ಭಿನ್ನ ಕೋಮಿಗೆ ಸೇರಿದ ಯುವಕರು ಮತ್ತು ಯುವತಿಯರು ಜತೆಯಾಗಿ ತಿರುಗಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರನ್ನು ಬಜ್ಪೆ ಪೋಲಿಸ್ ಠಾಣೆಗೆ ಕರೆದೊಯ್ದ ಘಟನೆ ಭಾನುವಾರ ಸಂಜೆ ನಡೆದಿದೆ.
ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಗುರುಪುರ ಸಮೀಪದ ಚಿಲಿಂಬಿ ಗುಡ್ಡೆ ಎಂಬಲ್ಲಿ ಇಬ್ಬರು ಹಿಂದೂ ಯುವತಿಯರು, ಇಬ್ಬರು ಯುವಕರು ಜತೆಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಅಕ್ಷೇಪಿಸಿದ್ದಾರೆ ಎನ್ನಲಾಗಿದೆ. ಅಲ್ಲಿದ್ದ ಇಬ್ಬರು ಯುವಕರ ಪೈಕಿ ಒರ್ವ ಹಿಂದೂ ಧರ್ಮಿಯ ಹಾಗೂ ಇನ್ನೊರ್ವ ಮುಸ್ಲಿಂ ಧರ್ಮೀಯ ಎಂದು ಮೂಲಗಳು ತಿಳಿಸಿವೆ.
ಆ ನಾಲ್ವರು ಚಿಲಿಂಬಿ ಗುಡ್ಡೆಗೆ ಕಾರಿನಲ್ಲಿ ಆಗಮಿಸಿದ್ದು, ಆ ಕಾರಿಗೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿದ್ದು ಇದು ಸ್ಥಳೀಯರಲ್ಲಿ ಅನುಮಾನ ಸೃಷ್ಟಿಸಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿರುವ ಹಿನ್ನಲೆಯಲ್ಲಿ ಇದರ ಹಿಂದೆ ಬಹು ದೊಡ್ಡ ಸಂಚು ಅಡಗಿದೆ, ಇದರ ಅಮೂಲಗ್ರ ತನಿಖೆ ನಡೆಸಬೇಕು ಹಾಗೂ ಇದರ ಹಿಂದಿರುವ ನಿಗೂಢತೆಯನ್ನು ಭೇದಿಸಬೇಕು ಎಂದು ಬಜರಂಗದಳದ ನಾಯಕರು ಆಗ್ರಹಿಸಿದ್ದಾರೆ.

