Connect with us

ಬಿಗ್ ನ್ಯೂಸ್

Covishield | ವಿಶ್ವದಾದ್ಯಂತ ಕೊವಿಡ್ -19 ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕ – ಔಷಧಿ ತಯಾರಿಸಲ್ಲ ಮಾರಟ ಮಾಡಲ್ಲ ಎಂದ ಜೌಷಧಿ ದೈತ್ಯ

Ad Widget

Ad Widget

Ad Widget

Ad Widget

ಕೋವಿಶೀಲ್ಡ್ (Covishield) ಬಗ್ಗೆ ಆತಂಕದ ನಡುವೆ ಔಷಧೀಯ ದೈತ್ಯ ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆ ಅಪರೂಪದ ಮತ್ತು ಅಪಾಯಕಾರಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಕಂಪನಿಯು ಒಪ್ಪಿಕೊಂಡ ನಂತರ ಜಾಗತಿಕವಾಗಿ ಹಿಂತೆಗೆದುಕೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಕಾರಣಗಳಿಗಾಗಿ ಲಸಿಕೆಯನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗುತ್ತಿದೆ ಎಂದು ಫಾರ್ಮಾ ತಿಳಿಸಿದೆ. ಲಸಿಕೆಯನ್ನು ಇನ್ನು ಮುಂದೆ ತಯಾರಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

Ad Widget

Ad Widget

Ad Widget

Ad Widget

ಲಸಿಕೆ ಹಿಂತೆಗೆದುಕೊಳ್ಳುವಿಕೆಯು TTS-ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್‌ಗೆ ಕಾರಣವಾಗಬಹುದು ಎಂಬ ಆರೋಪದೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿದೆ. ಕಂಪೆನಿಯು ತನ್ನ ‘ಮಾರ್ಕೆಟಿಂಗ್ ಅಧಿಕಾರ’ ವನ್ನು ಸ್ವಯಂಪ್ರೇರಣೆಯಿಂದ ಹಿಂತೆಗೆದುಕೊಂಡಿರುವುದರಿಂದ, ಲಸಿಕೆಯನ್ನು ಇನ್ನು ಮುಂದೆ ಯುರೋಪಿಯನ್ ಒಕ್ಕೂಟದಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಹಿಂಪಡೆಯಲು ಅರ್ಜಿಯನ್ನು ಮಾರ್ಚ್ 5ರಂದು ಸಲ್ಲಿಸಲಾಗಿದ್ದು, ಮಂಗಳವಾರದಿಂದ ಜಾರಿಗೆ ಬಂದಿದೆ.

Ad Widget

Ad Widget

Ad Widget

Ad Widget

ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ರಕ್ತದ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮದಿಂದಾಗಿ ವ್ಯಾಕ್ಸೆವ್ರಿಯಾ ಜಾಗತಿಕ ಪರಿಶೀಲನೆಯಲ್ಲಿದೆ. ಫೆಬ್ರವರಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ, ಲಸಿಕೆ “ಅಪರೂಪದ ಸಂದರ್ಭಗಳಲ್ಲಿ, ಟಿಟಿಎಸ್‌ಗೆ ಕಾರಣವಾಗಬಹುದು ಎಂದು ಅಸ್ಟ್ರಾಜೆನೆಕಾ ಒಪ್ಪಿಕೊಂಡಿತು. TTS ಯುಕೆಯಲ್ಲಿ ಕನಿಷ್ಠ 81 ಸಾವುಗಳೊಂದಿಗೆ ಹಲವಾರು ಗಂಭೀರ ಗಾಯಗಳಿಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

‘ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವಲ್ಲಿ ವ್ಯಾಕ್ಸೆವ್ರಿಯಾ ವಹಿಸಿದ ಪಾತ್ರದ ಬಗ್ಗೆ ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ. ಅಂದಾಜಿನ ಪ್ರಕಾರ, ಬಳಕೆಯ ಮೊದಲ ವರ್ಷದಲ್ಲಿಯೇ 6.5 ಮಿಲಿಯನ್‌ಗಿಂತಲೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ ಮತ್ತು ಜಾಗತಿಕವಾಗಿ ಮೂರು ಬಿಲಿಯನ್ ಡೋಸ್‌ಗಳನ್ನು ಪೂರೈಸಲಾಗಿದೆ. ನಮ್ಮ ಪ್ರಯತ್ನಗಳನ್ನು ಪ್ರಪಂಚದಾದ್ಯಂತದ ಸರ್ಕಾರಗಳು ಗುರುತಿಸಿವೆ ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಿರ್ಣಾಯಕ ಅಂಶವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ’ ಎಂದು ಅಸ್ಟ್ರಾಜೆನೆಕಾ ಸಂಸ್ಥೆ ತಿಳಿಸಿದೆ.

Ad Widget

Ad Widget

Ad Widget
Click to comment

Leave a Reply

ಬಿಗ್ ನ್ಯೂಸ್

SSLC Result | ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು, ಈ ಬಾರಿ ಸಿಸಿಟಿವಿ ಹಾಕಿದ್ದರಿಂದ ನೈಜ ಫಲಿತಾಂಶ ಬಂದಿದೆ – ನಕಲು ಒಪ್ಪಿಕೊಂಡ MLC ಭೋಜೇಗೌಡ ಸ್ಪೋಟಕ ಹೇಳಿಕೆ

Ad Widget

Ad Widget

Ad Widget

Ad Widget

ಮಂಗಳೂರು : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ (SSLC Result) ಒಪ್ಪಿಕೊಂಡಿದ್ದಾರೆ. ಈ ಬಾರಿ ನೈಜ ಫಲಿತಾಂಶ ಬಂದಿದ್ದು, ಮುಂದಿನ ಅಧಿವೇಶನದಲ್ಲಿ ಸಾಮೂಹಿಕ ನಕಲು ಬಗ್ಗೆ ಕ್ರಮ ಜರುಗಿಸಲು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ಆಗುತ್ತಿರುವ ಶಂಕೆಯಲ್ಲಿ ಪರೀಕ್ಷಾ ಕೊಠಡಿಗಳಿಗೆ ಸಿಸಿಕ್ಯಾಮೆರಾ ಅಳವಡಿಸಬೇಕೆಂದು ಪರಿಷತ್ತಿನಲ್ಲಿ ಆಗ್ರಹ ಮಾಡಿದ್ದೆವು. ಹಾಗಾಗಿ, ಈ ಬಾರಿ ಸರಕಾರ ಪರೀಕ್ಷಾ ಹಾಲ್ ಗಳಲ್ಲಿ ಸಿಸಿ ಕ್ಯಾಮೆರಾ ಇಟ್ಟು ನಿಗಾ ವಹಿಸಲಾಗಿತ್ತು.

Ad Widget

Ad Widget

Ad Widget

Ad Widget

ಇದರಿಂದಾಗಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಬಂದಿದೆ. ಇದು ಶಾಲಾ ಮಕ್ಕಳ ಕಲಿಕೆಯ ನೈಜ ಫಲಿತಾಂಶವನ್ನು ತೋರಿಸಿದೆ ಎಂದು ಹೇಳಿದರು.ಸಾಮೂಹಿಕ ನಕಲು ಆಗುತ್ತಿರುವ ಬಗ್ಗೆ ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ಕೂಡ ಹೇಳಿದ್ದರು. ನೀವು ಯಾಕೆ ಇದರ ಬಗ್ಗೆ ಸರಕಾರದಿಂದ ತನಿಖೆ ಮಾಡಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ, ನಾವು ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ಈ ಸಲ ಕಟ್ಟುನಿಟ್ಟು ಆಗಿದೆ. ನೈಜ ಫಲಿತಾಂಶ ಬಂದಿದೆ ಎಂದರು.

Ad Widget

Ad Widget

Ad Widget

Ad Widget

ನೀವು ಆರು ವರ್ಷಗಳಿಂದ ಶಾಸಕರಾಗಿದ್ದೀರಿ, ಈಗ ಕಾಂಗ್ರೆಸ್ ಸರಕಾರ ಬಂದ ಬಳಿಕ ನೀವು ಈ ಒತ್ತಾಯ ಮಾಡಿದ್ದೇ ಎಂದು ಪ್ರಶ್ನೆ ಹಾಕಿದ್ದಕ್ಕೆ, ಅವರಲ್ಲಿ ಉತ್ತರ ಇರಲಿಲ್ಲ. ಏಳೆಂಟು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಏರಿಳಿತ ಆಗಿದೆ, ಚಿಕ್ಕೋಡಿ, ಚಿತ್ರದುರ್ಗ ಪ್ರಥಮ ಸ್ಥಾನಿಯಾದ ಉದಾಹರಣೆ ಇದೆ, ಅಲ್ಲಿ ಸಾಮೂಹಿಕ ನಕಲು ಮಾಡಿದ್ದರ ಬಗ್ಗೆ ಕ್ರಮ ಆಗಬೇಕಲ್ವಾ ಎಂದು ಪ್ರಶ್ನೆ ಮಾಡಿದಾಗ, ನಾವು ಅದರ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇವೆ.

Ad Widget

Ad Widget

Ad Widget

ಯಾರು ತಪ್ಪಿತಸ್ಥರಿದ್ದಾರೋ, ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನಲ್ಲಿ ನೀವು ಬಿಜೆಪಿ ವಿರುದ್ಧ ಕಾಂಗ್ರೆಸಿಗೆ ಓಟ್ ಹಾಕುವಂತೆ ಬಹಿರಂಗ ಹೇಳಿಕೆ ಕೊಟ್ಟಿದ್ದೀರಲ್ಲಾ, ಈ ಬಾರಿ ಅದು ತೊಂದರೆ ಆಗಲ್ಲವೇ. ಬಿಜೆಪಿ ಕಾರ್ಯಕರ್ತರು ವಿರೋಧಿಸುತ್ತಿದ್ದಾರಲ್ಲವೇ ಎಂದು ಕೇಳಿದ ಪ್ರಶ್ನೆಗೆ, ಈ ಪ್ರಶ್ನೆಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಆ ಬಗ್ಗೆ ಬಿಜೆಪಿ ನಾಯಕರ ಜೊತೆ ಕ್ಲಾರಿಫೈ ಮಾಡಿಕೊಂಡಿದ್ದೇನೆ. ಈಗ ಹಳೆಯದನ್ನು ಕೆದಕುವುದಕ್ಕೆ ಹೋಗಲ್ಲ. ಈ ಹೊತ್ತಿನಲ್ಲಿ ಅದೆಲ್ಲ ಅನಗತ್ಯ ಎಂದರು.

Continue Reading

ಬಿಗ್ ನ್ಯೂಸ್

ಬಂಧಿತ ರೌಡಿ ಶೀಟರ್, ಅಕ್ರಮ ಕಲ್ಲುಗಾಣಿಗಾರಿಕೆಯ ಆರೋಪಿ ಬಿಜೆಪಿ ಮುಖಂಡನನ್ನು ಕಾನೂನು ಬಾಹಿರವಾಗಿ ರಿಲೀಸ್ ಮಾಡುವಂತೆ ಶಾಸಕ ಪಂಜಾರಿಂದ ಪೊಲೀಸರಿಗೆ ಒತ್ತಡ,ಬೆದರಿಕೆ ಅವ್ಯಾಚವಾಗಿ ನಿಂದನೆ : FIR ದಾಖಲು; ಆರೋಪಿ ಪರ ನಿಂತ ಶಾಸಕರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ

Ad Widget

Ad Widget

Ad Widget

Ad Widget

ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಿಯನ್ನು ಬಂಧಿಸಿದನ್ನು ಪ್ರಶ್ನಿಸಿ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿ ತನ್ನ ಪಕ್ಷದ ಕಾರ್ಯಕರ್ತನಾಗಿರುವ ಆರೋಪಿಯನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಕಲ್ಲಿನ ಕೋರೆಗೆ ದಾಳಿ ಮಾಡಿದ ಪೊಲೀಸರು ಹಿಟಾಚಿ-1, ಟ್ರಾಕ್ಟರ್-1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಅಕ್ರಮವಾಗಿ ಸ್ಫೋಟಕ ದಾಸ್ತಾನು ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿ ಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಿದ್ದರು. ಇನ್ನೊರ್ವ ಆರೋಪಿ ಬಿಜೆಪಿ ಪ್ರಮೋದ್ ಉಜಿರೆ ವಿರುದ್ದವು ಇದೆ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

Ad Widget

Ad Widget

Ad Widget

Ad Widget

ಶಶಿರಾಜ್ ಶೆಟ್ಟಿಯ ಬಂಧಿಸಿದ ಬೆನ್ನಲ್ಲೇ ಶಾಸಕ ಹರೀಶ್ ಪೂಂಜಾ ತನ್ನ ಪಟಲಾಂನೊಂದಿಗೆ ಬೆಳ್ತಂಗಡಿ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಕಾನೂನು ಬಾಹಿರವಾಗಿ ಹೊರತರುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಠಾಣೆಯ ಮುಂದೆ ಧರಣಿ ನಡೆಸಿ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಈ ವೇಳೆ ಪೊಲೀಸರಲ್ಲಿ ಆರೋಪಿಯನ್ನು ತಕ್ಷಣ ಬಿಡುವಂತೆ ಒತ್ತಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Ad Widget

Ad Widget

Ad Widget

ಠಾಣೆ ನಿಮ್ಮ ಅಪ್ಪನದ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ ಶಾಸಕ ಪೂಂಜಾ ಮುಂದೆ ನನ್ನ ಸರಕಾರ ಬರುತ್ತಾದೆ. ಆಗ ಇಲ್ಲಿನ ಸಿಬ್ಬಂದಿಯನ್ನು ನೋಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೂಂಜಾ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಒಬ್ಬ ರೌಡಿಶೀಟರ್ ಪರ , ಅದರಲ್ಲೂ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದ ಪರವಾಗಿ ಒಬ್ಬ ಚುನಾಯಿತ ಶಾಸಕರು ಠಾಣೆಯಲ್ಲಿ ಬಂದು ಕೂಗಾಡಿದ್ದು ಅಕ್ಷಮ್ಯ ತಪ್ಪು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.

ಆರೋಪಿಯನ್ನು ಪೊಲೀಸರು ಬಿಡುಗಡೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಲೇ, ಠಾಣೆಯ ಒಳಗಡೆ ನೆಲದ ಮೇಲೆ ಕೂತು ಆರೋಪಿಯನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಪೂಂಜಾ ತನ್ನ ಬೆಂಬಲಿಗರ ಜತೆ ಧರನಿ ನಡೆಸಿದ್ದರು. ಆದರೆ ಯಾವುದೇ ಒತ್ತಡಗಳಿಗೆ ಮಣಿಯದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಶಶಿರಾಜ್ ಶೆಟ್ಟಿಯ ಮೇಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

FIRನಲ್ಲಿ ಏನಿದೆ ?

ಇದೀಗ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾರವರು, ಇತರ ಕೆಲವು ಜನರೊಂದಿಗೆ, ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿದ್ದಾರೆ, ಈ ವೇಳೆ ಶಾಸಕರು ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವ್ಯಾಚವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು FIRನಲ್ಲಿ ನಮೋದಿಸಲಾಗಿದೆ.
ಶಾಸಕರಾದ ಹರೀಶ್ ಪೂಂಜಾರವರ ವಿರುದ್ಧ IPC ಕಲಂ:353, 504 ರಂತೆ ಪ್ರಕರಣ ದಾಖಲಾಗಿದೆ.

Continue Reading

ಬಿಗ್ ನ್ಯೂಸ್

ಬೆಳ್ತಂಗಡಿ : ಅಕ್ರಮ ಕಲ್ಲುಗಣಿಗಾರಿಕೆಗೆ ದಿಡೀರ್ ಪೊಲೀಸ್ ದಾಳಿ : ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಂಧನ – ಬಂಧಿತನ ಬಿಡಿಸಲು ಬೆಳಿಗ್ಗೆವರೆಗೆ ಠಾಣೆಯಲ್ಲಿ ನೆಲದಲ್ಲಿ ಕುಳಿತ ಶಾಸಕ ಪೂಂಜಾ : ಕ್ಯಾರೇ ಮಾಡದ ಪೊಲೀಸರು – ಪೊಲೀಸರಿಗೆ ಠಾಣೆಯೊಳಗೆ ಬೆದರಿಕೆ ಹಾಕಿದ ಶಾಸಕ..!

Ad Widget

Ad Widget

Ad Widget

Ad Widget

ಬೆಳ್ತಂಗಡಿ: ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ (Harish Poonja) ಪೊಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದು ಸ್ಪೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡದ್ದಲ್ಲದೆ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಈ ಕಲ್ಲಿನಕೋರೆ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೆ ನಡೆಯುತ್ತಿತ್ತು. ಈ ಕಲ್ಲಿನ ಕೋರೆಯನ್ನು ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬವರು ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರನ್ನು ಹಾಗೂ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿರುವುದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಕೆಲವು ಸಮಯಗಳಿಂದ ಇಲ್ಲಿ ಕಲ್ಲಿನ ಕೋರೆ ಅಕ್ರಮವಾಗಿ ನಡೆಯುತ್ತಿದ್ದು ಈಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ತಹಶೀಲ್ದಾರರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಲಾಗಿದೆ.

Ad Widget

Ad Widget

Ad Widget

Ad Widget

ಕಲ್ಲಿನ ಕೋರೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿರುವ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತ್ರಿಯ ವೇಳೆ ಪೊಲೀಸರು ಬಂಧಿಸಿದ್ದಾರೆ. ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕರ ಆಪ್ತನ ಬಂಧನದ ಬಗ್ಗೆ ಮಾಹಿತಿ ತಿಳಿದು ತಡ ರಾತ್ರಿಯ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜಾರು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

Ad Widget

Ad Widget

Ad Widget

ಪೊಲೀಸರು ಬಿಡುಗಡೆ ಮಾಡದಿದ್ದಾಗ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನನ್ನದು ಸರಕಾರ ಬರುತ್ತದೆ ನೋಡ್ಕೋತ್ತಿನಿ ಎಂದು ಪೊಲೀಸ್‌ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಠಾಣೆಯ ಒಳಗೆ ನೆಲದಲ್ಲಿ ಕುಳಿತ ಶಾಸಕರು ಬಂಧಿತರನ್ನು ಬಿಡುಗಡೆ ಮಾಡುವವರೆಗೆ ಎದ್ದೇಳುವುದಿಲ್ಲ ಎಂದು ಪ್ರತಿಭಟಿಸಿದರು. ಹರೀಶ್ ಪೂಂಜಾ ಮಾತನಾಡಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತ್ರಿ ಮನೆಗೆ ನುಗ್ಗಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದ ಶಾಸಕರು ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ.

ಸರಕಾರದ ಪೊಲೀಸರ ಈ ನೀತಿಯ ವಿರುದ್ದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.ಬೆಳಗ್ಗೆ ಜಾವ 4 ಗಂಟೆಯವರೆಗೆ ಕೆಲ ಕಾರ್ಯಕರ್ತರ ಜೊತೆ ಠಾಣೆಯ ಹೊರಗೆ ಕುಳಿತ ಹರೀಶ್ ಪೂಂಜಾರು ಬಂಧಿತರು ಬಿಡುಗಡೆ ಆಗದಿದ್ದಾಗ ಪ್ರತಿಭಟನೆ ನಿಲ್ಲಿಸಿ ಎದ್ದು ಹೋದರು. ಬಿಜೆಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಇತರರು ಇದ್ದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading