Ad Widget

ದೆಹಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನ ಸೆಳೆದ ಕರ್ನಾಟಕದ ‘ನಾರೀಶಕ್ತಿ’ ಸ್ಥಬ್ದಚಿತ್ರ

FB_IMG_1674729426033
Ad Widget

Ad Widget

Ad Widget

ನವದೆಹಲಿ, ಜ 26: ದೆಹಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿವಿಧ ರಾಜ್ಯಗಳ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ಸ್ತಬ್ರಚಿತ್ರಗಳ ಪ್ರದರ್ಶನ ನಡೆಯಿತು. ಕರ್ನಾಟಕದ ನಾರೀಶಕ್ತಿಯನ್ನು ಬಿಂಬಿಸುವ ಸ್ತಬ್ದಚಿತ್ರ ಎಲ್ಲರ ಗಮನ ಸೆಳೆಯಿತು.

Ad Widget

Ad Widget

Ad Widget

Ad Widget

Ad Widget

ದೇಶಾದ್ಯಂತ ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಸ್ತಬ್ದಚಿತ್ರಗಳು ಆಕರ್ಷಕವಾಗಿದ್ದವು. ವಿವಿಧ ರಾಜ್ಯಗಳು ತಮ್ಮ ರಾಜ್ಯದ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಿದರು.

Ad Widget

Ad Widget

Ad Widget

Ad Widget

Ad Widget

ಕರ್ನಾಟಕದಿಂದ ನಾರಿಶಕ್ತಿ ಸ್ತಬ್ದಚಿತ್ರದ ಪ್ರದರ್ಶನ ನಡೆಯಿತು. ಇದರಲ್ಲಿ ಸಾವಿರಾರು ಮಂದಿಗೆ ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ, ವನಸಿರಿ ಬೆಳೆಸಲು ಶ್ರಮಿಸಿದ ತುಳಸಿ ಗೌಡ ಹಾಲಕ್ಕಿ ಹಾಗೂ ಮರಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಿದ ವೃಕ್ಷ ಮಾತೆಸಾಲುಮರದ ತಿಮ್ಮಕ್ಕ ಅವರ ಪ್ರತಿರೂಪವನ್ನು ಪ್ರದರ್ಶಿಸಲಾಯಿತು. ಆ ಮೂಲಕ ಮೂವರು ನಾರಿಯರು ಸಮಾಜ, ಪ್ರಕೃತಿಗೆ ನೀಡಿದ ನಿಸ್ವಾರ್ಥ ಸೇವೆಗೆ ಗೌರವ ನೀಡುವ ಪ್ರಯತ್ನ ನಡೆಯಿತು.

ಕರ್ನಾಟಕದ ಟ್ಯಾಬ್ಲೋ ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸುವ ಮೂಲಕ ನೆರೆದವರ ಮನಸೂರೆಗೊಳಿಸಿತು.

Ad Widget

Ad Widget

Ad Widget

Ad Widget

ಈ ಬಾರಿ ಸ್ಥಬ್ದಚಿತ್ರ ಕ್ಕೆ ರಾಜ್ಯಕ್ಕೆ ಅವಕಾಶ ಇಲ್ಲ ಎಂಬ ವಿಚಾರವಾಗಿ ಚರ್ಚೆ ಪ್ರಾರಂಭವಾಗಿತ್ತು, ನಂತರ ಕರ್ನಾಟಕಕ್ಕೆ ಅವಕಾಶ ಸಿಕ್ಕಿತು. ಕಳೆದ ವರ್ಷ ಕೇರಳದ ನಾರಾಯಣ ಗುರು ಸ್ಥಬ್ದಚಿತ್ರ ಅವಕಾಶ ನಿರಾಕರಿಸಿದ್ದು ಭಾರಿ ದೊಡ್ಡ ವಿವಾದ ವಾಗಿತ್ತು. ಆಗ ಕೆಲ ನಾಯಕರು ಮುಂದಿನ ವರ್ಷ ಕರ್ನಾಟಕದಿಂದ ನಾರಾಯಣ ಗುರು ಚಿತ್ರ ಕಳಿಸುತ್ತೇವೆ ಎಂದಿದ್ದರು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: