Connect with us

ಸುಳ್ಯ

Praveen Nettar Dream : ಪ್ರವೀಣ್‌ ನೆಟ್ಟಾರ್‌ ಬದುಕಿನ ಅತೀ ದೊಡ್ಡ ಕನಸ್ಸನ್ನು ನನಸ್ಸು ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಪ್ರಯತ್ನ

Ad Widget

Ad Widget

Ad Widget

Ad Widget

ಸವಣೂರು (ದಕ್ಷಿಣ ಕನ್ನಡ): ಬಿಜೆಪಿ ಯುವ ಮುಖಂಡ ದಿ. ಪ್ರವೀಣ್ ನೆಟ್ಟಾರ್ ( ಪ್ರವೀಣ್‌ ನೆಟ್ಟಾರ್‌ ) ಹೊಸ ಮನೆ ಕಟ್ಟುವ ಕನಸು ಕಂಡಿದ್ದರು. ಅದಕ್ಕಾಗಿ ಜಾಗ ಕೂಡ ಸಿದ್ದಗೊಳಿಸಿದ್ದರು . ಇನ್ನೇನು ಮನೆ ನಿರ್ಮಾಣದ ಕಾರ್ಯ ಆರಂಭವಾಗಬೇಕು ಅನ್ನುವಷ್ಟರಲ್ಲಿ ದುಷ್ಕರ್ಮಿಗಳು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಅವರು ಮನೆ ನಿರ್ಮಾಣಕ್ಕೆ ಸಿದ್ದಪಡಿಸಿದ್ದ ಜಾಗದಲ್ಲೆ ಅವರ ಅಂತಿಮ ಸಂಸ್ಕಾರ ನಡೆಸಲಾಗಿತ್ತು.

Ad Widget

Ad Widget

Ad Widget

ಇದೀಗ ಅವರ ಕನಸಿನ ಮನೆಯನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ( Bjp State President ) ನಳಿನ್ ಕುಮಾರ್ ಕಟೀಲ್ (nalin kumar Kateel) ಅವರು ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರ ಜತೆ ಸಂಸದರ ನಿವಾಸ ಕುಂಜಾಡಿಯಲ್ಲಿ ಭಾನುವಾರ ರಾತ್ರಿ ಈ ಕುರಿತು ಮಾತುಕತೆ ನಡೆಸಿದರು.

vAd Widget

Ad Widget

ಚಿಕ್ಕಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನೆಟ್ಟಾರು ಅವರ ಕುಟಂಬ ಸದಸ್ಯರಿಗೆ ತನ್ನ ಕಛೇರಿಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು ಪ್ರವೀಣ್ ಅವರ ಮನೆಗೆ ದೌಡಾಯಿಸಿದ್ದಾರೆ . ಮನೆ ನಿರ್ಮಾಣದ ಬಗ್ಗೆ ಪ್ರವೀಣ್ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.

Ad Widget

Ad Widget

PU Lecturer Recruitment 2022 : ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

Ad Widget

Ad Widget

Ad Widget

ಕೆಲವು ಸಂಘಟನೆಗಳು ಮೃತರ ಕುಟುಂಬಸ್ಥರಿಗೆ ಮನೆ ನಿರ್ಮಿಸಿಕೊಡುವ ಭರವಸೆಯನ್ನು ಅವರು ಮೃತಪಟ್ಟ 2-3 ದಿನಗಳೊಳಗಡೆ ಘೋಷಿಸಿದ್ದರು. ಈ ಬಗ್ಗೆ ಸಂಘಟನೆಗಳ ಮುಖಂಡರು ಮನೆಗೆ ತೆರಳಿ ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ಕೊಟ್ಟಿದ್ದರು. ಆದರೇ ಬಿಜೆಪಿಯು ತನ್ನ ಕಾರ್ಯಕರ್ತನ ಕುಟುಂಬದ ಜತೆಗೆ ಬಲವಾಗಿ ನಿಲ್ಲುವ ತೀರ್ಮಾನಕ್ಕೆ ಬಂದಂತಿದೆ.

ಹೀಗಾಗಿ ಪ್ರವೀಣ್ ಪತ್ನಿಗೆ ಸರಕಾರಿ ಕೆಲಸದ ಭರವಸೆ ಹಾಗು ಇದೀಗ ಮನೆ ನಿರ್ಮಾಣದ ಕಾರ್ಯಕ್ಕೂ ಚಾಲನೆ ನೀಡಲು ಮನ ಮಾಡಿದೆ. ಕುಂಜಾಡಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ಕುಟುಂಬಸ್ಥರೊಂದಿಗೆ ಚರ್ಚಿಸಿ ಮನೆ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಪ್ರವೀಣ್ ಕುಟುಂಬಕ್ಕೆ ಏನೆಲ್ಲಾ ನೆರವು ನೀಡಬಹುದೋ, ಅದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರವೀಣ್ ಅವರ ತಂದೆ ಶೇಖರ್ ಪೂಜಾರಿ, ರತ್ನಾವತಿ, ಪತ್ನಿ ನೂತನ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಪ್ರಮುಖರಾದ ಆರ್. ಕೆ. ಭಟ್ ಮತ್ತಿತರರು ಉಪಸ್ಥಿತರಿದ್ದರು.

Motorola Phone : ಕೈಗೆಟುಕುವ ಬೆಲೆಯಲ್ಲಿ ವಿಶ್ವದ ಮೊದಲ 200 ಮೆಗಾಪಿಕ್ಸೆಲ್ ಕ್ಯಾಮೆರ ಮೊಬೈಲ್ ಪೋನ್ ಪರಿಚಯಿಸಿದ ಮೊಟೊರೊಲಾ – ಇಲ್ಲಿದೆ ವೈಶಿಷ್ಟ್ಯ ಗಳ ವಿವರ

Click to comment

Leave a Reply

ಸುಳ್ಯ

ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊ ತೆಗೆದ ಅನ್ಯ ಕೋಮಿನ ಯುವಕ – ಠಾಣೆಯೆದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

Ad Widget

Ad Widget

Ad Widget

Ad Widget

ಸುಳ್ಯ:   ಮೊಬೈಲ್‌ ಕರೆನ್ಸಿ ರಿಚಾರ್ಜ್‌ ಮಾಡಿಸಲು ಬಂದ ಯುವತಿಯ ಫೋಟೊವನ್ನು ಅನ್ಯಕೋಮಿನ ಯುವಕನೊಬ್ಬ  ತೆಗೆದ  ಆರೋಪ ಕೇಳಿ ಬಂದಿದ್ದು ಪ್ರಕರಣ ಸುಳ್ಯ ಠಾಣೆ ಮೆಟ್ಟೀಲೆರಿದೆ.  ಯುವತಿ ಸುಳ್ಯದ  ಗಾಂಧಿನಗರದಲ್ಲಿರುವ  ಏರ್ಟೆಲ್ ಮಳಿಗೆಗೆ ಹೋಗಿದ್ದ  ವೇಳೆ ಪ್ರಕರಣ ನಡೆದಿದೆ.

Ad Widget

Ad Widget

Ad Widget

ಗಾಂಧಿನಗರದಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿ ತೊಂದರೆಗೆ ಒಳಗಾದವಳು. ಆಕೆ ಮೊಬೈಲ್‌ ರಿಚಾರ್ಜ್‌ ಮಾಡಿಸಲೆಂದು ಹತ್ತಿರದ ಏರ್ಟೆಲ್ ಮಳಿಗೆಗೆ ಹೋಗಿದ್ದಾಳೆ. ಮಳಿಗೆಯಲ್ಲಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಕುಳಿತುಕೊಳ್ಳುವಂತೆ ತಿಳಿಸಿ ಆಕೆಯ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿದ್ದಾನೆ ಎನ್ನಲಾಗಿದೆ.

vAd Widget

Ad Widget

ಅವನ ನಡವಳಿಕೆಯಿಂದ ಅನುಮಾನಗೊಂಡ ಯುವತಿ ಆತನ ಮೊಬೈಲನ್ನು ಕಸಿದು ನೋಡಿದಾಗ ಅದರಲ್ಲಿ ತನ್ನ ಫೋಟೋ ಇರುವುದನ್ನು ನೋಡಿದ್ದಾಳೆ. ಹಾಗೂ ತಕ್ಷಣ ಅದನ್ನು ಡಿಲೀಟ್ ಮಾಡಿದ್ದಾಳೆ.

Ad Widget

Ad Widget

 ಬಳಿಕ ಮನೆಗೆ ಬಂದು ವಿಷಯ ತಿಳಿಸಿದಳು. ಮನೆಯವರು ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೋಲಿಸರು ಯುವಕನನ್ನು ಕರೆ ತಂದು ವಿಚಾರಣೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ ಘಟನೆ ನಡೆದಿದೆ.

Ad Widget

Ad Widget

Ad Widget
Continue Reading

ಸುಳ್ಯ

ಕಡಬ : ಮದುವೆ ಔತಣಕೂಟದಲ್ಲಿ ಯುವಕ – ಯುವತಿ ಜತೆಗಿರುವ ಫೋಟೊ ತೆಗೆದ ಆರೋಪ – ತಂಡದಿಂದ ಫೋಟೊ ತೆಗೆದವನ ಮನೆಗೆ ನುಗ್ಗಿ ಹಲ್ಲೆ : ಪ್ರಕರಣ ದಾಖಲು

Ad Widget

Ad Widget

Ad Widget

Ad Widget

 ಔತಣಕೂಟವೊಂದರಲ್ಲಿ ಯುವಕನೋರ್ವ ಯುವತಿಯೊಂದಿಗಿರುವುದನ್ನು ವ್ಯಕ್ತಿಯೊರ್ವ  ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ  ಎಂದು ಆರೋಪಿಸಿ  ತಂಡವೊಂದು  ಫೋಟೊ ತೆಗೆದ ವ್ಯಕ್ತಿಯ  ಮನೆಗೆ ಬಂದು ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಲಾಡಿ ಎಂಬಲ್ಲಿ ಇತ್ತೀಚೆಗೆ ನಡೆದಿದೆ.

Ad Widget

Ad Widget

Ad Widget

ರೆಂಜಲಾಡಿಯ ಯುವತಿಯ ವಿವಾಹದ ಔತಣಕೂಟ ಏ.29ರಂದು ನಡೆದಿತ್ತು. ಯುವತಿಯೊಂದಿಗೆ ನಿಶಾಂತ್‌ ಎಂಬ ಯುವಕ ಇರುವ  ಫೋಟೋವನ್ನು ಬಾಂತಾಜೆ ನಿವಾಸಿ ದಿವಾಕರ ಎಂಬವರು ತೆಗೆದಿದ್ದಾರೆ ಎನ್ನುವುದು ಹಲ್ಲೆ ಮಾಡಿದವರ ತಕರಾರು.

vAd Widget

Ad Widget

 ಈ ವಿಚಾರವಾಗಿ ಮಾತನಾಡಲು  ಅದೇ ದಿನ ರಾತ್ರಿ 11.30ರ ಸುಮಾರಿಗೆ ನಿಶಾಂತ್ ತನ್ನ ಸಹಚರರಾದ ಜನಾರ್ದನ, ಲೋಕೇಶ, ರಮೇಶ್, ಉದಯ, ಭುವನ, ಅಶ್ವಿತ್ ಎಂಬವರೊಂದಿಗೆ  ದಿವಾಕರ   ಮನೆಗೆ ಬಂದಿದ್ದಾರೆ. ಈ ವೇಳೆ    ದಿವಾಕರ್‌ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೇಳಿ ಬಂದಿದೆ.

Ad Widget

Ad Widget

 ದಿವಾಕರ ಅವರ ಅತ್ತಿಗೆ ಭವ್ಯಶ್ರೀ ಅವರು ಜಗಳ ಬಿಡಿಸಲು ಯತ್ನಿಸಿದಾಗ ಸ್ವಾತಿ ಮತ್ತು ರೇಷ್ಮಾ, ಶೈನಿ ಎಂಬವರು ಭವ್ಯ ಶ್ರೀಯವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ನೆರೆಮನೆಯ ಶಿವಪ್ಪ ಎಂಬವರು ರಕ್ಷಣೆಗೆ ಬಂದಾಗ ಅವರಿಗೂ ನಿಶಾಂತ್ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

Ad Widget

ನೆರೆಮನೆಯ ಬಾಬು ಗೌಡ ಮತ್ತು ಪ್ರದೀಪ್ ಅವರುಗಳು ಗಾಯಾಳುಗಳನ್ನು ಉಪಚರಿಸಿ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಡಬ | ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸುಳ್ಯ

Kadaba-ಕಡಬ: ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್‌ನಲ್ಲಿ ತೆರಳಿ ಸಿಇಟಿ ಬರೆದ ಆ್ಯಸಿಡ್ ದಾಳಿ ಸಂತ್ರಸ್ತೆ

Ad Widget

Ad Widget

Ad Widget

Ad Widget

ಕಡಬ: ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಸ್ಪತ್ರೆಯಿಂದಲೇ ಆಂಬ್ಯುಲೆನ್ಸ್ ಮೂಲಕ ತೆರಳಿ ಸಿಇಟಿ ಬರೆದಿದ್ದಾರೆ.

Ad Widget

Ad Widget

Ad Widget

ಮಾ. 4ರಂದು ಕಾಲೇಜಿನಲ್ಲಿ ಗಣಿತ ಪರೀಕ್ಷೆಗೆ ತಯಾರಾಗುತ್ತಿದ್ದ ವೇಳೆ ಅಜಿನ್ ಎಂಬಾತ ಆ್ಯಸಿಡ್ ಎರಚಿದ ಕಾರಣ ಮೂವರು ವಿದ್ಯಾರ್ಥಿನಿಯರಿಗೆ ಸುಟ್ಟಗಾಯಗಳಾಗಿತ್ತು. ಇಬ್ಬರು ವಿದ್ಯಾರ್ಥಿನಿಯರು 12% ಮತ್ತು 10% ಸುಟ್ಟಗಾಯಗಳನ್ನು – ಅನುಭವಿಸಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಖ್ಯ ಸಂತ್ರಸ್ತೆ 17 ವರ್ಷದ ಯುವತಿಗೆ ಸುಮಾರು 20% ಸುಟ್ಟಗಾಯಗಳಾಗಿತ್ತು. ಈಕೆ ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಕೆ ತನ್ನ ತಾಯಿಯೊಂದಿಗೆ ಐಸೋಲೇಶನ್ ವಾಡ್೯ನಲ್ಲಿ ಇದ್ದುಕೊಂಡೇ ಸಿಂಟಿಗೆ ತಯಾರಿ ನಡೆಸುತ್ತಿದ್ದರು.

vAd Widget

Ad Widget

ಸಿಇಟಿಗಾಗಿ ಈಜೆ ಮತ್ತು ಸಂತ್ರಸ್ತ ಇತರ ಇಬ್ಬರು ಸಹಪಾಠಿಗಳಿಗೆ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿತ್ತು. 6 ಆದರೆ ಚಿಕಿತ್ಸೆ ವೇಳೆ ದೂರದ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದ ಕಾರಣ ದ.ಕ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೆಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಸ್. ರಮ್ಯಾ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಮಂಗಳೂರಿನ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ಪದವಿಪೂರ್ವ ಕಾಲೇಜುನಲ್ಲಿ ಈಕೆಗೆ ಸಿಐಟಿ ಬರೆಯಲು ರಮ್ಯಾ ಅವರು ಅನುಮತಿ ನೀಡಿದ್ದರು.

Ad Widget

Ad Widget

ಅದರಂತೆ ವಿದ್ಯಾರ್ಥಿನಿ ಸಿಐಟಿ ಕೇಂದ್ರಕ್ಕೆ ತನ್ನ ತಾಯಿಯೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಬಂದಿದ್ದು ಆಕೆಗೆ ಪ್ರತ್ಯೇಕ ತರಗತಿಯನ್ನು ನೀಡಲಾಗಿತ್ತು. ಅಲ್ಲಿ ಮೊದಲ ದಿನ ಜೀವಶಾಸ್ತ್ರ ಪರೀಕ್ಷೆ ಬರೆದು ಬಳಿಕ ಮಧ್ಯಾಹ್ನ 12.15ಕ್ಕೆ ಆಸ್ಪತ್ರೆಗೆ ಮರಳಿ 2.30ಕ್ಕೆ ವಾಪಸ್ ಬಂದು ಗಣಿತ ಪತ್ರಿಕೆ ಬರೆದಿದ್ದಾರೆ. ಏ. 19ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳನ್ನು ಬರೆದಿದ್ದಾರೆ.

Ad Widget

Ad Widget

Ad Widget

ಆ್ಯಸಿಡ್‌ ದಾಳಿಯಿಂದ ಸಂತ್ರಸ್ತರಾಗಿರುವ ಮೂವರು ವಿದ್ಯಾರ್ಥಿನಿಯರೂ ಎಪ್ರಿಲ್ 29ರಂದು ಪ್ರಾರಂಭವಾಗುವ ಪಿಯುಸಿ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ. ವೈದ್ಯರ ಸಲಹೆಯಂತೆ ಇಲಾಖೆಯು ಮರು ಪರಿಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ಮಾಹಿತಿ ನೀಡಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading