ಧರ್ಮಸ್ಥಳ : ನ 20: ಅಕ್ರಮ ಗೋ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆ ವಾಹನ ಹಾಗೂ ದನಗಳನ್ನು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ ಘಟನೆ ನ. 20 ರಂದು ಮುಂಜಾನೆ ನಡೆದಿದೆ.
ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಪಾಂಡಿಬೆಟ್ಟುನಿಂದ ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ಗೆ ವಾಹನವೊಂದರಲ್ಲಿ ಗೋಸಾಗಾಟ ನಡೆಯುತ್ತಿದ್ದ ವೇಳೆ ತಿಪ್ಪೆಮಜಲು ಎಂಬಲ್ಲಿ ಕೊಕ್ಕಡ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತರು ಆ ವಾಹನವನ್ನು ತಡೆದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸಿ, ಸೂಕ್ತ ದಾಖಲೆಗಳು ಕಂಡು ಬಾರದ ಹಿನ್ನಲೆಯಲ್ಲಿ ವಾಹನ ಹಾಗೂ ಅದರಲ್ಲಿದ್ದ ಎರಡು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಕೃತ ರೀತಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ನಡೆಯುತ್ತಲೇ ಇದ್ದು, ಪೋಲಿಸರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.
.
