ಮಂಗಳೂರು: ಡಿ 11 : ತಡ ರಾತ್ರಿ ಮಂಗಳೂರು ನಗರದಲ್ಲಿ ತಿರುಗಾಡುತ್ತಿದ್ದ ಭಿನ್ನ ಕೋಮಿನ ಜೋಡಿಯನ್ನು ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು ತಡೆದು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಮಂಗಳೂರಿನ ಕೊಟ್ಟಾರ ಸಮೀಪ ಡಿ 10 ರ ಮದ್ಯರಾತ್ರಿ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಮುಸ್ಲಿಂ ಯುವಕರು ಮತ್ತು ಇಬ್ಬರು ಹಿಂದೂ ಸಮುದಾಯಕ್ಕೆ ಸೇರಿದ ಯುವತಿಯರು ಮಧ್ಯರಾತ್ರಿ 12 ಘಂಟೆಯ ಬಳಿಕ ಕೊಟ್ಟಾರ ಸಮೀಪ ತಿರುಗಾಡುತ್ತಿದ್ದರು ಎನ್ನಲಾಗಿದೆ. ಇವರನ್ನು ಬಜರಂಗದಳದ ಕಾರ್ಯಕರ್ತರು ತಡೆದಿದ್ದಾರೆ. ಹಾಗೂ ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸುವ ಮೊದಲು ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಟ್ವೀಟರ್ ನಲ್ಲಿ ಪ್ರತಿಷ್ಠಿತ ಅಂಗ್ಲ ಮಾಧ್ಯಮದ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ. ಇದೊಂದು ನೈತಿಕ ಪೊಲೀಸ್‌ಗಿರಿ ಎಂದು ಅವರು ಆರೋಪಿಸಿದ್ದಾರೆ.
An incident of moral policing reported in #Mangalore. #bajrangdal members harassed an interfaith couple for roaming in the night. They beat up the #Muslim boy before he was handed over to police. #Karnataka pic.twitter.com/2eTGCKo4Xt
— Imran Khan (@KeypadGuerilla) December 11, 2022
ನಿನ್ನೆ ರಾತ್ರಿ ಏನಾಯಿತು ?
ಮೂಲಗಳ ಪ್ರಕಾರ ಒಂದು ಧರ್ಮಕ್ಕೆ ಸೇರಿದ ಯುವಕರು ಇನ್ನೊಂದು ಧರ್ಮಕ್ಕೆ ಸೇರಿದ ಇಬ್ಬರು ಯುವತಿಯರು ಕೊಟ್ಟಾರ ಬಳಿ ತಿರುಗಾಡುತ್ತಿದ್ದಾಗ ಯುವಕರ ತಂಡವೊಂದು ಅವರನ್ನು ತಡೆದು ಪ್ರಶ್ನಿಸಿದೆ. ಈ ವೇಳೆ ಅವರು ಹೊಟೇಲ್ ನಲ್ಲಿ ಊಟ ಮಾಡಲು ಬಂದಿರುವುದಾಗಿ ಉತ್ತರಿಸಿದ್ದಾರೆ. ಇದಕ್ಕೆ ಯುವಕರ ತಂಡವು ಇಷ್ಟು ತಡರಾತ್ರಿಗೆ ಯಾವ ಹೋಟೆಲ್ ಓಪನ್ ಇದೆ ಎಂದು ತೋರಿಸಿ ಎಂದು ಆ ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಯುವತಿಯರ ಜತೆಗಿದ್ದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗುತ್ತಿದ್ದೆ. ಆದರೇ ಹಲ್ಲೆ ನಡೆಸಿಲ್ಲ ತರಾಟೆಗೆ ತೆಗೆದುಕೊಂಡಿರುವುದು ಮಾತ್ರ ಎಂದು ವಿರುದ್ದ ಬಣದವರು ಹೇಳುತ್ತಿದ್ದಾರೆ. ಆದರೇ ಈ ಘಟನೆಯನ್ನು ಯಾರೋ ಮೊಬೈಲ್ ಫೋನ್ ನಲ್ಲಿ ಚಿತ್ರಿಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಲ್ಲೆ ನಡೆದಿದೆಯೇ ಎನ್ನುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಆದರೇ ಈ ಬಗ್ಗೆ ಯಾವುದೇ ದೂರು ಬಂದ ಬಗ್ಗೆ ತಿಳಿದು ಬಂದಿಲ್ಲ.

ರಾತ್ರಿ 12 ಗಂಟೆಯ ಬಳಿಕ ಅಂತ ಯಾವೂದಾದ್ರೂ ಹೋಟೆಲ್ ಕೊಟ್ಟಾರದಲ್ಲಿ ಕಾರ್ಯಚರಿಸುತ್ತಿದ್ದರೆ ಪೊಲೀಸರು ಇದರ ಬಗ್ಗೆ ಕೂಡಲೇ ಗಮನಿಸಬೇಕು ಎಂದು ಬಜರಂಗದಳ ಕಾರ್ಯಕರ್ತರು ಘಟನೆಯ ಬಳಿಕ ಆಗ್ರಹಿಸಿದ್ದಾರೆ.
ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಜರುಗುತ್ತಿವೆ. ಆದರೆ ಇದಕ್ಕೆ ಕಡಿವಾಣ ಹಾಕುವ ಕೆಲಸಗಳು ಪೊಲೀಸ್ ಇಲಾಖೆಯಿಂದ ನಡೆಯುತ್ತಿಲ್ಲ.