Connect with us

ವರದಿಗಳು

Vasanth Bangera | ವಸಂತ ಬಂಗೇರರ ಮೃತದೇಹ ಬೆಂಗಳೂರಿನಿಂದ ಬೆಳ್ತಂಗಡಿಗೆ : ಮಧ್ಯರಾತ್ರಿ 2 ಗಂಟೆಯಿಂದ ಗುಂಡ್ಯದಿಂದ ಮೆರವಣಿಗೆ – ನಾಳೆ ಅಂತಿಮ ದರ್ಶನ

Ad Widget

Ad Widget

Ad Widget

Ad Widget

ಬೆಳ್ತಂಗಡಿ : ದಕ್ಷಿಣ ಕನ್ನಡ ಕಂಡ ಅಪರೂಪದ ರಾಜಕಾರಣಿ ಮಾಜಿ ಶಾಸಕ ವಸಂತ ಬಂಗೇರ (Vasanth Bangera) ಅವರ ಮೃತದೇಹ ಬೆಂಗಳೂರಿನ ಆಸ್ಪತ್ರೆಯಿಂದ ಬೆಳ್ತಂಗಡಿಗೆ ಇದೀಗ ಹೊರಟಿದೆ.

Ad Widget

Ad Widget

Ad Widget

Ad Widget

ಸಾವಿರಾರು ಕಾರ್ಯಕರ್ತರು ಗುಂಡ್ಯದಲ್ಲಿ ಸೇರಲಿದ್ದು ಮಧ್ಯರಾತ್ರಿ 2 ಗಂಟೆಯಿಂದ ಗುಂಡ್ಯದಿಂದ ಮೃತದೇಹ ಮೆರವಣಿಗೆ ಗುಂಡ್ಯದಿಂದ ಹೊರಡಲಿದೆ.

Ad Widget

Ad Widget

Ad Widget

Ad Widget

ನಾಳೆ ಬೆಳಿಗ್ಗೆ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ವಸಂತ ಬಂಗೇರರವರ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

Ad Widget

Ad Widget

Ad Widget

Ad Widget

ಯಡಿಯೂರಪ್ಪ ಜೊತೆ 1983ರಲ್ಲಿ ಬಿಜೆಪಿಯಿಂದ ಪ್ರಥಮ ಬಾರಿ ವಿಧಾನಸೌಧ ಪ್ರವೇಶಿಸಿದ ವಸಂತ ಬಂಗೇರರವರು ಬಿಜೆಪಿ , ಜೆಡಿಎಸ್ , ಕಾಂಗ್ರೇಸ್‍ ನಿಂದ ಐದು ಬಾರಿ ಶಾಸಕರಾಗಿದ್ದರು. ದಕ್ಷಿಣ ಕನ್ನಡದ ರಾಜಕೀಯ ಇತಿಹಾಸದಲ್ಲಿ ಮೂರು ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಏಕೈಕ ವ್ಯಕ್ತಿ ಬಂಗೇರರಾಗಿದ್ದರೆ.

Ad Widget

Ad Widget

Ad Widget
Click to comment

Leave a Reply

ಅಂತರ ರಾಜ್ಯ

Priest-ತೀರ್ಥದಲ್ಲಿ ನಿದ್ರೆ ಮಾತ್ರೆ ಬೆರೆಸಿ ಖಾಸಗಿ ಟಿವಿ ನಿರೂಪಕಿಯ ಅತ್ಯಾಚಾರವೆಸಗಿದ ಅರ್ಚಕ

Ad Widget

Ad Widget

Ad Widget

Ad Widget

ಚೆನ್ನೈ: ಖಾಸಗಿ ಟಿವಿಯೊಂದರ ನಿರೂಪಕಿಯೊಬ್ಬರಿಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥ ಕುಡಿಸಿ, ನಗರದ ಪ್ರಸಿದ್ಧ ದೇವಾಲಯವೊಂದರ ಅರ್ಚಕರೊಬ್ಬರು ಅತ್ಯಾಚಾರವೆಸಗಿದ್ದಾರೆ ಎಂದು ನಿರೂಪಕಿ ಚೆನ್ನೈನ ವಿರುಗಂಬಾಕ್ಕಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

Ad Widget

Ad Widget

Ad Widget

ಪೊಲೀಸರ ಪ್ರಕಾರ, ಸಾಲಿಗ್ರಾಮಂನ 30 ವರ್ಷದ ದಿವ್ಯ (ಹೆಸರು ಬದಲಿಸಲಾಗಿದೆ) ಘಟನೆಯ ಸಂತ್ರಸ್ತೆಯಾಗಿದ್ದು, ಆಕೆ ತನ್ನ ದೂರಿನಲ್ಲಿ ನಾನು ಆಧ್ಯಾತ್ಮಿಕ ಶ್ರದ್ಧೆಯುಳ್ಳ ಮಹಿಳೆಯಾಗಿದ್ದು, ಚೆನ್ನೈನ ಪ್ಯಾರಿ ಕಾರ್ನರ್ ನಲ್ಲಿರುವ ಪ್ರಸಿದ್ಧ ದೇವಾಲಯಕ್ಕೆ ನಿತ್ಯ ಭೇಟಿ ನೀಡುತ್ತಿದ್ದೆ ಹಾಗೂ ಈ ಸಂದರ್ಭದಲ್ಲಿ ನನಗೆ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್ ಮುನುಸ್ವಾಮಿಯ ಪರಿಚಯವಾಯಿತು ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಕಾರ್ತಿಕ್ ಮುನುಸ್ವಾಮಿ ದೇವಾಲಯದಲ್ಲಿ ನಡೆಯುವ ಪ್ರವಚನ, ಕಾರ್ಯಕ್ರಮಗಳ ಕುರಿತು ಆಕೆಗೆ ವಾಟ್ಸ್ ಆ್ಯಪ್ ನಲ್ಲಿ ಸಂದೇಶ ರವಾನಿಸುತ್ತಿದ್ದ ಎಂದು ಹೇಳಲಾಗಿದೆ. ಅವರಿಬ್ಬರ ನಡುವೆ ಗೆಳೆತನವೇರ್ಪಟ್ಟ ನಂತರ, ಆಕೆ ದೇವಾಲಯಕ್ಕೆ ಭೇಟಿ ನೀಡಿದಾಗಲೆಲ್ಲ ಆಕೆಯನ್ನು ಗರ್ಭಗುಡಿಗೆ ಕರೆದೊಯ್ಯುತ್ತಿದ್ದ ಕಾರ್ತಿಕ್ ಮುನುಸ್ವಾಮಿ, ಆಕೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡುತ್ತಿದ್ದ ಎಂದೂ ದೂರಿನಲ್ಲಿ ಹೇಳಲಾಗಿದೆ.

Ad Widget

Ad Widget

Ad Widget

Ad Widget

ದಿನ ಕಳೆದಂತೆ, ಒಂದು ದಿನ ದಾರಿ ಮಧ್ಯೆ ಮನೆಗೆ ಬಿಡುವುದಾಗಿ ಹೇಳಿ ನನ್ನನ್ನು ಕಾರ್ತಿಕ್ ಮುನುಸ್ವಾಮಿ ತನ್ನ ಕಾರ್ ನಲ್ಲಿ ಕರೆದೊಯ್ದ. ಆದರೆ, ಆತ ನನಗೆ ನಿದ್ರೆ ಮಾತ್ರೆ ಬೆರೆಸಿದ ತೀರ್ಥವನ್ನು ನೀಡಿದ. ಅದನ್ನು ಕುಡಿದು ಪ್ರಜ್ಞಾಹೀನಳಾದ ನನ್ನ ಮೇಲೆ ಆತ ಅತ್ಯಾಚಾರ ನಡೆಸಿದ. ನಂತರ, ದೇವಾಲಯದಲ್ಲಿ ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ ಎಂದು ಆಕೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

Ad Widget

Ad Widget

Ad Widget

ಅಂದಿನಿಂದ ಕಾರ್ತಿಕ್ ಮುನುಸ್ವಾಮಿ ಪದೇ ಪದೇ ನನ್ನ ಮನೆಗೆ ಭೇಟಿ ನೀಡಿದ್ದು, ನಾನು ಗರ್ಭಿಣಿಯಾದೆ. ಆದರೆ, ಸುಳ್ಳು ನೆಪ ಹೇಳಿ ನನ್ನನ್ನು ವಡಾಪಳನಿಯಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ನನಗೆ ಗರ್ಭಪಾತ ಮಾಡಿಸಲಾಯಿತು. ಇದಾದ ನಂತರ ನನ್ನನ್ನು ಲೈಂಗಿಕ ಕಾರ್ಯಕರ್ತೆಯಾಗುವಂತೆ ಆತ ನನ್ನನ್ನು ಒತ್ತಾಯಿಸಿದ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ವಿರುಗಂಬಾಕ್ಕಂ ಮಹಿಳಾ ಪೊಲೀಸರು ಖಾಸಗಿ ಟಿವಿಯ ನಿರೂಪಕಿಯು ದಾಖಲಿಸಿರುವ ದೂರನ್ನು ಆಧರಿಸಿ ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರುದಾರ ಮಹಿಳೆಯೊಂದಿಗೆ ದೇವಾಲಯದ ಅರ್ಚಕ ಕಾರ್ತಿಕ್ ಮುನುಸ್ವಾಮಿ ಇರುವ ಖಾಸಗಿ ಚಿತ್ರಗಳು ಹಾಗೂ ವಿಡಿಯೊಗಳು ಪತ್ತೆಯಾಗಿವೆ. ಕಾರ್ತಿಕ್ ಮುನುಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಆರು ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಎಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರುವ ದೂರುದಾರ ಮಹಿಳೆ, ಚೆನ್ನೈನ ಖಾಸಗಿ ಟಿವಿಯೊಂದರಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಅಂತರ ರಾಜ್ಯ

Delhi-ದೆಹಲಿ ಮದ್ಯ ನೀತಿ ಪ್ರಕರಣ; ಆಮ್‌ ಆದ್ಮಿ ಪಕ್ಷ ಆರೋಪಿ; ರಾಜಕೀಯ ಪಕ್ಷವೊಂದನ್ನು ಆರೋಪಿಯನ್ನಾಗಿಸಿದ ದೇಶದ ಮೊದಲ ಕೇಸ್‌

Ad Widget

Ad Widget

Ad Widget

Ad Widget

ನವದೆಹಲಿ: ರಾಜಕೀಯ ಪಕ್ಷವೊಂದನ್ನು ಆರೋಪಿ ಎಂದು ಹೆಸರಿಸಿರುವುದು ದೇಶದಲ್ಲಿ ಇದೇ ಮೊದಲು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಆಮ್‌ ಆದ್ಮಿ ಪಕ್ಷವನ್ನು ಆರೋಪಿ ಎಂದು ಹೆಸರಿಸಿದೆ.

Ad Widget

Ad Widget

Ad Widget

Ad Widget

ದೆಹಲಿಯ ವಿಶೇಷ ಕೋರ್ಟ್‌ಗೆ ಜಾರಿ ನಿರ್ದೇಶನಾಲಯವು ಪೂರಕ ದಾಖಲೆಗಳೊಂದಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದು, ಇದು ಈ ಪ್ರಕರಣದ 8ನೇ ಚಾರ್ಜ್‌ಶೀಟ್‌ ಆಗಿದೆ. ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ. ಎಎಪಿ ನಾಯಕರು, ಇತರ ವ್ಯಕ್ತಿಗಳೊಂದಿಗೆ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಇಡಿ ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

Ad Widget

Ad Widget

Ad Widget

Ad Widget

ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವು ನಾಯಕರು ಮದ್ಯ ಮಾರಾಟಗಾರರರಿಗೆ ಅನುಕೂಲವಾಗಲಿ ಎಂಬ ದಿಸೆಯಲ್ಲಿ ನೀತಿ ರೂಪಿಸಿದ್ದಾರೆ. ದಕ್ಷಿಣ ಭಾರತದ ಹಲವು ವ್ಯಕ್ತಿಗಳು ಇದರ ಲಾಭ ಪಡೆದಿದ್ದು, ಲಾಭದ ಸ್ವಲ್ಪ ಮೊತ್ತವನ್ನು ಎಎಪಿಗೆ ನೀಡಲಾಗಿದೆ. ಆ ಮೊತ್ತವನ್ನು ಗೋವಾ ಚುನಾವಣೆಗೂ ಬಳಸಲಾಗಿದೆ. ಅಲ್ಲದೇ ಈ ಪ್ರಕರಣದ ಮಾತುಕತೆ ನಡೆಸಲು ಕೇಜ್ರಿವಾಲ್ ಅವರು ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂಬುದಕ್ಕೆ ನಮ್ಮ ಬಳಿ ಪೂರಕ ದಾಖಲೆಗಳಿವೆ. ಅವರು ತಂಗಿದ್ದ ಹೋಟೆಲ್‌ ಬಿಲ್‌ ಅನ್ನು ಪ್ರಕರಣದ ಆರೋಪಿಯೊಬ್ಬರು ಭಾಗಶಃ ಪಾವತಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿವೆ ಎಂಬ ಮಾಹಿತಿಯನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ.

Ad Widget

Ad Widget

Ad Widget

Ad Widget

ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯ್ದಿರಿಸಿದೆ. ನ್ಯಾ. ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದ್ದರೂ, ಕಕ್ಷಿದಾರರ ವಾದಗಳಿಗೆ ಯಾವುದೇ ಧಕ್ಕೆಯಾಗದಂತೆ ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯಕ್ಕೆ ತೆರಳಲು ಕೇಜ್ರಿವಾಲ್ ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.

Ad Widget

Ad Widget

Ad Widget

ಕಳೆದ ಮಾರ್ಚ್ 21ರಂದು ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಜೂ.1 ರ ವರೆಗೆ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಮೇ 25 ರಂದು ದೆಹಲಿಯ 7 ಸ್ಥಾನಗಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ಮತ್ತು ಇಂಡಿಯಾ ಬ್ಲಾಕ್‌ ಪರ ಕೇಜ್ರಿವಾಲ್‌ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Continue Reading

ನಿಧನ ವಾರ್ತೆ

Baby dies-ಡಾಕ್ಟ್ರು ಹೇಳಿದರೆಂದು ನವಜಾತ ಶಿಶುವನ್ನು ನೇರ ಬಿಸಿಲಿನಲ್ಲಿಟ್ಟ ಹೆತ್ತವರು – 5 ದಿನದ ಹಸುಗೂಸು ಮೃತ್ಯು

Ad Widget

Ad Widget

Ad Widget

Ad Widget

ಸೂರ್ಯನ ಬೆಳಕಿನಲ್ಲಿ ದೀರ್ಘಕಾಲ ಇರಿಸಿದ್ದರಿಂದ 5 ದಿನದ ಹೆಣ್ಣು ಮಗುವೊಂದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

ವೈದ್ಯರ ಸಲಹೆಯ ಮೇರೆಗೆ ಮಗುವಿನ ಸಂಬಂಧಿಕರು ಆಸ್ಪತ್ರೆಯ ಟೆರೇಸಿನ ಬಿಸಿಲಿನಲ್ಲಿ ಮಗುವನ್ನು ಇರಿಸಿದ ನಂತರ ನವಜಾತ ಶಿಶು ಸಾವನ್ನಪ್ಪಿದೆ. ನಿರ್ಲಕ್ಷ್ಯದಿಂದಾಗಿ ಹೆಣ್ಣು ಮಗು ಪ್ರಾಣ ಕಳೆದುಕೊಂಡ ನಂತರ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಿಂದ ಪಾರಾಗಿದ್ದಾರೆ.

Ad Widget

Ad Widget

Ad Widget

Ad Widget

ಉತ್ತರ ಪ್ರದೇಶದ ಮೈನ್ಪುರಿಯ ಘಿರೋರ್ ಥಾನಾ ಪ್ರದೇಶದಲ್ಲಿ ಭುಗೈ ಗ್ರಾಮದ ರೀಟಾ ಎಂಬ ಮಹಿಳೆ ಮೈನ್ಪುರಿಯ ರಾಧಾರಾಮನ್ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಆಸ್ಪತ್ರೆಯಲ್ಲಿ ಸುಮಾರು ಐದು ದಿನಗಳ ಹಿಂದೆ ಸಿಸೇರಿಯನ್ ಮೂಲಕ ಮಗು ಜನಿಸಿದೆ ಎಂಬ ವರದಿಗಳಿವೆ. ಮಗು ಹುಟ್ಟಿದ ದಿನದಿಂದ ಕೆಲವು ತೊಡಕುಗಳನ್ನು ಹೊಂದಿತ್ತು; ಆದ್ದರಿಂದ, ವೈದ್ಯರು ಮಗುವಿನ ಸಂಬಂಧಿಕರಿಗೆ ಪ್ರತಿದಿನ ಸುಮಾರು ಅರ್ಧ ಗಂಟೆ ಬಿಸಿಲಿನಲ್ಲಿ ಇರಿಸಲು ಸಲಹೆ ನೀಡಿದರು.

Ad Widget

Ad Widget

Ad Widget

Ad Widget

ಸುಡುವ ಬಿಸಿಲಿನಲ್ಲಿ ನವಜಾತ ಶಿಶುವನ್ನು ಬಿಟ್ಟ ಕುಟುಂಬ ಸದಸ್ಯರು:
ಮಗುವಿನ ಕುಟುಂಬ ಸದಸ್ಯರು ಬೆಳಿಗ್ಗೆ 11: 30 ರ ಸುಮಾರಿಗೆ ಮಗುವನ್ನು ಆಸ್ಪತ್ರೆಯ ಟೆರೇಸ್ಗೆ ಕರೆದೊಯ್ದು ಸುಮಾರು 30 ನಿಮಿಷಗಳ ಕಾಲ ನೇರ ಸೂರ್ಯನ ಬೆಳಕಿನಲ್ಲಿ ಬಿಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ನಂತರ ಕುಟುಂಬ ಸದಸ್ಯರು ಮಗುವನ್ನು ಕೆಳಕ್ಕೆ ಕರೆದೊಯ್ದರು. ಆದರೆ, ಸ್ವಲ್ಪ ಸಮಯದ ನಂತರ ಮಗು ಸಾವನ್ನಪ್ಪಿತು.

Ad Widget

Ad Widget

Ad Widget

ಬೇಸಿಗೆಯ ಋತುವಿನ ಕಾರಣದಿಂದಾಗಿ ಶಾಖವು ತುಂಬಾ ತೀವ್ರವಾಗಿತ್ತು ಮತ್ತು ತಾಪಮಾನವು ಸುಮಾರು 42 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ವರದಿಯಾಗಿದೆ. ವಯಸ್ಕರು ಸಹ ಮಧ್ಯಾಹ್ನ ನೇರ ಸೂರ್ಯನ ಶಾಖವನ್ನು ಸಹಿಸಲು ಸಾಧ್ಯವಿಲ್ಲ ಸಮಯದಲ್ಲಿ ಸೂರ್ಯನ ಸುಡುವ ಶಾಖದಿಂದ 5 ದಿನಗಳ ಮಗು ಬದುಕುಳಿಯುವುದು ಅಸಾಧ್ಯ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading