ನವದೆಹಲಿ: ಟೇಕಾಫ್ ವೇಳೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ(Tejasvi Surya) ವಿಮಾನದ ‘ಎಮರ್ಜೆನ್ಸಿ ಡೋರ್’ ತೆಗೆಯಲು ಯತ್ನಿಸಿದರು ಎನ್ನಲಾದ ವಿವಾದ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಟ್ರೆಂಡ್ ಆಗಿದ್ದು ತೇಜಸ್ವಿ ಸೂರ್ಯನಿಗೆ ನೆಟ್ಟಿಗರು ಪಾಠ ಮಾಡುತ್ತಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಒಂದು ತಿಂಗಳ ಹಿಂದೆ ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣಿಕನೊಬ್ಬ ಇಂಡಿಗೋ ಫ್ಲೈಟ್ 6E 7339 ರಲ್ಲಿ ATR ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ಅನ್ಲಾಕ್ ಮಾಡಿದ್ದರು ಎನ್ನಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಕಳೆದ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆದರೆ ಇದ್ಯಾವುದರ ಬಗ್ಗೆಯೂ ಮಾಹಿತಿ ಹೊರಬಿಟ್ಟುಕೊಡದ ಇಂಡಿಗೋ ವಿಮಾನ ಸಂಸ್ಥೆಯ ವಿರುದ್ದ ಸಹ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆಯನ್ನು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಡಿಜಿಸಿಎ ಇದನ್ನು ದೃಢಪಡಿಸಿದೆ.
ವಿಮಾನಯಾನ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸಂಸದ ತೇಜಸ್ವಿ ಸೂರ್ಯ ಅವರಲ್ಲಿ ಕ್ಷಮೆಯಾಚಿಸಲು ಕೋರಲಾಗಿದ್ದು, ಲಿಖಿತವಾಗಿ ಪತ್ರವನ್ನು ಇಂಡಿಯೋ ವಿಮಾನ ಸಂಸ್ಥೆ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿರುವುದು ವರದಿಯಾಗಿದ್ದು, ವಿಮಾನ ಹಾರಾಟಕ್ಕೂ ಮುನ್ನ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಸೂಚನೆ ನೀಡಲಾಗುತ್ತಿತ್ತು. ಈ ವೇಳೆ ತೇಜಸ್ವಿ ಸೂರ್ಯ ತುರ್ತು ನಿರ್ಗಮನದ ಬಳಿ ಕುಳಿತಿದ್ದರು. ಎಲ್ಲವನ್ನೂ ಆಲಿಸಿದ ತೇಜಸ್ವಿ ಸೂರ್ಯ, ಇದಕ್ಕಿದ್ದಂತೆ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದಾರೆ. ತಕ್ಷಣ ಸಿಬ್ಬಂದಿಗಳು ಕೆಳಗಿಳಿಸಿ, ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಎಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ವಿಮಾನದೊಳಗೆ ಮಾಡಿಕೊಂಡ ಅವಾಂತರದಿಂದ ವಿಮಾನ ಮತ್ತೆ ಹಾರಾಟ ನಡೆಸಲು ಸುಮಾರು ಎರಡು ಗಂಟೆಯಷ್ಟು ತಡವಾಗಿದೆ. ಹೀಗಾಗಿ ಲಿಖಿತ ಪತ್ರದ ಮೂಲಕ ತೇಜಸ್ವಿ ಸೂರ್ಯ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಸದ್ಯ ತೇಜಸ್ವಿ ಸೂರ್ಯ ಮಾಡಿರುವ ಎಡವಟ್ಟನ್ನು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ. ಆಟವಾಡುವ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ ತೇಜಸ್ವಿ ಸೂರ್ಯ ನಿದರ್ಶನವಾಗಿದ್ದಾರೆ. ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ ಎಂದು ಪ್ರಶ್ನಿಸಿದೆ. ಅಲ್ಲದೆ ದೋಸೆ ತಿನ್ನುವ ಚಪಲ ಹೆಚ್ಚಾಗಿ “ಎಮರ್ಜೆನ್ಸಿ ಎಕ್ಸಿಟ್” ಅಗಲು ತೇಜಸ್ವಿ ಸೂರ್ಯ ಹೊರಟಿದ್ದರೇ ಎಂದು ಕಾಲೆಳೆದಿದೆ.
ಆಡೋ ಮಕ್ಕಳಿಗೆ ಯಜಮಾನಿಕೆ ಕೊಟ್ಟರೆ ಏನಾಗಲಿದೆ ಎಂಬ ಮಾತಿಗೆ @Tejasvi_Surya ನಿದರ್ಶನವಾಗಿದ್ದಾರೆ!
— Karnataka Congress (@INCKarnataka) January 17, 2023
ವಿಮಾನದ ತುರ್ತು ನಿರ್ಗಮನ ಬಾಗಿಲು ತೆಗೆದು ಮಕ್ಕಳ ಚೇಷ್ಟೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ
ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದೇಕೆ?
ದೋಸೆ ತಿನ್ನುವ ಚಪಲ ಹೆಚ್ಚಾಗಿ "ಎಮರ್ಜೆನ್ಸಿ ಎಕ್ಸಿಟ್" ಅಗಲು ಹೊರಟಿದ್ದೇ? pic.twitter.com/jeZPeVtwcb
एक बददिमाग़ आदमी फ़्लाइट में इमर्जेन्सी exit door खोल देता है जिससे फ़्लाइट 3 घंटे देर से उड़ी, लोगों को असुविधा और जोखिम में लाने वाले का नाम 1 महीने तक सामने नहीं आया
— Supriya Shrinate (@SupriyaShrinate) January 17, 2023
सत्ता के नशे में चूर – वो सांसद रोज़ नफ़रत फैलाता है
This spoilt Tejasvi Surya needs to be taught a lesson.
ಸಂಸದ @Tejasvi_Surya ವಿಮಾನದ ಸುರಕ್ಷಾ ನಿಯಮಗಳ ವಿರುದ್ಧವಾಗಿ ತೂರಿ ಎಮರ್ಜೆನ್ಸಿ ಎಕ್ಸಿಟ್ ಬಾಗಿಲನ್ನು ತೆರೆದಿದ್ದ ಸಂಗತಿಯನ್ನು ಸರ್ಕಾರ ಮುಚ್ಚಿಟ್ಟಿದ್ದೇಕೆ?
— Karnataka Congress (@INCKarnataka) January 17, 2023
ಸಂಸದರ ಉದ್ದೇಶವೇನಿತ್ತು? ಯಾವ ಅನಾಹುತ ಸೃಷ್ಟಿಸುವ ಯೋಜನೆ ಇತ್ತು? ನಂತರ ಕ್ಷಮಾಪಣೆ ಕೋರಿ ಹಿಂದಿನ ಸೀಟಿಗೆ ವರ್ಗಾವಣೆಯಾಗಿದ್ದೇಕೆ?https://t.co/PMz86DcjUT