Connect with us

ಅಪರಾಧ

ಎಡಿಟೆಡ್ ವಿಡಿಯೋ ಮೂಲಕ ಜನ್ಮದಿನದಂದೇ ಗಾಂಧೀಜಿಗೆ ಅವಮಾನ – ಮಂಗಳೂರಿನ ಯುವಕನ ವಿರುದ್ದ ದೂರು | ಗಾಂಧಿಯ ಅವಮಾನ ದೇಶದ ಅವಮಾನ – ತಪಿತಸ್ಥನ ವಿರುದ್ದ ಕಠಿನ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ ಡಿವೈಎಫ್ಐ

Ad Widget

Ad Widget

Ad Widget

Ad Widget Ad Widget

ಉಳ್ಳಾಲ:ದೇಶದೆಲ್ಲೆಡೆ ರಾಷ್ಟ್ರಪಿತ ಮಹಾತ್ಮಗಾಂಧಿಯವರ  ಜಯಂತಿ ಆಚರಣೆಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿದ ವೀಡಿಯೊವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು, ಯುವಕನ  ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್‌ಐ ದೂರು ನೀಡಿದೆ.

Ad Widget

Ad Widget

Ad Widget

Ad Widget

Ad Widget

ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ವಾಟ್ಸಾಪ್ ನಲ್ಲಿ, ಗಾಂಧೀಜಿ ವೇಷಧಾರಿಯೊಬ್ಬಪಾಶ್ಚಿಮಾತ್ಯ ರಾಷ್ಟ್ರದ  ಯುವತಿಯೊಬ್ಬಳ ತೆ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿರುವ ಎಡಿಟೆಡ್ ವೀಡಿಯೋವನ್ನ ಹರಿಯಬಿಟ್ಟು ವಿಕೃತಿ  ಮೆರೆದಿರುವುದಾಗಿ ಡಿವೈಎಫ್‌ಐ  ಘಟನೆ ದೂರಿನಲ್ಲಿ ಆರೋಪಿಸಿದೆ.

Ad Widget

Ad Widget

ಬ್ರಿಟೀಷರ ಆಳ್ವಿಕೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತಮಹಾತ್ಮ ಗಾಂಧೀಜಿಯನ್ನು ಅವರ ಜನ್ಮ ದಿನದಂದೇ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಾಂಧೀಜಿಯನ್ನು ಅವಮಾನಿಸಿದನೆಂದರೆ ದೇಶವನ್ನೇ ಅವಮಾನಿಸಿದಂತೆ.ಹಾಗಾಗಿ ತಪ್ಪಿತಸ್ಥನವಿರುದ್ದ ಕಠಿಣಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ  ರಾಟ ನಡೆಸುವುದಾಗಿ  ಡಿವೈಎಫ್‌ಐ ಎಚ್ಚರಿಸಿದೆ.

Ad Widget

Ad Widget

ಅವಮಾನಿಸಿದ ಟ್ರೋಲ್ ಪೇಜ್ ಗಳು

Ad Widget

Ad Widget

ಇದರ ಜತೆಗೆ  ಕರಾವಳಿ ಮೂಲದ ಎನ್ನಲಾದ ಎರಡು ಇನ್ಸ್ಟಾಗ್ರಾಮ್ ಟ್ರೋಲ್ ಪೇಜ್ ಗಳು ಸಾಮಾಜಿಕ ತಾಣದಲ್ಲಿ ರಾಷ್ಟ್ರಪಿತ ಗಾಂಧಿ ಭಾವಚಿತ್ರವನ್ನು ದೃಶ್ಯವೊಂದಕ್ಕೆ ಜೋಡಿಸಿ ಅಶ್ಲೀಲ ಹಾಗೂ ಅಸಭ್ಯವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ ಪೇಜ್ ಗಳಾದ ಟ್ರೋ ಮದರೆಂಗಿ ಮತ್ತು ಕುಡ್ಲಾ ಟ್ರೋಲ್ ಪೇಜ್ ಗಳಲ್ಲಿ ಅಶ್ಲೀಲ ನೃತ್ಯವೊಂದಕ್ಕೆ ಗಾಂದೀಜಿಯವರ ಮುಖ ಜೋಡಿಸಿ ಪೋಸ್ಟ್ ಮಾಡಲಾಗಿದೆ.ಈ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು , ಈ ಟ್ರೋಲ್ ಪೇಜ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.

Click to comment

Leave a Reply

ಅಪರಾಧ

Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎಂ. ಶೋಭಾ (48) ಕೊಲೆ ಪ್ರಕರಣದ ಆರೋಪಿ ನವೀನ್‌ ಗೌಡ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಆರೋಪಿ ನವೀನ್‌ ಗೌಡ, ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ. ಕೊಡಿಗೇಹಳ್ಳಿ ಬಳಿಯ ಗಣೇಶ ನಗರದ ಶೋಭಾ ಅವರನ್ನು ಏ. 18ರಂದು ಕೊಲೆ ಮಾಡಿ ಪರಾರಿಯಾಗಿದ್ದ.

Ad Widget

Ad Widget

ಶೋಭಾ ಮಗಳು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ನೆಲೆಸಿದ್ದರು. ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ವಾಸವಿದ್ದರು. ಏ. 18ರಂದು ಬೆಳಿಗ್ಗೆ ಎರಡನೇ ಮಗಳು ತಮ್ಮ ಪತಿ ಮನೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ನವೀನ್ ಗೌಡ, ಶೋಭಾ ಅವರನ್ನು ಕತ್ತು ಹಿಸುಕಿ ಕೊಂದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

Ad Widget

Ad Widget

ಸಾಮಾಜಿಕ ಮಾಧ್ಯಮದಿಂದ ಪರಿಚಯ: ‘ಶೋಭಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದರು. ಅದೇ ಖಾತೆಗೆ ಆರೋಪಿ ನವೀನ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶೋಭಾ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

Ad Widget

Ad Widget

ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದ ಇಬ್ಬರೂ ಮಾತುಕತೆ ಆರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು ಎಂಬ ಮಾಹಿತಿ ಇದೆ. ಭೇಟಿಯಾಗುವುದಾಗಿ ಹೇಳಿದ್ದ ನವೀನ್, ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಅವರ ಮನೆಗೆ ಬಂದು ಹೋಗಿದ್ದ. ಏ. 18ರಂದು ಎರಡನೇ ಬಾರಿ ಮನೆಗೆ ಬಂದಿದ್ದ ನವೀನ್‌ ಹಾಗೂ ಶೋಭಾ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿಸಿದರು.

ಕೊಲೆ ನಂತರ ಆರೋಪಿ ನವೀನ್, ಶೋಭಾ ಅವರ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದ. ಸಲುಗೆ ಕಾರಣಕ್ಕೆ ಈ ಕೊಲೆ ನಡೆದಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

Continue Reading

ಅಪರಾಧ

Everest fish curry-ಎವರೆಸ್ಟ್ ಫಿಶ್‌ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್  ಪತ್ತೆ

Ad Widget

Ad Widget

Ad Widget

Ad Widget Ad Widget

ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್‌ಕರಿ ಮಸಾಲಾ’ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೆಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.

Ad Widget

Ad Widget

Ad Widget

Ad Widget

Ad Widget

ಎಥಿಲೀನ್ ಆಕ್ಸೆಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟಿರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್‌ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್‌ಪಿ ಮುತ್ತಯ್ಯ ಆ್ಯಂಡ್ ಸನ್ಸ್‌ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.

Ad Widget

Ad Widget
Continue Reading

ಸುಳ್ಯ

Kadaba-ಕಡಬ : ಕುಮಾರಧಾರ ನದಿಯಲ್ಲಿ ಮೊಸಳೆ ಮೃತಪಡಲು ಪ್ಲಾಸ್ಟಿಕ್ ಸೇವನೆ ಯೇ ಕಾರಣ – ನದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಪರಿಸರ ಪ್ರೇಮಿಗಳ ಕಿಡಿ

Ad Widget

Ad Widget

Ad Widget

Ad Widget Ad Widget

ಕಡಬ ಸಮೀಪದ ಪುಳಿಕುಕ್ಕು ಬಳಿ ಕುಮಾರಧಾರ ನದಿಯಲ್ಲಿ ಮೃತಪಟ್ಟ ಮೊಸಳೆಯ ಸಾವಿಗೆ ಪ್ಲಾಸ್ಟಿಕ್ ಸೇವನೆ ಮಾಡಿರುವುದೇ ಕಾರಣ ಎನ್ನುವುದು ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ದೃಢಪಟ್ಟಿದೆ. ಮರಣೋತ್ತರ ಪರೀಕ್ಷೆ ವೇಳೆ ಮೃತ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್ ಹಾಗೂ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

Ad Widget

ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿತ್ತು.. ಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ.ಅಜಿತ್ ನಡೆಸಿದರು.

Ad Widget

Ad Widget

ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ ಪ್ಯಾಡ್ ಪತ್ತೆಯಾಗಿತ್ತು. . ಈ ತ್ಯಾಜ್ಯ ಮೊಸಳೆಯ ಹೊಟ್ಟೆಯಲ್ಲಿ ಜೀರ್ಣಗೊಳ್ಳದೆ ಅಸೌಖ್ಯಗೊಂಡು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಇದೊಂದು ಹೆಣ್ಣು ಮೊಸಳೆಯಾಗಿದ್ದು ನಾಲ್ಕು ವರ್ಷ ವಯಸ್ಸಿನದ್ದು ಎಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಏನೆಕಲ್ಲಿನ ನರ್ಸರಿ ಪ್ರದೇಶದಲ್ಲಿ ಮೊಸಳೆ ಕಳೆಬರಹದ ಅಂತ್ಯ ಕ್ರಿಯೆ ನಡೆಸಲಾಯಿತು.

Ad Widget

Ad Widget

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಅರಣ್ಯ ಉಪವಿಭಾಗ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪಂಜ ವಲಯ ಅರಣ್ಯಾಕಾರಿ ಗಿರೀಶ್, ಉಪ ವಲಯಾರಣ್ಯಾಕಾರಿಗಳಾದ ಸುಬ್ರಹ್ಮಣ್ಯ, ಅಜಿತ್ ಮತ್ತಿತರರು ಭಾಘವಹಿಸಿದ್ದರು.
ಕೆಲವು ಕಿಡಿಗೇಡಿಗಳು ಕೋಳಿ ತ್ಯಾಜ್ಯ, ದನ ಕಡಿದು ಮಾಂಸ ಮಾಡಿರುವುದರ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಎಸೆಯುತ್ತಾರೆ. ಗೋ ಕಳ್ಳರು ರಾತ್ರಿ ಹೊತ್ತು ಯಾರೂ ಇಲ್ಲದ ವೇಳೆ ನದಿಗೆ ತ್ಯಾಜ್ಯ ಎಸೆದರೆ, ಕೋಳಿ ತ್ಯಾಜ್ಯ ಎಸೆಯುವವರು ರಾತ್ರಿ ತಮ್ಮ ಅಂಗಡಿ ಬಂದ್ ಮಾಡಿದ ಬಳಿಕ ಜನಸಂದಣೀ ಇಲ್ಲದಿದ್ದ ಸಮಯ ಗಮನಿಸಿ ನದಿಗೆ ಅಥವಾ ತೋಡಿಗೆ ಎಸೆದು ಬರುತ್ತಾರೆ. ಇದರಿಂದ ನೀರು ಕಲುಷಿತಗೊಂಡು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಇನ್ನು ಇದನ್ನು ಸೇವಿಸುವ ಜಲಚರಗಳು ಸಾವನ್ನಪ್ಪುತ್ತಿವೆ. ಇದರ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading