ಮಂಗಳೂರು: ವಿಶ್ವವಿಖ್ಯಾತ ‘ಮಂಗಳೂರು ದಸರಾ’ವೂ ಈ ಬಾರಿಯೂ ಕಳೆದ ವರ್ಷದಂತೆ ಮೆರವಣಿಗೆ ರಹಿತವಾಗಿ ಕೊವೀಡ್ ನಿಯಮಾವಳಿಗಳ್ಳನ್ನೂ ಅನುಸರಿಸಿ ನಡೆಯಲಿದೆ. ಅ.7ರಿಂದ ಅ.16ರ ವರೆಗೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ದಲ್ಲಿ ವೈಭವಪೂರ್ಣವಾಗಿ ಈ ನವರಾತ್ರಿ ಉತ್ಸವವೂ ನಡೆಯಲಿದೆ. ಪ್ರತಿ ವರ್ಷದಂತೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ‘ಸರ್ಕಾರದ ಆದೇಶದಂತೆ ಈ ಬಾರಿಯೂ ದಸರಾವನ್ನು ಕೋವಿಡ್ ಮಾರ್ಗಸೂಚಿಗಳೊಂದಿಗೆ ನಡೆಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಯ ಬದಲು ಆಹಾರ ಪೊಟ್ಟಣವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.
ಈ ಬಾರಿಯ ದಸಾರ ಪ್ರಯುಕ್ತ ದೇಗುಲದ ಸುತ್ತಮುತ್ತ ಹಾಗೂ ಮಂಗಳೂರು ನಗರದ ರಾಜಬೀದಿಯಲ್ಲಿ ವಿದ್ಯುದ್ದೀಪಾಲಂಕಾರವನ್ನು ಇದೇ ಮೊದಲ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ಮಾಡಲಿದೆ. ಸಾಮಾನ್ಯವಾಗಿ ಕುದ್ರೋಳಿ ಅಡಳಿತ ಮಂಡಳಿ ಅಲಂಕಾರ ಹಾಗೂ ನವರಾತ್ರಿ ಸಮಯ ಅಲಂಕಾರಿಕವಾಗಿ ಹಾಕುವ ವಿದ್ಯುತ್ ದೀಪದ ಖರ್ಚನ್ನು ಭರಿಸುತಿತ್ತು. ಆದರೇ ಈ ಬಾರಿ ಮಹಾನಗರ ಪಾಲಿಕೆ ಸದಸ್ಯರಾದ ರಾಧಕೃಷ್ಣರವರು ಮನಾಪದ ವತಿಯಿಂದ ಹಾಕಿಸುವಂತೆ ಮನವಿ ಮಾಡಿದ್ದರು. ಹೀಗಾಗಿ 38 ಲಕ್ಷ ರೂಪಾಯಿಯನ್ನು ಈ ಸಂಬಂಧ ಈ ಬಾರಿ ಮನಾಪ ವಿನಿಯೋಗಿಸಲಿದೆ. ಸುಮಾರು 7-8 ಕಿಮೀ ಉದ್ದ ಈ ಅಲಂಕಾರಿಕ ವ್ಯವಸ್ಥೆಯನ್ನು ಮನಪಾ ಮಾಡಲಿದೆ.

ಕಠಿನ ಕೊವೀಡ್ ನಿಯಮಾವಳಿ:
‘ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು. ದೇವಸ್ಥಾನದ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನ್‌ಗೊಳಪಡಬೇಕು, ಕ್ಷೇತ್ರ ಆವರಣದಲ್ಲಿ ಅಂತರ ಕಾಪಾಡಬೇಕು, ದೇವಾಲಯ ಮತ್ತು ದರ್ಬಾರ್ ಮಂಟಪದಲ್ಲಿ ಕಡ್ಡಾಯವಾಗಿ ಫೋಟೊ ನಿಷೇಧಿಸಲಾಗಿದೆ’
‘ದಸರಾ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 15ರಿಂದ 20 ಕಲಾ ತಂಡಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಿವೆ. ಕೋವಿಡ್ ಕಾರಣದಿಂದ ಇದನ್ನೂ ವರ್ಚುವಲ್ ಮೂಲಕ ನಡೆಸಲು ಉದ್ದೇಶಿಸಿದ್ದು, ಸ್ಥಳೀಯ ವಾಹಿನಿಯ ಮೂಲಕ ಇದನ್ನು ವೀಕ್ಷಿಸಬಹುದು