Connect with us

ಮಂಗಳೂರು

Ramadan 2023 : ದ.ಕ, ಉಡುಪಿ, ಕೇರಳದಲ್ಲಿ ಮಾ.23 ರಿಂದ ಪವಿತ್ರ ರಂಝಾನ್ ವೃತ ಆರಂಭದ.ಕ, ಉಡುಪಿ, ಕೇರಳದಲ್ಲಿ ಮಾ.23 ರಿಂದ ಪವಿತ್ರ ರಂಝಾನ್ ವೃತ ಆರಂಭ

Ad Widget

Ad Widget

Ad Widget

Ad Widget Ad Widget


ಪುತ್ತೂರು: ಮುಸ್ಲಿಮರ ಪವಿತ್ರ ರಂಝಾನ್ ವೃತ ನಾಳೆಯಿಂದ (ಮಾ.23) ರಿಂದ ಪ್ರಾರಂಭಗೊಳ್ಳಲಿದೆ.
30 ದಿವಸಗಳ ಕಾಲ ಮುಸ್ಲಿಮರು ಉಪವಾಸ ವೃತವನ್ನು ಕೈಗೊಳ್ಳಲಿದ್ದು ಅನ್ನ ಪಾನೀಯವನ್ನು ತೊರೆದು ವೃತಾಚರಣೆ ಮಾಡಲಿದ್ದಾರೆ. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಇಫ್ತಾರ್ ಕೂಟಗಳು ನಿತ್ಯ ನಡೆಯಲಿದೆ.

Ad Widget

Ad Widget

Ad Widget

Ad Widget

Ad Widget

ದ.ಕ. ಉಡುಪಿ ಜಿಲ್ಲೆ ಸೇರಿದಂತೆ ಕೇರಳದಲ್ಲಿ ವೃತ ನಾಳೆಯಿಂದ ಆರಂಭವಾಗಲಿದೆ ಎಂದು ಖಾಝಿಗಳು ಆದೇಶಿಸಿದ್ದಾರೆ.

Ad Widget

Ad Widget

ಪವಿತ್ರ ರಂಜಾನ್ ನ ಪ್ರಥಮ ಚಂದ್ರದರ್ಶನವು ಬುಧವಾರ ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿದೆ.‌ ಹೀಗಾಗಿ ಗುರುವಾರದಿಂದ ರಂಜಾನ್ ಉಪವಾಸ ಆಚರಿಸಲು ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙ್ಗಳ್ ಅಲ್ ಬುಖಾರಿ ಹಾಗೂ ಭಟ್ಕಳ ಚಂದ್ರದರ್ಶನ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ad Widget

Ad Widget
Click to comment

Leave a Reply

ಮಂಗಳೂರು

Brijesh Chowta-ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತೆ ; ಶಕ್ತಿನಗರ ಕಾಲ್ನಡಿಗೆ ರೋಡ್ ಶೋದಲ್ಲಿ ಕ್ಯಾ. ಬ್ರಿಜೇಶ್ ಚೌಟ

Ad Widget

Ad Widget

Ad Widget

Ad Widget Ad Widget

ಮಂಗಳೂರು, ಎ.24 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಚುನಾವಣಾ ಪ್ರಚಾರದ ಕೊನೆಯಲ್ಲಿ ಮಂಗಳೂರು ನಗರದ ಶಕ್ತಿನಗರದಲ್ಲಿ ಕಾಲ್ನಡಿಗೆಯಲ್ಲಿ ರೋಡ್ ಶೋ ನಡೆಸಿದ್ದಾರೆ. ಶಕ್ತಿನಗರದಿಂದ ನಾಲ್ಯಪದವು ಶತಮಾನೋತ್ಸವ ಶಾಲೆಯ ವರೆಗೂ ನೂರಾರು ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಬಂದು ಮತಯಾಚನೆ ಮಾಡಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಇದೇ ವೇಳೆ ಮಾತನಾಡಿದ ಬ್ರಿಜೇಶ್ ಚೌಟ, ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಶಕ್ತಿಗಳೆಲ್ಲ ಒಂದಾಗಿವೆ. ಎಸ್ಡಿಪಿಐ ಅವರಲ್ಲಿ ಅಭ್ಯರ್ಥಿ ಯಾರೆಂದು ಕೇಳಿದರೆ ಕಾಂಗ್ರೆಸ್, ಕಮ್ಯುನಿಸ್ಟರಲ್ಲಿ ಕೇಳಿದರೂ ಕಾಂಗ್ರೆಸ್ ಎಂದೇ ಹೇಳುತ್ತಾರೆ. ಕಾಂಗ್ರೆಸಿನವರಲ್ಲಿ ಕೇಳಿದರೆ ಅಭ್ಯರ್ಥಿ ಬಗ್ಗೆ ಸಂಶಯ ಇದೆ. ಅವರಲ್ಲೇ ಮನೆಯೊಂದು ಮೂರು ಬಾಗಿಲು ಎನ್ನುವ ರೀತಿ ಇದೆ. ಹೀಗಾಗಿ ಕಾಂಗ್ರೆಸಿಗೆ ಮತ ನೀಡಿದರೆ ಎಸ್ಡಿಪಿಐ ಕೈ ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.

Ad Widget

Ad Widget

ನೀವು ನೈಜ ದೇಶಭಕ್ತರು, ದೇಶಕ್ಕಾಗಿ ಮತ

Ad Widget

Ad Widget

ಬುಧವಾರ ಬೆಳಗ್ಗೆ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆ, ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿಯಿತ್ತ ಕ್ಯಾ. ಬ್ರಿಜೇಶ್ ಚೌಟ, ನಿಮಗೆ ರಾಷ್ಟ್ರಭಕ್ತಿ, ರಾಷ್ಟ್ರಸೇವೆಯ ಬಗ್ಗೆ ಪ್ರತ್ಯೇಕ ಹೇಳಬೇಕಾಗಿಲ್ಲ. ನೀವೇ ನೈಜ ದೇಶ ಭಕ್ತರು. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಬಲತುಂಬಿದವರು ವೈದ್ಯರು ಮತ್ತು ಆರೋಗ್ಯ ಸಿಬಂದಿ. ನಿಮ್ಮನ್ನು ಕೊರೊನಾ ವಾರಿಯರ್ಸ್ ಎಂಬುದಾಗಿ ಕೊಂಡಾಡಿದ್ದರು ಎಂದರಲ್ಲದೆ, ಪ್ರಧಾನಿಯನ್ನು ಮೂರನೇ ಬಾರಿಗೆ ಗದ್ದುಗೆ ಏರಿಸುವಲ್ಲಿ ನಿಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.

Ad Widget

Ad Widget
Continue Reading

ಮಂಗಳೂರು

Congress roadshow-ಪಂಪ್’ವೆಲ್’ನಿಂದ ಕಣ್ಣೂರುವರೆಗೆ ಸಾಗಿದ ಕಾಂಗ್ರೆಸ್ ರೋಡ್ ಶೋ

Ad Widget

Ad Widget

Ad Widget

Ad Widget Ad Widget

ಮಂಗಳೂರು: ಲೋಕಸಭೆ ಚುನಾವಣೆಯ ಕೊನೆ ದಿನವಾದ ಬುಧವಾರ ಮಂಗಳೂರಿನ ಪಂಪ್’ವೆಲ್’ನಿಂದ ಕಣ್ಣೂರುವರೆಗೆ ರೋಡ್ ಶೋ ಜರಗಿತು.

Ad Widget

Ad Widget

Ad Widget

Ad Widget

Ad Widget

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಸದಸ್ಯ ಐವನ್ ಡಿಸೋಜಾ, ಕಾರ್ಪೋರೇಟರ್ ಗಳಾದ ಶಶಿಧರ್ ಹೆಗ್ಡೆ, ಅಶ್ರಫ್, ಕೇಶವ ಮರೋಳಿ, ನವೀನ್ ಡಿಸೋಜಾ, ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ದಾಸ್, ಪ್ರಮುಖರಾದ ಯು.ಟಿ. ಫರ್ಜಾನ್, ರವಿರಾಜ್ ಪೂಜಾರಿ, ರಮಾನಂದ್ ಪೂಜಾರಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Ad Widget

Ad Widget

ಗರೋಡಿ, ದರ್ಗಾ ಭೇಟಿ:
ರೋಡ್ ಶೋ ನಡುವೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಕಂಕನಾಡಿ ಬ್ರಹ್ಮಬೈದರ್ಕಳ ಗರೋಡಿ, ಅಡ್ಯಾರ್ ಕಣ್ಣೂರು ಶೇಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್’ಗೆ ಭೇಟಿ ನೀಡಿದರು.

Ad Widget

Ad Widget

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬುಧವಾರ ಸಂಜೆ ಉರ್ವ, ಬಂದರು ಪ್ರದೇಶದಲ್ಲಿ ರೋಡ್ ಶೋ ನಡೆಸಿ, ಮತ ಯಾಚಿಸಿದರು.

Ad Widget

Ad Widget

ತೆರೆದ ವಾಹನದ ಮುಂಭಾಗದಿಂದ ಸಾಗುತ್ತಿದ್ದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಾ ಸಾಗಿದರು. ನಾಸಿಕ್ ಬ್ಯಾಂಡ್ ಸದ್ದು ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

Continue Reading

ಮಂಗಳೂರು

Janardhana Poojary-ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ- ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಪದ್ಮರಾಜ್ ಆರ್ ಪೂಜಾರಿಯನ್ನು ಗೆಲ್ಲಿಸುವ ಮೂಲಕ ಆಗಬೇಕಿದೆ :ಜನಾರ್ದನ ಪೂಜಾರಿ

Ad Widget

Ad Widget

Ad Widget

Ad Widget Ad Widget

ದೈವ-ದೇವರ ನಾಡಾಗಿರುವ ಈ ತುಳುನಾಡು ದೇವರು, ದೇವಾಲಯಗಳನ್ನೊಳಗೊಂಡ ಸತ್ಯ, ಧರ್ಮ, ನಿಷ್ಠೆಗೆ ಪ್ರಾಮುಖ್ಯವನ್ನು ನೀಡುವ ನಾಡಾಗಿದೆ. ಈ ನಾಡಿನಲ್ಲಿ ಪರಸ್ಪರ ದ್ವೇಷ, ಅಧರ್ಮವನ್ನು ಕೊಣೆಗಾಣಿಸಿ, ಸತ್ಯ, ಧರ್ಮ, ಸೌಹಾರ್ದಕ್ಕೆ ಗೆಲುವು ಆಗಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡ ಮತೀಯ ಸೂಕ್ಷ್ಮ ಎಂಬ ಹಣೆಪಟ್ಟಿ ಹೋಗಬೇಕು. ಅಪಪ್ರಚಾರವನ್ನು ಮೆಟ್ಟಿ ನಿಂತು, ಜನರು ಸತ್ಯ – ಧರ್ಮವನ್ನು ಗೆಲ್ಲಿಸಬೇಕಿದೆ.

Ad Widget

Ad Widget

Ad Widget

Ad Widget

Ad Widget

ಹಿಂದೂ ಅಂದರೆ ಮಾನವೀಯತೆಯ ಧರ್ಮ, ಮಾನವೀಯತೆಗಿಂತಲೂ ಮಿಗಿಲಾದ ಧರ್ಮವಿಲ್ಲ. ಪದ್ಮರಾಜ್ ಇದನ್ನು ಚೆನ್ನಾಗಿ ಪಾಲನೆ ಮಾಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆಲುವಿನ ಮೂಲಕ ಜನತೆಯ ಅಭಿವೃದ್ಧಿಯ ಕನಸಿಗೆ ಚೈತನ್ಯ ಸಿಗಬೇಕು. ನನ್ನ ಶಿಷ್ಯನ ಗೆಲುವನ್ನು ಕಣ್ಣಾರೆ ನೋಡಬೇಕು ಎಂದು ಹಿರಿಯ ಕಾಂಗ್ರೆಸಿಗ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದ್ದಾರೆ.

Ad Widget

Ad Widget

ಈ ಲೋಕಸಭಾ ಚುನಾವಣೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರಗಳು, ಬೀಚ್, ಪಶ್ಚಿಮಘಟ್ಟ ಇತ್ಯಾದಿ ಪ್ರವಾಸೋದ್ಯಮದ ನೈಸರ್ಗಿಕ ಸೌಂದರ್ಯದ ದ.ಕ. ಜಿಲ್ಲೆ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಜನರು ಅಭಿವೃದ್ಧಿಗಾಗಿ ಬೆಂಬಲಿಸಬೇಕು ಎಂದು ಹೇಳಿದರು.

Ad Widget

Ad Widget

ಭೂಮಿ ಒಡೆತನ ನೀಡಿದ್ದು ಕಾಂಗ್ರೆಸ್
ದ.ಕ. ಜಿಲ್ಲೆಗೆ ಬಂದರು, ವಿಮಾನಯಾನ, ರೈಲು, ರಸ್ತೆ ಸಾರಿಗೆ ನೀಡಿದ್ದು ಕೇಂದ್ರದ ಕಾಂಗ್ರೆಸ್ ಸರ್ಕಾರ. ಭೂಮಸೂದೆ ಜಾರಿ ಮೂಲಕ ನಾಡಿನ ಶೇ.80ರಷ್ಟು ಮಂದಿ ಭೂಮಿಯ ಒಡೆಯರಾದರು. 70 ವರ್ಷಗಳಲ್ಲಿ ಏನಾಗಿದೆ ಕೇಳುವವರು ಕಳೆದ 33 ವರ್ಷಗಳಲ್ಲಿ ಜನರಿಗೆ ಏನಾದರೂ ಕೊಡುಗೆ ಸಿಕ್ಕಿದ್ದರೆ ಹೇಳಲಿ ಎಂದರು. ಕಾಂಗ್ರೆಸ್
ಮಾಡಿದ ಅಭಿವೃದ್ಧಿ ಈ ಜಿಲ್ಲೆಯಲ್ಲಿಯೇ ಶಾಶ್ವತವಾಗಿ ನಮ್ಮ ಕಣ್ಣ ಮುಂದಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget

Ad Widget

ಅಭಿವೃದ್ಧಿಗೆ ಚೈತನ್ಯ ಸಿಗಬೇಕು ಎಂದ ಕೇಂದ್ರ ಮಾಜಿ ಸಚಿವ
ಮೋದಿ ಅಲೆ ಎನ್ನುವಂಥದ್ದು ಭ್ರಮೆ. 10 ವರ್ಷಗಳ ಹಿಂದೆ ನೀಡಿದ ಭರವಸೆಗಳಲ್ಲಿ ಒಂದೂ ಈಡೇರಿಸಿಲ್ಲ. ನನ್ನ ಸಾಲ ಮೇಳದಂತಹ ಒಂದು ಯೋಜನೆ ಮೋದಿ ಕೊಟ್ಟಿದ್ದಾರಾ? ಅಭಿವೃದ್ಧಿ ಅಂದರೆ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನವಲ್ಲ, ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವಂತಾಗಬೇಕು ಎಂದರು.

ಹಿಂದುತ್ವದ ಅಮಲಿನಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಮೇಲ್ವರ್ಗದವರು ಅಧಿಕಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲ ತಿಲಾಂಜಲಿ ನೀಡುವ ಕೆಲಸ ಆಗಬೇಕಿದೆ. ಯುವ ಸಮುದಾಯಕ್ಕೆ ಕೆಲಸ ನೀಡಿ ಮುನ್ನಡೆಸುವ ಕೆಲಸ ಮಾಡಬೇಕು. ನಾರಾಯಣ ಗುರುಗಳು, ವಿವೇಕಾನಂದರ ತತ್ವ ಚಿಂತನೆಯನ್ನು ಇಂದಿನ ಯುವ ಸಮಾಜ ಅರ್ಥೈಸಿಕೊಳ್ಳಬೇಕು ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading