Connect with us

ರಾಜ್ಯ

Surathkal Toll | ಕಾರು ಅಲುಗಾಡಿಸಿದ್ದಕ್ಕೆ ಕರಾವಳಿಗರ ವಿರುದ್ಧ ಟೋಲ್ ಮೂಲಕ ಸಂಸದ ಕಟೀಲ್ ಸೇಡು ತೀರಿಸಿಕೊಳ್ಳುತಿದ್ದಾರೆ – ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಸುರತ್ಕಲ್ ಟೋಲ್ (Surathkal Toll) ಗೇಟ್ ರದ್ದು ಮಾಡಿ ಹೆಜಮಾಡಿ ಟೋಲ್ ನಲ್ಲಿ ಹೆಚ್ಚಿನ ಹಣ ಸಂಗ್ರಹ ಮಾಡುವ ನಿರ್ಧಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲುಗಾಡಿಸಿದ್ದಕ್ಕೆ ಕರಾವಳಿಗರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಕರಾವಳಿ ಸಂಸದರು ಯಾವ ಪುರುಷಾರ್ಥಕ್ಕೆ ಸ್ವಯಂ ಬೆನ್ನುತಟ್ಟಿಕೊಂಡಿದ್ದು ಬಹಿರಂಗ ಪಡಿಸಬೇಕು. ವಾಹನ ಸವಾರರ ಬೆವರಿನ ಹಣವನ್ನ ಜಿಗಣೆಯಂತೆ ರಕ್ತ ಹೀರುತ್ತಿದ್ದ ಸುರತ್ಕಲ್ ಟೋಲ್‌ ಗೇಟ್‌ ರದ್ದು ಪಡಿಸಿ, ಹೆಜಮಾಡಿ ಟೋಲ್‌ ಅಲ್ಲಿ ದುಪ್ಪಟ್ಟು ಸುಲಿಗೆ ಮಾಡಲು ವಿಲೀನಗೊಳಿಸಿದ್ದಕ್ಕಾ ಎಂದು ಪ್ರಶ್ನಿಸಿದ್ದಾರೆ.

Ad Widget

Ad Widget

ಅಕ್ರಮ ಟೋಲ್‌ಗೇಟ್‌ ತೆರವುಗೊಳಿಸಲು ಕರಾವಳಿಯಲ್ಲಿ ಅಹೋರಾತ್ರಿ ಹೋರಾಟ ನಡೆಯುತ್ತಿದ್ದರೆ ತಾವು ಉಳಿಸಲು ಶಕ್ತಿಮೀರಿ ಶ್ರಮಿಸಿರುವ ತೆರೆ ಮರೆಯ ಕಸರತ್ತನ್ನ ಬಹಿರಂಗಪಡಿಸುತ್ತಿರಾ? ಅಥವಾ ಕಾರು ಅಲ್ಲಾಡಿಸಿದ ಕಾರಣಕ್ಕೆ ಬಹಿರಂಗವಾಗಿ ಕರಾವಳಿಗರ ಮೇಲೆ ಸೇಡು ತೀರಿಸಿಕೊಂಡಿದ್ದನ್ನ ಒಪ್ಪಿಕೊಳ್ಳುತ್ತಿರಾ ಎಂದು ಸವಾಲೆಸಿದಿದ್ದಾರೆ.

Ad Widget

Ad Widget

ಕರಾವಳಿಯ ಬಿಜೆಪಿ ಸಂಸದರು,ಶಾಸಕರು ಟೋಲ್‌ಗೇಟ್‌ ಗಳ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ? ಸುಲಿಗೆ ಮಾಡುತ್ತಿರುವ ಹಣದಲ್ಲಿ ತಮ್ಮ ಪಾಲೆಷ್ಟು ಬಹಿರಂಗಪಡಿಸಿ? ಮತಕೊಟ್ಟ ಜನರಿಗೆ ದ್ರೋಹ ಮಾಡಿ, ಬೆನ್ನ ತಟ್ಟಿಕೊಂಡಿರುವ ಸಂಸದರದ್ದು ಲಜ್ಜೆಗೆಟ್ಟ ಪರಮಾವಧಿ. ಅಕ್ರಮ ಟೋಲ್ ಅಂತೆ ನಿಮ್ಮನ್ನ ಎತ್ತಂಗಡಿ ಮಾಡುವ ಕಾಲ ಬಂದಾಯ್ತು‌ ಎಂದು ಬಿಕೆ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ

Ad Widget

Ad Widget
Click to comment

Leave a Reply

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ರಾಜ್ಯ

Big Breaking : ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ NIA

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ (Rameshwaram Cafe Blast Case) ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ ಅವರನ್ನು ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷಿಯನ್ನಾಗಿ ಪರಿಗಣಿಸಿದೆ.

Ad Widget

Ad Widget

Ad Widget

Ad Widget

Ad Widget

ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್‌ಗೆ ಸಾಯಿ ಪ್ರಸಾದ್‌ ಮೊಬೈಲ್‌ ಮಾರಾಟ ಮಾಡಿದ್ದರು. ಮುಜಾಮಿಲ್ ಷರೀಫ್ ಪ್ರಕರಣದ ಮತ್ತೊಬ್ಬ ಆರೋಪಿ ಮುಸಾವೀರ್‌ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಮುಸಾವೀರ್ ಬಳಸಿದ್ದು ಇದೇ ಮೊಬೈಲ್ ಎಂಬ ಅನುಮಾನದ ಮೇಲೆ ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಮಾರಾಟ ಮಾಡುತ್ತಿದ್ದ ಸಾಯಿ ಪ್ರಸಾದ್‌ ಅವರನ್ನು ವಿಚಾರಣೆ ನಡೆಸಿದೆ.

Ad Widget

Ad Widget

ಮುಜಾಮಿಲ್‌ ಮೊಬೈಲ್‌ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಎನ್‌ಐಎ ಸಾಯಿ ಪ್ರಸಾದ್‌ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿದೆ ಎಂಬ ವಿಚಾರ ಈಗ ತಿಳಿದುಬಂದಿದೆ.

Ad Widget

Ad Widget
Continue Reading

ರಾಜ್ಯ

Dry Grapes-ಪಾತಾಳಕ್ಕಿಳಿದ ಒಣ ದ್ರಾಕ್ಷಿ ದರ, ಕೆಜಿಗೆ ಬರೀ 115 ರಿಂದ 135 ರೂ.; ಬೆಳಗಾವಿಯ ದ್ರಾಕ್ಷಿ ಬೆಳೆಗಾರರು ಕಂಗಾಲು

Ad Widget

Ad Widget

Ad Widget

Ad Widget Ad Widget

ಕರ್ನಾಟಕದಲ್ಲಿ ತೀವ್ರ ಬರಗಾಲ ಬಂದು ರೈತರು ತತ್ತರಿಸಿದ್ದಾರೆ. ಇದರ ನಡುವೆ ಒಣ ದ್ರಾಕ್ಷಿ ದರ ಪಾತಾಳಕ್ಕಿಳಿದಿದೆ. ಬರದಿಂದ ಇಳುವರಿ ಕುಸಿತ ಹಾಗೂ ಬೆಲೆ ಕುಸಿತದಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಎರಡು ವರ್ಷಗಳ ಹಿಂದಿನವರೆಗೂ ಹಂಗಾಮಿನಲ್ಲಿ ಒಣ ದ್ರಾಕ್ಷಿ ಪ್ರತಿ ಕೆಜಿಗೆ ಸರಾಸರಿ 210-250 ರೂ. ದರ ಇತ್ತು. ಆದರೆ, ಕಳೆದ ವರ್ಷದಿಂದ ದ್ರಾಕ್ಷಿ ಹಂಗಾಮಿನಲ್ಲೇ ದರ ಕುಸಿಯತೊಡಗಿದೆ. ಈ ಸಲ ಪ್ರತಿ ಕೆಜಿ ಒಣ ದ್ರಾಕ್ಷಿ ದರ ಸರಾಸರಿ 115-135 ರೂ. ಮಾತ್ರ ಇದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಬರಗಾಲದ ಕಾರಣಕ್ಕೆ ದ್ರಾಕ್ಷಿ ಇಳುವರಿ ಕುಂಠಿತವಾಗಿದ್ದರ ಜತೆಗೆ ಒಣ ದ್ರಾಕ್ಷಿ (ಮಣೂಕ) ಬೆಲೆಯೂ ಪಾತಾಳಕ್ಕಿಳಿದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. -ಗುರುದತ್ತ ಭಟ್‌ ಬೆಳಗಾವಿ

Ad Widget

Ad Widget

ರಾಜ್ಯದಲ್ಲಿ ವಿಜಯಪುರ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತದೆ. ಅಥಣಿ ತಾಲೂಕು ಒಂದರಲ್ಲೇ 5,500 ಹೆಕ್ಟೇರ್‌ ದ್ರಾಕ್ಷಿ ಬೆಳೆಯಲಾಗುತ್ತದೆ. ಉಳಿದಂತೆ ಕಾಗವಾಡ, ರಾಯಬಾಗ, ಹುಕ್ಕೇರಿ, ಚಿಕ್ಕೋಡಿ ಮೊದಲಾದ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 13 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಿವೆ. ಒಟ್ಟು ಸುಮಾರು 80 ಸಾವಿರ ಟನ್‌ ಹಸಿ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಆದರೆ, ಈ ವರ್ಷ ಮಳೆ ಕೊರತೆಯಿಂದಾಗಿ ದ್ರಾಕ್ಷಿ ಹೂವು ನೆಲಕಚ್ಚುವ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಸರಾಸರಿ ಶೇ.20 ರಷ್ಟು ಬೆಳೆ ಕಡಿಮೆಯಾಗಿದೆ.

Ad Widget

Ad Widget

ಬೆಲೆ ಕುಸಿತ!
ಜಿಲ್ಲೆಯಲ್ಲಿ ಬೆಳೆಯುವ ಶೇ.80ರಷ್ಟು ದ್ರಾಕ್ಷಿಯನ್ನು ಸಂಸ್ಕರಣೆ ಮಾಡಿ ಒಣ ದ್ರಾಕ್ಷಿ ತಯಾರಿಸಲಾಗುತ್ತದೆ. ಎರಡು ವರ್ಷಗಳ ಹಿಂದಿನವರೆಗೆ ಹಂಗಾಮಿನಲ್ಲಿ ಒಣ ದ್ರಾಕ್ಷಿ ಪ್ರತಿ ಕಿಲೋಗೆ ಸರಾಸರಿ 210-250 ರೂ. ದರದಲ್ಲಿ ಮಾರಾಟವಾಗುತ್ತಿತ್ತು. ಕಳೆದ ವರ್ಷದಿಂದ ದ್ರಾಕ್ಷಿ ಹಂಗಾಮಿನಲ್ಲೇ ದರ ಕುಸಿಯತೊಡಗಿದೆ. ಈ ಬಾರಿ ಪ್ರತಿ ಕಿಲೋ ಒಣ ದ್ರಾಕ್ಷಿ ದರ ಸರಾಸರಿ 115-135 ರೂ. ಗೆ ಇಳಿದಿದೆ.

Ad Widget

Ad Widget

ಹೆಚ್ಚಿದ ಖರ್ಚು:
ದ್ರಾಕ್ಷಿ ಬೆಳೆಯಲು ಆರಂಭದಲ್ಲಿ ನಾಟಿ ಮಾಡುವುದರಿಂದ ಹಿಡಿದು ಬಳ್ಳಿ ಬೆಳೆಯಲು ತಂತಿ ಜಾಳಿಗೆಯ ಚಪ್ಪರ ಅಳವಡಿಕೆ, ಗೊಬ್ಬರ, ಕೀಟನಾಶಕಗಳ ಬಳಕೆ ಸೇರಿದಂತೆ ಪ್ರತಿ ಎಕರೆಗೆ ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಒಮ್ಮೆ ದ್ರಾಕ್ಷಿ ಕೊಯ್ಲಿಗೆ ಬಂದಮೇಲೆ ಅದನ್ನು ಸಂಸ್ಕರಣೆ ಮಾಡಿ ಒಣ ದ್ರಾಕ್ಷಿ ತಯಾರಿಕೆಗೆ ಶೆಡ್‌ ನೆಟ್‌, ಶೆಡ್‌ ಮೊದಲಾದ ಖರ್ಚು ಸೇರುತ್ತದೆ. ಇದಲ್ಲದೇ ಕೂಲಿ ದರ, ಸಾಗಣೆ ವೆಚ್ಚ, ಕೋಲ್ಡ್‌ ಸ್ಟೋರೇಜ್‌ನ ಬಾಡಿಗೆ ಮೊದಲಾದ ವೆಚ್ಚ ಪ್ರತ್ಯೇಕ. ಆದರೆ, ಈ ಬಾರಿ ಇದೆಲ್ಲದರ ಜತೆ ಹೆಚ್ಚುವರಿಯಾಗಿ ದ್ರಾಕ್ಷಿ ತೋಟಗಳಿಗೆ ನೀರುಣಿಸುವ ವೆಚ್ಚವೂ ಸೇರಿದೆ. ರೈತರು ದೂರದ ನದಿ, ಹಳ್ಳಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ಬೆಳೆ ಬೆಳೆದಿದ್ದು, ಪ್ರತಿ ವರ್ಷಕ್ಕಿಂತ ಖರ್ಚು ದುಪ್ಪಟ್ಟಾಗಿದೆ.

ಇಳಿಯುತ್ತಲೇ ಇದೆ ದರ
ಸಾಮಾನ್ಯವಾಗಿ ಮಾರ್ಚ್ ತಿಂಗಳ ಅಂತ್ಯದಿಂದ ಏಪ್ರಿಲ್‌ ಮೊದಲ ವಾರದೊಳಗೆ ಬಹುತೇಕ ದ್ರಾಕ್ಷಿ ಕೊಯ್ಲು ಮುಗಿದು ಒಣ ದ್ರಾಕ್ಷಿ ಸಂಸ್ಕರಣೆ ಪ್ರಾರಂಭವಾಗುತ್ತದೆ. ಏಪ್ರಿಲ್‌ ಮೊದಲ ವಾರದ ಬಳಿಕ ಮಾರುಕಟ್ಟೆಯಲ್ಲಿ ಒಣ ದ್ರಾಕ್ಷಿಯ ಆವಕ ಹೆಚ್ಚುತ್ತಾ ಸಾಗುತ್ತದೆ. ಜಿಲ್ಲೆಯಲ್ಲಿ ಒಣ ದ್ರಾಕ್ಷಿ ಸಂಗ್ರಹಕ್ಕೆ ಕೋಲ್ಡ್‌ ಸ್ಟೋರೇಜ್‌ಗಳ ಕೊರತೆ ಇರುವ ಕಾರಣ ಬಹುತೇಕ ರೈತರು ಮಹಾರಾಷ್ಟ್ರದ ಸಾಂಗ್ಲಿ ಮೊದಲಾದೆಡೆ ಒಣ ದ್ರಾಕ್ಷಿ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಈ ಬಾರಿ ಹಂಗಾಮಿನ ಆರಂಭದಲ್ಲೇ ದ್ರಾಕ್ಷಿ ದರ ಕುಸಿದಿತ್ತು. ಮಾರ್ಚ್ ತಿಂಗಳ ಪ್ರಾರಂಭದಲ್ಲೇ ಪ್ರತಿ ಕಿಲೋ ಒಣ ದ್ರಾಕ್ಷಿಗೆ ಸರಾಸರಿ 170-180 ರೂ. ದರವಿತ್ತು. ಈಗ ಮಾರುಕಟ್ಟೆಯಲ್ಲಿಆವಕ ಹೆಚ್ಚುತ್ತಿದ್ದಂತೆ ದ್ರಾಕ್ಷಿ ದರ ಅಕ್ಷರಶಃ ಪಾತಾಳಕ್ಕಿಳಿದಿದೆ.

ಬೆಳೆಗಾರರ ಬೇಡಿಕೆ ಏನು?
*ಒಣ ದ್ರಾಕ್ಷಿಗೆ ಕನಿಷ್ಠ 200 ರೂ. ಬೆಂಬಲ ಬೆಲೆ ಘೋಷಣೆಯಾಗಬೇಕು.
*ಬಹುತೇಕ ದ್ರಾಕ್ಷಿ ಸಂಸ್ಕರಣೆಯ ಹಂತದಲ್ಲಿಅಕಾಲಿಕ ಮಳೆಯಿಂದ ಹಾಳಾಗುತ್ತದೆ. ಆದರೆ, ದ್ರಾಕ್ಷಿ ತೋಟದಲ್ಲಿಹಾಳಾದರೆ ಮಾತ್ರ ಸರಕಾರ ಪರಿಹಾರ ನೀಡುತ್ತದೆ. ಸಂಸ್ಕರಣೆಯ ಹಂತದಲ್ಲೂಪ್ರಾಕೃತಿಕ ವಿಕೋಪದಿಂದ ದ್ರಾಕ್ಷಿ ನಷ್ಟವಾದರೆ ಪರಿಹಾರ ವಿತರಿಸಲು ಕ್ರಮವಾಗಬೇಕು.
*ದ್ರಾಕ್ಷಿ ಸಂಗ್ರಹಣೆಗೆ ಜಿಲ್ಲೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿಕೋಲ್ಡ್‌ ಸ್ಟೋರೇಜ್‌ಗಳ ನಿರ್ಮಾಣವಾಗಬೇಕು.
*ದ್ರಾಕ್ಷಿ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಅಂಗನವಾಡಿ, ಪ್ರಾಥಮಿಕ ಶಾಲೆಗಳಲ್ಲಿಮೊಟ್ಟೆ, ಬಾಳೆಹಣ್ಣಿನ ಜತೆಗೆ ಒಣ ದ್ರಾಕ್ಷಿಯನ್ನೂ ನೀಡುವಂತಾಗಬೇಕು.
*ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಬೇಕು.

ಒಣ ದ್ರಾಕ್ಷಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ದ್ರಾಕ್ಷಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಮತ್ತು ಸರಕಾರಕ್ಕೆ ಆದಾಯ ತಂದುಕೊಡುವ ಬೆಳೆ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅಥಣಿ ರೇಸಿನ್‌ ಪ್ರೊಸೆಸಿಂಗ್‌ ಕ್ಲಸ್ಟರ್‌ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ್ ಹೇಳಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading