Connect with us

ಮಂಗಳೂರು

Ayushman Card : ಹಳೇ ಆಯುಷ್ಮಾನ್ ಕಾರ್ಡ್ ಅನೂರ್ಜಿತ – ತುರ್ತು ಚಿಕಿತ್ಸೆಗೆ ಸಹಕಾರಿಯಾಗಿರುವ ಹೊಸ ಕಾರ್ಡ್ ಹೀಗೆ ಪಡೆಯಿರಿ : ಅತ್ಯುಪಯುಕ್ತ ಆರೋಗ್ಯ ಮಾಹಿತಿಯ ಕಣಜ ‘ಅಭಾದ ವಿವರ ಇಲ್ಲಿದೆ

Ad Widget

Ad Widget

Ad Widget

Ad Widget

ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಕರ್ನಾಟಕ (Ayushman Bharat Pradhan Mantri Jan Arogya Karnataka) (ಎಬಿ ಪಿಎಂ ಜೆಎಎವೈ ಎಆರ್‌ಕೆ) ಸಹ ಬ್ರ್ಯಾಂಡ್ ಕಾರ್ಡನ್ನು ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಈಗಾಗಲೇ  ಚಾಲ್ತಿಯಲ್ಲಿರುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ಗಳು ಅನೂರ್ಜಿತಗೊಳ್ಳಲಿವೆ.  ಹೀಗಾಗಿ ಇನ್ನು ಮುಂದೆ ಈಗಾಗಲೇ  ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿದವರು ಹಾಗೂ ಇನ್ನು ಈ ಯೋಜನೆಯ ಭಾಗವಾಗಲು ಇಚ್ಚಿಸುವರು ಈ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು.

Ad Widget

Ad Widget

Ad Widget

Ad Widget

ಕಾರ್ಡ್ ಮಾಡಿಸುವುದು ಹೇಗೆ?

ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನ ದಾಖಲೆ ಒದಗಿಸಿ ‘ಗ್ರಾಮ ವನ್‌’ ಕೇಂದ್ರಗಳಲ್ಲಿ ಈ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ. ಈಗಾಗಲೇ ಆಯುಷ್ಮಾನ್‌ ಭಾರತ್ ಕಾರ್ಡ್‌ ಹೊಂದಿದ್ದವರೂ  ಇನ್ನು ಮುಂದೆ  ಸರ್ಕಾರಿ ಆರೋಗ್ಯ ಸೌಲಭ್ಯ ಪಡೆಯಬೇಕಾದರೆ   ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ಮಾಡಿಸುವುದು ಕಡ್ಡಾಯ.

Ad Widget

Ad Widget

Ad Widget

Ad Widget

ಇಲ್ಲಿ ಕಾರ್ಡ್ ಮಾಡುವುದು ಸ್ಥಗಿತ :

ವೆನ್ಲಾಕ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತಿತ್ತು. ಈ ಆಸ್ಪತ್ರೆಗಳಲ್ಲಿ ಕಾರ್ಡ್‌ ಮಾಡಿಕೊಡುವುದನ್ನು ಸ್ಥಗಿತಗೊಳಿಸಲಾಗಿದೆ.

Ad Widget

Ad Widget

Ad Widget

Ad Widget

KSP Recruitment 2022 : 3484 ಕಾನ್‌ಸ್ಟೇಬಲ್  ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದ ರಾಜ್ಯ ಸರಕಾರ – ವಯೋಮಿತಿ, ವಿದ್ಯಾರ್ಹತೆ ವೇತನ ,ಅರ್ಜಿ ಪ್ರಕ್ರಿಯೆ ಸಹಿತ ಎಲ್ಲ ವಿವರ  

Ad Widget

Ad Widget

Ad Widget

ಚಿಕಿತ್ಸಾ ಮೊತ್ತದ ವಿವರ :

ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ಗಳನ್ನು ಎಲ್ಲರೂ ಮಾಡಿಸಬಹುದು. ಬಿಪಿಎಲ್‌ ಕುಟುಂಬಗಳು ವರ್ಷದಲ್ಲಿ ಗರಿಷ್ಠ ₹ 5 ಲಕ್ಷ ಹಾಗೂ ಎಪಿಎಲ್‌ ಕುಟುಂಬಗಳಿಗೆ ಗರಿಷ್ಠ ₹ 1.50 ಲಕ್ಷದವರೆಗಿನ ಚಿಕಿತ್ಸೆ ವೆಚ್ಚವನ್ನು ಈ ಕಾರ್ಡ್ ಮೂಲಕ ಭರಿಸಲಾಗುತ್ತದೆ. 

 ದೇಶದಾದ್ಯಂತ ಬಳಕೆ:

 ಈ ಕಾರ್ಡನ್ನು ದೇಶದಾದ್ಯಂತ ಬಳಸಬಹುದು. ಆರೋಗ್ಯ ಸೇವೆ ಪಡೆಯಲು ದಾಖಲೆಗಳಿಗಾಗಿ ಅಲೆಯುವುದನ್ನು ಇದು ತಪ್ಪಿಸಲಿದೆ

ಆರೋಗ್ಯ ಮಾಹಿತಿಯ ಕಣಜ ‘ಅಭಾ’

ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಅಭಿಯಾನವನ್ನು ಆರಂಭಿಸಿದೆ. ಇದರಡಿ ನೋಂದಾಯಿತ ಪ್ರತಿ ವ್ಯಕ್ತಿಗೆ ಪ್ರತ್ಯೇಕ 14 ಅಂಕಿಗಳ ಸಂಖ್ಯೆಯನ್ನು ನೀಡಿ, ಅದರ ಮೂಲಕ ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಯನ್ನು (ಆಭಾ) ನಿರ್ವಹಿಸಲಾಗುತ್ತದೆ. ವ್ಯಕ್ತಿಯು ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರ ಆರೋಗ್ಯ ಸಂಬಂಧಿ ವಿವರಗಳು ಈ ಖಾತೆಯಲ್ಲಿ ನಮೂದಾಗುತ್ತವೆ. ವ್ಯಕ್ತಿಯ ಆರೋಗ್ಯ ಸಂಬಂಧಿಸಿದ ಸಮಗ್ರ ಚಿತ್ರಣವನ್ನು ಇದರಲ್ಲಿ ಸಂರಕ್ಷಿಸಬಹುದು.

High School Teacher Recruitment 2022 : ಕರ್ನಾಟಕ ಸರ್ಕಾರದ ಪ್ರೌಢಶಾಲೆಗಳಲ್ಲಿ 2,500 ಶಿಕ್ಷಕರ ನೇಮಕಾತಿಗೆ ಸರಕಾರದ ಆದೇಶ – ಇಲ್ಲಿದೆ ವಿವರ

ಮುಂದುವರಿದ ಚಿಕಿತ್ಸೆ ಪಡೆಯುವಾಗ ಮತ್ತೆ ಹೊಸತಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಈ ದಾಖಲೆಗಳನ್ನು ಬೇರೆಯವರಿಗೆ ಹಸ್ತಾಂತರಿಸಬೇಕಾದರೆ ವ್ಯಕ್ತಿಯ ಸಮ್ಮತಿ ಅಗತ್ಯ.

ಅಭಾ ಖಾತೆ ಮಾಡಿಸುವುದು ಕಡ್ಡಾಯವಲ್ಲ. ಇದರಲ್ಲಿ ಸಂಗ್ರಹಿಸಿದ ಆರೋಗ್ಯ ದಾಖಲೆಗಳನ್ನು ಅಳಿಸುವುದಕ್ಕೂ ಅವಕಾಶಗಳಿವೆ. ಸಾರ್ವಜನಿಕರು ನೇರವಾಗಿ https://abha.abdm.gov.in/register ಆಭಾ ಯೋಜನೆಯಡಿ ನೋದಾಯಿಸಬಹುದು. 

ಆಭಾ ನಂಬರ್‌ ಅನ್ನು ಕಾರ್ಡ್‌ ಅನ್ನು https://healthid.ndhm.gov.in/link ಮೊಬೈಲ್‌ ಮೂಲಕ ಅಥವಾ ಸೈಬರ್‌ ಸೆಂಟರ್‌ಗಳ ಮೂಲಕವೂ ಪಡೆದುಕೊಳ್ಳಬಹುದು. ಇದಕ್ಕೆ ಕೇವಲ ಮೂರು ಹಂತದ ನೋಂದಣಿ ಪ್ರಕ್ರಿಯೆ ಪೂರ್ತಿಗೊಳಿಸಬೇಕಾಗುತ್ತದೆ.

Kotak kanya Scholarship : ಕೋಟಕ್ ಕನ್ಯಾ ಸ್ಕಾಲರ್ ಶಿಪ್ 2022ಕ್ಕೆ ಅರ್ಜಿ ಆಹ್ವಾನ – ವಾರ್ಷಿಕ 1.5 ಲಕ್ಷದಷ್ಟು ಆರ್ಥಿಕ ನೆರವು

ತುರ್ತು ಚಿಕಿತ್ಸೆಗೆ ಸಹಕಾರಿ :

ತುರ್ತು ಚಿಕಿತ್ಸೆ ಅಗತ್ಯ ಇರುವವರು ಹಾಗೂ ಅಪಘಾತಕ್ಕೊಳಗಾದವರು ಮಾತ್ರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಗೊತ್ತುಪಡಿಸಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಉಳಿದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಆ ನಿರ್ದಿಷ್ಟ ಚಿಕಿತ್ಸೆ ಲಭ್ಯ ಇಲ್ಲ ಎಂಬ ಬಗ್ಗೆ ದಾಖಲೆಗಳನ್ನು ಪಡೆದು ನಂತರಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು.

ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ಜಾರಿಯಾದಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ರೆಫರೆಲ್‌ ನಮೂನೆಗಳನ್ನು ಡಿಜಿಟಿಲೀಕರಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯ ಇದ್ದರೆ, ಆ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್‌ ಮಾಡುವುದಕ್ಕೆ ಅವಕಾಶವೇ ಇಲ್ಲ.

ಈ ಎಲ್ಲ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್‌ ಕುಮಾರ್‌ ಎ., ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಅಭಿಯಾನದ ಜಿಲ್ಲಾ ಸಂಯೋಜಕ ಡಾ.ಸುದರ್ಶನ್‌, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಡಾ.ಯಶಸ್ವಿನಿ ನೀಡಿದ್ದಾರೆ.

Gold Rate Today : ಖರೀದಿಗೂ ಮುನ್ನ ಇಂದಿನ ಚಿನ್ನ ಬೆಳ್ಳಿಯ ರೇಟ್‌ ತಿಳಿಯಿರಿ

Click to comment

Leave a Reply

ಅಪರಾಧ

Mangaluru-ಮಂಗಳೂರು: ದಂಡ ಕಟ್ಟಲು ಹೇಳಿದ ಕೋಪದಲ್ಲಿ ಪೊಲೀಸ್ ವಾಹನಕ್ಕೆ ಇನ್ಸೂರೆನ್ಸ್ ಇಲ್ಲ ಎಂದು ವಿಡಿಯೋ ವೈರಲ್ ಮಾಡಿದ ವ್ಯಕ್ತಿ – ಪೊಲೀಸ್ ಕಮೀಷನರ್ ಮಾಡಿದ್ದೇನು ?

Ad Widget

Ad Widget

Ad Widget

Ad Widget

ಮಂಗಳೂರು: ಪೊಲೀಸ್ ಗಸ್ತು ವಾಹನದ ವಿಮೆ ಮುಕ್ತಾಯವಾಗಿದೆಯೆಂಬ ವೀಡಿಯೊವೊಂದು ಇಂದು ಬೆಳಗ್ಗಿನಿಂದ ಮಂಗಳೂರಿನ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ವಾಹನ ಸವಾರನೊಬ್ಬನಲ್ಲಿ ಟ್ರಾಫಿಕ್ ಪೊಲೀಸರು ವಾಹನದ ದಾಖಲಾತಿ ಕೇಳಿದ್ದು , ಆಗ ತನಗೆ ಅರ್ಜಂಟ್ ಹೋಗಲಿದೆ ಎಂದು ಹೇಳಿದ ವ್ಯಕ್ತಿ ಬಳಿಕ ಅಲ್ಲಿದ್ದ ಪೊಲೀಸ್ ಗಸ್ತು ವಾಹನಕ್ಕೆ ವಿಮೆ ಇಲ್ಲ ಎಂದು ತಿಳಿಸಿ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದ.

Ad Widget

Ad Widget

Ad Widget

Ad Widget

ಇದೀಗ ವಿಡಿಯೋ ಮಾಡಿದವನಿಗೆ ದಂಡ ವಿಧಿಸಿ ಪೊಲೀಸ್ ಕಮಿಷನರ್ ಇಲಾಖೆಯ ವಾಹನದ ವಿಮೆವಿಮೆ ಮುಕ್ತಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಏನಿದು ಪ್ರಕರಣ?

Ad Widget

Ad Widget

Ad Widget

Ad Widget

ಮೇ 16ರಂದು ಸಂಜೆ ನಗರದ ಕುಂಟಿಕಾನ ಬಳಿ ಕೆಎ-19-ಜಿ-1023 ನೋಂದಣಿಯ ಹೆದ್ದಾರಿ ಗಸ್ತು ವಾಹನ ಕರ್ತವ್ಯದಲ್ಲಿತ್ತು. ಈ ವೇಳೆ ವ್ಯಕ್ತಿಯೋರ್ವನಿಗೆ ಟ್ರಾಫಿಕ್ ಪೊಲೀಸ್ ವಾಯುಮಾಲಿನ್ಯ ತಪಾಸಣಾ ಪತ್ರ ತೋರಿಸಿಲ್ಲ ಎಂದು ದಂಡ ವಿಧಿಸಿದ್ದರು.

Ad Widget

Ad Widget

Ad Widget

ಇದರಿಂದ ಕುಪಿತನಾದ ಆತ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಣ ಮಾಡಿ ಅದರ ವಿಮಾ ಅವಧಿಯು ಮುಕ್ತಾಯವಾಗಿದೆ. ಪೊಲೀಸ್ ಇಲಾಖೆ ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿದೆ ಎಂದು‌ ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೊ ವೈರಲ್ ಮಾಡಿದ್ದಾನೆ.

ವಿಡಿಯೋ ರೆಕಾರ್ಡ್ ಮಾಡುವ ವೇಳೆ ಅಲ್ಲಿದ್ದ ಸಿಬ್ಬಂದಿ ಸರಕಾರಿ ವಾಹನದ ವಿಮೆ ಪಾವತಿಯ ಕುರಿತ ಮಾಹಿತಿ ನೀಡಿದರೂ ಆ ವ್ಯಕ್ತಿ ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ.

ವೀಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇದು ತಪ್ಪು ಮಾಹಿತಿ. ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳು ಕಡ್ಡಾಯವಾಗಿ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆ ಹೊಂದಿರುತ್ತದೆ. ಈ ವಿಮೆಯನ್ನು ಕಾಲಕಾಲಕ್ಕೆ ನವೀಕರಣವಾಗುತ್ತದೆ. ವಿಮೆ ನವೀಕರಣಗೊಳ್ಳದ ಯಾವುದೇ ಇಲಾಖಾ ವಾಹನಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವೈರಲ್ ವಿಡಿಯೋದಲ್ಲಿ ತೋರಿಸಲಾದ ಹೆದ್ದಾರಿ ಗಸ್ತು ವಾಹನದ ವಿಮಾ ಅವಧಿ 2025ರ ಅಕ್ಟೋಬರ್ 13ರವರೆಗೆ ಮತ್ತು ವಾಹನದ ಮಾಲಿನ್ಯ ತಪಾಸಣಾ ಅವಧಿಯು 2025ರ ಜನವರಿ 8ರವರೆಗೆ ಚಾಲ್ತಿಯಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ ವೀಡಿಯೊ ಮಾಡಿ ವೈರಲ್ ಮಾಡಿರುವ ವ್ಯಕ್ತಿಯ ಬೈಕ್‌ ವಾಯುಮಾಲಿನ್ಯ ತಪಾಸಣಾ ಪತ್ರ ತೋರ್ಪಡಿಸದೇ ಇರುವುದರಿಂದ ಆತನ ಮೇಲೆ ರೂ. 500 ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

Continue Reading

ಸಿನೆಮಾ

Actress Shilpa Shetty’s-ಎಂಡೊಮೆಟ್ರಿಯೊಸಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ

Ad Widget

Ad Widget

Ad Widget

Ad Widget

ತುಳುನಾಡ ಕುವರಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಂಗಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ನಟಿ ಶಮಿತಾ ಶೆಟ್ಟಿಗೆ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

Ad Widget

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ನಟಿ ಶಮಿತಾ ಶೆಟ್ಟಿ ಅವರನ್ನು ಕಾಡುತ್ತಿರುವ ಖಾಯಿಲೆ. ಈ ಬಗ್ಗೆ ಸ್ವತಃ ಶಮಿತಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದು, ಎಲ್ಲಾ ಮಹಿಳೆಯರೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ವಿಡಿಯೋ ಮೂಲಕ ತಮ್ಮ ಆರೋಗ್ಯದ ಕುರಿತಾದ ವಿಷಯ ಹಂಚಿಕೊಂಡಿರುವ ಶಮಿತಾ ಶೆಟ್ಟಿ, ಆಸ್ಪತ್ರೆ ಬೆಡ್‌ನಿಂದಲೇ ವಿಡಿಯೋ ಮಾಡಿ ವಿವರಣೆ ನೀಡಿದ್ದಾರೆ. ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ. ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ. ನನ್ನನ್ನು ಕಾಡುತ್ತಿದ್ದ ನೋವಿನ ಮೂಲ ತಿಳಿದುಕೊಂಡು ಚಿಕಿತ್ಸೆ ನೀಡಿದ ಸ್ತ್ರೀವೈದ್ಯೆ ಡಾ. ನೀತಾ ವಾರ್ಟಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ಧನ್ಯವಾದಗಳು ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಶಸ್ತ್ರಚಿಕಿತ್ಸೆಯಿಂದ ಸದ್ಯ ನಾನು ಈ ರೋಗದಿಂದ ಗುಣ ಮುಖಳಾಗುತ್ತಿದೇನೆ. ನನ್ನ ಆರೋಗ್ಯ ಮತ್ತಷ್ಟು ಸುಧಾರಿಸಲು ಎದುರು ನೀಡುತ್ತಿದ್ದೇನೆ. ಈಗೀಗ ನೋವಿಲ್ಲದ ದಿನಗಳನ್ನು ಕಳೆಯುತ್ತಿದ್ದೇನೆ. ಹೀಗಾಗಿ ಎಲ್ಲಾ ಮಹಿಳೆಯರೂ ಈ ಎಂಡೊಮೆಟ್ರಿಯೊಸಿಸ್ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.

Ad Widget

Ad Widget

Ad Widget

ಎಂಡೊಮೆಟ್ರಿಯೊಸಿಸ್ ಕಾಯಿಲೆಯ ಲಕ್ಷಣ :
ಮಹಿಳೆಯರಲ್ಲಿ ಕಂಡು ಬರುವ ಎಂಡೊಮೆಟ್ರಿಯೊಸಿಸ್ ಕಾಯಿಲೆ ಗರ್ಭಕೋಶಕ್ಕೆ ಸಂಬಂಧಿಸಿದ್ದು, ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಇದರಿಂದ ಮೊದಮೊದಲು ಸೊಂಟ ನೋವು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಕೂಡಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲವಾದರೆ ಮಹಿಳೆಯರಿಗೆ ಗರ್ಭಿಣಿಯಾಗಲು ಕಷ್ಟವಾಗುತ್ತದೆ. ಹಾಗೂ ಮುಟ್ಟಿನ ಸಮಯದಲ್ಲಿ ಕಷ್ಟವಾಗುತ್ತದೆ.

Continue Reading

ನಿಧನ ವಾರ್ತೆ

Disappeared-ಮರುವಾಯಿ ಹೆಕ್ಕಲು ಹೋಗಿ ನದಿಯಲ್ಲಿ ಮರೆಯಾದ ಯುವಕ

Ad Widget

Ad Widget

Ad Widget

Ad Widget

ಮೂಲ್ಕಿ, ಮೇ 13: ಕೊಳಚಿಕಂಬಳ ಬಳಿ ಮರುವಾಯಿ ಹೆಕ್ಕಲು ಯುವಕರ ತಂಡವೊಂದು ಆಗಮಿಸಿದ್ದು, ನದಿಗಿಳಿದ ಯುವಕರಲ್ಲಿ ಒಬ್ಬ ನೀರುಪಾಲಾಗಿರುವ ಘಟನೆ ನಡೆದಿದೆ. ಅಭಿಲಾಷ್(24) ನೀರುಪಾಲಾದ ಯುವಕ. ಈತ ಬಜಪೆ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಬಜಪೆಯ ಅದ್ಯಪಾಡಿಯ ಸುಮಾರು 10 ಯುವಕರ ತಂಡ ಮರುವಾಯಿ ಹೆಕ್ಕಲು ಬಂದಿದ್ದು, ನಾಲ್ವರು ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಅಳಿವೆಯ ಬಳಿ ನದಿಗೆ ಇಳಿದರೆ ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು.

Ad Widget

Ad Widget

Ad Widget

Ad Widget

ಈಜು ಬಾರದ ಕೆಲವು ಯುವಕರು ನೀರಿನಲ್ಲಿ ಮುಳುಗಡೆಯಾಗುವ ಹಂತಕ್ಕೆ ಹೋದಾಗ ಅವರನ್ನು ಬದುಕಿಸಲು ಹೋಗಿ ಅಭಿಲಾಷ್‌ ತಾನು ಜೀವ ಕಳೆದುಕೊಂಡಿದ್ದಾನೆ. ಬೊಬ್ಬೆ ಕೇಳಿ ಧಾವಿಸಿ ಬಂದ ಮೀನುಗಾರರು ಮೂವರನ್ನು ರಕ್ಷಿಸಿದ್ದು, ನೀರುಪಾಲಾಗಿರುವ ಅಭಿಲಾಷ್‌ ಪತ್ತೆಯಾಗಿಲ್ಲ.

Ad Widget

Ad Widget

Ad Widget

Ad Widget

ನೀರು ಇಳಿತವಿರುವ ಸಮಯದಲ್ಲಿ ಕೊಳಚಿಕಂಬಳ ಬಳಿ ನದಿಯಲ್ಲಿ ಸುಮಾರು 2 ಕಿ.ಮೀ. ನದಿ ಪ್ರದೇಶ ಖಾಲಿ ಮೈದಾನದಂತಿರುತ್ತದೆ. ಆಗ ಜನರು ಇಳಿದು ಅಳಿವೆಯ ತನಕ ನಡೆದುಕೊಂಡು ಹೋಗುತ್ತಾರೆ. ಆದರೆ ಭರತ ಆರಂಭವಾದರೆ ಎಲ್ಲಾ ದಿಕ್ಕಿನಿಂದಲೂ ಸುಮಾರು ನಾಲ್ಕೈದಡಿ ನೀರು ತುಂಬಿಕೊಳ್ಳಲು ಪ್ರಾರಂಭವಾಗುತ್ತದೆ.

Ad Widget

Ad Widget

Ad Widget

ಇದರ ಅರಿವಿಲ್ಲದೆ ನೀರಿಗಿಳಿದು ಈ ಹಿಂದೆಯೂ ಹಲವಾರು ಅವಘಡಗಳು ನಡೆದಿದ್ದು, ಈ ಬಗ್ಗೆ ತಿಳಿದವರು ಎಚ್ಚರಿಸಿ ನೀರಿಗೆ ಇಳಿಯದಂತೆ ಸೂಚಿಸಿದರೆ ಯಾರೂ ಕೇಳುವುದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading