Connect with us

ಪುತ್ತೂರು

ಚಾರ್ವಾಕ ಕಾಂಗ್ರೇಸ್‍ ಕಾರ್ಯಕರ್ತನಿಗೆ ಹಲ್ಲೆ : ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಶಾಸಕ ಅಶೋಕ್ ರೈ

Ad Widget

Ad Widget

Ad Widget

Ad Widget

ಚಾರ್ವಾಕ ಸೇವಾ ಸಹಕಾರಿ ಸಂಘದ ಚುನಾವಣೆಯ ನಂತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು , ಕಾಂಗ್ರೇಸ್‍ ಕಾರ್ಯಕರ್ತನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಭೇಟಿಯಾದರು.

Ad Widget

Ad Widget

Ad Widget

ಚಾರ್ವಾಕ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಮನೋಹರ್ ಎಂಬವರ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು ,ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Ad Widget

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಚಾರ್ವಾಕದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ವೈಯುಕ್ತಿಕವೋ ಅಥವಾ ರಾಜಕೀಯ ಕಾರಣಕ್ಕೋ ಎಂಬುದು ಈಗ ಸದ್ಯಕ್ಕೆ ಗೊತ್ತಾಗಿಲ್ಲ. ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ

Ad Widget

Ad Widget
Click to comment

Leave a Reply

ದಕ್ಷಿಣ ಕನ್ನಡ

Woman Missing: ಉಪ್ಪಿನಂಗಡಿ : ತಾಯಿ ಮತ್ತು ಒಂದು ವರ್ಷದ ಮಗು ನಾಪತ್ತೆ – ಪತ್ತೆಯಾದಲ್ಲಿ ತಿಳಿಸುವಂತೆ ಮನವಿ

Ad Widget

Ad Widget

Ad Widget

Ad Widget

ಉಪ್ಪಿನಂಗಡಿ:  ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ತಾಯಿ ಮತ್ತು ಒಂದು ವರ್ಷದ ಮಗು ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ತಿಂಗಳ ಏಫ್ರಿಲ್‌ 22 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಯಿ ಮತ್ತು ಮಗು ನಾಪತ್ತೆಯಾಗಿದ್ದಾರೆ.

Ad Widget

Ad Widget

Ad Widget

 ಕೌಕ್ರಾಡಿ ಗ್ರಾಮದ ಕಟ್ಟೆ ಮಜಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್‌ ಅವರ ಪತ್ನಿ ರೀಮಾ ಸೋಂಕರ್‌ (26) ಮತ್ತು ಮಗು ರಿಯಾ (1) ನಾಪತ್ತೆಯಾಗಿರುವರು.    

Ad Widget

ಇಂಟೀರಿಯರ್‌ ಡೆಕೊರೇಟರ್‌ ಆಗಿರುವ ಸೋನು ಸೋಂಕರ್‌ ಉತ್ತರ ಪ್ರದೇಶದ ಅಜಾಮ್‌ ಘರ್‌ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಅವರ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು.

Ad Widget

Ad Widget

ಸೋನು ಸೋಂಕರ್‌ ಅವರು ಏ 22 ರಂದು ಬೆಳಿಗ್ಗೆ 8 .30 ಕ್ಕೆ ಕಟ್ಟೆ ಮಜಲಿನ ಬಾಡಿಗೆ ಮನೆಯಿಂದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದು ಸಂಜೆ 7.30ರ ಸುಮಾರಿಗೆ ಬಂದು ನೋಡಿದಾಗ, ಮನೆಗೆ ಬಾಗಿಲು ಹಾಕಿತ್ತು. ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ತಾಯಿ ಮತ್ತು ಮಗು ಕಾಣೆಯಾಗಿದ್ದು ರೀಮಾ ಬಳಸುತ್ತಿದ್ದ ಮೊಬೈಲ್‌  ಫೋನ್‌ ನೆಲದಲ್ಲಿ ಬಿದ್ದು ಕೊಂಡಿತ್ತು.

Ad Widget

Ad Widget

Ad Widget

ಮನೆ ಮಾಲೀಕರಲ್ಲಿ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ, ಅದೇ ದಿನ ಬೆಳಿಗ್ಗೆ  10 ಗಂಟೆ ಸುಮಾರಿಗೆ ರೀಮಾ  ಮನೆಗೆ ಬೀಗ ಹಾಕಿ ಮಗುವಿನ ಜತೆ ಹೋಗಿರುವುದನ್ನು ನೋಡಿರುವುದಾಗಿ ತಿಳಿಸಿರುತ್ತಾರೆ. ನಾಪತ್ತೆಯಾಗಿರುವ ತಾಯಿ ಮತ್ತು ಮಗು ಕಂಡಲ್ಲಿ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

Continue Reading

ದಕ್ಷಿಣ ಕನ್ನಡ

Communal Hatred Murder: ವಿಟ್ಲದ ಹಲ್ಲೆಗೆ ಪ್ರತಿಕಾರವಾಗಿ ಬಂಟ್ವಾಳದಲ್ಲಿ  ಕೋಮು ದ್ವೇಷದಿಂದ ಹತ್ಯೆ : ನಾಲ್ವರಿಗೆ ಜೀವಾವಧಿ ಶಿಕ್ಷೆ

Ad Widget

Ad Widget

Ad Widget

Ad Widget

9 ವರ್ಷಗಳ ಹಿಂದೆ  ಬಂಟ್ವಾಳದ ಸಜಿಪಮೂಡ ಗ್ರಾಮದಲ್ಲಿ ನಡೆದಿದ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರು. ದಂಡ ವಿಧಿಸಿದೆ. 2015ರಲ್ಲಿ ತಂಡವೊಂದು ಮೊಹಮ್ಮದ್ ಮುಸ್ತಾಫ ಮತ್ತು ಮಹಮ್ಮದ್ ನಾಸೀರ್ ಎಂಬವರ ಮೇಲೆ ತಲವಾರ್ ನಡೆಸಿತ್ತು . ಇದರಲ್ಲಿ ಮಹಮ್ಮದ್ ನಾಸೀರ್ ಕೊಲೆಯಾಗಿದ್ದರು . ಕೋಮು ದ್ವೇಷದಿಂದ ಈ ಹತ್ಯೆ ಮಾಡಿದ್ದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

Ad Widget

Ad Widget

Ad Widget

 ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜೇತ್ ಕುಮಾರ್ (22), ಅಭಿ ಯಾನೆ ಅಭಿಜಿತ್ (24), ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (24), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (23) ಶಿಕ್ಷೆಗೆ ಒಳಗಾದವರು.

Ad Widget

2015ರ ಆಗಸ್ಟ್‌ 6ರಂದು ರಾತ್ರಿ ಆಟೊದಲ್ಲಿ ಹೋಗುತ್ತಿದ್ದ ಮೊಹಮ್ಮದ್‌ ಮುಸ್ತಾಫ್ ಮತ್ತು ನಾಸೀರ್‌ ಅಲಿಯಾಸ್‌ ಮೊಹ್ಮದ್‌ ನಾಸೀರ್‌ ಅವರ ಮೇಲೆ  ಅಪರಾಧಿಗಳು  ತಲವಾರಿನಿಂದ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ನಾಸೀರ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಮರುದಿನ ಮೃತಪಟ್ಟಿದ್ದರು.

Ad Widget

Ad Widget

ಮೊಹಮ್ಮದ್‌ ಮುಸ್ತಾಫ ಅವರು ತಮ್ಮ ಮಾವನ ಹೆಂಡತಿಯನ್ನು ಹೆರಿಗೆಗಾಗಿ ಬಂಟ್ವಾಳ ಆಸ್ಪತ್ರೆಗೆ ಆಟೊ ರಿಕ್ಷಾದಲ್ಲಿ  ಬಿಟ್ಟು ರಾತ್ರಿ  ಮನೆಗೆ ವಾಪಸ್ಸು ಆಗುತ್ತಿದ್ದರು.  ತಮ್ಮ ಪತ್ನಿಯ ಮನೆಗೆ ಹೋಗುವ ಸಲುವಾಗಿ ನಾಸೀರ್‌ ಅವರು ಮೆಲ್ಕಾರ್‌ ಬಳಿ ಈ ಆಟೊ ಹತ್ತಿದ್ದರು. ಮೆಲ್ಕಾರ್‌ ನಿಂದ ಮುಡಿಪು ಕಡೆಗೆ ಆಟೊ ರಿಕ್ಷಾ ಹೋಗುತ್ತಿರುವುದನ್ನು ಕಂಡ ಆರೋಪಿಗಳು, ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ.  ರಾತ್ರಿ 10.45ಕ್ಕೆ ಸಜಿಪ ಮೂಡ ಗ್ರಾಮದ ಕೊಳಕೆ ಕಂದೂರು ತಲುಪುತ್ತಿದ್ದಂತೆ ರಿಕ್ಷಾ ತಡೆದು ನಿಲ್ಲಿಸಿದ್ದಾರೆ.  ಅದರಲ್ಲಿ ಇರುವ ಇಬ್ಬರು  ಮುಸ್ಲಿಂರು ಎನ್ನುವುದನ್ನು ಖಚಿತಪಡಿಸಿಕೊಂಡು ಅವರ ಮೇಲೆ ತಲವಾರಿನಿಂದ ದಾಳಿ ಮಾಡಿದ್ದರು.

Ad Widget

Ad Widget

Ad Widget

ಮುಖ್ಯ ಆರೋಪಿ ವಿಜೇತ್ ಕುಮಾರ್ ತಲವಾರಿನಿಂದ ಮುಸ್ತಾಫ ಅವರ ಕೈ, ಎದೆಗೆ ಬಲವಾಗಿ ಕಡಿದಿದ್ದಾನೆ. 2ನೇ ಆರೋಪಿ ಕಿರಣ್ ಪೂಜಾರಿ ಪ್ರಯಾಣಿಕರ ಸೀಟ್‌ನಲ್ಲಿ ಕುಳಿತಿದ್ದನಾಸೀರ್ ಗೆ ತಲವಾರಿನಿಂದ ಕಡಿದಿದ್ದಾನೆ. ತೀವ್ರ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ನಾಸೀರ್ ಅಹಮ್ಮದ್ಆ.7ರಂದು ಮೃತಪಟ್ಟಿದ್ದಾರೆ. ಅಪರಾಧಿಗಳು ಕೃತ್ಯದ ವೇಳೆ ಧರಿಸಿದ್ದ ರಕ್ತಸಿಕ್ತ ಬಟ್ಟೆಗಳನ್ನು ಪಾಣೆಮಂಗಳೂರು ನೇತ್ರಾವತಿ ನದಿಗೆ ಎಸೆದು ಸಾಕ್ಷ್ಯಾಧಾರವನ್ನು ಮರೆಮಾಚಿಸಿದ್ದಾರೆ   

ಇದಕ್ಕೂ ಮುನ್ನಾ ದಿನ 2015ರ ಆಗಸ್ಟ್‌ 5ರಂದು ರಾತ್ರಿ ವಿಟ್ಲ ಪೊಲೀಸ್‌ ಠಾಣೆ ವ್ಯಾಪ್ತಿಯ ಆಲಬೆ ಎಂಬಲ್ಲಿ ವಿಜೇತ್‌ ಕುಮಾರ್‌ ಮತ್ತು ಅಭಿ ಮೇಲೆ ಮುಸ್ಲಿಂ ಸಮುದಾಯದ 4-5 ಯುವಕರು ಹಲ್ಲೆ ಮಾಡಿದ್ದರು. ಇದರಿಂದಾಗಿ ರೊಚ್ಚಿಗೆದ್ದಿದ್ದ ಈ ಇಬ್ಬರು, ತಮ್ಮ ಇನ್ನಿಬ್ಬರು ಮಿತ್ರರನ್ನು ಕರೆಯಿಸಿಕೊಂಡು, ಪಾಣೆ ಮಂಗಳೂರು ಬಳಿ ಮುಸ್ಲಿಂ ಯುವಕನೊಬ್ಬನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಅದರಂತೆ ದಾರಿಯಲ್ಲಿ ಸಿಕ್ಕ ಇವರನ್ನು ಕೊಲೆ ಮಾಡಿದರು ಎಂದು ಪ್ರಕರಣದ ವಿಚಾರಣೆ ನಡೆಸಿದ್ದ ಇನ್‌ಸ್ಪೆಕ್ಟರ್‌ ಕೆ.ಯು. ಬೆಳ್ಳಿಯಪ್ಪ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದ್ದಾರೆ.ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ವಾದ ಮಂಡಿಸಿದ್ದರು.

ನಾಲ್ವರೂ ಆರೋಪಿಗಳಿಗೆ ತಲಾ ₹30 ಸಾವಿರ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹1.20 ಲಕ್ಷವನ್ನು ಮೃತ ನಾಸೀರ್‌ ಅವರ ಪತ್ನಿ ರಹಮತ್‌ ಅವರಿಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿಯೂ ರಹಮತ್‌ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.

ತನಿಖಾಧಿಕಾರಿಯಾಗಿದ್ದ ಕೆ.ಯು.ಬೆಳ್ಳಿಯಪ್ಪ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಲಾಗಿದ್ದು, 40 ದಾಖಲೆಗಳನ್ನು ಗುರುತಿಸಲಾಗಿದೆ. ಸರ್ಕಾರದ ಪರವಾಗಿ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಟಾ ಮಾರ್ಗರೇಟ್ ಕ್ರಾಸ್ತ ವಾದ ಮಂಡಿಸಿದ್ದಾರೆ.

Continue Reading

ಕಾರ್ಯಕ್ರಮಗಳು

Sringeri Sri-ಕಹಳೆ ನ್ಯೂಸ್ ಮುಖ್ಯಸ್ಥರ ಹೊಸಮೂಲೆ ಮನೆಗೆ ಶೃಂಗೇರಿ ಶ್ರೀ ಜಗದ್ಗುರುಗಳ ಭೇಟಿ – ಪಾದಪೂಜೆ

Ad Widget

Ad Widget

Ad Widget

Ad Widget

ಉಪ್ಪಿನಂಗಡಿ : ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲಿರುವ ಕಹಳೆ ನ್ಯೂಸ್ ವಾಹಿನಿಯ ಮುಖ್ಯಸ್ಥರು ಹಾಗೂ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ ಭಟ್ ಅವರ ಹೊಸಮೂಲೆ ಮನೆಗೆ ಶ್ರೀ ದಕ್ಷಿಣಾಮ್ಮಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭೇಟಿ ನೀಡಿ‌ ಹರಸಿದರು.

Ad Widget

Ad Widget

Ad Widget

ಪೂಜ್ಯ ಜಗದ್ಗುರುಗಳಿಗೆ ಮನೆಯ ಯಜಮಾನರಾದ ಗೋಪಾಲಕೃಷ್ಣ ಭಟ್ ದಂಪತಿಗಳು ಪಾದ ಪೂಜೆಯನ್ನು ನೆರವೇರಿಸಿದರು. ವೇ.ಮೂ.‌ ಕೊಂಡಗೆ ಈಶ್ವರ ಭಟ್ ಅವರು ವೈದಿಕ ವಿಧಿಯನ್ನು ನೆರವೇರಿಸಿದರು.

Ad Widget

ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಮುರಳಿಯವರು ಉಪಸ್ಥಿತರಿದ್ದರು.

Ad Widget

Ad Widget

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುದರ್ಶನ್ ಮೂಡಬಿದಿರೆ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಪಿ.ಜಿ.‌ ಜಗನ್ನಿವಾಸ್ ರಾವ್, ಉಪ್ಪಿನಂಗಡಿ ಸಿ.ಎ.‌ಬ್ಯಾಂಕ್ ಅಧ್ಯಕ್ಷರಾದ ಕೆ.ವಿ. ಪ್ರಸಾದ್, ಡಾ. ರವಿನಾರಾಯಣ್ ಸಿ., ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಇಳಂತಿಲ ಭಾಗಿಯಾಗಿದ್ದರು.

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading