Wife Killed Husband ವಿಟ್ಲ: ಫೆ 27 : ಹೊಸ ಮನೆಯ ಸೆಂಟ್ರಿಗ್ ಕೆಲಸಕ್ಕೆ ಬಂದಾತ ಮನೆ ಯಜಮಾನಿಯ ಜತೆ ಸೇರಿ ಮನೆಯ ಯಜಮಾನನ್ನು ಕೊಲೆಗೈದ ಘಟನೆಯೊಂದು ಬಂಟ್ವಾಳ ತಾಲೂಕಿನ ಇಡ್ಕಿದು ಎಂಬಲ್ಲಿ ಫೆ 26 ರಂದು ನಡೆದಿದೆ. ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಕೊಲೆಯಾದವರು. ಅರವಿಂದ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳು .
ಯೋಗೀಶ ಗೌಡ ಹಾಗೂ ಆಶಾ ಮಧ್ಯೆ ಅನ್ಯೂನ್ಯ ಸಂಬಂಧವಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇವರಿಬ್ಬರ ನಡುವಿನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದರು ಎಂಬ ಕಾರಣಕ್ಕೆ ಈ ಕೊಲೆ ನಡೆದಿರುವುದಾಗಿ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದು, ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ಪತಿಯ ಕೊಲೆಯನ್ನು ಮುಚ್ಚಿಹಾಕಲು ಪತ್ನಿ ಆತ ರಾತ್ರಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿ ಕಟ್ಟು ಕಥೆ ಕಟ್ಟಿ ಜನರನ್ನು ನಂಬಿಸುವ ವಿಫಲ ಯತ್ನ ಮಾಡಿರುವುದು ಕೂಡ ಇದೆ ವೇಳೆ ಬೆಳಕಿಗೆ ಬಂದಿದೆ
ಅರವಿಂದ ಭಾಸ್ಕರ ರಾತ್ರಿ ಮಲಗಿದ್ದವರು ಏಳುತ್ತಿಲ್ಲ ಎಂದು ಹೇಳಿ ಪತ್ನಿ ಆಶಾ ಹಾಗೂ ಕೆಲ ಸ್ತಳೀಯರು ಆತನ ಮೃತ ಶರೀರವನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು . ಅಲ್ಲಿ ಪರಿಕ್ಷೀಸಿದ ವೈದ್ಯರು ಭಾಸ್ಕರ್ ಮೃತಪಟ್ಟಿರುವುದಾಗಿ ತಿಳಿಸಿದರು . ಆದರೇ ಮೃತ ಶರೀರವನ್ನು ಗಮನಿಸಿದ ವೈದರಿಗೆ ಏನೋ ಅಸಡಬಸಡ ಆಗಿರುವುದು ಗಮನಕ್ಕೆ ಬಂದಿದೆ.

ಮೃತದೇಹದ ಸ್ಥಿತಿಯನ್ನು ಪರಿಶೀಲಿಸಿದ ಭಾಸ್ಕರ್ ಸಂಬಂಧಿ ವಿಟ್ಲಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥ ಈ ಕುರಿತು ಠಾಣೆಗೆ ದೂರು ನೀಡಿದ್ದು ಅದರಲ್ಲಿ ಕುತ್ತಿಗೆಯನ್ನು ಅದುಮಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತಪಡಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ದೊರೆತ ಮಹತ್ವದ ಸುಳಿವಿನ ಆಧಾರದಲ್ಲಿ ಯೋಗೀಶ ಗೌಡ ಹಾಗೂ ಆಶಾ ಅವರನ್ನು ಕೊಲೆ ಆರೋಪಿಗಳು ಎಂದು ಹೆಸರಿಸಿದ್ದಾರೆ.

ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳ ಹಿಂದೆ ಹೊಸ ಮನೆಯನ್ನು ಕಟ್ಟುವ ಕೆಲಸ ಆರಂಭಿಸಿದರು. ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ನಿರ್ವಹಿಸುತ್ತಿದ್ದು, ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ. ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾಳೊಂದಿಗೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು. ಈ ಕುರಿತ ಮಾಹಿತಿಯನ್ನು ಸ್ವತ: ಭಾಸ್ಕರ್ ದೂರುದಾರ ರಘುನಾಥ ಅವರಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಅರವಿಂದ ಭಾಸ್ಕರ್ ಅವರನ್ನು ಅವರ ಪತ್ನಿ ಮತ್ತು ಯೋಗೀಶ ಗೌಡ ಸೇರಿ ಫೆ 25 ರ ರಾತ್ರಿ 10 ಗಂಟೆಯಿಂದ ಫೆ 26 ರ ಬೆಳಿಗ್ಗೆ 7 ಗಂಟೆಯ ನಡುವೆ ದಿಂದ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂದಿನ ತನಿಖೆ ಬಂಟ್ವಾಳ ಡಿವೈಎಸ್ಪಿ ನೇತ್ರತ್ವದಲ್ಲಿ
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರು
ಮೃತ ಸಂಬಂಧಿ ನೀಡಿದ ದೂರು ಮತ್ತು ವಿಟ್ಲ ಠಾಣಾಧಿಕಾರಿಯ ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಕಂಡು ಬಂದ ಸಂಗತಿಗಳ ಆಧಾರದಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದು, ಜತೆಗೆ SC/ST ದೌರ್ಜನ್ಯ ಕಾಯ್ದೆಯ ಕಲಂಗಳಡಿಯೂ ಪ್ರಕರಣ ದಾಖಲಿಸಲಾಗಿದೆ. SC/ST ದೌರ್ಜನ್ಯ ಪ್ರಕರಣವಾಗಿರುವುದರಿಂದ ಬಂಟ್ವಾಳ ಡಿವೈಎಸ್ಪಿ ಮುಂದಿನ ತನಿಖೆಯನ್ನು ವಹಿಸಿಕೊಳ್ಳಲಿದ್ದಾರೆ. ದೂರಿನ ಪ್ರಕಾರ ಶ್ರೀಮತಿ ಆಶಾ ಮತ್ತು ಯೋಗೇಶ್ ಗೌಡ ಆರೋಪಿಗಳು.