಬ್ರ್ಯಾಂಡ್ ಕಟ್ಟಿದ ಕಥೆ ಇಲ್ಲಿದೆ

Ad Widget

Ad Widget

Ad Widget

Ad Widget

ದೇಶದ ಐಸ್‌ ಕ್ರೀಂ ಬ್ರ್ಯಾಂಡ್‌ಗಳಲ್ಲಿ ಚಿರಪರಿಚಿತ ಹೆಸರು ನ್ಯಾಚುರಲ್ಸ್‌ ಐಸ್ ಕ್ರೀಂ (Naturals Ice-Cream) ಸ್ಥಾಪಕ, ಮಂಗಳೂರಿನ ಪ್ರಖ್ಯಾತ ಬೊಂಡ ಪ್ರಾಕ್ಟರಿಯ ಮಾಲಕ ರಘುನಂದನ್ ಕಾಮತ್ ಇಂದು ಮುಂಬೈಯಲ್ಲಿ ನಿಧನರಾಗಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರಿನ ಹಣ್ಣಿನ ವ್ಯಾಪಾರಿಯ ಮಗ ಕಟ್ಟಿದ ಸಾಮ್ರಾಜ್ಯ ಹೇಗಿದೆ ಗೊತ್ತೇ..? ನ್ಯಾಚುರಲ್ಸ್‌ ಹುಟ್ಟಿದ್ದು ಮುಂಬೈನಲ್ಲಾದರೂ, ಇಂದು ದೇಶದೆಲ್ಲೆಡೆ ವಿಶ್ವಾಸಾರ್ಹ, ಜನಪ್ರಿಯ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವ ಕಂಪನಿಯನ್ನು ಆರಂಭಿಸಿದವರು ಮಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ರಘುನಂದನ್‌ ಶ್ರೀನಿವಾಸ್‌ ಕಾಮತ್‌.

Ad Widget

Ad Widget

Ad Widget

Ad Widget

ಕೆಲವೇ ಸ್ವಾದಗಳಿಗೆ ಸೀಮಿತವಾಗಿದ್ದ ಐಸ್‌ ಕ್ರೀಂ ಮಾರುಕಟ್ಟೆಯಲ್ಲಿ, ಹೊಸ ಹೊಸ ಸ್ವಾದದ, ಹಣ್ಣಿನ ಐಸ್‌ ಕ್ರೀಂಗಳ ಮೂಲಕ ಸಂಚಲನ ಮೂಡಿಸಿದವರು ಇವರು.ಇಂಥಹ ರಘುನಂದನ್‌ ಕಾಮತ್‌ ಐಸ್‌ ಕ್ರೀಂ ಉದ್ಯಮಕ್ಕೆ ಕಾಲಿಟ್ಟಿದ್ದೇ ಒಂದು ಕುತೂಹಲಕಾರಿ ಕಥೆ. ರಘುನಂದನ್‌ ಅವರ ತಂದೆ ಮಂಗಳೂರಿನ ಒಂದು ಸಣ್ಣ ಹಳ್ಳಿಯಲ್ಲಿ ಮಾವಿನ ಹಣ್ಣು ಮಾರುತ್ತಿದ್ದವರು. ತಂದೆಗೆ ಸಹಾಯ ಮಾಡುತ್ತಿದ್ದ ಪುಟ್ಟ ಹುಡುಗ ರಘುನಂದನ್‌, ಹಣ್ಣಗಳನ್ನು ಕೀಳುವುದು, ಆರಿಸುವುದು, ಹಣ್ಣಾಗಿರುವ ಮಾವುಗಳನ್ನು ಪ್ರತ್ಯೇಕಿಸುವುದು ಇವೇ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ. ಮಂಗಳೂರಿನಲ್ಲಿ ಬದುಕು ಕಷ್ಟವಾಗಿದ್ದ ಆ ಸಮಯದಲ್ಲಿ ಅಣ್ಣನ ಹೋಟೆಲ್‌ನಲ್ಲಿ ಕೆಲಸಕ್ಕೆಂದು ರಘುನಂದನ್‌ ಕಾಮತ್‌ ಮುಂಬೈ ಬಸ್‌ ಹತ್ತಬೇಕಾಯಿತು.

Ad Widget

Ad Widget

Ad Widget

Ad Widget

ಆಗ ಅವರಿಗೆ 15 ವರ್ಷ ವಯಸ್ಸು. ಮುಂಬೈಗೆ ಬಂದವರು ಅಣ್ಣನ ಹೋಟೆಲ್‌ನಲ್ಲಿ ಸಹಾಯಕ್ಕೆ ಸೇರಿಕೊಂಡರು.ಅಣ್ಣನಿಗೆ ಮುಂಬೈನಲ್ಲಿ ದಕ್ಷಿಣ ಭಾರತೀಯ ತಿಂಡಿಗಳನ್ನು ತಯಾರಿಸುವ ಸಣ್ಣ ಹೋಟೆಲ್‌ ಇತ್ತು. ಅಲ್ಲಿ ಅವರು ಐಸ್‌ ಕ್ರೀಂಗಳನ್ನೂ ಮಾರುತ್ತಿದ್ದರು. ಓದುವ ವಯಸ್ಸಲ್ಲಿ ಕೆಲಸಕ್ಕೆ ಸೇರಿದ್ದ ರಘುನಂದನ್‌ ತಲೆಯಲ್ಲಿ ಈ ಐಸ್‌ ಕ್ರೀಂಗಳನ್ನು ನೋಡಿ, ಹೊಸ ಹೊಸ ಆಲೋಚನೆಗಳು ಬರಲಾರಂಭಿಸಿದವು. ಹೇಗೂ ಹಣ್ಣುಗಳ ಬಗ್ಗೆ ಅನುಬವವಿದ್ದ ಕಾಮತರು ಐಸ್‌ ಕ್ರೀಂನಲ್ಲಿ ಯಾಕೆ ಹಣ್ಣುಗಳನ್ನು ಬೆರೆಸಬಾರದು ಎನ್ನುವ ಯೋಚನೆ ತಲೆಯಲ್ಲಿ ಸುಳಿದಾಡಲಾರಂಭಿಸಿತು.ಇದನ್ನು ಅಣ್ಣನೊಂದಿಗೆ ಚರ್ಚಿಸಿದರು. ಆದರೆ, ಆತನಿಗೆ ಅದೇಕೋ ಇದು ಅಷ್ಟೊಂದು ರುಚಿಸಲಿಲ್ಲ. ರಘುನಂದನ್‌ಗೆ ಮಾತ್ರ ಚಾಕಲೇಟ್‌, ವೆನಿಲ್ಲಾ ಸ್ವಾದದಾಚೆಗೆ ಐಸ್‌ ಕ್ರೀಂನ್ನು ಕೊಂಡೊಯ್ಯುವ ಹುಚ್ಚು. ಕೊನೆಗೊಮ್ಮೆ ಬೇರೆ ದಾರಿ ಕಾಣದೆ ತಮ್ಮದೇ ಸಣ್ಣ ಹೋಟೆಲ್‌ ಆರಂಭಿಸಿದರು ರಘುನಂದನ್‌ ಕಾಮತ್‌.

Ad Widget

Ad Widget

Ad Widget

ಆಗ ಇಸವಿ 1983.ಮುಂದೆ ಇದೇ ನ್ಯಾಚುರಲ್ಸ್‌ಗೆ ಅಡಿಪಾಯವಾಯ್ತು. ಒಂದು ವರ್ಷಗಳ ಅನುಭವದೊಂದಿಗೆ 1984ರಲ್ಲಿ ಜುಹುವಿನ ಕೋಳಿವಾಡದಲ್ಲಿ ಸುಮಾರು 200 ಚದರ ಅಡಿ ಜಾಗದಲ್ಲಿ 6 ಟೇಬಲ್‌ಗಳೊಂದಿಗೆ ‘ನ್ಯಾಚುರಲ್ಸ್‌’ ಜನ್ಮತಾಳಿತು. ಪುಟ್ಟ ಹೋಟೆಲಲ್‌ನಲ್ಲಿ ಪಾವ್‌ ಬಾಜಿ ಜೊತೆ ನ್ಯಾಚುರಲ್ಸ್‌ ಹಣ್ಣಿನ ಐಸ್‌ ಕ್ರೀಂಗಳನ್ನು ಮಾರಲು ಆರಂಭಿಸಿದರು ರಘುನಂದನ್‌ ಕಾಮತ್‌.

ಕಾಮತ್‌ ಅವರ ಐಸ್‌ ಕ್ರೀಂನಲ್ಲಿ ಜನ ಅದೇನೋ ರುಚಿ ಕಂಡರೋ ಗೊತ್ತಿಲ್ಲ. ಗ್ರಾಹಕರು ಹೋಟೆಲ್‌ಗೆ ಮುಗಿಬೀಳಲಾರಂಭಿಸಿದರು. ಉಪಹಾರ ಗೃಹದಿಂದ ಪಾವ್‌ ಬಾಜಿ ಕಾಲ್ಕಿತ್ತಿತ್ತು. ಹೋಟೆಲ್‌ ಪೂರ್ಣ ಈಗ ಐಸ್‌ ಕ್ರೀಂ ಪಾರ್ಲರ್‌ ಆಗಿ ಬದಲಾಗಿತ್ತು. ‘ಐಸ್‌ ಕ್ರೀಂ ಆಫ್‌ ಜುಹು ಸ್ಕೀಂ’ ಎಂದು ಆಗಿನ ಬಾಂಬೆಯ ಜನ ಪ್ರೀತಿಯಿಂದ ಕರೆಯಲಾರಂಭಿದರು.ಇದು ಎಷ್ಟರಮಟ್ಟಿಗೆ ಮುಂದುವರಿಯಿತು ಎಂದರೆ, ಜುಹುವಿನ ಸಣ್ಣ ಸಣ್ಣ ಬೀದಿಗಳಲ್ಲಿ ಜನ ಇರುವೆಗಳಂತೆ ಬಂದು ನ್ಯಾಚುರಲ್ಸ್‌ ಐಸ್‌ ಕ್ರೀಂಗೆ ಮುತ್ತಿಕೊಳ್ಳಲಾರಂಭಿಸಿದರು.

ರಸ್ತೆಗಳಲ್ಲಿ ಪದೇ ಪದೇ ಟ್ರಾಫಿಕ್‌ ಜಾಮ್‌ಗಳು ಉಂಟಾಗಲಾರಂಭಿಸಿದವು. ಇನ್ನು ಇಲ್ಲಿಯೇ ಇರುವುದು ಸರಿಯಲ್ಲ ಎಂದು ರಘುನಂದನ್‌ ಕಾಮತ್‌ಗೆ ಅನಿಸಿತು.ಜನರ ಇಷ್ಟವೇ ತಮ್ಮ ಯಶಸ್ಸು ಎಂದು ಬಗೆದ ರಘುನಂದನ್‌ ಕಾಮತ್‌ 1994ರಲ್ಲಿ ಐದು ಹೊಸ ಐಸ್‌ ಕ್ರೀಂ ಪಾರ್ಲರ್‌ಗಳನ್ನು ಆರಂಭಿಸಿ ತಮ್ಮ ನ್ಯಾಚುರಲ್ಸ್‌ಗೆ ಉದ್ಯಮದ ಫ್ಲೇವರ್‌ ಬೆರೆಸಿದರು. ಮುಂದೆ ಜನಪ್ರಿಯತೆ ಇನ್ನೂ ಹೆಚ್ಚಾಯಿತು. ಕೊನೆಗೆ ಫಾಂಚೈಸಿ ತೆರೆಯಬೇಕಾಯಿತು.

ಮುಂಬೈ ಮಹಾನಗರವನ್ನು ದಾಟಿ ಬೇರೆ ಬೇರೆ ಊರುಗಳಿಗೂ ನ್ಯಾಚುರಲ್ಸ್‌ ಪಯಣ ಆರಂಭಿಸಿತು.ಆದರೆ, ಆಗಿನ ದಿನಗಳಲ್ಲಿ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರಲಿಲ್ಲ. ಹೀಗಾಗಿ ಒಂದು ಕಡೆಯಿಂದ ಇನ್ನೊಂದುಕಡೆಗೆ ಐಸ್‌ ಕ್ರೀಂನ್ನು ಕೊಂಡೊಯ್ಯುವುದೇ ದೊಡ್ಡ ಸವಾಲಾಗಿತ್ತು. ಇದಕ್ಕೂ ಪರಿಹಾರ ಕಂಡುಕೊಂಡ ರಘುನಂದನ್‌ ಕಾಮತ್‌, ತಮ್ಮ ಸಂಸ್ಥೆಯಿಂದ ವಿಶಿಷ್ಟ ಥರ್ಮಾಕೋಲ್ ಪ್ಯಾಕೇಜಿಂಗ್ ಅನ್ನು ಪರಿಚಯಿಸಿದರು.

ಈ ನ್ಯಾಚುರಲ್ಸ್‌ನ ಥರ್ಮಾಕೋಲ್ ಬಾಕ್ಸ್‌ಗಳು ಶೀಘ್ರದಲ್ಲೇ ದೇಶದೆಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿದವು. ನೋಡ ನೋಡುತ್ತಿದ್ದಂತೆ ನ್ಯಾಚುರಲ್ಸ್‌ ನ್ಯಾಷನಲ್‌ ಬ್ರ್ಯಾಂಡ್‌ ಆಯ್ತು. ದೇಶದ ಉದ್ದಗಲಕ್ಕೂ ಹೆಸರು ಹಬ್ಬಿತು.

ಇದರ ನಡುವೆ ಎಳನೀರಿನಿಂದ ಐಸ್ ಕ್ರೀಂ ಮಾಡುವ ಮೂಲಕ ಬೊಂಡ ಐಸ್ ಕ್ರೀಂ ನ್ನು ಮಂಗಳೂರಿನಲ್ಲಿ ಪರಿಚಯಿಸಿದರು. ಇಂದು ಅಡ್ಯಾರಿನ ಬೊಂಡ ಫ್ಯಾಕ್ಟರಿ ಎಳನೀರು ಹಾಗೂ ಐಸ್ ಕ್ರಿಂ ಗೆ ಪ್ರಖ್ಯಾತಿ ಪಡೆದಿದೆ. ಇತ್ತಿಚೆಗೆ ಒಂದು ಘಟನೆಯಿಂದ ಕೆಲ ದಿನ ಪ್ಯಾಕ್ಟರಿ ಬಂದ್ ಆಗಿತ್ತು.

ಇಂದು, ನ್ಯಾಚುರಲ್ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಎಲ್ಲರೂ ಇಷ್ಟಪಡುವ ಐಸ್‌ ಕ್ರೀಂ ಆಗಿ ಹೊರಹೊಮ್ಮಿದೆ. ತಾಜಾ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ಐಸ್‌ ಕ್ರೀಂಗಳು ತಮ್ಮ ಅಡಿ ಬರಹ ‘ಟೇಸ್ಟ್‌ ದಿ ಒರಿಜಿನಲ್‌’ಗೆ ಅನ್ವರ್ಥನಾಮವಾಗಿ ಗುರುತಿಸಿಕೊಂಡಿವೆ.

ರಘುನಂದನ್ ಕಾಮತ್ ಅವರ ವಿಶಾಲ ದೃಷ್ಟಿಕೋನ, ಅವಿರತ ಶ್ರಮದ ಫಲವಾಗಿ ಜುಹುವಿನ ಸಣ್ಣ ಜಾಗದಲ್ಲಿ ಹುಟ್ಟಿಕೊಂಡ ನ್ಯಾಚರಲ್ಸ್‌ ಇಂದು 300 ಕೋಟಿ ರೂ. ವಹಿವಾಟಿನ ಮೈಲುಗಲ್ಲು ದಾಟಿ ಮುನ್ನುಗ್ಗುತ್ತಿದೆ. ಅವರಿಗೀಗ ಮಗ ಸಿದ್ಧಾಂತ್‌ ಕಾಮತ್‌ ಕೂಡ ಜತೆಯಾಗಿದ್ದಾರೆ.15 ರಾಜ್ಯಗಳಲ್ಲಿ 160ಕ್ಕೂ ಹೆಚ್ಚಿನ ಬ್ರ್ಯಾಂಚ್‌ಗಳಿಗೆ ನ್ಯಾಚುರಲ್ ಐಸ್ಕ್ರೀಂ ಇಂದು ಹಬ್ಬಿದೆ. ದೇಶದ ಪ್ರಖ್ಯಾತ ಬ್ಯಾಂಡ್ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ರಘುನಂದನ್ ಶ್ರೀನಿವಾಸ ಕಾಮತ್ ಇಂದು ನಿಧನರಾದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading