ಪುತ್ತೂರು: ಮಕ್ಕಳಿಗೆ ಪಠ್ಯದೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯ ಮುಖ್ಯವಾದುದು. ಗ್ರಾಮೀಣ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀಡಬಹುದೆಂದು ತೋರಿಸಿದ ಸಾಂದೀಪನಿ ರಾಜ್ಯದ ವಿದ್ಯಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕೇಂದ್ರ ಕೃಷಿಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಜ.4ರಂದು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ಶಾಲಾ ಕ್ರೀಡೋತ್ಸವ – ವಾರ್ಷಿಕೋತ್ಸವ 2022-23ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಸುಧಾಕರ ಪುತ್ತೂರಾಯ, ಮಲ್ಲಕಂಬ ಸ್ಪರ್ಧೆ ತರಬೇತಿ ನೀಡಿದ ಬಾಗಲಕೋಟೆಯ ಲಕ್ಷ್ಮಣ್, ಶ್ರೀಕೃಷ್ಣ, ಹನುಮಂತ, ಯೋಗ ಚಾಂಪಿಯನ್‌ಷಿಪ್ ಪಡೆದ ನಿಖಿಲ್ ಬಿ.ಕೆ., ಅಮನ್‌ರಾಜ್, 2021-12ನೇ ಸಾಲಿನ ಎಸ್‌ಎಸ್‌ಎಲ್ ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ರಾಜ್ಯದಲ್ಲಿ 3ನೇ ಬ್ಯಾಂಕ್ ಪಡೆದ ಶಾರ್ವರಿ, ಎಸ್., ಅತಿಥಿ ಜೈನ್, ನಿಶಿತಾ ಪಿ.ಅರ್., ಧನುಜಾ, 2019–20ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಚೈತ್ರಾ ಭಟ್ ವೈ, ಪೂರ್ವಿ ರೈ ಕೆ. ಹಾಗೂ ಆಕಾಶ್ ಜಿ.ರಾವ್‌ರವರನ್ನು ಕಾರ್ಯುಕ್ರಮದಲ್ಲಿ ಸನ್ಮಾನಿಸಲಾಯಿತು. ಶೇ.95 ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ವಹಿಸಿದ್ದರು. ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವದ ಅಂಗವಾಡಿ ಏರ್ಪಡಿಸಿದ್ದ ಲಕ್ಕಿಡ್ರಾ ವಿಜೇತರನ್ನು ಘೋಷಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್., ಸಂಸ್ಥೆಯ ಹಿತ ಚಿಂತಕ ಬಾಬು ಗೌಡ ಪಾಟೀಲ್ ಬಾಗಲಕೋಟೆ, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗುರುಪ್ರಿಯಾ ನಾಯಕ್, ಬೆಳ್ಳಾರೆ ಠಾಣೆ ಹೆಡ್ ಕಾನ್‌ಸ್ಟೇಬಲ್ ಜಗದೀಶ್ ಪಿ.ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.
ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಜಯಮಾಲ ಸುಧೀರ್ ಪಿ.ಎನ್ ವರದಿ ವಾಚಿಸಿದರು. ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ವಂದಿಸಿದರು. ಶಿಕ್ಷಕರಾದ ನೀತು ನಾಯಕ್ ಹಾಗೂ ಮುರಳಿ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸಾಹಸ ಪ್ರದರ್ಶನ:
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮತ್ತು ಸಾಹಸ ಪ್ರದರ್ಶನ, ಯಕ್ಷಗಾನ ಆಧಾರಿತ ನೃತ್ಯ ರೂಪಕ, ಸಮೂಹ ನೃತ್ಯಗಳು, ಯೋಗಾಸನ, ವಾಗಿ, ಕರಾಟೆ, ಕೂಪಿಕಾ, ಸಮತೋಲನ, ಬೆಂಕಿಯಲ್ಲಿ ಸಾಹಸಗಳು, ಕೋಲಾಟ, ಗೋಪುರ, ಮಲ್ಲಕಂಬ, ತಾಲೀಮು, ಸೈಕಲ್ ಸಾಹಸಗಳು ಹಾಗೂ ದೀಪಾರತಿ ಮೊದಲಾದ ಮೈರೋಮಾಂಚನಗೊಳಿಸುವ ಸಾಹಸಮಯ ಕ್ರೀಡೆಗಳು ಪ್ರೇಕ್ಷಕರ ಮನ ಸೆಳೆಯಿತು.






