ಬಂಟ್ವಾಳ, ಸುಳ್ಯ, ಮಾ 22 : ಅಬಕಾರಿ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ. ವಿಟ್ಲ ಹಾಗೂ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ತಲಾ ಒಬ್ಬನನ್ನು ಬಂಧಿಸಲಾಗಿದೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗುಮನೆ ನಿವಾಸಿ, ಪ್ರಶಾಂತ್ ವೈನ್ ಶಾಪ್ ನ ವೆಂಡರ್ ಪುಷ್ಪರಾಜ ಶೆಟ್ಟಿ, ಮಡಿಕೇರಿ ತಾಲೂಕಿನ, ಕೊಯಿನಾಡು ಗ್ರಾಮದ ಪೆಲ್ತಾಡ್ಕ ನಿವಾಸಿ ಸಚಿನ್ ಬಂಧಿತ ಆರೋಪಿಗಳು.
ಪುಷ್ಪ ರಾಜ್ ಎಂಬವನಿಂದ ಟಿವಿಎಸ್ ಸ್ಕೂಟರ್,2220 ರೂ. ಮೌಲ್ಯದ 5.85 ಲೀಟರ್ ಮದ್ಯ ಹಾಗೂ ನಗದು ರೂ.950 ವಶ ಪಡಿಸಿಕೊಳ್ಳಲಾಗಿದೆ.
ಸಚಿನ್ ಎಂಬವನಿಂದ ಒಂದು ಆಟೋ ರಿಕ್ಷಾ, 3337 ರೂ.ಮೌಲ್ಯದ 8.55 ಲೀ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ.
ಬಂಟ್ವಾಳ : ಗಾಂಜಾ ಸೇವನೆ ಪ್ರಕರಣ, ಓರ್ವನ ಬಂಧನ
ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಷೇಧ ಕಾಯ್ದೆ ಅಡಿಯಲ್ಲಿ ಓರ್ವನನ್ನು ಬಂಧಿಸಿದ ಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದವರ ಪಡ್ಡುಮನೆ ನಿವಾಸಿ ಮೊಹಮ್ಮದ ಶಾಕೀರ್ (22) ಬಂಧಿತ ಆರೋಪಿ.