ಮಂಗಳೂರು : ಕಾರು ಚಾಲಕನ ಮೇಲೆ ಟೋಲ್ ಸಿಬ್ಬಂದಿಗಳು ಆಟಾಟೋಪ ಮೆರೆದು ಹಲ್ಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳೂರಿನಿಂದ ಕೇರಳದತ್ತ ತೆರಳುತ್ತಿದ್ದ ಕಾರು ಚಾಲಕನನ್ನು ಕರ್ನಾಟಕ -ಕೇರಳ ಗಡಿಭಾಗ ತಲಪಾಡಿಯಲ್ಲಿರುವ ಟೋಲ್ ಗೇಟ್ ಬಳಿ ತಡೆದ ಅಲ್ಲಿನ ಸಿಬ್ಬಂದಿಗಳು ಯಕ್ಕಮಕ್ಕಾ ಹಲ್ಲೆ ನಡೆಸಿದ್ದಾರೆ. ಚಾಲಕನ ಕುಟುಂಬಸ್ಥರು ಕಾರಿನೊಳಗಡೆಯಿದ್ದು ಅವರ ಸಮ್ಮುಖವೇ ಈ ಹಲ್ಲೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕ ಹಾಗೂ ಸಿಬಂದಿ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕೆಲ ಕ್ಷಣಗಳಲ್ಲಿ ಇದು ತಾರಕಕ್ಕೆರಿ ಕಾರು ಚಾಲಕನನ್ನು ಹಿಡಿದು ಟೋಲ್ ಸಿಬ್ಬಂದಿಗಳು ಥಳಿಸಿದ್ದಾರೆ. ಸಿಬಂದಿಗಳು ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ದೃಶ್ಯಗಳು ವೈರಲ್ ಆಗಿದೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಹಾಗೂ ಟೋಲ್ ಸಿಬಂದಿಗಳ ಗೂಂಡಾವರ್ತನೆಯ ಬಗ್ಗೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆ ಜ 30 ರ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಂಗಳೂರು : ಟೋಲ್ ಗೇಟ್ ಸಿಬ್ಬಂದಿಗಳ ಆಟಾಟೋಪ – ಕಾರು ಚಾಲಕನ ಮೇಲೆ ಹಲ್ಲೆ – ವಿಡಿಯೋ ವೈರಲ್ pic.twitter.com/3pKJ1F8mNl
— Nikhara News (@NewsNikhara) January 31, 2023