ಕೊರೋನಾ ಮಹಾಮಾರಿಯ ಸಂದರ್ಭ ಧಾರ್ಮಿಕತೆಗೆ ಚ್ಯುತಿ ಆಗದಂತೆ ನವರಾತ್ರೋತ್ಸವವನ್ನು ಹೀಗೆ ಆಚರಿಸಿ

Ad Widget

Ad Widget

Ad Widget

ಕೊರೋನಾ ಮಹಾಮಾರಿಯ ಹಿನ್ನೆಲೆಯಲಿ ಎಂದಿನಂತೆ ನಮಗೆ ನವರಾತ್ರಿ ಉತ್ಸವವನ್ನು ಆಚರಿಸಲು ಮಿತಿಗಳು ಇರಬಹುದು. ಇಂತಹ ಸ್ಥಿತಿಯಲ್ಲಿ ‘ನವರಾತ್ರೋತ್ಸವವನ್ನು ಹೇಗೆ ಆಚರಿಸಬೇಕು ?’ ಎನ್ನುವ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ. ಅಂತಹವರಿಗಾಗಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

Ad Widget

(ಟಿಪ್ಪಣಿ : ಈ ಅಂಶಗಳು ಯಾವ ಸ್ಥಳದಲ್ಲಿ ನವರಾತ್ರೋತ್ಸವವನ್ನು ಆಚರಿಸಲು ನಿರ್ಬಂಧವಿದೆಯೋ ಅಥವಾ ಮಿತಿಯಿದೆಯೋ, ಅಂತಹವರಿಗಾಗಿ ಇವೆ. ಯಾವ ಸ್ಥಳದಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಎಂದಿನಂಂತೆ ಉತ್ಸವವನ್ನು ಆಚರಿಸಲು ಸಾಧ್ಯವಿದೆಯೋ, ಆ ಸ್ಥಳಗಳಲ್ಲಿ ಎಂದಿನಂತೆ ಕುಲಾಚಾರವನ್ನು ಪಾಲಿಸಿ)

Ad Widget

Ad Widget

Ad Widget

ಪ್ರಶ್ನೆ : ನವರಾತ್ರೋತ್ಸವದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ಉಡಿ ತುಂಬಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?
ಉತ್ತರ : ನವರಾತ್ರೋತ್ಸವದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ದೇವಿಯ ಉಡಿ ತುಂಬಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ದೇವರ ಕೋಣೆಯಲ್ಲಿ ಕುಲದೇವಿಯ ಉಡಿಯನ್ನು ತುಂಬಬೇಕು. ಉಡಿಯೆಂದು ದೇವಿಗೆ ಅರ್ಪಿಸುವ ಸೀರೆಯನ್ನು ಪ್ರಸಾದವೆಂದು ಉಪಯೋಗಿಸಬಹುದು.

Ad Widget

ಪ್ರಶ್ನೆ : ಲಲಿತಾಪಂಚಮಿಯನ್ನು ಆಚರಿಸಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?
ಉತ್ತರ : ಮನೆಯಲ್ಲಿರುವ ದೇವಿಯೇ ‘ಲಲಿತಾದೇವಿ’ ಆಗಿದ್ದಾಳೆ ಎಂಬ ಭಾವವನ್ನಿಟ್ಟು ಅವಳ ಪೂಜೆಯನ್ನು ಮಾಡಬೇಕು.

Ad Widget

Ad Widget

ಪ್ರಶ್ನೆ : ಧಾನ್ಯ, ಹೂವು ಅಥವಾ ಪೂಜಾಸಾಮಗ್ರಿಗಳು ಸಿಗದಿದ್ದರೆ, ಘಟಸ್ಥಾಪನೆ, ಹಾಗೆಯೇ ಮಾಲಾಬಂಧನಗಳಂತಹ ಧಾರ್ಮಿಕ ಕೃತಿಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?
ಉತ್ತರ : ಘಟಸ್ಥಾಪನೆಗಾಗಿ ಉಪಯೋಗಿಸುವ ಧಾನ್ಯಗಳು ಅಥವಾ ನವರಾತ್ರೋತ್ಸವದಲ್ಲಿ ಕೈಗೊಳ್ಳುವ ಧಾರ್ಮಿಕ ಕೃತಿಗಳಲ್ಲಿ ರಾಜ್ಯಗಳಿಗನುಸಾರ6 ವ್ಯತ್ಯಾಸಗಳಿವೆ. ನವರಾತ್ರೋತ್ಸವವು ಕುಲಪರಂಪರೆಯ ಅಥವಾ ಕುಲಾಚಾರದ ಒಂದು ಭಾಗವಾಗಿದೆ. ಆಪತ್ಕಾಲೀನ ಮಿತಿಯಿಂದಾಗಿ ಘಟಸ್ಥಾಪನೆ ಅಥವಾ ಮಾಲಾಬಂಧನದ ಧಾರ್ಮಿಕ ಕೃತಿಗಳನ್ನು ಎಂದಿನಂತೆ ಮಾಡಲು ಸಾಧ್ಯವಿಲ್ಲದಿದ್ದರೆ, ಲಭ್ಯವಿರುವ ಸಾಮಗ್ರಿಗಳನ್ನು ಉಪಯೋಗಿಸಿ ಎಷ್ಟು ಸಾಧ್ಯವಿದೆಯೋ ಅಷ್ಟು ಮಾಡಬೇಕು. ಇನ್ನುಳಿದ ಎಲ್ಲ ವಿಧಿಗಳನ್ನು ಮನಸ್ಸಿನಿಂದ (ಮಾನಸ ಉಪಚಾರ) ಮಾಡಬೇಕು.

ಪ್ರಶ್ನೆ : ಕುಮಾರಿಕಾ ಪೂಜೆಯನ್ನು ಹೇಗೆ ಮಾಡಬೇಕು ?
ಉತ್ತರ : ಮನೆಯಲ್ಲಿ ಯಾರಾದರೂ ಕುಮಾರಿಯರು ಇದ್ದರೆ, ಅವರ ಪೂಜೆಯನ್ನು ಮಾಡಬೇಕು. ಕುಮಾರಿಯರನ್ನು ಮನೆಗೆ ಕರೆಯಿಸಿ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಅದರ ಬದಲು ಅರ್ಪಣೆಯ ಸದುಪಯೋಗವಾಗುವಂತಹ ಸ್ಥಳಗಳಿಗೆ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡುವ ಸಂಸ್ಥೆಗಳಿಗೆ ಅರ್ಪಣೆಯ ರೂಪದಲ್ಲಿ ಹಣವನ್ನು ಕೊಡಬಹುದು.

ಪ್ರಶ್ನೆ : ಗರಬಾ ನೃತ್ಯ ಅಥವಾ ಕೊಡ ಊದುವುದು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು?
ಉತ್ತರ : ಗರಬಾ ನೃತ್ಯ ಅಥವಾ ಕೊಡ ಊದುವ ಧಾರ್ಮಿಕ ಕೃತಿಗಳ ಮುಖ್ಯ ಉದ್ದೇಶವೆಂದರೆ ದೇವಿಯ ಉಪಾಸನೆಯನ್ನು ಮಾಡುತ್ತ ಜಾಗರಣೆಯನ್ನು ಮಾಡುವುದಾಗಿದೆ. ಈ ಧಾರ್ಮಿಕ ಕೃತಿಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಕುಲದೇವಿಯ ನಾಮಸ್ಮರಣೆ ಅಥವಾ ದೇವಿಪುರಾಣ ಓದುವುದು, ಸಂಕೀರ್ತನೆ ಮಾಡಿ ದೇವಿಯ ಉಪಾಸನೆ ಮಾಡಬೇಕು.

ಪ್ರಶ್ನೆ : ದಸರಾವನ್ನು ಹೇಗೆ ಆಚರಿಸಬೇಕು?
ಉತ್ತರ : ಮನೆಯಲ್ಲಿ ಪ್ರತಿವರ್ಷ ಪೂಜಿಸುತ್ತಿರುವ ಉಪಲಬ್ಧವಿರುವ ಶಸ್ತ್ರಗಳನ್ನು ಮತ್ತು ಉಪಜೀವನದ ಸಾಮಗ್ರಿಗಳ ಪೂಜೆಯನ್ನು ಮಾಡಬೇಕು. ಬನ್ನಿ ಮರದ ಎಲೆಗಳನ್ನು ಒಬ್ಬರಿಗೊಬ್ಬರು ಕೊಡಲು ಸಾಧ್ಯವಿಲ್ಲದಿದ್ದರೆ, ಅದನ್ನು ಕೇವಲ ದೇವರಿಗೆ ಅರ್ಪಿಸಬೇಕು.

ದೃಷ್ಟಿಕೋನ
೧. ಕರ್ಮಕಾಂಡದ ಸಾಧನೆಗನುಸಾರ6 ಆಪತ್ಕಾಲದಿಂದಾಗಿ ಯಾವುದಾದರೊಂದು ವರ್ಷ ಕುಲಾಚಾರದಂತೆ ಯಾವುದಾದರೂ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅಥವಾ ಕರ್ಮದಲ್ಲಿ ಏನಾದರೂ ನ್ಯೂನ್ಯತೆಗಳು ಉಳಿದಿದ್ದರೆ, ಮುಂದಿನ ವರ್ಷ ಅಥವಾ ಮುಂದಿನ ಕಾಲದಲ್ಲಿ ಯಾವಾಗ ಸಾಧ್ಯವಿರುತ್ತದೆಯೋ, ಆಗ ಆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಅಧಿಕ ಉತ್ಸಾಹದಿಂದ ಆಚರಿಸಬೇಕು.

೨. ಕೊರೋನಾ ಮಹಾಮಾರಿಯ ಮೂಲಕ ಆಪತ್ಕಾಲವು ಈಗಾಗಲೇ ಪ್ರಾರಂಭವಾಗಿದೆ. ತ್ರಿಕಾಲಜ್ಞಾನಿ (ದೃಷ್ಟಾರ) ಸಂತರು ಮತ್ತು ಭವಿಷ್ಯ ನುಡಿಯುವವರು ಹೇಳಿದಂತೆ ಭೀಕರ ಆಪತ್ಕಾಲ ಇನ್ನೂ ೨-೩ ವರ್ಷಗಳ ವರೆಗೆ ಮುಂದುವರಿಯಲಿದೆ. ಈ ಕಾಲದಲ್ಲಿ ಎಂದಿನಂತೆ ಧಾರ್ಮಿಕ ಕೃತಿಗಳನ್ನು ಯೋಗ್ಯ ಪದ್ಧತಿಯಂತೆ ಮಾಡಲು6 ಸಾಧ್ಯವಾಗಬಹುದೆಂದು ಹೇಳಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಕರ್ಮಕಾಂಡದ ಬದಲು ನಾಮಸ್ಮರಣೆಯನ್ನು ಸಾಧ್ಯವಾದಷ್ಟು ಹೆಚ್ಚಚ್ಚು ಮಾಡಬೇಕು. ಯಾವುದೇ ಧಾರ್ಮಿಕ ಕೃತಿ, ಉತ್ಸವ ಅಥವಾ ವ್ರತದ ಮುಖ್ಯ ಉದ್ದೇಶ ಭಗವಂತನ ಸ್ಮರಣೆ ಮಾಡಿ ನಮ್ಮಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚಿಸುವುದಾಗಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮಲ್ಲಿರುವ ಸತ್ವಗುಣವನ್ನು ಹೆಚ್ಚಿಸಲು ಕಾಲಾನುಸಾರ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು. ನವರಾತ್ರಿಯ ಕಾಲಾವಧಿಯಲ್ಲಿ ಎಲ್ಲರೂ ಹೆಚ್ಚು ಹೆಚ್ಚು ‘ಶ್ರೀ ದುರ್ಗಾದೇವೈ ನಮಃ’ ಹೀಗೆ ದುರ್ಗಾ ದೇವಿಯ ನಾಮಜಪ ಮಾಡಬೇಕು.

ನವರಾತ್ರಿ ಉತ್ಸವದ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಓದಿ ಸನಾತನದ ಗ್ರಂಥ “ಶಕ್ತಿಯ ಪ್ರಾಸ್ತಾವಿಕ ವಿವೇಚನೆ” ಮತ್ತು “ಶಕ್ತಿಯ ಉಪಾಸನೆ”

ಸಂಗ್ರಹ – ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ,
ಸಂಪರ್ಕ : 9342599299

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: