Connect with us

ದಕ್ಷಿಣ ಕನ್ನಡ

Arun Kumar Puttila : ಪುತ್ತಿಲ ಪರಿವಾರ ಕಛೇರಿ ಮುಂಭಾಗ ತಲವಾರು ಪ್ರದರ್ಶನ – ಪ್ರಕರಣ ಹಾಗೂ ಆ ಬಳಿಕ ಏನೆಲ್ಲಾ ಆಯಿತು? ಸಂಪೂರ್ಣ ಮಾಹಿತಿ ಇಲ್ಲಿದೆ

Ad Widget

Ad Widget

Ad Widget

Ad Widget

ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪುತ್ತೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಪ್ರಭಾವಿ ಹಿಂದೂ ಮುಖಂಡ ಹಾಗೂ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್‌ ಕುಮಾರ್‌ ಪುತ್ತಿಲರವರ ಕಚೇರಿ ಬಳಿ 9 ಮಂದಿ  ಯುವಕರ ತಂಡವೊಂದು ಮಾರಾಕಾಯುಧಗಳೊಂದಿಗೆ ಬಂದ ಘಟನೆ ಪುತ್ತೂರಿನ ಹೊರವಲಯ ಮುಕ್ರಂಪಾಡಿ ಬಳಿ ನಡೆದಿದೆ . ಶುಕ್ರವಾರ (ನ 10) ರಂದು ಮಧ್ಯಾಹ್ನ 1.30 ಸುಮಾರಿಗೆ ಸುಭದ್ರ ಹಾಲ್‌ ಬಳಿಯಿರುವ ಪುತ್ತಿಲ ಪರಿವಾರ ಕಛೇರಿಯಲ್ಲಿ ನಡೆದಿದ್ದೂ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಇಬ್ಬರು ಅಪ್ರಾಪ್ತರು.

Ad Widget

Ad Widget

Ad Widget

ಹಿಂದೂ ಜಾಗರಣ ವೇದಿಕೆಯ ಪುತ್ತೂರು  ಜಿಲ್ಲಾ ಮುಖಂಡ ದಿನೇಶ್‌ ಪಂಜಿಗ ನೇತ್ರತ್ವದ 6 ಕ್ಕೂ ಹೆಚ್ಚು ಮಂದಿಯ ತಂಡ ಬೆನ್ನಿನಲ್ಲಿ ತಲ್ವಾರು ಇಟ್ಟುಕೊಂಡು ʼಪುತ್ತಿಲ ಪರಿವಾರʼದ ಕಛೇರಿಯ ಮುಂದೆ ಆಗಮಿಸಿ, ಕಚೇರಿಯಲ್ಲಿದ್ದವರ  ಜತೆ ವಾಗ್ವಾದ ನಡೆಸುವ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

vAd Widget

Ad Widget
ಬೆನ್ನಿನಲ್ಲಿ ತಲ್ವಾರು ಇಟ್ಟಿರುವುದು

ದುಷ್ಕರ್ಮಿಗಳ ತಂಡ ಪುತ್ತಿಲ ಪರಿವಾರದ ಕಛೇರಿಗೆ ಬಂದ ವೇಳೆ ಅಲ್ಲಿ  ಪುತ್ತಿಲ ಪರಿವಾರದ ಪ್ರಮುಖರಾದ ಕೃಷ್ಣ ಪ್ರಸಾದ್‌ ಶೆಟ್ಟಿ, ಅನಿಲ್‌ ತೆಂಕಿಲ ಹಾಗೂ ವಿಜೇತ್‌  ಮತ್ತಿತ್ತರರಿದ್ದರು. ಪ್ರತ್ಯಕ್ಷ ದರ್ಶಿಗಳ ಪ್ರಕಾರ ದಿನೇಶ್‌ ಪಂಜಿಗ ಹಾಗೂ ಇತರ 8 ಮಂದಿ ಮಾರಕಾಯುಧಗಳೊಂದಿಗೆ ಆಗಮಿಸಿ ಯಾರಿಗೋ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಅವರಿಗೆ ಬೇಕಾದ ವ್ಯಕ್ತಿ  ಕಾಣದಿದ್ದಾಗ ಪುತ್ತಿಲ ಪರಿವಾರದ ಪ್ರಮುಖರೊಬ್ಬರ  ಬಗ್ಗೆ  ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ದಿನೇಶ್‌ ಅವರನ್ನು  ಕೃಷ್ಣ ಪ್ರಸಾದ್‌ ಶೆಟ್ಟಿಯವರು ಸಮಾಧನಿಸಲು ಪ್ರಯತ್ನಿಸಿದ್ದಾರೆ.

Ad Widget

Ad Widget
ಘಟನೆ ನಡೆದ ಪುತ್ತಿಲ ಪರಿವಾರದ ಕಛೇರಿ

ಸಿಸಿಟಿವಿ ವಿಡಿಯೋ:

Ad Widget

Ad Widget

Ad Widget

ಪೊಲೀಸರ ಮಿಂಚಿನ ಕಾರ್ಯಚರಣೆ

ಕಛೇರಿ ಮುಂಭಾಗ ತಲ್ವಾರು ಝಳಪಿಸಿದ ಮಾಹಿತಿ ದೊರಕುತ್ತಲೇ ಮಿಂಚಿನ ಕಾರ್ಯಚರಣೆ ನಡೆಸಿದ ಪುತ್ತೂರು ನಗರ ಠಾಣೆ ಪೊಲೀಸರು ಕೃತ್ಯ ಎಸಗಿದ ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.  ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಮನೀಶ್‌ ಕುಲಾಲ್‌  ಹಾಗೂ ದಿನೇಶ್‌ ಪಂಜಿಗರವರು ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದು ಅದು ವಿಕೋಪಕ್ಕೆ ಹೋಗಿದೆ. ಬಳಿಕ ಅವರಿಬ್ಬರು ಫೋನ್‌ ನಲ್ಲೂ ಈ ಕುರಿತು ಜಗಳವಾಡಿಕೊಂಡಿದ್ದಾರೆ.  ಅದರ ಮುಂದುವರಿದ ಭಾಗವಾಗಿ ಈ ಪ್ರಕರಣ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಠಾಣೆ ಮುಂದೆ ಜಮಾಯಿಸುರುವ ಇತ್ತಂಡದ ಮುಖಂಡರು

ಠಾಣೆಗೆ ಬಿಜೆಪಿ ಮುಖಂಡರ ದೌಡು

ಆರೋಪಿಗಳನ್ನು ಠಾಣೆಗೆ ಕರೆದು ಕೊಂಡು ಹೋದ ಮಾಹಿತಿ ಪಡೆಯುತ್ತಲೇ, ಠಾಣೆಗೆ ಬಿಜೆಪಿ ಪ್ರಮುಖರು ಧಾವಿಸಿದ್ದಾರೆ.  ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮುಖಂಡರಾದ ಹರಿಪ್ರಸಾದ್‌ ಯಾದವ್‌,  ಹರೀಶ್‌ ಬಿಜತ್ರೆ ರಾಜೇಶ್‌ ಬನ್ನೂರು, ಉಳಿದಂತೆ ದಿನೇಶ್‌ ಜೈನ್‌, ಶ್ರೀಧರ ತೆಂಕಿಲ ಆಗಮಿಸಿ ಪೊಲೀಸ್‌ ಠಾಣೆಯಲ್ಲಿ ಪಂಚಾತಿಕೆ ಮಾಡುವ ಮೂಲಕ ರಾಜಿಗೆ  ಮುಂದಾಗಿದ್ದಾರೆ.  ಈ ವೇಳೆ ಡಿವೈಎಸ್ಪಿ ಗಾನಾ ಪಿ ಕುಮಾರಿ, ಇನ್ಸ್‌ಪೆಕ್ಟರ್‌ ಸುನೀಲ್‌ ಕುಮಾರ್‌ ಹಾಗೂ ಎಸೈ ಅಂಜನೇಯ ರೆಡ್ಡಿಯವರು ಠಾಣೆಯ  ಸ್ವಾಗತಕಾರರು ಹಾಗೂ  ಠಾಣಾಧಿಕಾರಿ ಕೂರುವ ಕೊಠಡಿಯಲ್ಲಿ  ಬಿಜೆಪಿ ಮುಖಂಡರನ್ನು ಕೂರಿಸಿ ಅರ್ಧ ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದರು.

ಡಿವೈಎಸ್ಪಿ ನೇತ್ರತ್ವದಲ್ಲಿ ಠಾಣೆ ಮುಂದೆ ಜಮಾಯಿಸಿದವರನ್ನು ಪೊಲೀಸರು ಚದುರಿಸುತ್ತಿರುವುದು

ಪುತ್ತಿಲ ಪರಿವಾರ ಮುಖಂಡರ ಆಗಮನ

ಇದೇ ಸಮಯದಲ್ಲಿ ಪುತ್ತಿಲ ಪರಿವಾರದ ಪ್ರಮುಖರಾದ ಅರುಣ್‌ ಕುಮಾರ್‌ ಪುತ್ತಿಲ, ಪ್ರಸನ್ನ ಮಾಡ್ತಾ, ಉಮೇಶ್‌, ಪ್ರವೀಣ್‌ ಶೆಟ್ಟಿ ಮತ್ತಿತ್ತರರು ಠಾಣೆಗೆ ಆಗಮಿಸಿದರು. ಅವರನ್ನು ಇನ್ಸ್‌ ಪೆಕ್ಟರ್‌ ಛೇಂಬರ್‌ ನಲ್ಲಿ ಕುಳ್ಳಿರಿಸಿ ಅಧಿಕಾರಿಗಳು  ಮಾತುಕತೆ ನಡೆಸಿದರು. ಇದು ಬಿಜೆಪಿ ಮುಖಂಡರನ್ನು ಕೆರಳಿಸಿದ್ದು,  ನಾವು ಮೊದಲು ಬಂದಿದ್ದೇವೆ, ನೀವು ಅವರನ್ನು ಚೇಂಬರ್‌ ಗೆ ಕರೆಸಿ ಮಾತುಕತೆ ನಡೆಸಿದ್ದೀರಿ  ಠಾಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು  ಕೋಪದಲ್ಲಿ ಆಗ್ರಹಿಸಿದರು. ಇತ್ತ ಪುತ್ತಿಲ ಪರಿವಾರದವರು  ಘಟನೆಯನ್ನು  ರಾಜಿಯಲ್ಲಿ ಮುಗಿಸಲು ಒಪ್ಪದೇ  ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಬಳಿಕ ಬಿಜೆಪಿ ಮುಖಂಡರು ಠಾಣೆಯಿಂದ ಹಿಂತಿರುಗಿದರು.

 ಬಿಜೆಪಿ ಮುಖಂಡರ ಜತೆ ಪೊಲೀಸ್‌ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದ ವೇಳೆ  ಠಾಣೆ ಸುತ್ತ ಜನ ಜಮಾಯಿಸಿದ್ದು, ಮಾತುಕತೆಯ ವಿಷಯ ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಚದರಿಸಲು ಯತ್ನಿಸಿದರು. ಈ ವೇಳೆ ಪತ್ರಕರ್ತರನ್ನು ಠಾಣೆಯ ಎದುರಿನಿಂದ ಹೋಗುವಂತೆ ಸೂಚಿಸಿದರು.  

ಘಟನೆಯ ಕುರಿತು ಅರುಣ್‌ ಕುಮಾರ್‌ ಪುತ್ತಿಲ ಹೇಳಿದ್ದೇನು ?

6 ತಿಂಗಳ ಹಿಂದಿನವರೆಗೂ ದಿನೇಶ್‌ ಪಂಜಿಗ ಹಾಗೂ ಮನೀಶ್‌ ಕುಲಾಲ್‌ ಇಬ್ಬರು ಹಿಂದೂ ಜಾಗರಣೆ ವೇದಿಕೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವೇಳೆ ಅವರ ಜತೆ ಮುಂಚೂಣಿಯಲ್ಲಿ ಮನೀಶ್‌ ಕುಲಾಲ್‌ ಕಾಣಿಸಿಕೊಂಡಿದ್ದರು. ಆದರೇ ದಿನೇಶ್‌ ಪಂಜಿಗ ಬಿಜೆಪಿ ಪಕ್ಷ ಜತೆಯೇ ಗುರುತಿಸಿಕೊಂಡಿದ್ದರು.

Click to comment

Leave a Reply

ಸುಳ್ಯ

ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊ ತೆಗೆದ ಅನ್ಯ ಕೋಮಿನ ಯುವಕ – ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Ad Widget

Ad Widget

Ad Widget

Ad Widget

ಸುಳ್ಯ:   ಮೊಬೈಲ್‌ ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊವನ್ನು ಅನ್ಯಕೋಮಿನ ಯುವಕನೊಬ್ಬ  ತೆಗೆದ  ಆರೋಪ ಕೇಳಿ ಬಂದಿದ್ದು ಪ್ರಕರಣ ಸುಳ್ಯ ಠಾಣೆ ಮೆಟ್ಟೀಲೆರಿದೆ.  ಯುವತಿ ಸುಳ್ಯದ  ಗಾಂಧಿನಗರದಲ್ಲಿರುವ  ಏರ್ಟೆಲ್ ಮಳಿಗೆಗೆ ಹೋಗಿದ್ದ  ವೇಳೆ ಪ್ರಕರಣ ನಡೆದಿದೆ.

Ad Widget

Ad Widget

Ad Widget

ಗಾಂಧಿನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ತೊಂದರೆಗೆ ಒಳಗಾದವಳು. ಆಕೆ ಮೊಬೈಲ್‌ ರಿಚಾರ್ಜ್‌ ಮಾಡಿಸಲೆಂದು ಹತ್ತಿರದ ಏರ್ಟೆಲ್ ಮಳಿಗೆಗೆ ಹೋಗಿದ್ದಾಳೆ. ಮಳಿಗೆಯಲ್ಲಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಕುಳಿತುಕೊಳ್ಳುವಂತೆ ತಿಳಿಸಿ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ.

vAd Widget

Ad Widget

ಅವನ ನಡವಳಿಕೆಯಿಂದ ಅನುಮಾನಗೊಂಡ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ಅದರಲ್ಲಿ ತನ್ನ ಫೋಟೋ ಇರುವುದನ್ನು ನೋಡಿದ್ದಾಳೆ. ಹಾಗೂ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾಳೆ.

Ad Widget

Ad Widget

 ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.

Ad Widget

Ad Widget

Ad Widget
Continue Reading

ಉದ್ಯೋಗ

Puttur’s ‘Bindu’-ಆಂಧ್ರಕ್ಕೆ ತಲುಪಿದ ಪುತ್ತೂರಿನ ‘ಬಿಂದು’ : ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ

Ad Widget

Ad Widget

Ad Widget

Ad Widget

ಪುತ್ತೂರಿನ ಪ್ರತಿಷ್ಠಿತ ಮೇಘ ಫ್ರುಟ್ ಪ್ರೋಸೆಸಿಂಗ್ ಪ್ರೈವೇಟ್ ಲಿಮಿಟೆಡ್ (ಬಿಂದು) ಸಂಸ್ಥೆಯ ಮೂರನೇ ಉತ್ಪಾದನಾ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದ ಅಚ್ಯುತಾಪುರಂ ಎಸ್‌ಇಝಡ್ ಕೈಗಾರಿಕಾ ಪ್ರದೇಶದಲ್ಲಿ ಮೇ 2ರಂದು ನಡೆಯಿತು.

Ad Widget

Ad Widget

Ad Widget

ಆರ್‌ಎಸ್‌ಪಿ ಕಂಪನಿಯ ಪ್ರಾಜೆಕ್ಟ್ ಡೈರೆಕ್ಟರ್ ರಮೇಶ್ ಜೋಶಿ ಶಂಕುಸ್ಥಾಪನೆ ನೆರವೇರಿಸಿದರು. ಬಿಂದು ಕಂಪನಿಯ ಚೇರ್‌ಮೆನ್ ಸತ್ಯಶಂಕ‌ರ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ರಂಜಿತಾ ಶಂಕರ್, ಸಿಇಒ ಸುಶೀಲ್ ವೈದ್ಯ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

vAd Widget

Ad Widget

2000ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಉತ್ಪಾದನ ಘಟಕ ತೆರೆದ ಬಿಂದು ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. 2016ರಲ್ಲಿ ತೆಲಂಗಾಣದಲ್ಲಿ ಉತ್ಪಾದನ ಘಟಕ ತೆರೆದ ಬಿಂದು ಇದೀಗ ಆಂದ್ರದಲ್ಲಿ ಶಿಲಾನ್ಯಾಸಗೈದಿದೆ. 2025ರ ವೇಳೆ ಆಂದ್ರದ ಘಟಕ ಉದ್ಘಾಟನೆಯಾಗಲಿದೆ. ಬಿಂದು ಕಂಪನಿ ಸಾವಿರಾರು ಜನರಿಗೆ ಉದ್ಯೋಗ ನೀಡಿದೆ.

Ad Widget

Ad Widget
Continue Reading

ಮಂಗಳೂರು

Luxury ship-ಮಂಗಳೂರಿಗೆ ಬಂದ 8ನೇ ಬೃಹತ್ ಐಷಾರಾಮಿ ಹಡಗು

Ad Widget

Ad Widget

Ad Widget

Ad Widget

ಪಣಂಬೂರು ಮೇ 5: ಈ ವರ್ಷದ 8ನೇ ಐಷಾರಾಮಿ ಕ್ರೂಸ್ ‘ಎಂಎಸ್ ಇನ್‌ಸೈನಿಯಾ’ ನವಮಂಗಳೂರು ಬಂದರಿಗೆ ರವಿವಾರ ಆಗಮಿಸಿತು. ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ದ ವತಿಯಿಂದ ಭರತನಾಟ್ಯ, ಯಕ್ಷಗಾನ ಸಹಿತ ಭಾರತೀಯ, ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ವಿದೇಶೀ ಪ್ರವಾಸಿಗರಿಗೆ ಪರಿಚಯಿಸಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

Ad Widget

Ad Widget

Ad Widget

ನಾರ್ವೇಜಿಯನ್ ಕ್ರೂಸ್ ಲೈನರ್ 509 ಪ್ರಯಾಣಿಕರು ಮತ್ತು 407 ಸಿಬಂದಿ ಒಳಗೊಂಡಿದೆ. ಎನ್‌ ಎಂಪಿಎಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕ್ಷಿಪ್ರ ಕ್ಲಿಯರಿಂಗ್ ವ್ಯವಸ್ಥೆ ಸೌಲಭ್ಯ ಅಳವಡಿಸಲಾಗಿದೆ.

vAd Widget

Ad Widget

ಕಾರ್ಕಳ ಗೋಮಟೇಶ್ವರ ಬೆಟ್ಟ ಮೂಡಬಿದಿರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ಸಾಂಪ್ರದಾಯಿಕ ಮನೆಗಳಂತಹ ವಿವಿಧ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading