Connect with us

ಬಿಗ್ ನ್ಯೂಸ್

Pramod Muthalik | ಪರೇಶ್ ಮೇಸ್ತಾ, ಶರತ್ ಮಡಿವಾಳನ ಮನೆಯವರಿಗೆ ಆಶ್ವಾಸನೆ ಕೊಟ್ಟು ಮೋಸ ಮಾಡಿದಂತೆ ಪ್ರವೀಣ ನೆಟ್ಟಾರ್ ಮನೆಯವರಿಗೂ ಮಾಡಿದರೆ ಸಿಎಂ ಮುಖಕ್ಕೆ ಮಸಿ ಬಳಿಯುತ್ತೇವೆ – ಮುತಾಲಿಕ್

Ad Widget

Ad Widget

Ad Widget

Ad Widget Ad Widget

ಮಂಗಳೂರು: ಹತ್ಯೆಯಾದ ಉತ್ತರ ಕನ್ನಡದ ಪರೇಶ್ ಮೇಸ್ತಾ (Paresh Mestha), ದಕ್ಷಿಣ ಕನ್ನಡದ ಬಂಟ್ವಾಳದ ಶರತ್ ಮಡಿವಾಳನ(Sharath Madivala) ಮನೆಯವರಿಗೆ ಆಶ್ವಾಸನೆ ಕೊಟ್ಟು ಮಾಡಿದ ಮೋಸದಂತೆ ಪ್ರವೀಣ್ ನೆಟ್ಟಾರು (Praveen Nettar) ಮನೆಯವರಿಗೆ ಮೋಸ ಮಾಡಿದರೆ ಮುಖ್ಯಮಂತ್ರಿಯ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದರು.

Ad Widget

Ad Widget

Ad Widget

Ad Widget

Ad Widget

ಜೂನ್ ನಲ್ಲಿ ಹತ್ಯೆಯಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಲು ಸರ್ಕಾರ ಜಿಲ್ಲಾ ಪ್ರವೇಶ ನಿಷೇಧಿಸಿದ್ದ ಕಾರಣ ಸೆ.19ರಂದು ಬೆಳ್ಳಾರೆಯ ಪ್ರವೀಣ್ ನೆಟ್ಟಾರುರವರ ಮನೆಗೆ ಭೇಟಿ ನೀಡಿದ ಮುತಾಲಿಕ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.

Ad Widget

Ad Widget

ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುತಾಲಿಕ್, ಉತ್ತರ ಕನ್ನಡದಲ್ಲಿ ಹತ್ಯೆಯಾದ ಪರೇಶ್ ಮೇಸ್ತಾ ಹಾಗೂ ಬಂಟ್ವಾಳದಲ್ಲಿ ಹತ್ಯೆಯಾದ ಶರತ್ ಮಡಿವಾಳನ ಕುಟುಂಬಕ್ಕೆ ಉದ್ಯೋಗ ಭರವಸೆ ನೀಡಿ ಬಿಜೆಪಿ ಆಡಳಿತ ಬಂದ ನಂತರ ಮರೆತು ಹೋಗಿದೆ. ಮೊನ್ನೆ ಪ್ರವೀಣ್ ನೆಟ್ಟಾರ್ ಹೆಂಡತಿಗೆ ಉದ್ಯೋಗ ಭರವಸೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಶೀಘ್ರ ಸಿಎಂ ಕಚೇರಿಯಲ್ಲಿ ಉದ್ಯೋಗ ನೀಡಬೇಕು ಎಂದರು.

Ad Widget

Ad Widget

ಮೇಸ್ತಾ, ಮಡಿವಾಳನ ಕುಟುಂಬಕ್ಕೆ ಮಾಡಿದಂತೆ ಮೋಸ ಮಾಡಿದರೆ ಸಿಎಂ ಮನೆಗೆ ನುಗ್ಗಿ ಸಿಎಂ ಮುಖಕ್ಕೆ ಮಸಿ ಬಳಿಯಲಾಗುತ್ತದೆ ಎಂದು ಮುತಾಲಿಕ್ ಎಚ್ಚರಿಸಿದರು.

Ad Widget

Ad Widget

ಬಿಜೆಪಿ ಕ್ಯಾನ್ಸರ್ ಬೆಳೆಸಿದೆ: ಬಳಿಕ ಪುತ್ತೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುತಾಲಿಕ್, ಬಿಜೆಪಿ ಸಾಕಿದ ಕ್ಯಾನ್ಸರ್ ಎಸ್.ಡಿ.ಪಿ.ಐ ಎಂದು ಬಹಿರಂಗ ಹೇಳಿಕೆ ಕೊಟ್ಟರು.

25 ಹಿಂದೂ ಕಾರ್ಯಕರ್ತರಿಗೆ ಸೀಟ್ ಕೊಡಬೇಕು: ಬಿಜೆಪಿ ಕರ್ನಾಟಕದಲ್ಲಿ 25 ಹಿಂದೂ ಕಾರ್ಯಕರ್ತರಿಗೆ ಸೀಟ್ ಕೊಡಬೇಕು ಎಂದು ಒತ್ತಾಯಿಸಿದರು. ತನ್ನ ಹೊಸ ಪಕ್ಷ ಸೃಷ್ಟಿಯಾಗುತ್ತದ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುತಾಲಿಕ್, ತಾನು ಹೊಸ ಪಕ್ಷ ಸೃಷ್ಟಿ ಮಾಡೋದಿಲ್ಲ , ಅದಕ್ಕೆ ಹಣಬಲ, ಜಾತಿ ಬಲ , ರೌಡಿಸಂ ಬೇಕು ಎಂದರು.
ಬಿಜೆಪಿ 25 ಹಿಂದೂ ಕಾರ್ಯಕರ್ತರಿಗೆ ಸೀಟ್ ಘೋಷಿಸಬೇಕು. ಆಗ ಬಿಜೆಪಿಯ 150 ರ ಕನಸು ದಾಟಿ 175 ಸೀಟ್ ಗೆಲ್ತದೆ ಎಂದರು. ಇಲ್ಲದಿದ್ದರೆ ಅಧಿಕಾರ ಕಷ್ಟ ಎಂದರು.

25 ಹಿಂದೂ ಕಾರ್ಯಕರ್ತರು ಯೋಗಿಯಂತೆ ಕೆಲಸ ಮಾಡುತ್ತಾರೆ ಎಂದರು. ಕಾಂಗ್ರೆಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಕಾಂಗ್ರೇಸ್‍ನ ಶಾಸಕರ ಖರೀದಿಸುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಬೋರ್ಡ್ ವಿರುದ್ಧ ವಾಗ್ದಾಳಿ:

ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೋರ್ಡ್ ಅಲ್ಲ ಅದು ಬೋಗಸ್ ಬೋರ್ಡ್ ಎಂದು ಶ್ರೀರಾಮ ಸೇನೆಯ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು.

ತಮಿಳುನಾಡಿನ ಒಂದು ಗ್ರಾಮವನ್ನೇ ವಕ್ಪ್ ಬೋರ್ಡ್ ತನ್ನದೆಂದು ಹೇಳಿಕೊಂಡಿರುವುದು ಇಡೀ ದೇಶದ ಕಣ್ಣು ತೆರೆಸಿದೆ, ವಕ್ಫ್ ಬೋರ್ಡ್ ಸಂಪೂರ್ಣವಾಗಿ ಇಡೀ ದೇಶದಲ್ಲಿ ರದ್ದಾಗಬೇಕು. ಇದೊಂದು ಡೇಂಜರಸ್ ಬೋರ್ಡ್ ಇಡೀ ಸಮಾಜದ ದೇಶದ ಆಸ್ತಿಯನ್ನು ನುಂಗುತ್ತಿರುವ ಈ ವಕ್ಫ್ ಬೋರ್ಡನ್ನು ಕೂಡಲೇ ರದ್ದು ಮಾಡಬೇಕು .ಕೇಂದ್ರ ಸರಕಾರಕ್ಕೆ ಈ ಬಗ್ಗೆ ಒತ್ತಾಯವನ್ನು ಮಾಡಲಾಗುವುದು ಎಂದರು.

ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯನ್ನು ದೇಶದಾದ್ಯಂತ ಕೂಡಲೇ ನಿಷೇಧಿಸಬೇಕು, ಈ ಸಂಬಂಧ ಮುಂದಿನ ತಿಂಗಳಿಂದ ರಾಜ್ಯದಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪುತ್ತೂರಿನಲ್ಲಿ ಹೇಳಿಕೆ ನೀಡಿದರು.

Click to comment

Leave a Reply

ಬಿಗ್ ನ್ಯೂಸ್

ಮಧ್ಯಾಹ್ನ 1 ಗಂಟೆಯವರೆಗೆ ದಕ್ಷಿಣ ಕನ್ನಡದಲ್ಲಾದ ಮತದಾನವೆಷ್ಟು ಗೊತ್ತೇ..?

Ad Widget

Ad Widget

Ad Widget

Ad Widget Ad Widget

ಮಂಗಳೂರು : ಲೋಕಸಭಾ ಚುನಾವಣೆಗೆ ಬಿಸಿಲಿನ ಧಗೆಯ ನಡುವೆಯೂ ಬಿರುಸಿನ ಮತದಾನ ನಡೆಯುತ್ತಿದೆ.

Ad Widget

Ad Widget

Ad Widget

Ad Widget

Ad Widget

ಮಧ್ಯಾಹ್ನ 1 ಗಂಟೆಯವರೆಗೆ 48.1% ಮತ ಪೋಲಿಂಗ್ ಆಗಿದೆ.

Ad Widget

Ad Widget

ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮತ
ಬೆಳ್ತಂಗಡಿ 50.01
ಮೂಡುಬಿದರೆ 45.1
ಮಂಗಳೂರು ಉತ್ತರ 46.88
ಮಂಗಳೂರು ದಕ್ಷಿಣ 41.62
ಮಂಗಳೂರು ಉಳ್ಳಾಲ 47.83
ಬಂಟ್ವಾಳ 50.13
ಪುತ್ತೂರು 51.01
ಸುಳ್ಯ 53.31ನಲ್ಲಿ ಇಷ್ಟು ಶೇಕಡಾ ಮತದಾನವಾಗಿದೆ.

Ad Widget

Ad Widget

ಜಿದ್ದಾಜಿದ್ದಿನ ಕಣವಾಗಿ ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರವಿದೆ. ಬಿಜೆಪಿಯಿಂದ ಕ್ಯಾ.ಬ್ರಿಜೇಶ್ ಚೌಟ, ಕಾಂಗ್ರೇಸ್‍ನಿಂದ ಪದ್ಮರಾಜ್ ಪೂಜಾರಿ ಹಾಗೂ ಸೌಜನ್ಯ ಪರ ನೋಟಾ ಅಭಿಯಾನ ಸದ್ದು ಮಾಡುತ್ತಿದ್ದೆ.

Ad Widget

Ad Widget
Continue Reading

ಬಿಗ್ ನ್ಯೂಸ್

ಕಟೀಲ್ ಆಶೀರ್ವಾದ ಪಡೆದ ಪದ್ಮರಾಜ್ : ಹರಸಿದ ಸಂಸದರು..!

Ad Widget

Ad Widget

Ad Widget

Ad Widget Ad Widget

ಮಂಗಳೂರು : ಮಂಗಳೂರಿನ ಲೋಕಸಭಾ ಕ್ಷೇತ್ರದ ಕಾಂಗ್ರೇಸ್‍ ಅಭ್ಯರ್ಥಿ ಪದ್ಮರಾಜ್ ಪೂಜಾರಿಯವರು ಸಂಸದ ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಪಡೆದರು.

Ad Widget

Ad Widget

Ad Widget

Ad Widget

Ad Widget

ಮಂಗಳೂರು ಲೇಡಿಹಿಲ್ ಅಲೋಶಿಯಸ್ ಶಾಲೆಗೆ ಮತದಾನಕ್ಕೆ ಬಂದಿದ್ದ ನಳೀನ್ ಕುಮಾರ್ ಕಟೀಲ್ ರ ಆಶೀರ್ವಾದ ಪಡೆದರು.

Ad Widget

Ad Widget

ಕಟೀಲ್ ಎದುರಾದಾಗ ಕಾಲು ಹಿಡಿಯಲು ಪದ್ಮರಾಜ್ ಬಗ್ಗಿದರು. ತಡೆದ ಕಟೀಲ್ ಆತ್ಮೀಯವಾಗಿ ಹರಸಿದರು. ಕಟೀಲ್ ಹಾಗೂ ಪದ್ಮರಾಜ್ ಈ ಹಿಂದಿನಿಂದಲೂ ಆತ್ಮೀಯರಾಗಿದ್ದಾರೆ.

Ad Widget

Ad Widget

ಟಿಕೇಟ್ ಕೈತಪ್ಪಿದ ನಂತರ ಕಟೀಲ್ ಕೇರಳ ಉಸ್ತುವಾರಿಯಾಗಿದ್ದಾರೆ.

Ad Widget

Ad Widget
Continue Reading

ಬಿಗ್ ನ್ಯೂಸ್

ಕುಟುಂಬ ಸಮೇತ ಮತ ಚಲಾಯಿಸಲು ಪದ್ಮರಾಜ್ ಬಂದಾಗ ಬಿಜೆಪಿ ಕಾರ್ಯಕರ್ತನಿಂದ ಗೂಂಡಾಗಿರಿ – ಪೊಲೀಸ್ ಅಧಿಕಾರಿಯನ್ನು ತಳ್ಳಾಡಿ ಪುಂಡಾಟ : ಮಾಧ್ಯಮದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ

Ad Widget

Ad Widget

Ad Widget

Ad Widget Ad Widget

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೇಸ್‍ ಅಭ್ಯರ್ಥಿ ಪದ್ಮರಾಜ್ ಮತದಾನ ಮಾಡಲು ಬಂದಾಗ ಬಿಜೆಪಿ ಕಾರ್ಯಕರ್ತರೋರ್ವರು ದಾಂದಲೆ ಎಬ್ಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

Ad Widget

ಪದ್ಮರಾಜ್ ಪೂಜಾರಿಯವರು ತಮ್ಮ ಪತ್ನಿ ಪುತ್ರಿ ಹಾಗೂ ಕುಟುಂಬ ಸಮೇತರಾಗಿ ನಗರದ ಕಂಕನಾಡಿ ಕಪಿತಾನಿಯೋ ಶಾಲಾ ಮತಗಟ್ಟೆ 108ಕ್ಕೆ ಬಂದಿದ್ದರು.

Ad Widget

Ad Widget

ಪದ್ಮರಾಜ್ ಆಗಮಿಸಿದಾಗ ಜನ ಸೇರಿದ್ದನ್ನು ಕಂಡು ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಸಂದೀಪ್ ಎಕ್ಕೂರು ಎಂಬಾತ ಗುಂಡಾಗಿರಿ ನಡೆಸಿದ ಘಟನೆ ನಡೆದಿದೆ.

Ad Widget

Ad Widget

ಪೊಲೀಸ್ ಅಧಿಕಾರಿಯನ್ನ ತಳ್ಳಾಡಿ ಪುಂಡಾಟ ಮೆರೆದ ಈತ ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಚಿತ್ರೀಕರಣ ಮಾಡಿದ ಮಾಧ್ಯಮದವರ ಮೇಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

Ad Widget

Ad Widget

ಕೊನೆಗೆ ಪೊಲೀಸ್ ಅಧಿಕಾರಿ ಗದರಿಸಿದ್ದಕ್ಕೆ ತೆಪ್ಪಗಾಗಿ ಸ್ಥಳದಿಂದ ಜಾಗ ಖಾಲಿ ಮಾಡಿಸಿದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading