Connect with us

ಪುತ್ತೂರು

Shah Visit Puttur | ಷಾ ಪುತ್ತೂರಿಗೆ :ಫೆ.11ರ ಪುತ್ತೂರಿನ ಸಂಚಾರ ಬದಲಾವಣೆ ಹಾಗೂ ಗೃಹ ಸಚಿವರ ಕಾರ್ಯಕ್ರಮದ ವಿವರ ಇಲ್ಲಿದೆ

Ad Widget

Ad Widget

Ad Widget

Ad Widget

ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Shah Visit Puttur) ಫೆ.11ರಂದು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಪುತ್ತೂರಿನ ಸಂಚಾರ ಬದಲಾಗಿದೆ. ಗೃಹ ಸಚಿವರ ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹಲವು ಬದಲಾವಣೆಗಳು ಇರಲಿದೆ.

Ad Widget

Ad Widget

Ad Widget

ರಸ್ತೆ ಸಂಚಾರದಲ್ಲಿ ಬದಲಾವಣೆ:ಸುಗಮ ಸಂಚಾರದ ದೃಷ್ಠಿಯಿಂದ ಪುತ್ತೂರಿನಲ್ಲಿ ಫೆ.11ರಂದು ಬದಲಿ ರಸ್ತೆಗಳನ್ನು ಗುರುತಿಸಲಾಗಿದೆ. ಬೊಳುವಾರು ಬೈಪಾಸ್ ನ ಲಿನೆಟ್ ಜಕ್ಷನ್ ನಿಂದ ಮುಕ್ರಂಪಾಡಿಯವರೆಗೆ ಮಧ್ಯಾಹ್ನ 2ರಿಂದ ಸಂಜೆ 5.30ರವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

Ad Widget

ಮಂಗಳೂರು ಕಡೆಯಿಂದ ಸುಳ್ಯ ಮತ್ತು ಮಡಿಕೇರಿ ಕಡೆಗೆ ಸಾಗುವ ವಾಹನಗಳು ಲಿನೆಟ್ ಜಕ್ಷನ್ ನಿಂದ – ಬೊಳುವಾರು ಜಂಕ್ಷನ್ – ದರ್ಬೆ – ಪುರುಷರಕಟ್ಟೆ – ಪಂಜಳ- ಪರ್ಪುಂಜ ಮಾರ್ಗವನ್ನು ಬಳಸುವಂತೆ ಪುತ್ತೂರು ಉಪ ವಿಭಾಗ ಸಹಾಯಕ ಆಯುಕ್ತ ಆದೇಶ ಹೊರಡಿಸಿದ್ದಾರೆ.

Ad Widget

Ad Widget

ಅಮಿತ್ ಷಾ ಕಾರ್ಯಕ್ರಮ ಹೇಗಿರಲಿದೆ ಗೊತ್ತೇ..? ಮೊದಲು ಮುಖ್ಯಮಂತ್ರಿ ವಿವೇಕಾನಂದ ಇಂಜಿನಿಯರ್‌ಗೆ ಆಗಮಿಸಿ ಕೃಷಿ ಮೇಳದಲ್ಲಿ ಪಾಲ್ಗೊಂಡು ನಂತರ ತೆಂಕಿಲ ಸಮಾವೇಶ 3.25 ಗಂಟೆಗೆ ಆಗಮನ. ಗೃಹ ಸಚಿವ ಅಮಿತ್ ಷಾ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2.20 ಕ್ಕೆ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಈಶ್ವರಮಂಗಲ ಗಜಾನನ ಶಾಲೆ ಹೆಲಿಪ್ಯಾಡ್ ಗೆ 2.45, ಹನುಮಗಿರಿ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಪೂಜೆಯ ಬಳಿಕ ಅಮರಗಿರಿಯ ಲೋಕಾರ್ಪಣೆ ನಡೆಯಲಿದೆ.

Ad Widget

Ad Widget

Ad Widget

ಬಳಿಕ ಹೊರಟು ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಎನ್ ಆರ್ ಸಿ ಸಿ ಮೈದಾನಕ್ಕೆ 3.15 ಬಂದು ರಸ್ತೆಯ ಮೂಲಕ ತೆಂಕಿಲ ಮೈದಾನಕ್ಕೆ 3.25 ಬರಲಿದ್ದಾರೆ. 3.30 ಕ್ಕೆ ಕ್ಯಾಂಪ್ಕೋ ಗೋಲ್ಡನ್ ಜುಬಿಲಿ ಆಚರಣೆಗಳ ಉದ್ಘಾಟನೆ ನಡೆಯಲಿದೆ.

ವೇದಿಕೆಯಲ್ಲಿ ಭಾರತ್ ಮಾತೆ ಮತ್ತು ಕ್ಯಾಂಪ್ಕೋ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ವಿ ಸುಬ್ರಾಯ ಭಟ್ ಅವರಿಗೆ ಪುಷ್ಪಗಳನ್ನು ಅರ್ಪಿಸುವುದು.ಕ್ಯಾಂಪ್ಕೋ ಎಂಡಿ ಮೂಲಕ CAMPCO ದಿಂದ ಸ್ವಾಗತ ಮತ್ತು ಕ್ಯಾಂಪ್ಕೋ ಬಗ್ಗೆ ವಿವರಣೆಮಾನ್ಯ ಗೃಹ ಸಚಿವರಿಂದ ಡಿಜಿಟಲ್ ಲಾಂಚ್ -ಪುತ್ತೂರಿನ ಕ್ಯಾಂಪ್ಕೋ ಅಗ್ರಿ ಮಾಲ್‌ಗೆ ಶಂಕುಸ್ಥಾಪನೆ ಮತ್ತು ತೆಂಗಿನಕಾಯಿ ಯೋಜನೆ-ಕೊಬ್ಬರಿ ಎಣ್ಣೆ-CALPA ಪ್ರಾರಂಭ, ಕ್ಯಾಂಪ್ಕೊ ಉಗ್ರಾಣ ಉದ್ಘಾಟನೆ ಸಚಿವರಾದ ಪ್ರಲ್ಹಾದ ಜೋಶಿಯವರ ಭಾಷಣವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಭಾಷಣ.

ಸಂಸತ್ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರ ಭಾಷಣ ನಂತರ ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ.ಕಿಶೋರ್ ಕುಮಾರ್ ಕೊಡ್ಗಿಯವರ ಭಾಷಣ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣ ನಂತರ ಗೃಹ ಹಾಗೂ ಸಹಕಾರಿ ಸಚಿವರಾದ ಅಮಿತ್ ಷಾರಿಂದ ಭಾಷಣ. ಕ್ಯಾಂಪ್ಕೊ ಉಪಾಧ್ಯಕ್ಷರಿಂದ ಧನ್ಯವಾದ ನಡೆಯಲಿದೆ.

Click to comment

Leave a Reply

ಶಿಕ್ಷಣ

Balkrishna Borkar-ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ; ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ : ಬಾಲಕೃಷ್ಣ ಬೋರ್ಕರ್

Ad Widget

Ad Widget

Ad Widget

Ad Widget

ಪುತ್ತೂರು: ಬೌದ್ಧಿಕತೆಯಷ್ಟೇ ದೈಹಿಕ ಕ್ಷಮತೆಯೂ ಮುಖ್ಯ. ಆಧುನಿಕ ಶಿಕ್ಷಣ ಬೌದ್ಧಿಕತೆಗಷ್ಟೇ ಆದ್ಯತೆ ನೀಡುತ್ತಿದೆ. ಆದರೆ ದೈಹಿಕ ದೃಢತೆ ಸಾಧಿಸುವುದು ಅತ್ಯಂತ ಅಗತ್ಯ. ಕ್ರೀಡೆಗಳಲ್ಲಿ ತೊಡಗುವುದರಿಂದ ನಾವು ದೈಹಿಕವಾಗಿಯೂ ಸಮರ್ಥರೆನಿಸಿಕೊಳ್ಳಬಹುದು. ಶಾಲಾ ಕಾಲೇಜುಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಅವಕಾಶಗಳನ್ನು ಸೃಜಿಸಿಕೊಂಡು ದೇಹಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್ ಹೇಳಿದರು.

Ad Widget

Ad Widget

Ad Widget

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2024 ಅನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

Ad Widget

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜೀವನದಲ್ಲಿ ಹಠ ಸಾಧನೆ ಮುಖ್ಯ. ಸಾವರ್ಕರ್ ಅವರಂತಹ ಮಹಾನ್ ಪುರುಷರು ಹಠ ಸಾಧನೆಗೆ ಉತ್ಕೃಷ್ಟ ಮಾದರಿಯಾಗಿ ನಮ್ಮ ಮುಂದಿದ್ದಾರೆ. ಅಂತಹವರನ್ನು ಆದರ್ಶವಾಗಿರಿಸಿಕೊಂಡು ಹಠದಲ್ಲಿ ಮುನ್ನಡೆಯಬೇಕು. ಕ್ರೀಡಾಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವುದರಿಂದ ಅಂತಹ ಹಠಸಾಧನೆ ಸಾಧ್ಯ ಎಂದರು.

Ad Widget

Ad Widget

ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ, ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ವಂದಿಸಿದರು. ವಿದ್ಯಾರ್ಥಿನಿ ಚೈತನ್ಯಾ ಸಿ ಕಾರ್ಯಕ್ರಮ ನಿರ್ವಹಿಸಿದರು.

Ad Widget

Ad Widget

Ad Widget
Continue Reading

ಪುತ್ತೂರು

Farewell ceremony-ಪಾಲಿಟೆಕ್ನಿಕ್‌ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Ad Widget

Ad Widget

Ad Widget

Ad Widget

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ಏ 29ರಂದು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ನಡೆಸಲಾಯಿತು. ಭಾರತಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭವಾದ ಈ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಯುತ ಡಾ| ಮಹೇಶ್‌ಪ್ರಸನ್ನ ಮಾತನಾಡುತ್ತಾ, “ಜೀವನದಲ್ಲಿ ಯಶಸ್ಸು ಸಿಗಬೇಕಾದರೆ 5 ಅಂಶಗಳಿರಬೇಕು ಅವು ಯಾವುದೆಂದರೆ ನಮ್ಮ ನಡವಳಿಕೆ ನಮ್ಮಲ್ಲಿ ನಮಗಿರುವ ನಂಬಿಕೆ, ಸಮಯಪ್ರಜ್ಞೆ, ತಂಡದೊಂದಿಗೆ ಕೆಲಸಮಾಡುವ ಹೊಂದಾಣಿಕೆ, ನಮ್ಮಲ್ಲಿರುವ ಕೌಶಲ್ಯ ಅಭಿವೃದ್ಧಿಗೊಳಿಸುವಿಕೆ, ತನ್ಮೂಲಕ ಹೆಚ್ಚಿನ ಕೌಶಲ್ಯ ಆಭಿವೃದ್ಧಿಯಿಂದ ಬದುಕುವುದು, ಯಾವಾಗಲೂ ಒಳ್ಳೆಯದನ್ನೇ ಮಾಡಿ, ಒಳ್ಳೆಯವರಾಗಿ, ಎಲ್ಲರನ್ನೂ ಗೌರವದಿಂದ ಕಾಣುತ್ತಾ ನಿಮ್ಮ ಜೀವನದ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನಿಮ್ಮೆಲ್ಲರ ಜೀವನದ ಕನಸುಗಳನ್ನು ಪುತ್ತೂರ ಒಡೆಯ ಈಡೇರಿಸಲಿ” ಎಂದು ಶುಭ ಹಾರೈಸಿದರು.

Ad Widget

Ad Widget

Ad Widget

ಕರ‍್ಯಕ್ರಮದ ಅಧ್ಯಕ್ಷರಾದ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಮಾತನಾಡುತ್ತಾ “ವಿದ್ಯಾರ್ಥಿಗಳಾದ ನೀವು ಜೀವನಕ್ಕೆ ಬೇಕಾದ ಮಾನಸಿಕತೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಹೆತ್ತವರ ಕನಸನ್ನು ನನಸಾಗಿಸುವ ಜವಾಬ್ಧಾರಿ ನಿಮ್ಮ ಮೇಲಿದೆ. ಜೀವನದ ದಾರಿಯಲ್ಲಿ ಸಫಲತೆಯನ್ನು ಸಾಧಿಸಿ ಸಂಸ್ಥೆಗೂ ಗೌರವವನ್ನು ತರುವಂತವರಾಗಿ” ಎಂದು ಹಾರೈಸಿದರು. ಸಂಸ್ಥೆಯ ಸಂಚಾಲಕರಾದ ಶ್ರೀ ಮಹಾದೇವ ಶಾಸ್ತಿç ಮಾತನಾಡುತ್ತಾ, “ವೇಗವಾಗಿ ಬದಲಾಗುವ ಜಗತ್ತಿನಲ್ಲಿ ಹೊಸ ಆವಿಷ್ಕಾರಗಳ ಜೊತೆ ಹೊಂದಿಕೊAಡು, ಅಧ್ಯಯನ ಮಾಡುತ್ತಾ ಜೀವನಕ್ಕೆ ಪೂರಕವಾದ ಅಂಶಗಳನ್ನು ಬೆಳೆಸಿಕೊಳ್ಳಿ ಹಾಗೂ ಸಂಸ್ಥೆಯ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ” ಎಂದರು.

Ad Widget

ಕರ‍್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನದ ಮಾತುಗಳನ್ನು ಹಂಚಿಕೊAಡರು ಹಾಗೂ ವಿಭಾಗ ಮುಖ್ಯಸ್ಥರು ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಹಾಗೂ ಶ್ರೇಯೋಭಿವೃದ್ಧಿಗೆ ಶುಭ ನುಡಿದರು. ಈ ಸಂದರ್ಭದಲ್ಲಿ ಅತಿಥಿಗಳು, ಆಡಳಿತ ಮಂಡಳಿಯ ಸದಸ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಭಾರತಮಾತೆಯ ಭೂಪಟಕ್ಕೆ ದೀಪ ಪ್ರಜ್ವಲನಗೈದರು.

Ad Widget

Ad Widget

ಕರ‍್ಯಕ್ರಮದ ಸ್ವಾಗತವನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಕುಮಾರ್ ನಡೆಸಿಕೊಟ್ಟರು. ಕಂಪ್ಯೂಟರ್‌ಸೈನ್ಸ್ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಇಲೆಕ್ಟಾçನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗ ಮುಖ್ಯಸ್ಥರಾದ ಶ್ರೀ ಮುರಳೀಧರ್ ವಂದನಾರ್ಪಣೆಗೈದರು.

Ad Widget

Ad Widget

Ad Widget

ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿ ನರಸಿಂಹ ಪೈ ಹಾಗೂ ಸದಸ್ಯರಾದ ರವಿ ಮುಂಗ್ಲಿಮನೆ ಅಧ್ಯ್ಯಾಪಕ, ಅಧ್ಯಾಪಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಈ ಕರ‍್ಯಕ್ರಮದಲ್ಲಿ ಭಾಗವಹಿಸಿದರು. ನಿರೂಪಣೆಯನ್ನು ಅಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುರಾಜ್ ನಡೆಸಿಕೊಟ್ಟರು.

Continue Reading

ದಕ್ಷಿಣ ಕನ್ನಡ

Heart attack : ಚೌಕಿಯಲ್ಲಿ ವೇಷ ಕಳಚುತ್ತಿದ್ದಾಗ ಹೃದಯಘಾತಕ್ಕೆ ಬಲಿಯಾದ ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

Ad Widget

Ad Widget

Ad Widget

Ad Widget

ಮಂಗಳೂರು: ಸರಿ ಸುಮಾರು 4 ದಶಕಗಳ ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಗಂಗಾಧರ ಪುತ್ತೂರು (59 ವರ್ಷ) ಉಡುಪಿ ಜಿಲ್ಲೆಯ ಕೋಟದಲ್ಲಿ ವೇಷ ಕಳಚುತ್ತಿರುವಾಗ ಹೃದಯಘಾತಕ್ಕೆ ತುತ್ತಾಗಿ ನಿಧನ ಹೊಂದಿದ್ದಾರೆ.

Ad Widget

Ad Widget

Ad Widget

ಗಂಗಾಧರ ಪುತ್ತೂರು ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಡೆಸುತ್ತಿದ್ದರು. ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮಿಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ.

Ad Widget

ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿ 1964ರಲ್ಲಿ   ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು, ನಂತರ ಕೆ.ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು.18ನೇ ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಅವರು, ಸ್ತ್ರೀ ವೇಷ, ಪುಂಡು ವೇಷ, ರಾಜ ವೇಷ ನಿರ್ವಹಿಸುವ ಮೂಲಕ ಯಕ್ಷರಂಗದ ಸವ್ಯಸಾಚಿಯಾಗಿದ್ದರು.   

Ad Widget

Ad Widget

ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ, ಶ್ರೀದೇವಿ, ಸೀತೆ, ದೇವೇಂದ್ರ, ದುಶ್ಯಾಸನ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಸ್ಯದ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಪ್ರೌಢಿಮೆ ಕೂಡ ಅವರಲ್ಲಿತ್ತು.

Ad Widget

Ad Widget

Ad Widget

ಮೃತರು ಸಹೋದರ, ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.   

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading