Connect with us

ದಕ್ಷಿಣ ಕನ್ನಡ

Heart attack : ಚೌಕಿಯಲ್ಲಿ ವೇಷ ಕಳಚುತ್ತಿದ್ದಾಗ ಹೃದಯಘಾತಕ್ಕೆ ಬಲಿಯಾದ ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು

Ad Widget

Ad Widget

Ad Widget

Ad Widget

ಮಂಗಳೂರು: ಸರಿ ಸುಮಾರು 4 ದಶಕಗಳ ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ಗಂಗಾಧರ ಪುತ್ತೂರು (59 ವರ್ಷ) ಉಡುಪಿ ಜಿಲ್ಲೆಯ ಕೋಟದಲ್ಲಿ ವೇಷ ಕಳಚುತ್ತಿರುವಾಗ ಹೃದಯಘಾತಕ್ಕೆ ತುತ್ತಾಗಿ ನಿಧನ ಹೊಂದಿದ್ದಾರೆ.

Ad Widget

Ad Widget

Ad Widget

Ad Widget

ಗಂಗಾಧರ ಪುತ್ತೂರು ಅವರು ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ 42 ವರ್ಷ ತಿರುಗಾಟ ನಡೆಸುತ್ತಿದ್ದರು. ಬುಧವಾರ ಕೋಟ ಗಾಂಧಿ ಮೈದಾನದಲ್ಲಿ ನಡೆದ ಯಕ್ಷಗಾನದಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮಿಯ ಕುಕ್ಕಿತ್ತಾಯನ ವೇಷ ನಿರ್ವಹಿಸಿ, ಚೌಕಿಗೆ ಮರಳಿ ಕಿರೀಟ ಆಭರಣಗಳನ್ನು ತೆಗೆದಿಟ್ಟು ಮುಖದ ಬಣ್ಣ ತೆಗೆಯುತ್ತಿರುವಾಗ ಅವರಿಗೆ ತೀವ್ರ ಹೃದಯಾಘಾತವಾಗಿ, ಮೃತಪಟ್ಟಿದ್ದಾರೆ.

Ad Widget

Ad Widget

Ad Widget

Ad Widget

ನಾರಾಯಣ ಮಯ್ಯ ಮತ್ತು ಲಕ್ಷ್ಮಿ ದಂಪತಿಯ ಪುತ್ರನಾಗಿ 1964ರಲ್ಲಿ   ಸೇಡಿಯಾಪು ಮನೆಯಲ್ಲಿ ಜನಿಸಿದ ಅವರು, ಏಳನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದು, ನಂತರ ಕೆ.ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ನಾಟ್ಯಾಭ್ಯಾಸ ಕಲಿತರು.18ನೇ ವಯಸ್ಸಿನಿಂದ ಮೇಳ ತಿರುಗಾಟ ಆರಂಭಿಸಿದ ಅವರು, ಸ್ತ್ರೀ ವೇಷ, ಪುಂಡು ವೇಷ, ರಾಜ ವೇಷ ನಿರ್ವಹಿಸುವ ಮೂಲಕ ಯಕ್ಷರಂಗದ ಸವ್ಯಸಾಚಿಯಾಗಿದ್ದರು.   

Ad Widget

Ad Widget

Ad Widget

ಮಾಲಿನಿ, ಚಿತ್ರಾಂಗದೆ, ಮೋಹಿನಿ, ದಾಕ್ಷಾಯಿಣಿ, ಪ್ರಮೀಳೆ, ಶ್ರೀದೇವಿ, ಸೀತೆ, ದೇವೇಂದ್ರ, ದುಶ್ಯಾಸನ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಹಾಸ್ಯದ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವ ಪ್ರೌಢಿಮೆ ಕೂಡ ಅವರಲ್ಲಿತ್ತು.

Ad Widget

Ad Widget

Ad Widget

ಮೃತರು ಸಹೋದರ, ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.   

Click to comment

Leave a Reply

ಸುಳ್ಯ

ಸುಬ್ರಹ್ಮಣ್ಯ : ಗಾಳಿ – ಮಳೆಯಿಂದ ಕರುವನ್ನು ರಕ್ಷಿಸಲು ತೋಟಕ್ಕೆ ಹೋದ ಮಹಿಳೆಯ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಮೃತ್ಯು

Ad Widget

Ad Widget

Ad Widget

Ad Widget

ಕಡಬ :ಮೇ 15.  ಗಾಳಿ ಮಳೆಯಿಂದ  ಕರುವನ್ನು ರಕ್ಷಿಸಲು ಹೋದ  ಮಹಿಳೆಯ ಮೇಲೆ ಮರ ಉರುಳಿ ಬಿದ್ದು ವೃದ್ದೆ ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ  ಸುಬ್ರಹ್ಮಣ್ಯ ಗ್ರಾಮದ  ಕುಲ್ಕುಂದ ಎಂಬಲ್ಲಿ ಬುಧವಾರ ನಡೆದಿದೆ.

Ad Widget

Ad Widget

Ad Widget

Ad Widget

ಕುಲ್ಕುಂದ ನಿವಾಸಿ ದಿ. ಶೇಷಾಪ್ಪ ಗೌಡ ಅವರ ಪತ್ನಿ ಮಿನಾಕ್ಷಿ (67) ಮೃತ ಮಹಿಳೆ. ಇಂದು ಸುಬ್ರಹ್ಮಣ್ಯ ಪರಿಸರದಲ್ಲಿ ವಿಪರೀತ ಗಾಳಿ – ಮಳೆ ಸುರಿದಿದ್ದು ಈ ವೇಳೆ ತೋಟದಲ್ಲಿ ಕಟ್ಟಿದ್ದ ಕರುವನ್ನು ಬಿಡಿಸಲು ಮೀನಾಕ್ಷಿಯವರು ತೋಟಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

Ad Widget

Ad Widget

Ad Widget

Ad Widget

ಈ ವೇಳೆ ಬೀಸಿದ ಗಾಳಿಗೆ ತೋಟದಲ್ಲಿದ ಮರ ಮೀನಾಕ್ಷಿಯವರ ಮೇಲೆ ಬಿದ್ದಿದೆ. ಮರ ಉರುಳಿ ಬಿದ್ದ ರಭಸಕ್ಕೆ  ಮಹಿಳೆಯ ದೇಹ ಛಿದ್ರವಾಗಿದೆ.

Ad Widget

Ad Widget

Ad Widget

ಘಟನಾ ಸ್ಥಳಕ್ಕೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ,ಕಂದಾಯ ಅಧಿಕಾರಿ, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

Ad Widget

Ad Widget

Ad Widget
Continue Reading

ದಕ್ಷಿಣ ಕನ್ನಡ

Muliya Chinnotsava ಮುಳಿಯ ಚಿನ್ನೋತ್ಸವ ಸ್ಪೆಷಲ್ – ರುದ್ರಾಕ್ಷಿ ಕಲೆಕ್ಷನ್ ಅನಾವರಣ

Ad Widget

Ad Widget

Ad Widget

Ad Widget

ಪುತ್ತೂರು: ಶಿವನಿಗೆ ಸಂಬಂಧಿಸಿದ ರುದ್ರಾಕ್ಷ ಕಂಕಣವು ಜನಸಾಮಾನ್ಯರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಹಿಂದೂ ಧರ್ಮದಲ್ಲಿ, ರುದ್ರಾಕ್ಷ ಕಂಕಣವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ, ಇದು ಜೀವನಕ್ಕೆ ಸಂಬಂಧಿಸಿದ ಕಷ್ಟಗಳು ಮತ್ತು ಸಮಸ್ಯೆಗಳನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಂತಹ ರುದ್ರಾಕ್ಷಿಗಳನ್ನು ಇತ್ತೀಚಿಗಿನ ದಿನದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ರುದ್ರಾಕ್ಷಿಯಿಂದ ಕೈ ಬಳೆ, ಉಂಗುರ, ಮಾಲೆಯಾಗಿ ಸಿದ್ದಗೊಂಡ ರುದ್ರಾಕ್ಷಿ ಕಲೆಕ್ಷನ್ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಅನಾವರಣಗೊಂಡಿದೆ.

Ad Widget

Ad Widget

Ad Widget

Ad Widget

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ರುದ್ರಾಕ್ಷಿ ಹೊಸ ವಿನ್ಯಾಸದ ಸಂಗ್ರಹವನ್ನು ಅನಾವರಣಗೊಳಿಸಿದರು. ಆರಂಭದಲ್ಲಿ ದೀಪ ಪ್ರಜ್ವಲಿಸಿ, ಬಳಿಕ ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದರು. ಇದೇ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವರ ಪ್ರಸಾದವನ್ನು ಮುಳಿಯ ಜ್ಯುವೆಲ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರಿಗೆ ನೀಡಿ ಸಂಸ್ಥೆಗೆ ಶ್ರೀ ದೇವರ ಅನುಗ್ರಹಕ್ಕೆ ಪ್ರಾರ್ಥಿಸಿದರು.

Ad Widget

Ad Widget

Ad Widget

Ad Widget

ಆರೋಗ್ಯ ಪೂರಿತ ಜೀವನ ವೃದ್ಧಿಸಲು ರುದ್ರಾಕ್ಷಿ ಮಹತ್ವ ಪಡೆದಿದೆ:
ರುದ್ರಾಕ್ಷಿ ಕಲೆಕ್ಷನ್ ಅನಾವರಣಗೊಳಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವೆಂಕಟೇಶ್ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಆರೋಗ್ಯ ಪೂರಿತ ಜೀವನವನ್ನು ವೃದ್ಧಿಸಲು ಪೂರಕವಾಗಿ ರುದ್ರಾಕ್ಷಿ ಸರ, ಕೈಯ ಆಭರಣ ಬಹಳ ಮಹತ್ವ ಪಡೆದಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಭಕ್ತಿಯ ಮಾರ್ಗದರ್ಶನ ನೀಡುತ್ತಿರುವ ಮುಳಿಯ ಜ್ಯುವೆಲ್ಸ್‌ಗೆ ಪರಿವಾರ ಸಹಿತ ಮಹಾಲಿಂಗೇಶ್ವರ ದೇವರ ಪೂರ್ಣ ಅನುಗ್ರಹ ಇರಲಿ. ಗ್ರಾಹಕರಿಗೂ ರುದ್ರಾಕ್ಷಿ ಮಾಲೆಯನ್ನು ಧರಿಸುವ ಯೋಗ ಭಾಗ್ಯ ಬರಲಿ ಎಂದು ಹಾರೈಸಿದರು.

Ad Widget

Ad Widget

Ad Widget

ಮನಸ್ಸಿನ ಆರೋಗ್ಯ ವೃದ್ಧಿಗೆ ರುದ್ರಾಕ್ಷಿ ಅಗತ್ಯ:
ಮುಳಿಯ ಜ್ಯುವೆಲ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ರುದ್ರಾಕ್ಷಿ ವಿಶೇಷ ಆಭರಣ ಯಾಕೆಂದರೆ ‘ಸುಖಸ್ಯ ಮೂಲ ಧರ್ಮ’ ಎಂದು ಆಚಾರ್‍ಯರಾಗಿರುವ ಚಾಣಕ್ಯ ಹಿಂದೆ ಹೇಳಿದ್ದಾರೆ. ನಿತ್ಯ ದೇವರ ದ್ಯಾನ ಮಾಡಲು ತುಳಸಿ ಮಾಲೆ, ರುದ್ರಾಕ್ಷಿ ಮಹತ್ವ ಪಡೆದಿದೆ. ಮನಸ್ಸಿನ ಆರೋಗ್ಯ ವೃದ್ದಿಯಾಗಲು ರುದ್ರಾಕ್ಷಿ ಮಹತ್ವ ಪಡೆದಿದದೆ. ಇದನ್ನು ಪ್ರತಿಯೊಬ್ಬರು ಧರಿಸಬಹುದು ಎಂಬುದಕ್ಕೆ ಸಣ್ಣ ಸಣ್ಣ ರುದ್ರಾಕ್ಷಿಯನ್ನು ಸಣ್ಣ ಸಣ್ಣ ಮಾಲೆಯನ್ನಾಗಿ ಕೈ ಬಳೆ, ಉಂಗುರವನ್ನಾಗಿ, ಸರವನ್ನಾಗಿ ಸಿದ್ಧಪಡಿಸಲಾಗಿದೆ. ಹಿಂದೆ ಗ್ರಾಹಕರು ಮಾಡಿಸಿ ಧರಿಸುತ್ತಿದ್ದರು. ಇದೀಗ ಗ್ರಾಹಕರಿಗೆ ಅನುಕೂಲವಾಗಲು ರುದ್ರಾಕ್ಷಿ ಕಲೆಕ್ಷನ್ ಸಿದ್ದಪಡಿಸಲಾಗಿದೆ ಎಂದರು

Ad Widget

Ad Widget

Ad Widget

ಆರ್ಡರ್ ಕೊಟ್ಟು ಮಾಡಿಸುವ ಬದಲು ನೇರ ಬಂದು ಖರೀದಿ ಮಾಡಬಹುದು. ರುದ್ರಾಕ್ಷ ಮಣಿಗಳ ಕೈ ಬಳೆಯು ಕುತ್ತಿಗೆಗೆ ದೊಡ್ಡ ಮಾಲೆಯನ್ನು ಧರಿಸಲು ಇಷ್ಟಪಡದವರಿಗೆ ಸೂಕ್ತವಾಗಿದೆ ಎಂದ ಅವರು ರುದ್ರಾಕ್ಷಿ ದೇಹಕ್ಕೂ ಮನಸ್ಸಿಗೂ ವೃದ್ದಿ ಸಿಗುತ್ತದೆ. ಕೈ ಆಭರಣ, ಗಂಟಾಭರಣ, ಪೆಂಡೆಂಟ್, ಪದಕ ಸಹಿತ ಹಲವು ಕಲೆಕ್ಷನ್ ನಮ್ಮಲಿ ಇವೆ ಎಂದು ಹೇಳಿದರು.

ಮುಳಿಯ ಜ್ಯುವೆಲ್ಸ್‌ನ ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಕಾರ್ಯ ನಿರ್ವಹಣಾ ಅಧಿಕಾರಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಬಂಧಕರಾದ ಸಂಜೀವ, ಶಂಕರ್ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ಪ್ರಾರ್ಥಿಸಿದರು. ಪ್ಲೋರ್ ಮೆನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

Continue Reading

ಸಿನೆಮಾ

Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

Ad Widget

Ad Widget

Ad Widget

Ad Widget

ತುಳುನಾಡ ಕುವರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಮಿತಾ ಶೆಟ್ಟಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

Ad Widget

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ನಟಿ ಶಮಿತಾ ಶೆಟ್ಟಿ ಅವರನ್ನು ಕಾಡುತ್ತಿರುವ ಖಾಯಿಲೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ಎಲ್ಲಾ ಮಹಿಳೆಯರೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ವಿಡಿಯೋ ಮೂಲಕ ತಮ್ಮ ಆರೋಗ್ಯದ ಕುರಿತಾದ ವಿಷಯ ಹಂಚಿಕೊಂಡಿರುವ ಶಮಿತಾ ಶೆಟ್ಟಿ, ಆಸ್ಪತ್ರೆ ಬೆಡ್‌ನಿಂದಲೇ ವಿಡಿಯೋ ಮಾಡಿ ವಿವರಣೆ ನೀಡಿದ್ದಾರೆ. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ. ನನ್ನನ್ನು ಕಾಡುತ್ತಿದ್ದ ನೋವಿನ ಮೂಲ ತಿಳಿದುಕೊಂಡು ಚಿಕಿತ್ಸೆ ನೀಡಿದ ಸ್ತ್ರೀವೈದ್ಯೆ ಡಾ. ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

Ad Widget

Ad Widget

Ad Widget

ಶಸ್ತ್ರಚಿಕಿತ್ಸೆಯಿಂದ ಸದ್ಯ ನಾನು ಈ ರೋಗದಿಂದ ಗುಣ ಮುಖಳಾಗುತ್ತಿದೇನೆ. ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ಕಾಯಿಲೆಯ ಲಕ್ಷಣ :
ಮಹಿಳೆಯರಲ್ಲಿ ಕಂಡು ಬರುವ ಎಂಡೊಮೆಟ್ರಿಯೊಸಿಸ್ ಕಾಯಿಲೆ ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಮೊದಮೊದಲು ಸೊಂಟ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕೂಡಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading