Connect with us

ಅಪರಾಧ

Big Breaking : ಹಾಸನ : ಶಾಸಕ ಕುಮಾರ ಸ್ವಾಮಿ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು

Ad Widget

Ad Widget

Ad Widget

Ad Widget

ಹಾಸನ:ಅ 3 :  ಶಾಸಕರ‌ ಕಾರು ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ 58 ವರ್ಷದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯ ಬೇಲೂರಿನಿಂದ ವರದಿಯಾಗಿದೆ. ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಬೇಲೂರಿನ ಹನುಮಂತನಗರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ.

Ad Widget

Ad Widget

Ad Widget

  ಹನುಮಂತನಗರದ ನಿವಾಸಿ ಹೂವಮ್ಮ‌ (58) ಮೃತಪಟ್ಟವರು.ಈಕೆಯ ಮೊಮ್ಮಗ ಪ್ರೀತಂ ಗಾಯಗೊಂಡಿದ್ದಾರೆ.  ಭಯಕ್‌  ಹಿಂಬದಿಯಲ್ಲಿ ಕೂತಿದ್ದ ಹೂವಮ್ಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿರುವಾಗ ಬೈಕ್​ ಏಕಾಏಕಿ ಬಲಕ್ಕೆ ಬಂದಿದ್ದರಿಂದ ಡಿಕ್ಕಿ ಹೊಡೆಯಿತು ಎಂದು ಕಾರು ಚಾಲಕ ಪ್ರವೀಣ್ ಹೇಳಿದ್ದಾನೆ.

vAd Widget

Ad Widget

Ad Widget
ಡಿಕ್ಕಿ ಹೊಡೆದ ಶಾಸಕರ ಕಾರು

ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತದ ಸಂದರ್ಭ ಕಾರಿನಲ್ಲಿ ಶಾಸಕರು ಇರಲಿಲ್ಲ. ಪ್ರಕರಣ ಸಂಭವಿಸಿದ ಸ್ಥಳಕ್ಕೆ ಬೇಲೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Ad Widget
ಮೂಡಿಗೆರೆ ಶಾಸಕ : ಎಂ.ಪಿ. ಕುಮಾರ ಸ್ವಾಮಿ
Click to comment

Leave a Reply

ಅಪರಾಧ

Kodagu-ಕೊಡಗು : SSLC ಪಾಸಾದ ಕೆಲವೇ ಕ್ಷಣದಲ್ಲಿ ವಿದ್ಯಾರ್ಥಿನಿಯನ್ನು ಕ್ರೂರವಾಗಿ ಕೊಂದು ತಲೆಯೊಂದಿಗೆ ಪರಾರಿಯಾದ ಕ್ರೂರಿಯ ಬಂಧನ – ಇನ್ನೂ ಸಿಗದ ರುಂಡ

Ad Widget

Ad Widget

Ad Widget

Ad Widget

ಮಡಿಕೇರಿ: ಬಾಲಕಿಯನ್ನು ಕೊಂದು ರುಂಡದ ಸಮೇತ ಪರಾರಿಯಾಗಿದ್ದ ಆರೋಪಿ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಳ ಗ್ರಾಮದ ಪ್ರಕಾಶ್‌ನನ್ನು (33) ಶನಿವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಆದರೆ ಬಾಲಕಿಯ ರುಂಡ ಪತ್ತೆಯಾಗಿಲ್ಲ.

Ad Widget

Ad Widget

Ad Widget

ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಬೆಳಿಗ್ಗೆ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿತು. ಕೂಡಲೇ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವುದು‌ ನಿಜ. ಆದರೆ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.

vAd Widget

Ad Widget

Ad Widget

ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಮೀನಾ (16) ಪರೀಕ್ಷೆ ಫಲಿತಾಂಶ ದಿನವೇ ಬರ್ಬರವಾಗಿ ಹತ್ಯೆ ಆಗಿದ್ದಳು. ಆಕೆಯ ರುಂಡ ಕತ್ತರಿಸಿ ಗುರುವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಕೆಯ ತಲೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದನು. ಸೂರ್ಲಬ್ಬಿ ಶಾಲೆ ಏಕೈಕ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯಾಗಿದ್ದ ಮೀನಾ ಉತ್ತೀರ್ಣಳಾಗಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಆಕೆಯ ಬರ್ಬರ ಹತ್ಯೆ ನಡೆದಿತ್ತು.

Ad Widget

Ad Widget

ಹತ್ಯೆಯಾದ ವಿದ್ಯಾರ್ಥಿನಿ ಮೀನಾ, ಮುಟ್ಲು ಗ್ರಾಮದಿಂದ 5 ಕಿಮೀ ದೂರದಲ್ಲಿರುವ ಸೂರ್ಲಬ್ಬಿ ಶಾಲೆಗೆ ಪ್ರತಿನಿತ್ಯ ನಡೆದುಕೊಂಡೇ ಬರುತ್ತಿದ್ದಳು. ಕುಗ್ರಾಮದಿಂದ ಬಂದ ಆಕೆ 314 ಅಂಕಗಳನ್ನು ಪಡೆದಿರುವುದು ಹೆಮ್ಮೆ ವಿಚಾರ ಎಂದು ಸೂರ್ಲಬ್ಬಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ತಿಮ್ಮಪ್ಪ ಅಂಡರದಾನಿ ಸಂತಸ ವ್ಯಕ್ತಪಡಿಸಿದ್ದರು.

Ad Widget

Ad Widget

Ad Widget

ಹತ್ಯೆಗೆ ಕಾರಣವೇನು?
ಅಪ್ರಾಪ್ತ ಬಾಲಕಿ ಮೀನಾಳ ಜೊತೆ ಆರೋಪಿ ಮೊಣ್ಣಂಡ ಪ್ರಕಾಶ್ ಮದುವೆಗೆ ಮುಂದಾಗಿದ್ದನು. ಹೀಗಾಗಿ ನಿಶ್ಚಿತಾರ್ಥಕ್ಕೆ ರೆಡಿಯಾಗಿದ್ದನು. ಆದರೆ ಬಾಲ್ಯವಿವಾಹದ ವಿಚಾರ ತಿಳಿದ ಸೋಮವಾರ ಪೇಟೆ ಪೋಲೀಸರು ಬಾಲಕಿಯ ನಿಶ್ಚಿತಾರ್ಥ ತಡೆದು ಬುದ್ದಿ ಹೇಳಿದ್ದರು. ಹೀಗಾಗಿ ಬಾಲಕಿಗೆ 18 ವರ್ಷ ಆಗುತ್ತಿದ್ದಂತೆ ಮದುವೆ ಮಾಡಲು ಎರಡು ಕುಟುಂಬಗಳು ಮುಂದಾಗಿದ್ದವು. ಬಾಲಕಿಗೆ 18 ವರ್ಷ ಆಗದ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್‌ಸಿಲಿಂಗ್‌ ಮಾಡಿ, ಎಂಗೇಜ್ಮೆಂಟ್ ತಡೆದಿದ್ದರು.

ಇದರಿಂದ ತೀವ್ರ ಸಿಟ್ಟಿಗೆದ್ದ ಮೊಣ್ಣಂಡ ಪ್ರಕಾಶ್ ಬಾಲಕಿಯ ಮನೆಗೆ ಬಂದು ಜಗಳವಾಡಿದ್ದ. ಹತ್ಯೆಗೂ ಮುನ್ನ ಹುಡುಗಿಯ ಮನೆಗೆ ನುಗ್ಗಿದ್ದ ಪಾಪಿ ಪ್ರಕಾಶ್ ಹುಡುಗಿಯ ತಂದೆ ತಾಯಿಯೊಂದಿಗೆ ಕೂಡ ಗಲಾಟೆ ಮಾಡಿ ಅವರ ಮೇಲೆ ಕೂಡ ಹಲ್ಲೆನಡೆಸಿದ್ದ, ಬಳಿಕ ಬಾಲಕಿ ಮೀನಾಳನ್ನು 100 ಮೀಟರ್ ದೂರ ಬಲವಂತಾಗಿ ಮನೆಯಿಂದ ಎಳೆದೊಯ್ದು ಕುತ್ತಿಗೆ ಕಡಿದು ಹತ್ಯೆ ಮಾಡಿದ್ದಾನೆ. ಮಾತ್ರವಲ್ಲ ಮುಂಡವನ್ನು ಅಲ್ಲೇ ಬಿಟ್ಟು, ರುಂಡವನ್ನು ತೆಗೆದುಕೊಂಡು ಪರಾರಿಯಾಗಿದ್ದ.

ಬಳಿಕ ನಿನ್ನ ಸಂಜೆ ಆತ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿ ಹಬ್ಬಿತ್ತು ಹಾಗೂ ಹಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿದ್ದವು. ಆದರೇ ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳು ರಾತ್ರಿ ವೇಳೆ ಸ್ಪಷ್ಟಪಡಿಸಿದ್ದರು.ಆದಾದ ಬಳಿಕ ಆರೋಪಿಯನ್ನು ಬಂಧಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading

ಅಪರಾಧ

PUTTUR-ಪುತ್ತೂರು : ಆತ್ಮಹತ್ಯೆಯ ಕಟ್ಟು ಕಥೆ ಕಟ್ಟಿದ್ದ ಪ್ರಕರಣದ ನೈಜ್ಯತೆ ಬೆಳಕಿಗೆ – ಮಗನ ಕಾಟ ತಾಳಲಾರದೇ, ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದು ಹೆತ್ತ ತಾಯಿಯಿಂದಲೇ ಬರ್ಬರ ಕೊಲೆ – ತಾಯಿ ಜತೆ ನೆರೆಮನೆಯ ಇಸುಬು ಪೊಲೀಸ್ ವಶ

Ad Widget

Ad Widget

Ad Widget

Ad Widget

ಪುತ್ತೂರು : ಹೆತ್ತ ತಾಯಿಯೇ ಮಗನ ಕಾಟ ತಾಳಲಾರದೇ ಆತನ ಕುತ್ತಿಗೆಯನ್ನು ನಾಯಿ ಕಟ್ಟುವ ಸಂಕೋಲೆಯಿಂದ ಬಿಗಿದು ಧರಧರನೆ ಎಳೆದುಕೊಂಡು ಹೋಗಿ ಕೊಲೆ ನಡೆಸಿದ ಭೀಭತ್ಸ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ನಡೆದಿದೆ. ಬೆಟ್ಟಂಪಾಡಿ ಗ್ರಾಮದ ಬರೆ ಕಾನುಮೂಲೆ ನಿವಾಸಿ ದಿ. ಕೊರಗಪ್ಪ ಶೆಟ್ಟಿ ಎಂಬವರ ಪುತ್ರ ಚೇತನ್ ಶೆಟ್ಟಿ (35) ಮೃತಪಟ್ಟ ಯುವಕ.

Ad Widget

Ad Widget

Ad Widget

ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಾಯಿ ಉಮಾವತಿ ಕೆ ಶೆಟ್ಟಿ ಹಾಗೂ ಪಕ್ಕದ ಮನೆ ನಿವಾಸಿ ಇಸುಬು ಎಂಬಾತನನ್ನು ಕೊಲೆ ನಡೆಸಿದ ಸಂಶಯದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಚೇತನ್ ಶೆಟ್ಟಿಗೆ ವಿಪರೀತ ಕುಡಿತದ ಚಟವಿದ್ದು, ನಿತ್ಯ ಮನೆ ಮಂದಿಯೊಂದಿಗೆ ಗಲಾಟೆ ನಡೆಸುತ್ತಿದ್ದ. ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ. ಮಾತ್ರವಲ್ಲದೇ ನೆರೆ ಮನೆಯ ಇಸುಬು ಎಂಬವರ ಮನೆಗೂ ಹೋಗಿ ಅಲ್ಲಿಯೂ ಗಲಾಟೆ ಮಾಡುತ್ತಿದ್ದ.

vAd Widget

Ad Widget

Ad Widget

ಗುರುವಾರ ರಾತ್ರಿ ಚೇತನ್ ಶೆಟ್ಟಿ ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ. ತಾಯಿಯೊಂದಿಗೆ ತಡರಾತ್ರಿ ಮನೆಯಲ್ಲಿ ಜಗಳವಾಡಿ ಬಳಿಕ ನೆರೆಯ ನಿವಾಸಿ ಇಸುಬುರವರ ಮನೆಗೆ ಹೋಗಿ ಬಾಗಿಲು ಬಡಿಯುತ್ತಾ ದಾಂದಲೆ ಎಬ್ಬಿಸಿದ್ದ. ಈ ವಿಚಾರವನ್ನು ಯೂಸುಫ್ ಅವರು ಉಮಾವತಿ ಅವರಿಗೆ ಕರೆ ಮಾಡಿ ತಿಳಿಸಿದ್ದರು ಎನ್ನಲಾಗಿದೆ.
ವಿಷಯ ತಿಳಿದು ತಾಯಿ ಉಮಾವತಿ ಚೇತನನ್ನು ಮನೆಗೆ ಕರೆದುಕೊಂಡು ಬರಲು ನಾಯಿಯನ್ನು ಕಟ್ಟಿಹಾಕುವ ಸಂಕೋಲೆ ಹಿಡಿದುಕೊಂಡು ಇಸುಬು ಅವರ ಮನೆಗೆ ಹೋಗಿದ್ದರು. ಅಲ್ಲಿದ್ದ ಚೇತನ್‌ನನ್ನು ಇಸುಬು ಅವರ ಸಹಕಾರದೊಂದಿಗೆ ಸಂಕೋಲೆಯಲ್ಲಿ ಕಟ್ಟಿಹಾಕಿ ಎಳೆದು ಕೊಂಡು ಮನೆಗೆ ಬರುತ್ತಿದ್ದ ವೇಳೆ ಸಂಕೋಲೆ ಕುತ್ತಿಗೆಗೆ ಬಿಗಿದ ಪರಿಣಾಮವಾಗಿ ಮನೆಗೆ ತಲುಪಿದ ವೇಳೆ ಚೇತನ್ ತೀರಾ ಅಸ್ವಸ್ಥಗೊಂಡಿದ್ದರು. ಬಳಿಕ ಆತನನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾದರೂ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

Ad Widget

Ad Widget

ಆದರೇ ಈ ಕೊಲೆ ಕೇಸನ್ನು ಮುಚ್ಚಿ ಹಾಕುವ ಉದ್ದೇಶದಿಂದ ಉಮಾವತಿ ಶೆಟ್ಟಿಯವರು ಮಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದರು. ಮಗ ಚೇತನ್‌ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಮೇ ೯ರಂದು ಗುರುವಾರ ರಾತ್ರಿಯಿಂದ ಮೇ ೧೦ ರ ಬೆಳಗ್ಗಿನ ಜಾವದ ಅವಧಿಯಲ್ಲಿ, ಜೀವನದಲ್ಲಿ ಜಿಗುಪ್ಸೆಗೊಂಡು, ಮನೆಯ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.
ಸಂಪ್ಯ ಪೊಲೀಸರು ಪುತ್ತೂರು ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದ ವೇಳೆ ಮೃತದೇಹದ ಕುತ್ತಿಗೆಯ ಭಾಗದಲ್ಲಿ ಸಂಕೋಲೆಯಿಂದ ಬಿಗಿದ ಗುರುತುಗಳು ಕಂಡು ಬಂದಿತ್ತು ಅಲ್ಲದೇ ಮೃತದೇಹದ ಕುತ್ತಿಗೆ, ಬೆನ್ನು, ಸೊಂಟ, ಎಡಕಾಲು ಮತ್ತು ತೋಳು,ಬಲ ಭುಜದ ಮೇಲೆ ಗಾಯಗಳು ಇರುವುದು ಕಂಡು ಬಂತು. ಹೀಗಾಗಿ ಸಂಶಯಗೊಂಡ ಪೊಲೀಸರು ಉಮಾವತಿಯವರನ್ನು ತೀವ್ರ ರೀತಿಯಲ್ಲಿ ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

ಈ ಬಳಿಕ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಲಂ 302 ,201 ಜೊತೆಗೆ 34 IPC ರಂತೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಎಸ್ಪಿ ರಿಷ್ಯಂತ್ ಸಿ.ಬಿ. ಘಟನೆ ನಡೆದ ಸ್ಥಳ ಮತ್ತು ಮೃತದೇಹ ಇಟ್ಟಿದ್ದ ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವ ಮಹಜರು ನಡೆಸಲು ಮಂಗಳೂರಿನ ದೇರಳಕಟ್ಟೆಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೆಯ್ಯಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಸಂಖ್ಯೆ ಪೊಲೀಸರು ಚೇತನ್ ತಾಯಿ ಉಮಾವತಿ ಮತ್ತು ನೆರೆಯ ನಿವಾಸಿ ಯೂಸುಫ್ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Continue Reading

ಅಪರಾಧ

Mangaluru-ಮಂಗಳೂರು: ಸೆಂಟ್ರಲ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ‘ಹೊಯ್ ಕೈ’ ವೀಡಿಯೊ ವೈರಲ್

Ad Widget

Ad Widget

Ad Widget

Ad Widget

ಮಂಗಳೂರು:ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಹೊರಗಡೆ ಮಂಗಳವಾರ ಬೆಳ್ಳಂಬೆಳಗ್ಗೆ 7:30ರ ಸುಮಾರಿಗೆ‌ ಪಾರ್ಕಿಂಗ್ ವಿಚಾರಕ್ಕೆ ನಡೆದ ವಾಗ್ವಾದ ‘ಹೊಯ್ ಕೈ’ ಮಾಡುವಲ್ಲಿಗೆ ತಿರುಗಿದ ವೀಡಿಯೊ ವೈರಲ್ ಆಗಿದೆ.

Ad Widget

Ad Widget

Ad Widget

ಚೆನ್ನೈನಿಂದ ಆಗಮಿಸಿರುವ ದಂಪತಿಯನ್ನು ಕರೆದೊಯ್ಯಲು ರೈಲ್ವೆ ನಿಲ್ದಾಣಕ್ಕೆ ಸ್ಥಳೀಯರಿಬ್ಬರು ಬೈಕ್ ನಲ್ಲಿ ಬಂದಿದ್ದರು. ಆದರೆ ರೈಲ್ವೇ ನಿಲ್ದಾಣದಲ್ಲಿ ನಿಯಮದ ಪ್ರಕಾರ, ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು. ಎಲ್ಲಾ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಮುಖ್ಯಗೇಟ್‌ನ ಮುಂದೆ ಪಿಕಪ್ ಮತ್ತು ಡ್ರಾಪ್ ಅನ್ನು ಮಾತ್ರ ಅನುಮತಿಸಲಾಗುತ್ತದೆ.

vAd Widget

Ad Widget

Ad Widget

ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ನೋಡಿಕೊಳ್ಳುವ ಚಂದನ್ ಎಂಬಾತ ಹಾಗೂ ದಂಪತಿಯನ್ನು ಕರೆದೊಯ್ಯಲು ಬಂದಿರುವ ಇಬ್ಬರು ನಡುವೆ ಆರಂಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಚಂದನ್ ಬೆಂಬಲವಾಗಿ, ಒಂದಿಬ್ಬರು ಆಟೋರಿಕ್ಷಾ ಚಾಲಕರು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ವಾಗ್ವಾದ ಮತ್ತಷ್ಟು ಬೆಳೆದು ಹೊಯ್ ಕೈ ಆಗುವಲ್ಲಿಗೆ ಹೋಗಿದೆ. ಈ ವೇಳೆ ಮಹಿಳೆಯ ಬೊಬ್ಬೆ ಹಾಕುವುದು ವೀಡಿಯೊದಲ್ಲಿ ದಾಖಲಾಗಿದೆ.

Ad Widget

Ad Widget

ಈ ಬಗ್ಗೆ ಆಟೋ ಚಾಲಕರ ಗುರುತು ಪತ್ತೆ ಹಚ್ಚಲಾಗಿದ್ದು, ಶೀಘ್ರ ಕ್ರಮ ಕೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ

Ad Widget

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading