ಪುತ್ತೂರು: ಪುತ್ತೂರಿನಲ್ಲಿ ಫೆ.11ರ ಅಮಿತ್ ಷಾ ಅವರ ಕಾರ್ಯಕ್ರಮದ ಸಲುವಾಗಿ ಪುತ್ತೂರು ಬಿಜೆಪಿ ವತಿಯಿಂದ “ಬೃಹತ್ ಪ್ರಚಾರ ಕಾರ್ಯಕ್ರಮ”ವು ದರ್ಬೆಯಿಂದ ಬೊಳುವಾರು ತನಕ ಫೆ.9ರಂದು ಕಾಲ್ನಡಿಗೆಯ ಮೂಲಕ ನಡೆಯಲಿದೆ.
ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಪುತ್ತೂರಿಗೆ ಆಗಮಿಸುವ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಷಾ , ಫೆ.11ಕ್ಕೆ ಮಧ್ಯಾಹ್ನ 2.30 ಕ್ಕೆ ಕಣ್ಣೂರಿಗೆ ತಲುಪಿ , ಅಲ್ಲಿಂದ ವಾಯುಪಡೆ ಹೆಲಿಕಾಪ್ಟರ್ ನಲ್ಲಿ ಈಶ್ವರಮಂಗಲಕ್ಕೆ ಬಂದು ನಂತರ ಅಮರಗಿರಿ ಲೋಕಾರ್ಪಣೆ ಕಾರ್ಯಕ್ರಮ ಮುಗಿಸಿ , ಅಲ್ಲಿಂದ ಪುತ್ತೂರಿಗೆ ಹೆಲಿಕಾಪ್ಟರ್ ನಲ್ಲೇ ಬಂದು ಎನ್ ಆರ್ ಸಿಸಿ ಯಲ್ಲಿ ಇಳಿದು ನಂತರ ತೆಂಕಿಲಕ್ಕೆ ರಸ್ತೆ ಮಾರ್ಗದ ಮೂಲಕ ಸಂಚರಿಸಿ ಅಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಹಾಗೂ ಸಹಕಾರಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ .
ಈ ಬಗ್ಗೆ ಪ್ರಚಾರರಾರ್ಥವಾಗಿ, ಫೆ.9 ರ ಸಂಜೆ 4 ಗಂಟೆಗೆ ಕಾಲ್ನಡಿಗೆ ಜಾಥಾ ಮೂಲಕ ಬೃಹತ್ ಪ್ರಚಾರ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಕಚೇರಿ ಪ್ರಕಟನೆ ತಿಳಿಸಿದೆ.