Connect with us

ದಕ್ಷಿಣ ಕನ್ನಡ

ಕಟ್ಟಡ ಪರವಾನಗಿ ಕಡತ, ಜನನ ಮರಣ ಪ್ರಮಾಣ ಪತ್ರ ವಿಲೇವಾರಿಗೆ ಜನರನ್ನು ಅಲೆದಾಡಿಸಲಾಗುತ್ತಿದೆ : ಪುತ್ತೂರು ನಗರ ಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯರ ಆರೋಪ

Ad Widget

Ad Widget

Ad Widget

Ad Widget

ಪುತ್ತೂರು: ತುರ್ತು ಸಮಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಸ್ಯರ ಕರೆಯನ್ನು ಸ್ವೀಕರಿಸುತ್ತಿಲ್ಲ.  ಎಲ್.ಇ.ಡಿ. ದೀಪಗಳು ದುರಸ್ಥಿಗಾಗಿ ಕಳಚಿ ಹಾಕಿ 6 ತಿಂಗಳು ಕಳೆದರೂ ಮರು ಜೋಡಣೆ ಮಾಡಿಲ್ಲ.  ಜನನ ಮರಣ ಪ್ರಮಾಣ ಪತ್ರದ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದ  ವ್ಯಕ್ತಿಗಳನ್ನು ಸತಾಯಿಸುವ ಕಾರ್ಯ ನಡೆಯುತ್ತಿದೆ.  ಕಟ್ಟಡ ಪರವಾನಗಿ ಕಡತಗಳು, ಸೂಕ್ತ ಸಮಯದಲ್ಲಿ ಫಲಾನುಭವಿಗಳುಗೆ ಸಿಗುತ್ತಿಲ್ಲ. ಇದು ಮಂಗಳವಾರ ಪುತ್ತೂರು ನಗರಸಭಾ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಕೇಳಿ ಬಂದ ಸಮಸ್ಯೆಗಳು.

Ad Widget

Ad Widget

Ad Widget

ಸದಸ್ಯ ಮಹಮ್ಮದ್ ರಿಯಾಝ್ ಕೆ. ಮಾತನಾಡಿ ಕಟ್ಟಡ ಪರವಾನಗಿಯ ಕಡತಗಳು ಟಪ್ಪಾಲಿನಲ್ಲಿ ಕ್ಯಾಬಿನ್ ಗೆ ಬೇಗ ಹೋದರೂ ಕೆಲವು ಕ್ಯಾಬಿನ್ ನಿಂದ ಇಂಜಿನಿಯರ್ ಕಛೇರಿಗೆ ಹತ್ತು ದಿನಗಳಾದರೂ ಹೋಗುವುದೇ ಇಲ್ಲ. ಜನನ ಮರಣ ಪ್ರಮಾಣ ಪತ್ರದ ವಿಚಾರದಲ್ಲೂ ಜನರನ್ನು ಅಲೆದಾಡಿಸಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ತಕ್ಷಣ ಸರಿಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

vAd Widget

Ad Widget

Ad Widget

ಸದಸ್ಯೆ ಬಿ. ಶೈಲಾ ಪೈ ಮಾತನಾಡಿ  ವಿದ್ಯುತ್ ದೀಪಗಳನ್ನು ದುರಸ್ಥಿಗಾಗಿ ತೆಗೆದುಕೊಂಡು ಹೋಗಿ ಹಲವು ತಿಂಗಳು ಕಳೆದರೂ ಮರಳಿ ಅಳವಡಿಸುವ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಹೇಳಲು ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಅಧ್ಯಕ್ಷರಿಗೆ ತಿಳಿಸಿದ ಬಳಿಕ ಅಧಿಕಾರಿಗಳೇ ಕರೆ ಮಾಡುವುದಾದರೆ ಸದಸ್ಯರ ಬಗ್ಗೆ ಯಾಕಿ ನಿರ್ಲಕ್ಷ್ಯೆತೆಯನ್ನು ತೋರಿಸಲಾಗುತ್ತದೆ. ಸದಸ್ಯರ ಕರೆ ಸ್ವೀಕರಿಸಲಾಗದ ಮೊಬೈಲ್ ಅನ್ನು ನೀರಿಗೆ ಬಿಡಲಿ ಎಂದು ಖಾರವಾಗಿ ಹೇಳಿದರು.

Ad Widget

Ad Widget

ನಗರ ಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಸಕಾಲದಲ್ಲಿ ಸಲ್ಲಿಕೆಯಾದ ಕಡತಗಳು ಸರಿಯಾದ ಸಮಯಕ್ಕೆ ವಿಲೇವಾರಿಯಾಗುತ್ತಿದೆ. ಕಡತ ವಿಲೇವಾರಿಯ ಬಗ್ಗೆ ಪೌರಾಯುಕ್ತರ ಹಾಗೂ ಅಧಿಕಾರಿಗಳ ಸಭೆಯನ್ನು ವಾರ ವಾರ ನಡೆಸಿ ಪ್ರಗತಿಯನ್ನು ತಿಳಿದು ಕ್ರಮಕೈಗೊಳ್ಳಲಾಗುತ್ತಿದೆ. ಆಯುಕ್ತರಿಂದ ಟೇಬಲ್ ಇನ್ ಸ್ಪೆಕ್ಷನ್ ಕೂಡ ನಡೆಯುತ್ತಿದೆ. ಉದ್ಯಮ ಪರವಾನಗಿ ನವೀಕರಣ ವಿಚಾರದಲ್ಲಿ ವಾರ್ಡ್ ವಾರು ಬೇಟಿ ಮಾಡಿ ತನಿಖೆಯನ್ನು ಕೈಗೊಳ್ಳಲಿದೆ ಎಂದರು.

Ad Widget

Ad Widget

Ad Widget

ಪುತ್ತೂರು ನಗರ ಸಭೆ ಪೌರಾಯುಕ್ತ ಮಧು ಎಸ್. ಮನೋಹರ ಮಾತನಾಡಿ ಸಕಾಲದ ಮೂಲಕ 19 ಸೇವೆಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಫಲಕದಲ್ಲಿ ಮಾಹಿತಿಯನ್ನು ನೀಡಲಾಗಿದೆ. 9 ಸಾವಿರ ಇ – ಆಸ್ತಿ ಇದ್ದು, 16 ಸಾವಿರ ಇ- ಆಸ್ತಿಗೆ ಸೇರಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 24258 ಆಸ್ತಿ ಹಾಗೂ 612 ಅನಧಿಕೃತ ಆಸ್ತಿಗಳಿದೆ. ಸ್ಥಳಕ್ಕೆ ತೆರಳಿ ಎಲ್ಲವನ್ನು ಪರಿಶೀಲನೆ ಮಾಡಿ ಇ-ಆಸ್ತಿಗೆ ಸೇರಿಸಲಾಗುತ್ತಿದೆ. ಇದಕ್ಕಾಗಿ ಸರ್ವೇಯರ್ ನೇಮಕ ಮಾಡಲಾಗಿದೆ. ಎಪ್ರಿಲ್ ಸಮಯಕ್ಕೆ ಎಲ್ಲವನ್ನು ಆನ್ ಲೈನ್ ಮೂಲಕ ನೀಡುವ ಕಾರ್ಯ ಮಾಡಲಾಗುವುದು. ವಿವಿಧ ಉದ್ದೇಶಕ್ಕೆ ರಸ್ತೆ ತುಂಡರಿಸುವ ನಿಟ್ಟಿನಲ್ಲಿ ಮೀಟರ್ ಗೆ ಮಣ್ಣಿನ ರಸ್ತೆಗೆ 280ರೂ., ಡಾಮರು ರಸ್ತೆ 1292ರೂ., ಕಾಂಕ್ರೀಟ್‌  ರಸ್ತೆಗೆ 1786 ರೂ. ದರವನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸದಸ್ಯರಾದ ಬಾಳಪ್ಪ ಯಾನೆ ಸುಂದರ ಪೂಜಾರಿ, ಭಾಮಿ ಅಶೋಕ್ ಶೆಣೈ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಉಪಾಧ್ಯಕ್ಷ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ. ಉಪಸ್ಥಿತರಿದ್ದರು.

Click to comment

Leave a Reply

ಪುತ್ತೂರು

ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದಿನೇಶ್ ಮೆದು ಮೇಲೆ ಉದ್ದೇಶಪೂರ್ವಕ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ದೂರು ದಾಖಲಿಸಲಾಗಿದೆ : ಸಂಘದಿಂದ ಸ್ಪಷ್ಟನೆ

Ad Widget

Ad Widget

Ad Widget

Ad Widget

ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್‌ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದವರು ಸ್ಪಷ್ಟನೆ ನೀಡಿದ್ದು, ‘ನೂಜಿಯಲ್ಲಿ ಸ್ಥಳೀಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಬೇಕಾದ ಮರಳು ಸಂಗ್ರಹಿಸಿದ್ದು, ಇದಕ್ಕಾಗಿ ಗಣಿ ಇಲಾಖೆಯ ಮೂಲಕ ಸರಕಾರಕ್ಕೆ ರಾಜಧನ ಕಟ್ಟಿ ಸಂಗ್ರಹಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

Ad Widget

Ad Widget

Ad Widget

ಈ ಪ್ರಕರಣದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಮೆದು ಅವರ ಹೆಸರನ್ನು ಉದ್ದೇಶಪೂರ್ವಕವಾಗಿ,ರಾಜಕೀಯ ಒತ್ತಡಕ್ಕೆ ಮಣಿದು ಸೇರಿಸಿ ದೂರು ದಾಖಲಿಸಿದ್ದಾರೆ. ಇದು ಖಂಡನೀಯ. ದ.ಕ.ಜಿಲ್ಲೆಯಲ್ಲಿ ಮರಳುಗಾರಿಕೆ ಮಾಡಲು ಸರಕಾರಕ್ಕೆ ರಾಜಧನ ಪಾವತಿಸಿ ಮರಳುಗಾರಿಕೆ ಮಾಡುವವರ ಸಂಘದ ಅಧ್ಯಕ್ಷರಾಗಿ ದಿನೇಶ್‌ ಮೆದು ಅವರು ಕೆಲಸ ಮಾಡುತ್ತಿದ್ದಾರೆ.

vAd Widget

Ad Widget

Ad Widget

ಇಂತಹ ಘಟನೆ ಅಧಿಕೃತವಾಗಿ ಮರಳುಗಾರಿಕೆ ಮಾಡುವವರಿಗೆ ಹಿನ್ನಡೆ ಉಂಟು ಮಾಡುವ ಕೃತ್ಯವಾಗಿದೆ. ದಿನೇಶ್ ಮೆದು ಅವರು ಸಂಘದ ಅಧ್ಯಕ್ಷರಾಗಿ ಸಲಹೆ, ಸಹಕಾರ ನೀಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಚರಣ್ ಜುಮಾದಿಗುಡ್ಡೆ,ಕೋಶಾಧಿಕಾರಿ ಸುರೇಶ್ ಕುಂಡಡ್ಕ, ಪದಾಧಿಕಾರಿಗಳಾದ ಮೋನು ಪಿಲಿಗೂಡು, ಪಿ.ಪಿ ಎಲಿಯಾಸ್ ಕಡಬ, ಪ್ರವೀಣ್‌ ಆಳ್ವ ಮಂಗಳೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget

Ad Widget
Continue Reading

ದಕ್ಷಿಣ ಕನ್ನಡ

ಕುಂಬ್ರ : ಪೊಲೀಸ್ ಸಹಾಯವಾಣಿ ೧೧೨ ಎಡವಟ್ಟು – ಕೀ ಸಮೇತ ಯಾರೋ ನಿಲ್ಲಿಸಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆಸಿದ ವ್ಯಕ್ತಿಯ ಅವಾಂತರಕ್ಕೆ ಜನತೆ ಕಂಗಾಲು! ವಾಹನದಲ್ಲಿತ್ತು ಬಂದೂಕು!!!

Ad Widget

Ad Widget

Ad Widget

Ad Widget

ಪುತ್ತೂರು: ಮಾನಸಿಕ ಅಸ್ವಸ್ಥನಂತೆ ಗೋಚರಿಸುತ್ತಿದ್ದ ಯುವಕನೊಬ್ಬ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿದ್ದ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿ ಹಲವು ಢಿಕ್ಕಿ ಹೊಡೆದ ಹಾಗೂ ಆ ವಾಹನದಲ್ಲಿ ಬಂದೂಕು ಕಂಡು ಸಾರ್ವಜನಿಕರು ಭಯಗೊಂಡ ಘಟನೆ ಮೇ ೧೧ ರಂದು ಶನಿವಾರ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Ad Widget

Ad Widget

Ad Widget

ಈ ಘಟನಯೂ ಕೆಲವು ಸಮಯದವರೆಗೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೂ ಭೀತಿಗೂ ಕಾರಣವಾಯಿತು. ಕೊನೆಗೆ ಸಾರ್ವಜನಿಕರ ನೆರವಿನಿಂದ ಸಂಪ್ಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಗಳು ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

vAd Widget

Ad Widget

Ad Widget

ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವ್ಯಕ್ತಿ ಕೇರಳದ ಕೊಟ್ಟಯಾಂ ನಿವಾಸಿ ಆರುಣ್ ಎಂದು ತಿಳಿದು ಬಂದಿದೆ. ಈತ ಕೊಟ್ಟಾಯಂ ನಿಂದ ತಿಂಗಳ ಹಿಂದೆ ನಾಪತ್ತೆಯಾಗಿದ್ದ. ಈತ ಕಳೆದ ಹಲವಾರು ಸಮಯದಿಂದ ಮಾನಸಿಕ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Ad Widget

Ad Widget

೧೧೨ ಎಡವಟ್ಟು
ಈ ವ್ಯಕ್ತಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಪುತ್ತೂರಿನ ಹೊರವಲಯ ಕುಂಬ್ರ ಪೇಟೆಯ ಬಳಿ ಕಾಣಿಸಿಕೊಂಡಿದ್ದಾನೆ. ವಿಚಿತ್ರವಾಗಿ ವರ್ತಿಸುತ್ತಿದ್ದ ಇವನ ನಡವಳಿಕೆಯನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್ ಸಹಾಯವಾಣಿ ೧೧೨ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೆಲ ಸಮಯದ ಬಳಿಕ ಆಗಮಿಸಿದ ೧೧೨ ವಾಹನದ ಸಿಬ್ಬಂದಿಗಳು ಅರುಣ್ ನನ್ನು ತಮ್ಮ ವಾಹನದಲ್ಲಿ ಕೂರಿಸಿಕೊಂಡು ಪುತ್ತೂರು ಕಡೆಗೆ ತೆರಳಿದ್ದಾರೆ. ಆದರೇ ಅವರು ಈತನನ್ನು ಆಸ್ಫತ್ರೆಗೆ ದಾಖಲಿಸದೇ ಪುತ್ತೂರು – ಕುಂಬ್ರ ರಸ್ತೆಯ ಕಲ್ಲರ್ಪೆ ಎಂಬಲ್ಲಿ ಇಳಿಸಿ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Ad Widget

Ad Widget

Ad Widget

ಇದಾದ ಬಳಿಕ ಅಲ್ಲಿ ಇಲ್ಲಿ ಸುತ್ತಾಡಿದ ಈತ ಸಂಜೆಯ ಹೊತ್ತಿಗೆ ಸಂಪ್ಯ ತಲುಪಿದ್ದಾನೆ. ಅಲ್ಲಿ ರಸ್ತೆ ಬದಿಯಲ್ಲಿ ಕೀ ಸಮೇತ ಇದ್ದ ಒಮ್ನಿ ಕಾರನ್ನು ನೋಡಿದ ಅರುಣ್ ಅದನ್ನು ಚಲಾಯಿಸಿಕೊಂಡು ಮತ್ತೆ ಕುಂಬ್ರದೆಡೆಗೆ ಹೋಗಿದ್ದಾನೆ. ಈ ವೇಳೆ ವಾಹನವನ್ನು ಎರ್ರಾಬಿರ್ರಿ ಚಲಾಯಿಸಿದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಸಾರ್ವಜನಿಕ ಪ್ರಾಕರ ೭-೮ ವಾಹನಗಳಿಗೆ ಢಿಕ್ಕಿ ಹೊಡೆದಿದ್ದು, ಪೊಲೀಸರ ಪ್ರಕಾರ ೨-೩ ವಾಹನಗಳಿಗೆ ಢಿಕ್ಕಿ ಹೊಡೆಸಿದ್ದಾನೆ.

ಇವನ ಅವಾಂತರ ಗಮನಿಸಿದ ಸಾರ್ವಜನಿಕರು ಆ ಒಮ್ನಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಆಗ ವಾಹನದಲ್ಲಿ ಬಂದೂಕು ಇರುವುದು ಸಾರ್ವಜನಿಕರಿಗೆ ಕಾಣಿಸಿದೆ. ಇದು ಆತಂಕ ಸೃಷ್ಟಿಸಿದೆ. ಬಳಿಕ ಒಂದಷ್ಟು ಯುವಕರು ದೈರ್ಯ ಪ್ರದರ್ಶಿಸಿ ಅರುಣ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳಕ್ಕಾಗಿಮಿಸಿದ ಸಂಪ್ಯ ಪೊಲೀಸ್ ಉಪನಿರೀಕ್ಷಕರು ಮಾನಸಿಕನಂತೆ ಇದ್ದ ವ್ಯಕ್ತಿಯನ್ನು ವಿಚಾರಸಿದಾಗ ಕೇರಳ ಮೂಲದ ಅರುಣ್ ಎಂದು ತಿಳಿದು ಬಂದಿದೆ. ಕೊಟ್ಟಾಯಂ ನಿಂದ ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದು, ಆತನ ಪೋಷಕರಿಗೂ ಮಾಹಿತಿ ನೀಡುವ ಕೆಲಸವನ್ನು ಪೊಲೀಸರು ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.

ಠೇವಣಿಯಿರಿಸಿದ ಕೋವಿ …!

ಗೋವರ್ಧನ್ ಎಂಬವರು ಠಾಣೆಯಲ್ಲಿ ಠೇವಣಿ ಇಟ್ಟ ಬಂದೂಕು ಹಿಂಪಡೆದು ವಾಹನದಲ್ಲಿಟ್ಟು ಮನೆಗೆ ಹೋಗಲು ಅನುವಾದ ಸಂದರ್ಭದಲ್ಲಿ ಮಳೆ ಸುರಿದಿದ್ದು,, ವಾಹನದಲ್ಲೇ ಕೀ ಬಿಟ್ಟು ಪಕ್ಕದ ಅಂಗಡಿಗೆ ಹಾಲು ತರುವುದಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲೇ ಆಗಮಿಸಿದ ಅರುಣ್ ವಾಹನವನ್ನು ತೆಗೆದುಕೊಂಡು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಕುಂಬ್ರದಲ್ಲಿ ವಾಹನದಲ್ಲಿ ಬಂದೂಕು ಕಂಡ ಜನರು ಭಯ ಗೊಂಡು ವಿವಿಧ ರೀತಿಯಲ್ಲಿ ಸುದ್ದಿ ಹಬ್ಬಿಸಿ ಕೆಲವು ಹೊತ್ತು ಆತಂಕ ಸೃಷ್ಟಿಸುವಂತೆ ಮಾಡಿದೆ.

Continue Reading

ದಕ್ಷಿಣ ಕನ್ನಡ

Puttur Love Affair: ಪುತ್ತೂರು : ಬಹಿರಂಗವಾದ ಪ್ರೇಮ ಸಂಬಂಧ – ಅವಮಾನ ತಾಳಲಾರದೇ ವಿವಾಹಿತ ಆತ್ಮಹತ್ಯೆ; ನೂತನ ಮನೆಯ ಗೃಹ ಪ್ರವೇಶದ ಕೆಲ ದಿನದಲ್ಲೆ ಮನೆ ಯಜಮಾನನ ದುರಂತ ಅಂತ್ಯ

Ad Widget

Ad Widget

Ad Widget

Ad Widget

ನೂತನ ಮನೆಯ ಗೃಹ ಪ್ರವೇಶ ನಡೆದು ಕೆಲ ದಿನ ಕಳೆಯುವುದರೊಳಗಡೆ  ವ್ಯಕ್ತಿಯೊಬ್ಬರು ಗುಡ್ಡವೊಂದರಲ್ಲಿ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡೂರು ಗ್ರಾಮದ ಈಶ್ವರಮಂಗಲ ಸಮೀಪ ಶನಿವಾರ ನಡೆದಿದೆ. ಈಶ್ವರಮಂಗಲ ಸಮೀಪದ ಕತ್ರಿಬೈಲು ನಿವಾಸಿ ನಾರಾಯಣ ಮುಖಾರಿ ಅವರ ಪುತ್ರ ಪ್ರಶಾಂತ್ ಮುಖಾರಿ (38) ಆತ್ಮಹತ್ಯೆ ಮಾಡಿಕೊಂಡವರು.

Ad Widget

Ad Widget

Ad Widget

ಪ್ರಶಾಂತ್ ಅವರು ವಿವಾಹಿತರಾಗಿದ್ದು, ಅವರ ಹಾಗೂ ಇನ್ನೊಂದು ಯುವತಿಯ ನಡುವಿನ  ಪ್ರೇಮ  ಸಂಬಂಧ ಬಹಿರಂಗಗೊಂಡಿದ್ದರಿಂದ ಭೀತಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗುತ್ತಿದೆ. ಈ ಕುರಿತು ಮೃತರ ಪತ್ನಿ ಶೋಭಾ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

vAd Widget

Ad Widget

Ad Widget

ಪ್ರಶಾಂತ್ ಅವರು ಶನಿವಾರ ಮಧ್ಯಾಹ್ನದ ವೇಳೆ ತನ್ನ ಪತ್ನಿಯ ಸಹೋದರನಿಗೆ ಮೊಬೈಲ್‌ ನಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸಿ ಬಳಿಕ ಸಾವಿಗೆ ಶರಣಾಗಿದ್ದಾರೆ. ಆ ಧ್ವನಿ ಸಂದೇಶದಲ್ಲಿ  ‘ನನ್ನಿಂದ ತಪ್ಪಾಗಿದೆ. ನಾನು ಇನ್ನೊಬ್ಬಳನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ಗೊತ್ತಾಗಿದೆ. ಈ ವಿಚಾರ ಬಹಿರಂಗಗೊಂಡರೆ ಅಪಮಾನಕ್ಕೆ ಗುರಿಯಾಗಬೇಕಾಗುತ್ತದೆ. ಹಾಗಾಗಿ ನಾನು ಚಿಮುಣಿಗುಡ್ಡೆ ಎಂಬಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಪ್ರಶಾಂತ್‌ ಹೇಳಿಕೊಂಡಿದ್ದಾರೆ.

Ad Widget

Ad Widget

ಈ ಸಂದೇಶ ಗಮನಿಸಿ ಗಾಬರಿಯಾದ ಮನೆಯವರು, ಹಾಗೂ ಸಂಬಂಧಿಕರು ಹುಡುಕಿಕೊಂಡು ಹೋದಾಗ ಈಶ್ವರಮಂಗಲದ ಪುಳಿತ್ತಡಿ ಬಳಿಯಿಂದ ಚಿಮುಣಿಗುಡ್ಡೆಗೆ ಹೋಗುವ ರಸ್ತೆ ಪಕ್ಕದ ಮರದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪ್ರಶಾಂತ್‌ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

Ad Widget

ಮರದ ವ್ಯಾಪಾರ, ಮರದ ಕೆಲಸ, ಮನೆ ನಿರ್ಮಿಸಿಕೊಡುವ ವ್ಯವಹಾರ ನಡೆಸುತ್ತಿದ್ದ ಪ್ರಶಾಂತ್ ಮುಖಾರಿ, ಕತ್ರಿಬೈಲಿನಲ್ಲಿ ನೂತನವಾಗಿ ಮನೆ ನಿರ್ಮಿಸಿದ್ದು ಕೆಲ ದಿನಗಳ ಹಿಂದೆ ಅದರ  ಗೃಹ ಪ್ರವೇಶ ನಡೆದಿತ್ತು.

ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading