ಕಡಬ : ಡಿ 9 : ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಶಾಖಾ ವ್ಯವಸ್ಥಾಪಕ ಕೌಡೂರು – ಆರುವಾರ ಬಾಳಿಕೆ , ಸಂತೋಷ್ ರೈ ಸಬಲೂರು (60ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಡಿ.8ರಂದು ನಿಧನರಾಗಿದ್ದಾರೆ. ಮೃತರು ಮೃತರು ಪತ್ನಿ ಕಾಣಿಯೂರು ಸರಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕಿ ಶಶಿಕಲಾ ರೈ, ಪುತ್ರಿ ಧೃತಿ ರೈ, ಸಹೋದರರಾದ ಆಗ್ವಾರ ಪುರಂದರ ರೈ, ನ್ಯಾಯವಾದಿ ದಿನಕರ ರೈ, ಜವಾಹಾರ್ ರೈ, ಪ್ರಕಾಶ್ ರೈ, ಸಹೋದರಿಯರಾದ ಪವಿತ್ರಾ ರೈ, ಸೇವಂತಿ ಶೆಟ್ಟಿಯವರನ್ನು ಅಗಲಿದ್ದಾರೆ.
ಸಂತೋಷ್ ರೈಯವರಿಗೆ ವಾರದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಅವರನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಡಿ.8ರಂದು ಮನೆಗೆ ಕರೆದುಕೊಂಡು ಬರಲಾಗಿತ್ತು. ಮಧ್ಯಾಹ್ನದ ವೇಳೆಗೆ ಅವರು ನಿಧನರಾಗಿದ್ದಾರೆ.
ಸಂತೋಷ್ ರೈಯವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಖಾ ವ್ಯವಸ್ಥಾಪಕರಾಗಿದ ಅವರು ಕಳೆದ ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಜತೆಗೆ ದೈವದ ಮಧ್ಯಸ್ಥರಾಗಿಯೂ ಗುರುತಿಸಿಕೊಂಡಿದ್ದರು.
ಇವರು ಆಲಂಕಾರು ವಲಯ ಬಂಟರ ಸಂಘದ ಕೋಶಾಧಿಕಾರಿಯಾಗಿ, ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರಾಗಿ, ದೇವಸ್ಥಾನದ ಜೀರ್ಣೋದ್ದಾರ ಸಮಿತಿ, ಏಣಿತ್ತಡ್ಕ ಶಿರಾಡಿ ದೈವಸ್ಥಾನದ ಆಡಳಿತ ಮೊಕ್ರೇಸರರಾಗಿ, ಆಲ್ವಾರ ಬಾಳಿಕೆ ಟ್ರಸ್ ನ ಅಧ್ಯಕ್ಷರಾಗಿ, ಕೊಯಿಲ-ರಾಮಕುಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಸಬಳೂರು ಸರಕಾರಿ ಶಾಲಾ ಸುವರ್ಣಮಹೋತ್ಸವ ಸಮಿತಿ ಸೇರಿದಂತೆ ಹಲವು ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.