ಕಾಣಿಯೂರು, ನ 12 : ಕಾಣಿಯೂರು ಪೇಟೆಯಲ್ಲಿ ಹಾಡಹಗಲೇ ಅಂಗಡಿಯಿಂದ ರೂ 1.20 ಲಕ್ಷ ನಗದು ಕಳವುಗೈದ ಘಟನೆ ನ.11ರಂದು ನಡೆದಿದೆ.
ದಿವೀಶ್ ಅಂಬುಲ ಎಂಬವರ ಮಾಲೀಕತ್ವದ ತೆಂಗಿನಕಾಯಿ, ಬಾಳೆಗೊನೆ ವ್ಯಾಪಾರ ನಡೆಸುವ ಕಾಣಿಯೂರು ಅಮ್ಮನವರ ದೇವಸ್ಥಾನದ ಮುಂಭಾಗದ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನಲ್ಲಿ ಮೇಜಿನ ಡ್ರಾವರ್‌ನಲ್ಲಿ ಹಣವನ್ನು ಇಟ್ಟಿದ್ದರು. ಮಧ್ಯಾಹ್ನ ದಿವೀಶ್ ಅವರು ಎಂದಿನಂತೆ ಅರ್ಧ ಶಟರ್ ಹಾಕಿ ಊಟಕ್ಕೆ ತೆರಳಿದ ಸಂದರ್ಭದಲ್ಲಿ ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅಂಗಡಿ ಮಾಲ್ಹಕ ದಿವೀಶ್‌ರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸತತ ನಾಲ್ಕನೇ ವರ್ಷದಿಂದ ಕಳ್ಳತನ :
ಸತತ ನಾಲ್ಕನೇ ವರ್ಷದಿಂದ ಕಾಣಿಯೂರು ಪೇಟೆಯಲ್ಲಿ ಕಳ್ಳತನ ನಡೆಯುತ್ತಿದೆ.
ಅಡಿಕೆ ಖರೀದಿ ಅಂಗಡಿ, ಜನರಲ್ ಸ್ಟೋರ್ ಹೀಗೆ ಲಕ್ಷಾಂತರ ರೂಪಾಯಿ ಅಡಿಕೆ, ಹಣ ಕಳ್ಳತನ ನಡೆದಿದೆ. ನಾಲ್ಕು ವರ್ಷದಿಂದ ಸತತ ಕಳ್ಳತನವಾಗುತ್ತಿದ್ದರು ಒಬ್ಬನೇ ಒಬ್ಬ ಕಳ್ಳ ಈವರೆಗೆ ಪತ್ತೆಯಾಗಲಿಲ್ಲ.