Connect with us

ಪುತ್ತೂರು

Banking Job | ಕರ್ನಾಟಕ ಬ್ಯಾಂಕ್ ನೇಮಕಾತಿಯಲ್ಲಿ ‘ವಿದ್ಯಾಮಾತಾ ಅಕಾಡೆಮಿ’ ಯ ವಿದ್ಯಾರ್ಥಿ ಸುಳ್ಯದ ನಿರಂಜನ್.ಜೆ ಆಯ್ಕೆ – ಸಂಸ್ಥೆಯ ವತಿಯಿಂದ ಸನ್ಮಾನ

Ad Widget

Ad Widget

Ad Widget

Ad Widget Ad Widget


ಸುಳ್ಯ ತಾಲೂಕು ಸಂಪಾಜೆಯ ನಿರಂಜನ್ ಜೆ ರವರು ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆದು 2022-23 ನೇ ಸಾಲಿನ ಕರ್ನಾಟಕ ಬ್ಯಾಂಕ್ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತದ ನೇರ ಸಂದರ್ಶನದಲ್ಲಿ (Banking Job) ಉತ್ತಮ ಸಾಧನೆಯನ್ನು ಮಾಡಿ ಆಯ್ಕೆಯಾಗಿದ್ದಾರೆ.

Ad Widget

Ad Widget

Ad Widget

Ad Widget

Ad Widget


ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಚಟ್ಟೆಕಲ್ಲು ನಿವಾಸಿಯಾಗಿರುವ ನಿರಂಜನ್ ಜೆ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್.ಸಿ ಮಾಡುತ್ತಿದ್ದು, ತನ್ನ ಸ್ನಾತಕೋತ್ತರ ಪದವಿ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಕೂಡ ಪಡೆಯುತ್ತಿದ್ದರು. ತನ್ನ ಪ್ರಥಮ ಪ್ರಯತ್ನದಲ್ಲೇ ಬ್ಯಾಂಕಿಂಗ್ ಪರೀಕ್ಷೆ ಪಾಸಾಗಿರುತ್ತಾರೆ.

Ad Widget

Ad Widget

ಇವರು ಕಲ್ಲುಗುಂಡಿಯಲ್ಲಿ ಕೀರ್ತಿ ಕ್ಲಿನಿಕ್ ಹೊಂದಿರುವ ಡಾ.ಯು.ಪಿ.ಜಯರಾಮ ಮತ್ತು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಶ್ರೀವಿದ್ಯಾ ದಂಪತಿಗಳ ಪುತ್ರರಾಗಿರುತ್ತಾರೆ.

Ad Widget

Ad Widget


ನಿರಂಜನ್ ರವರಿಗೆ ವಿದ್ಯಾಮಾತಾ ಅಕಾಡೆಮಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಅತಿಥಿಗಳಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತದ ಮೊಕ್ತೇಸರರಾದ ಮುಳಿಯ ಶ್ರೀ ಕೇಶವ ಪ್ರಸಾದ ರವರು ಮತ್ತು ಜೆಸಿಐ ಪುತ್ತೂರು ನಿಕಟಪೂರ್ವ ಅಧ್ಯಕ್ಷರಾದ ಶಶಿರಾಜ್ ರೈ ರವರು ಉಪಸ್ಥಿತರಿದ್ದರು.

Ad Widget

Ad Widget


ನಿರಂಜನ್ ರವರನ್ನು ಸನ್ಮಾನಿಸಿದ ಮುಳಿಯ ಕೇಶವ ಪ್ರಸಾದ್ ರವರು “ಕರಾವಳಿ ಭಾಗದಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದರೂ ಕೂಡ ಉತ್ತಮ ಉದ್ಯೋಗ ಕೌಶಲ್ಯತೆಯನ್ನು ನೀಡಿ, ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಬಲ್ಲ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳ ಕೊರತೆಯನ್ನು ವಿದ್ಯಾಮಾತಾ ಅಕಾಡೆಮಿಯು ನೀಗಿಸಿದೆ. ಭಾರತೀಯ ಸೇನೆ, ಪೊಲೀಸ್ ಇಲಾಖೆ, ಬ್ಯಾಂಕಿಂಗ್ ಸೇರಿದಂತೆ ಹತ್ತಾರು ಸರಕಾರಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಈ ಭಾಗದ ವಿದ್ಯಾರ್ಥಿಗಳು ನೇಮಕಾತಿಯಾಗುವಂತೆ ಮಾಡಿದ ಹಿರಿಮೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ. ಒಂದು ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಬ್ಯಾಂಕಿಂಗ್ ಉದ್ಯೋಗಿಗಳು ಕಡಿಮೆಯಾಗುತ್ತಿದ್ದಾರೆ ಎನ್ನುವ ಕೂಗಿನ ಮಧ್ಯೆ ವಿದ್ಯಾಮಾತಾದ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ” ಎಂದು ಶುಭ ಹಾರೈಸಿದರು.


ಸನ್ಮಾನ ಸ್ವೀಕರಿಸಿದ ನಿರಂಜನ್ ಜೆ ರವರು “ಕಾನ ಶ್ರೀ ಶಂಕರನಾರಾಯಣ ಮಠದ ಅನುವಂಶಿಕ ಅರ್ಚಕರಾಗಿರುವ ಶ್ರೀ ಕೇಶವ ಪ್ರಸಾದ ನನ್ನಿಹಿತ್ಲು ರವರ ಸಲಹೆಯ ಮೇರೆಗೆ ನಾನು ವಿದ್ಯಾಮಾತಾ ಅಕಾಡೆಮಿಗೆ ಸೇರಿದ್ದು, ನನ್ನ ಸ್ನಾತಕೋತ್ತರ ಪದವಿ ಜೊತೆಗೆ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ ತರಬೇತಿಯನ್ನು ಪಡೆದುಕೊಂಡು ಪ್ರಥಮ ಪ್ರಯತ್ನದಲ್ಲೇ ಬ್ಯಾಂಕಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದೇನೆ. ಕರ್ನಾಟಕ ಬ್ಯಾಂಕ್ ಚೆನ್ನೈ ಶಾಖೆಗೆ ನಿಯುಕ್ತಿಗೊಳಿಸಿ ನನಗೆ ಆಫರ್ ಲೆಟರ್ ಕೂಡ ಲಭಿಸಿದೆ. ಅರ್ಜಿ ಹಾಕುವುದರಿಂದ ಹಿಡಿದು ಲಿಖಿತ ಪರೀಕ್ಷೆ, ನೇರ ಸಂದರ್ಶನದವರೆಗೂ ತರಬೇತಿ ನೀಡಿ, ಬದುಕಿಗೊಂದು ದಾರಿ ತೋರಿಸಿದ ವಿದ್ಯಾಮಾತಾ ಅಕಾಡೆಮಿಗೆ ನಾನು ಅನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ವಿದ್ಯಾಮಾತಾ ಅಕಾಡೆಮಿಯ ಸ್ಥಾಪಕರಾದ ಭಾಗ್ಯೇಶ್ ರೈ ಯವರು, ಮುಂದೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯಾಗಬೇಕು ಎನ್ನುವ ಗುರಿಯನ್ನು ನೀಡಿದ್ದಾರೆ. ವಿದ್ಯಾಮಾತಾ ಅಕಾಡೆಮಿಯ ಉತ್ತಮ ತರಬೇತಿಯೊಂದಿಗೆ ಆ ಗುರಿಯನ್ನು ಸಾಧಿಸುವ ವಿಶ್ವಾಸ ನನಗಿದೆ” ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.


ಈ ಸಂದರ್ಭದಲ್ಲಿ ಅತಿಥಿಯಾಗಿದ್ದ ಶಶಿರಾಜ್ ರೈ ಯವರು ವಿದ್ಯಾಮಾತಾ ಅಕಾಡೆಮಿಯ ಮುಂದಿನ ಯೋಜನೆಗಳಿಗೆ ಶುಭವನ್ನು ಹಾರೈಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ನಿರಂಜನ್ ಜೆ ರವರ ತಂದೆ ಡಾ.ಯು.ಪಿ.ಜಯರಾಮ್ ರವರು ಮತ್ತು ತಾಯಿ ಶ್ರೀವಿದ್ಯಾ ರವರು ವಿದ್ಯಾಮಾತಾ ಅಕಾಡೆಮಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಮತ್ತು ಸನ್ಮಾನಿತರನ್ನು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಹಾಗೂ ತರಬೇತಿ ಕೇಂದ್ರ
ಹಿಂದೂಸ್ತಾನ್ ಕಾಂಪ್ಲೆಕ್ಸ್ , ಎ. ಪಿ. ಎಂ. ಸಿ. ರೋಡ್, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ದ.ಕ 574201
ಫೋನ್ ನಂ: 9620468869 / 9148935808

Click to comment

Leave a Reply

ದಕ್ಷಿಣ ಕನ್ನಡ

Student harrased in bus ಉಪ್ಪಿನಂಗಡಿ: ‌ ಸ್ಲೀಪರ್ ಕೋಚ್ ಬಸ್‌ನಲ್ಲಿ ವಿದ್ಯಾರ್ಥಿನಿಗೆ ಜತೆ ಸಹ ಪ್ರಯಾಣಿಕನಿಂದ ಕಿರುಕುಳ – ಯುವತಿ ವ್ಯಗ್ರಗೊಳ್ಳುತ್ತಾಳೆ ಕಿಟಕಿಯಿಂದ ಹಾರಿ ಆರೋಪಿ ಪರಾರಿ  – ಮುಂದೇನಾಯಿತು ?  

Ad Widget

Ad Widget

Ad Widget

Ad Widget Ad Widget

ಉಪ್ಪಿನಂಗಡಿ : ಏ 25:  ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯಕೋಮಿನ ಸಹ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಲು ಮುಂದಾದ  ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್‌ನ ಕಿಟಕಿಯಿಂದ ಹಾರಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಮೂಲತಃ ಬಂಟ್ವಾಳ ತಾಲೂಕಿನ ಫರಂಗಿಪೇಟೆ  ನಿವಾಸಿಯಾಗಿರುವ ವಿದ್ಯಾರ್ಥಿನಿಯು ಬೆಂಗಳೂರಿನಲ್ಲಿ ಫ್ಯಾಶನ್ ಡಿಸೈನಿಂಗ್ ಕಲಿಯುತ್ತಿದ್ದು, ಊರಿಗೆ ಹೋಗುವ ಸಲುವಾಗಿ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್‌ನಲ್ಲಿ (ಕೆಎ-51 ಎಡಿ-7116 ನೇ ನೋಂದಣಿಯ ಬಸ್ಸಿನಲ್ಲಿ ) ಪ್ರಯಾಣಿಸುತ್ತಿದ್ದಳು. ಬಸ್ ಸಕಲೇಶಪುರ ಕಳೆದು  ಬೆಳಿಗ್ಗಿನ ಜಾವ ಗುಂಡ್ಯ ಬಳಿ ತಲುಪುತ್ತಿದ್ದಂತೆ  ಆರೋಪಿ  ಮಲಗಿದ್ದ ವಿದ್ಯಾರ್ಥಿನಿಯ ಮೈ ಮೇಲೆ ಕೈ ಹಾಕಿದ್ದಾನೆ. ಬಳಿಕ ಮತ್ತೊಮ್ಮೆ ಇದೇ ಯತ್ನ ನಡೆದಾಗ ಈ ಬಗ್ಗೆ ಬಸ್‌ನ ಚಾಲಕನ ಗಮನಕ್ಕೆ ತಂದಿದ್ದಾಳೆ.

Ad Widget

Ad Widget

ಆದರೆ ಚಾಲಕನಿಂದ ಯಾವುದೇ ಸ್ಪಂದನ ದೊರೆಯದಿದ್ದಾಗ, ಕೆಲವು ಸಹ ಪ್ರಯಾಣಿಕರು ರಕ್ಷಣೆಗೆ ಧಾವಿಸಿ ಬಂದು ಆತನನ್ನು ವಿಚಾರಿಸಿದಾಗ ತಾನು, ಬೆಳ್ತಂಗಡಿ ತಾಲೂಕು  ನಿವಾಸಿ ಮಹಮ್ಮದ್ ಅಝೀಮ್ ಎಂದು ಪರಿಚಯಿಸಿಕೊಂಡಿದ್ದಾನೆ. ಈ ವೇಳೆ  ದಾರಿ ಮಧ್ಯೆ ಸಿಗುವ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ದೂರು ನೀಡುವುದಾಗಿ  ವಿದ್ಯಾರ್ಥಿನಿ ಹೇಳಿದ್ದಾಳೆ. ಇದಾದ ಬಳಿಕ  ಚಲಿಸುತ್ತಿದ್ದ ಬಸ್‌ ವೇಗ ಕಡಿಮೆಯಾಗುತ್ತಿದ್ದಂತೆಯೇ ಕಿಟಕಿಯಿಂದ ಹೊರಗೆ ಹಾರಿದ ಆರೋಪಿಯು ಬಳಿಕ ಅಲ್ಲಿಂದ ಕಣ್ಮರೆಯಾಗಿದ್ದಾನೆ.

Ad Widget

Ad Widget

ವಿದ್ಯಾರ್ಥಿನಿಯು ಮನೆಗೆ ತಲುಪಿದ ಬಳಿಕ ತನ್ನ ಹೆತ್ತವರೊಂದಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ಸಲ್ಲಿಸಿದ್ದಾರೆ. ಆರೋಪಿಯ ವಿರುದ್ದ Ipc ಸೆಕ್ಷನ್‌ 354,354(A)ಯಡಿ ಪ್ರಕರಣ ದಾಖಲಾಗಿದೆ. ಬಳಿಕ   ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು  ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.

Ad Widget

Ad Widget

ಪೊಲೀಸ್‌ ಪ್ರಕಟನೆ:

 ರಾಜಕೀಯ ಲಾಭಕ್ಕಾಗಿ,ಕೆಲವು ಸಾಮಾಜಿಕ ಜಾಲತಾಣಗಳಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದ್ದು, ಇದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಹಾಗೂ ಇಂತಹ ಸುಳ್ಳುಸುದ್ದಿಗಳಿಂದ  ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವುದರಿಂದ, ಅಂತಹ ಕಿಡಿಗೇಡಿಗಳ ವಿರುದ್ದವೂ ಸೂಕ್ತ ಕಾನುನುಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದಾಗಿ  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Continue Reading

ಶಿಕ್ಷಣ

Press Release-ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಕಾರ್ಯಕ್ರಮದ ಪತ್ರಿಕಾ ಪ್ರಕಟಣೆ

Ad Widget

Ad Widget

Ad Widget

Ad Widget Ad Widget

ವಿವೇಕಾನಂದ ಪದವಿಪೂರ್ವ ಕಾಲೇಜು 2024-25ನೇ ಶೈಕ್ಷಣಿಕ ವರ್ಷದಿಂದ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ಪದವಿಪೂರ್ವ ಶಿಕ್ಷಣ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ವಿನೂತನ ಪ್ರಯೋಗವನ್ನು ನಮ್ಮ ಸಂಸ್ಥೆ ಆರಂಭಿಸುತ್ತಿದ್ದು, ಈ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಶೇರು ವಹಿವಾಟು, Tally, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮುಂತಾದ ವಿಷಯಗಳ ಬಗ್ಗೆ ವ್ಯಾವಹಾರಿಕ ಹಾಗೂ ಪ್ರಾಯೋಗಿಕ ಜ್ಞಾನ ನೀಡುವ ಉದ್ದೇಶವಿದೆ.

Ad Widget

Ad Widget

Ad Widget

Ad Widget

Ad Widget

ಈ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳ ಉದ್ಘಾಟನಾ ಸಮಾರಂಭವು 24  ಏಪ್ರಿಲ್ 2024 ನೇ ಬುಧವಾರ 10 ಗಂಟೆಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇರುವ ನೇತಾಜಿ ಸಭಾಂಗಣದಲ್ಲಿ ಜರುಗಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ. ಪಿ. ಇವರು ವಹಿಸಲಿದ್ಧಾರೆ.

Ad Widget

Ad Widget

ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಉದ್ಯಮಿಗಳು ಹಾಗೂ ಅಜೇಯ ವಿಶ್ವಸ್ಥ ಮಂಡಳಿ, ಮೂರ್ಕಜೆ, ವಿಟ್ಲ ಇದರ ಅಧ್ಯಕ್ಷರಾದ  ಪಿ. ಸುಬ್ರಾಯ ಪೈ ಇವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆಲ್ತ್ ವಿಷನ್ ಪುತ್ತೂರು ಹಾಗೂ ಹಾರ್ದಿಕ್ ಹರ್ಬಲ್ಸ್ ಬಂಟ್ವಾಳ ಇದರ ಸಂಸ್ಥಾಪಕರಾದ ಮುರಳೀಧರ ಕೆ. ಇವರು ಭಾಗವಹಿಸಲಿದ್ದಾರೆ. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಕೆ. ಎನ್. ಸುಬ್ರಹ್ಮಣ್ಯ ಹಾಗೂ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರು ಉಪಸ್ಥಿತಲಿರಲಿದ್ದಾರೆ.

Ad Widget

Ad Widget

ಈ ಕಾರ್ಯಕ್ರಮದಲ್ಲಿ ಪೋಷಕರು, ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‌ಗಳು ಆರಂಭಗೊಳ್ಳಲಿದ್ದು ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

Ad Widget

Ad Widget
Continue Reading

ಪುತ್ತೂರು

ಕಳೆದ ವರ್ಷ ಶೇ 100 ಫಲಿತಾಂಶ ದಾಖಲಿಸಿದ ವಿದ್ಯಾಮಾತಾ ಅಕಾಡೆಮಿಯಿಂದ KARTET 2024ಕ್ಕೆ ತರಬೇತಿ ಪ್ರಾರಂಭ – ಆನ್ಲೈನ್ ತರಬೇತಿ ಪ್ರಾರಂಭಿಸಿದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ

Ad Widget

Ad Widget

Ad Widget

Ad Widget Ad Widget

2023ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಹೆಗ್ಗಳಿಕೆಯೊಂದಿಗೆ 2024ನೇ ಸಾಲಿನ KARTET ಗೆ ಅರ್ಜಿ ಸಲ್ಲಿಸಿರುವ ಮತ್ತು ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಭವಿಷ್ಯದ ಸರಕಾರಿ ಶಿಕ್ಷಕರಿಗೆ  ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ಪ್ರಾರಂಭಿಸಿದೆ.

Ad Widget

Ad Widget

Ad Widget

Ad Widget

Ad Widget

ವಿದ್ಯಾಮಾತಾ ಅಕಾಡೆಮಿಯು
ಈ ವರ್ಷವೂ ಕೂಡ  ಆನ್ ಲೈನ್ ತರಬೇತಿಯನ್ನು ಒದಗಿಸಲಿದ್ದು ದಿನಾಂಕ 25.04.2024ರಿಂದ 2 ತಿಂಗಳ ಕಾಲ ಪ್ರತಿನಿತ್ಯ ರಾತ್ರಿ 7ರಿಂದ 8ರ ವರೆಗೆ ಆನ್ ಲೈನ್ ತರಗತಿಗಳು ನಡೆಯಲಿದ್ದು, ಈ ಅರ್ಹತಾ ಪರೀಕ್ಷೆಯನ್ನು ಎದುರಿಸಲಿರುವ ಅಭ್ಯರ್ಥಿಗಳು  ವಿದ್ಯಾಮಾತಾ ಅಕಾಡೆಮಿಯನ್ನು ಈ ಕೆಳಗಡೆ ನೀಡಿರುವ ದೂರವಾಣಿ ಸಂಖ್ಯೆ ಅಥವಾ ಖುದ್ದಾಗಿ  ಸಂಸ್ಥೆಯ ಸುಳ್ಯ ವಿದ್ಯಾಮಾತಾ ಅಕಾಡೆಮಿಯ ಕಛೇರಿ ಮತ್ತು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯ ಕಛೇರಿಯನ್ನು  ಹಾಗೂ ಕಾರ್ಕಳದ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾನದಂಡಗಳು:

Ad Widget

Ad Widget

ಅರ್ಜಿ ಸಲ್ಲಿಸಲು  15.05.2024 ಕೊನೆಯ ದಿನಾಂಕವಾಗಿರುತ್ತದೆ

Ad Widget

Ad Widget

ವಿದ್ಯಾರ್ಹತೆ:
PUC D.Ed, BE. BEd,   BA.B.Ed, BSc.B.Ed
B.com B.Ed

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:
ಫೋಟೋ, ಅಂಕಪಟ್ಟಿಗಳು,ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 30.06.2024ರಂದು ನಡೆಯಲಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH:  9148935808 / 96204 68869

*ಸುಳ್ಯ ಶಾಖೆ:*  ಟಿ.ಎ.ಪಿ.ಸಿ.ಎಂ.ಎಸ್  ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
*PH: 9448527606*

*ಕಾರ್ಕಳ ಶಾಖೆ:*
ಒಂದನೆಯ ಮಹಡಿ, MCC ಬ್ಯಾಂಕ್ ಮೇಲ್ಗಡೆ, ತಾಲೂಕು ಕಚೇರಿ ರಸ್ತೆ, (ಬಂಡಿ ಮಠ ಬಸ್ ಸ್ಟ್ಯಾಂಡ್ ಎದುರು ರಸ್ತೆ ) ಕಾರ್ಕಳ
PH:- 8310484380 / 9740564044 / 9620468869

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading